ಸಿಂಪಲ್ ಸುನಿ ನಿರ್ದೇಶನದ ಮತ್ತು ಅನಿಲ್ ಶೆಟ್ಟಿ ನಟನೆಯ 'ಲಂಬೋದರ 2.0' ಚಿತ್ರವು ನವೆಂಬರ್ 13 ರಂದು ಬಿಡುಗಡೆಯಾಗಲಿದೆ. ಕೃತಕ ಬುದ್ಧಿಮತ್ತೆ ಮತ್ತು ಮನುಷ್ಯರ ನಡುವಿನ ಸಂಬಂಧವನ್ನು ಬಿಂಬಿಸುವ ಈ ಸೈಂಟಿಫಿಕ್ ಥ್ರಿಲ್ಲರ್ ಚಿತ್ರ

ಬೆಂಗಳೂರು: ಇದೇ ನವೆಂಬರ್‌ 13ಕ್ಕೆ ಸಿಂಪಲ್‌ ಸುನಿ ನಿರ್ದೇಶನದ ‘ಲಂಬೋದರ 2.0’ ಚಿತ್ರವು ಅದ್ದೂರಿಯಾಗಿ ತೆರೆಗೆ ಬರುತ್ತಿದ್ದು, ಐದು ಮೊದಲೇ ಚಿತ್ರಕ್ಕೆ ಅಡ್ವಾನ್ಸ್‌ ಬುಕ್ಕಿಂಗ್‌ ಶುರುವಾಗಿದೆ. ಇದು ಬಹುನಿರೀಕ್ಷಿತ ಸೋಶಿಯಲ್‌ ಥ್ರಿಲ್ಲರ್‌ ಚಿತ್ರವಾಗಿದ್ದು, ಕೃತಕ ಬುದ್ಧಿಮತ್ತೆ, ಅಲ್ಗಾರಿದಮ್‌ಗಳು ಹಾಗೂ ಡಿಜಿಟಲ್ ತಂತ್ರಜ್ಞಾನವು ಮನುಷ್ಯರ ದೈನಂದಿನ ಬದುಕಿನ ಮೇಲೆ ಗಾಢ ಪ್ರಭಾವ ಬೀರುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಅದೇ ರೀತಿಯ ಕತೆಯನ್ನು ಈ ಹೊತ್ತು ಬಂದಿದೆ. ಹೀಗಾಗಿ ಇದು ಪ್ರಸ್ತುತ ಜನರೇಷನ್‌ ಸಿನಿಮಾ. ಅನಿಲ್ ಶೆಟ್ಟಿ ಚಿತ್ರದ ನಾಯಕ. ಉಳಿದಂತೆ ಬಾಲಿವುಡ್‌ನ ಖ್ಯಾತ ನಟ ಕುನಾಲ್‌ ಕಪೂರ್‌ ಹಾಗೂ ಸಾಚಿ ಬಿಂದ್ರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನೈಜ ಹ್ಯೂಮನಾಯ್ಡ್ ಜಿಯಾ ಹೆಸರಿನ ರೋಬೋಟ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ಚಿತ್ರದ ಮತ್ತೊಂದು ಹೈಲೈಟ್‌. ವೈಜ್ಞಾನಿಕ ಕಲ್ಪನೆಯ ಜತೆಗೆ ಹಾಸ್ಯ, ಪ್ರೇಮ, ಸಸ್ಪೆನ್ಸ್, ಕೌಟುಂಬಿಕ ಭಾವನೆಗಳು ಹಾಗೂ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವ ಸಾಮಾಜಿಕ ಸಂದೇಶವನ್ನು ಈ ಚಿತ್ರವು ಒಳಗೊಂಡಿದೆ. ಇನ್ನೂ ಈ ಚಿತ್ರವನ್ನು ಪಿವಿಆರ್ ಐನಾಕ್ಸ್ ಪಿಕ್ಚರ್ಸ್ ವಿತರಣೆ ಮಾಡುತ್ತಿದ್ದು, ಏಕಕಾಲಕ್ಕೆ ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ.

ಹಿಂದಿಯಲ್ಲೂ ಬರಲಿದೆ ಅನಿಲ್ ಶೆಟ್ಟಿ ಲಂಬೋದರ 2.0

ಕೇವಲ ಕನ್ನಡ ಸಿನಿಮಾ ಆಗಿ ಶುರುವಾಗಿ ಈಗ ಬಾಲಿವುಡ್‌ಗೂ ಕಾಲಿಡುತ್ತಿದೆ ಸಿಂಪಲ್‌ ಸುನಿ ನಿರ್ದೇಶನದ ‘ಲಂಬೋದರ 2.0’ ಸಿನಿಮಾ. ಕನ್ನಡದ ಈ ಸೈಂಟಿಫಿಕ್‌ ಥ್ರಿಲ್ಲರ್‌ ಚಿತ್ರವನ್ನು ಹಿಂದಿಯಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದೆ ಬಂದಿರುವುದು ನಿರ್ಮಾಪಕ ಮಹಾವೀರ್‌ ಜೈನ್‌.

Scroll to load tweet…