Asianet Suvarna News Asianet Suvarna News

ಕನ್ನಡ ಸಿನಿಮಾ ಶೂಟಿಂಗ್‌ ವೇಳೆ ಕದ್ದು ಕ್ಯಾಮೆರಾ ಇಟ್ಟಿದ್ರು: ಶಾಕಿಂಗ್‌ ಮಾಹಿತಿ ಬಿಚ್ಚಿಟ್ಟ ಕೃತಿ ಕರಬಂಧ!

ಬಹುಭಾಷಾ ತಾರೆ ಕೃತಿ ಕರಬಂಧ ಅವರು ಕನ್ನಡ ಶೂಟಿಂಗ್‌ ಒಂದರ ಸಮಯದಲ್ಲಿ ಹೋಟೆಲ್‌ನಲ್ಲಿ ಇಟ್ಟಿದ್ದ ಹಿಡನ್‌ ಕ್ಯಾಮೆರಾದ ಕುರಿತ ಭಯಾನಕ ಅನುಭವ ಹಂಚಿಕೊಂಡಿದ್ದಾರೆ. 
 

Kriti Kharbanda once found hidden camera in hotel room suc
Author
First Published Aug 24, 2023, 12:44 PM IST | Last Updated Aug 24, 2023, 12:44 PM IST

ರಾಕಿ ಭಾಯ್ ಯಶ್ ಹೀರೋಯಿನ್‌ ಆಗಿ ‘ಗೂಗ್ಲಿ’ ಚಿತ್ರದಲ್ಲಿ, ಚಿರಂಜೀವಿ ಸರ್ಜಾ ಅಭಿನಯದ ಚಿರು ಚಿತ್ರದಲ್ಲಿ ಮಿಂಚಿರೋ ನಟಿ ಕೃತಿ ಕರಬಂಧ. ಸದ್ಯ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿರೋ ಕೃತಿ ಕರಬಂಧ ಗುರುತಿಸಿಕೊಳ್ಳುತ್ತಿದ್ದಾರೆ. ಕನ್ನಡ, ಹಿಂದಿ ಮಾತ್ರವಲ್ಲದೇ ಬಹುಭಾಷಾ ನಟಿ ಎನಿಸಿಕೊಂಡಿರುವ ಕೃತಿ ಕರಬಂಧ (Kriti Kharbanda) ಅವರು  ತಮಿಳು, ತೆಲುಗು ಭಾಷೆಗಳಲ್ಲಿಯೂ ನಟಿಸುತ್ತಿದ್ದಾರೆ.  ಕನ್ನಡದ ‘ಪ್ರೇಮ್ ಅಡ್ಡ’, ‘ಗಲಾಟೆ’ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.  2018ರ ‘ದಳಪತಿ’ ಅವರು ಕೊನೆಯದಾಗಿ ನಟಿಸಿದ ಕನ್ನಡ ಸಿನಿಮಾ. ಕೆಲವು ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನೂ ನೀಡಿದ್ದಾರೆ. ಶೂಟಿಂಗ್‌ಗೆ ಹೋಗುವಾಗ ಕೆಲವೊಂದು ಭಯಾನಕ ಅನುಭವವಗಳು ನಟರಿಗೆ ಆಗುವುದುಂಟು. ಅದೇ ಒಂದು  ಶಾಕಿಂಗ್ ವಿಷಯವೊಂದನ್ನು ನಟಿ ತಿಳಿಸಿದ್ದಾರೆ. ಕನ್ನಡ ಸಿನಿಮಾವೊಂದರ ಶೂಟಿಂಗ್‌ಗಾಗಿ ಹೋಟೆಲ್‌ವೊಂದರಲ್ಲಿ ತಂಗಿದ್ದಾಗ ತಾವು ಎದುರಿಸಿದ ಘಟನೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ವಿಡಿಯೋ ಲೀಕ್ ಬಗ್ಗೆ ನಟಿ ಮಾತನಾಡಿದ್ದಾರೆ.
 
 ಕನ್ನಡ ಸಿನಿಮಾವೊಂದರ ಶೂಟಿಂಗ್‌ಗಾಗಿ ಹೋಟೆಲ್‌ವೊಂದರಲ್ಲಿ (Hotel) ತಂಗಿದ್ದಾಗ ತಾವು ಎದುರಿಸಿದ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಯಾವ ಸಿನಿಮಾ, ಇದು ನಡೆದದ್ದು ಎಲ್ಲಿ ಎಂದು ಬಹಿರಂಗಪಡಿಸದ ನಟಿ, ಕನ್ನಡ ಸಿನಿಮಾ ಶೂಟಿಂಗ್‌ ಸಮಯದಲ್ಲಿ ತಾವು ತಂಗಿದ್ದ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ ಎಂದಿದ್ದಾರೆ.ಹೋಟೆಲ್‌ ಕೋಣೆಗಳಲ್ಲಿ, ಡ್ರೆಸ್ಸಿಂಗ್‌ ರೂಮ್‌ಗಳಲ್ಲಿ, ಕೆಲವೊಂದು ಬಟ್ಟೆ ಮಳಿಗೆಗಳಲ್ಲಿ ರಹಸ್ಯ ಕ್ಯಾಮೆರಾ ಇಟ್ಟಿರುವ ಸುದ್ದಿಗಳನ್ನು ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಮಹಿಳೆಯರು ಬಟ್ಟೆ ಬದಲಾಯಿಸುವಾಗ ಅದನ್ನು ನೋಡಿ ಖುಷಿ ಪಡುವ ವಿಕೃತ ಮನಸ್ಸುಗಳು ಇದ್ದರೆ, ಕೆಲವೊಮ್ಮೆ ಅದರ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ ಮಾಡುವುದೂ ಇದೆ. ಇಂಥದ್ದೇ ಒಂದು ಘಟನೆಯ ಕುರಿತು ನಟಿ ಹೇಳಿದ್ದಾರೆ.

ಜೈಲಿನಲ್ಲಿ ಟಾಯ್ಲೆಟ್​ಗೆ, ಟೀ ಕುಡಿಯಲು ಒಂದೇ ಮಗ್ ಬಳಸಿ, ಶೌಚಾಲಯ ಕ್ಲೀನ್​ ಮಾಡಿದ್ದ ಸಲ್ಮಾನ್​ ಖಾನ್!

ಕನ್ನಡ ಸಿನಿಮಾ ಶೂಟಿಂಗ್‌ ಸಮಯದಲ್ಲಿ ತಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಈ ರೀತಿ ರಹಸ್ಯ ಕ್ಯಾಮೆರಾ ಇಡಲಾಗಿತ್ತು ಎಂದಿದ್ದಾರೆ. ಮಹಿಳೆಯರು ಹೊಸ ಸ್ಥಳಕ್ಕೆ ಹೋದಾಗ ಎಚ್ಚರ ವಹಿಸುವ ಅಗತ್ಯದ ಕುರಿತು ಹೇಳಿರುವ ನಟಿ, ಹೋಟೆಲ್‌ನಲ್ಲಿ ಅಡಗಿಸಿ ಇಟ್ಟಿದ್ದ ಕ್ಯಾಮೆರಾವನ್ನು ಅದೃಷ್ಟವಶಾತ್‌ ತಾವು ಪತ್ತೆ ಹಚ್ಚಿರುವುದಾಗಿ ಹೇಳಿದ್ದಾರೆ. ಇದೇ ವೇಳೆ  ಕ್ಯಾಮೆರಾ ಪತ್ತೆ ಹಚ್ಚಿರುವ ಬಗೆಯನ್ನೂ  ಅವರು ವಿವರಿಸಿದ್ದಾರೆ. ಇದನ್ನು ಕೃತಿ ಅವರ ಮಾತಿನಲ್ಲಿಯೇ ಕೇಳುವುದಾದರೆ, ‘ಕನ್ನಡ ಸಿನಿಮಾ ಶೂಟಿಂಗ್​ನ ಸಂದರ್ಭದ ಒಂದು ಘಟನೆ ನನಗೆ ಇನ್ನೂ ನೆನಪಿದೆ. ಹೋಟೆಲ್ ಬಾಯ್ ನಾನು ತಂಗಿದ್ದ ಕೊಠಡಿಯಲ್ಲಿ ಹಿಡನ್‌  ಕ್ಯಾಮೆರಾ (Hidden Camara) ಇಟ್ಟಿದ್ದ. ಇಂಥ ಘಟನೆಗಳ ಬಗ್ಗೆ ನಾನು ಸಾಕಷ್ಟು ನೋಡಿದ್ದರಿಂದ ಎಲ್ಲಿಯೇ ಹೋಟೆಲ್‌ಗೆ ಹೋದರೂ ಮೊದಲು ನಾನು ಮತ್ತು ನನ್ನ ಸ್ಟಾಫ್​ಗಳು  ಎಲ್ಲವನ್ನೂ ಪರೀಕ್ಷೆ ಮಾಡುತ್ತೇವೆ. ಆದರೆ ಕೆಲವೊಮ್ಮೆ ಸೂಕ್ಷ್ಮ ಪ್ರದೇಶಗಳಲ್ಲಿ ಕ್ಯಾಮೆರಾ ಇಡುವುದರಿಂದ ಅರಿವಿಗೆ ಬರುವುದಿಲ್ಲ. ಆದರೆ ಈ ಹೋಟೆಲ್‌ನಲ್ಲಿ ಕ್ಯಾಮೆರಾ ಇಟ್ಟವ ಅಷ್ಟೊಂದು ಪ್ರೊಫೆಷನಲ್‌ ಆಗಿರಲಿಲ್ಲ ಅನಿಸತ್ತೆ. ಕಾಣುವಂತೆ  ಕ್ಯಾಮೆರಾ ಇಟ್ಟಿದ್ದ. . ಸೆಟ್​ಟಾಪ್ ಬಾಕ್ಸ್ ಹಿಂಭಾಗದಲ್ಲಿ ಆತ ಕ್ಯಾಮೆರಾ ಇಟ್ಟಿದ್ದ. ನಿಜಕ್ಕೂ ಇದು ಭಯಾನಕ ಅನುಭವ ಆಗಿತ್ತು’ ಎಂದಿದ್ದಾರೆ.
 
ಈ ಭಯಾನಕ ಘಟನೆಯ ಜೊತೆಗೆ, ಕೃತಿ ತಾವು ಅನುಭವಿಸಿದ ಕಿರುಕುಳದ (torture) ಇತರ ನಿದರ್ಶನಗಳನ್ನೂ  ಹಂಚಿಕೊಂಡಿದ್ದಾರೆ. ಇದಾಗಿದ್ದು ಬೆಂಗಳೂರಿನಲ್ಲಿ.  ಬೈಕ್ ಸವಾರನೊಬ್ಬ ತಮಗೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಬೀಳಿಸಿದ. ಶಾಕಿಂಗ್‌ ಎಂದರೆ, ಆತ  ಯಾವುದೇ ಸಹಾಯವನ್ನು ನೀಡದೆ ಅಲ್ಲಿ ನಿಲ್ಲದೇ ಹೊರಟುಹೋದ.  ಅನೇಕ ತಿಂಗಳು ನೋವಿನಿಂದ ಬಳಲಿದೆ.  ಪೋಷಕರಿಂದಲೂ ಈ ಮಾಹಿತಿಯನ್ನು ಮುಚ್ಚಿಟ್ಟಿದ್ದೆ ಎಂದಿದ್ದಾರೆ ಕೃತಿ.

ಜೊತೆಜೊತೆಯಲಿ 'ಅನು' ಹಾಟ್‌ ವಿಡಿಯೋ ವೈರಲ್‌: ಉಫ್‌ ನಿಜಕ್ಕೂ ನೀವು ಅವ್ರೇನಾ ಕೇಳಿದ ಫ್ಯಾನ್ಸ್‌

Latest Videos
Follow Us:
Download App:
  • android
  • ios