ರಶ್ಮಿಕಾ ಮಂದಣ್ಣ ಇಂದು ಬರಿ ನಟಿಯಲ್ಲ, ಸಾವಿರಾರು ಕೋಟಿ ವ್ಯವಹಾರ ನಡೆಸುವ ಬ್ರ್ಯಾಂಡ್. ಈ ಹಿಂದೆ ಅವರು ಪ್ರೀತಿಸಿದ ಹುಡುಗನೊಂದಿಗೆ ಮಾಡಿಕೊಂಡಿದ್ದ ನಿಶ್ಚಿತಾರ್ಥ ಮುರಿದುಕೊಂಡರು. ಆಶ್ಚರ್ಯ ಅಂದ್ರೆ, ಆ ನಂತರವೇ ರಶ್ಮಿಕಾರ ವೃತ್ತಿಜೀವನ ಟಾಪ್‌ಗೆ ಹೋಯ್ತು.  

ಅದೃಷ್ಟ ಅರಸಿ ಹಸೆಮಣೆ ಏರುತ್ತಿದ್ದಾರಾ ವಿಜಯ್ ದೇವರಕೊಂಡ? 

Add Asianetnews Kannada as a Preferred SourcegooglePreferred

ಸಿನಿರಂಗದಲ್ಲಿ ಈಗ ಎಲ್ಲಿ ಕೇಳಿದ್ರೂ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಟಾಲಿವುಡ್ ರೌಡಿ ಸ್ಟಾರ್ ವಿಜಯ್ ದೇವರಕೊಂಡ (Vijay Deverakonda) ಮದುವೆಯದ್ದೇ ಸುದ್ದಿ. ಉದಯಪುರದ ಐಷಾರಾಮಿ ಅರಮನೆಯಲ್ಲಿ ಈ ಜೋಡಿಯ ಕಲ್ಯಾಣ ಅದ್ದೂರಿಯಾಗಿ ನಡೆದಿದೆ. ಆದರೆ, ಅಭಿಮಾನಿಗಳನ್ನ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ ಅಂದ್ರೆ, ರಶ್ಮಿಕಾ ಕರಿಯರ್‌ನ ಪೀಕ್‌ನಲ್ಲಿರುವಾಗಲೇ ಇಷ್ಟು ಆತುರಾತುರವಾಗಿ ಮದುವೆ ಆಗ್ತಿರೋದ್ಯಾಕೆ? ಶ್ರೀವಲ್ಲಿಯನ್ನ ಕೈಹಿಡಿದ ಮೇಲೆ ಅರ್ಜುನ್ ರೆಡ್ಡಿ ಬದುಕು ಬದಲಾಗುತ್ತಾ? ಅನ್ನೋ ಚರ್ಚೆ ಈಗ ಗಾಂಧಿನಗರದಿಂದ ಟಾಲಿವುಡ್‌ವರೆಗೆ ಸಂಚಲನ ಮೂಡಿಸಿದೆ.

ಸೈಲೆಂಟಾಗಿಯೇ ಸಜ್ಜಾದ ಹಸೆಮಣೆ, ಇಂಟರ್ ನ್ಯಾಷನಲ್ ಸೆಕ್ಯೂರಿಟಿ!

ಈ ಮೊದಲು ಬಹಳ ಕಾಲ ಮದುವೆ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಬಾಯಿ ಬಿಡದಿದ್ದ ಈ ಜೋಡಿ, ಒಳಗೊಳಗೆ ಎಲ್ಲಾ ಸಿದ್ಧತೆಗಳನ್ನ ಮುಗಿಸಿಕೊಂಡಿತ್ತು. ಅರಮನೆಯ ಅಲಂಕಾರದಿಂದ ಹಿಡಿದು ಜವಳಿ ಖರೀದಿಯವರೆಗೆ ಎಲ್ಲವೂ ಸೈಲೆಂಟಾಗಿಯೇ ನಡೆದಿತ್ತು. ವಿಶೇಷ ಅಂದ್ರೆ, ಈ ಹೈಪ್ರೊಫೈಲ್ ಮದುವೆಗೆ ಯಾವುದೇ ಅಡ್ಡಿ ಆಗಬಾರದು ಅಂತ ಇಂಟರ್ ನ್ಯಾಷನಲ್ ಸೆಕ್ಯೂರಿಟಿಗಳನ್ನ ನೇಮಕ ಮಾಡಿಕೊಳ್ಳಲಾಗಿದೆಯಂತೆ. ಇಷ್ಟೆಲ್ಲಾ ಸಸ್ಪೆನ್ಸ್ ಮೈಂಟೇನ್ ಮಾಡಿ, ಆ ಬಳಿಕ ಈ ಜೋಡಿ ತಮ್ಮ ಮದುವೆ ವಿಷಯವನ್ನು ಅಧಿಕೃತವಾಗಿ ಘೋಷಿಸಿದೆ. ಈಗ ಮದುವೆಯೂ ಮುಗಿದಿದೆ.

ರಶ್ಮಿಕಾ ಪಾಲಿನ ಸಕ್ಸಸ್ ಸೀಕ್ರೆಟ್ ಮತ್ತು ಜ್ಯೋತಿಷ್ಯದ ನಂಟು:

ರಶ್ಮಿಕಾ ಮಂದಣ್ಣ ಇಂದು ಬರಿ ನಟಿಯಲ್ಲ, ಸಾವಿರಾರು ಕೋಟಿ ವ್ಯವಹಾರ ನಡೆಸುವ ಬ್ರ್ಯಾಂಡ್. ಈ ಹಿಂದೆ ಅವರು ಪ್ರೀತಿಸಿದ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರೂ, ಜ್ಯೋತಿಷಿಗಳ ಮಾತಿನಂತೆ ಆ ಸಂಬಂಧ ಮುರಿದುಕೊಂಡರು. ಆಶ್ಚರ್ಯ ಅಂದ್ರೆ, ಆ ನಂತರವೇ ರಶ್ಮಿಕಾ ಕರಿಯರ್ ರಾಕೆಟ್ ವೇಗದಲ್ಲಿ ಚಿಮ್ಮಿತು. ಈಗ ವಿಜಯ್ ದೇವರಕೊಂಡ ವಿಚಾರದಲ್ಲೂ ಇದೇ ಜ್ಯೋತಿಷ್ಯದ ಲೆಕ್ಕಾಚಾರ ಕೆಲಸ ಮಾಡುತ್ತಿದೆ ಎನ್ನಲಾಗುತ್ತಿದೆ. ವಿಜಯ್ ಅವರಿಗೆ 36 ವರ್ಷ ದಾಟುವ ಮುನ್ನವೇ ರಶ್ಮಿಕಾ ಅವರನ್ನ ಮದುವೆ ಆದರೆ ಮಾತ್ರ ಅವರಿಗೆ ಸಿನಿಮಾ ರಂಗದಲ್ಲಿ ಸಕ್ಸಸ್ ಸಿಗಲಿದೆ ಎಂದು ಜ್ಯೋತಿಷಿಗಳು ಹೇಳಿದ್ದಾರಂತೆ. ಇದೇ ಕಾರಣಕ್ಕೆ ಈ ಜೋಡಿ ಆತುರಾತುರವಾಗಿ ಹಸೆಮಣೆ ಏರುತ್ತಿದೆ ಅನ್ನೋದು ಸದ್ಯದ ಹಾಟ್ ನ್ಯೂಸ್.

ಸೋಲಿನ ಸುಳಿಯಲ್ಲಿ ವಿಜಯ್, ಗೆಲುವಿನ ಶಿಖರದಲ್ಲಿ ರಶ್ಮಿಕಾ:

ನೀವು ಗಮನಿಸಿದರೆ ವಿಜಯ್ ದೇವರಕೊಂಡ ಅವರ ಇತ್ತೀಚಿನ ಸಿನಿಮಾಗಳ ಗ್ರಾಫ್ ಅಷ್ಟೇನೂ ಆಶಾದಾಯಕವಾಗಿಲ್ಲ. 'ಲೈಗರ್'ನಿಂದ ಶುರುವಾದ ಸೋಲು 'ಕಿಂಗ್‌ಡಮ್' ವರೆಗೂ ಮುಂದುವರಿದಿದೆ. ಅಭಿಮಾನಿಗಳು ಕೂಡ ವಿಜಯ್ ಕಥೆಯ ಆಯ್ಕೆ ಸರಿಯಿಲ್ಲ ಅಂತ ಮಾತಾಡಿಕೊಳ್ತಿದ್ದಾರೆ. ಆದರೆ ರಶ್ಮಿಕಾ ಕಥೆಯೇ ಬೇರೆ! 'ಪುಷ್ಪ 2' 1800 ಕೋಟಿ ಗಳಿಸಿ ಇತಿಹಾಸ ಬರೆದಿದೆ. ಬಾಲಿವುಡ್‌ನಲ್ಲಿ 'ಚಾವಾ', 'ಥಾಮ', 'ಸಿಕಂದರ್' ಅಂತ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳು ಸಕ್ಸಸ್ ಕಂಡಿವೆ. ಮದುವೆಯ ನಂತರವೂ ರಶ್ಮಿಕಾ ನಟಿಸಲಿದ್ದಾರೆ. ಕಾರಣ, ಈಗಾಗಲೇ ಅವರು ಸಹಿ ಹಾಕಿರುವ ಸಾಲುಸಾಲು ಸಿನಿಮಾಗಳಿವೆ. ಬದಲಿಗೆ ಅವರು ಬಾವಿ ಪತಿ ವಿಜಯ್ ಪಾಲಿಗೆ 'ಶ್ರೀರಕ್ಷೆ'ಯಾಗಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಬಾಯ್‌ಫ್ರೆಂಡ್ ಸಕ್ಸಸ್‌ಗಾಗಿ ರಶ್ಮಿಕಾ ಸಾಹಸ:

ಕೇವಲ ಮದುವೆಯಷ್ಟೇ ಅಲ್ಲ, ವಿಜಯ್ ದೇವರಕೊಂಡ ಅವರಿಗೆ ಗೆಲುವು ತಂದುಕೊಡಲು ರಶ್ಮಿಕಾ ಈಗ ಮದುವೆಗೂ ಮುನ್ನವೇ 'ರಣಬಾಲಿ' ಎಂಬ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಜನವರಿ 26 ರಂದು ಈ ಸಿನಿಮಾದ ಘೋಷಣೆಯಾಗಿದ್ದು, ತನ್ನ ಪತಿಯ ಕರಿಯರ್ ಶೈನ್ ಮಾಡಲು ರಶ್ಮಿಕಾ ಅವರೇ ಮುಂದೆ ನಿಂತು ಪ್ಲಾನ್ ಮಾಡ್ತಿದ್ದಾರೆ. ಒಟ್ಟಿನಲ್ಲಿ, ಕೊಡಗಿನ ಈ ಗೃಹಲಕ್ಷ್ಮಿ ವಿಜಯ್ ಮನೆಗೆ ಬಂದ ಮೇಲೆ ಅವರ ಅದೃಷ್ಟದ ಬಾಗಿಲು ತೆರೆಯುತ್ತಾ? 'ಅರ್ಜುನ್ ರೆಡ್ಡಿ' ಮತ್ತೆ ಬಾಕ್ಸ್ ಆಫೀಸ್ ಸುಲ್ತಾನನಾಗ್ತಾರಾ? ಅನ್ನೋದನ್ನ ಕಾದು ನೋಡಬೇಕು. ಇಂದು, ಅಂದರೆ 26 ಫೆಬ್ರವರಿ 2026 ರಂದು ಉದಯಪುರದ ಅರಮನೆಯಲ್ಲಿ ಈ ಜೋಡಿಯ ಮದುವೆಯಾಗಿದೆ. ಇನ್ಮೇಲೆ ಈ ಜೋಡಿ ಹೊಸ ಇತಿಹಾಸ ಬರೆಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.