Asianet Suvarna News Asianet Suvarna News

ಜೊತೆಜೊತೆಯಲಿ 'ಅನು' ಹಾಟ್‌ ವಿಡಿಯೋ ವೈರಲ್‌: ಉಫ್‌ ನಿಜಕ್ಕೂ ನೀವು ಅವ್ರೇನಾ ಕೇಳಿದ ಫ್ಯಾನ್ಸ್‌

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಮನೆಮಾತಾಗಿರುವ ನಟಿ ಮೇಘಾ ಶೆಟ್ಟಿಯ ಹೊಸ ಫೋಟೋಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. 
 

Actress Megha Shetty shared new videos fans like her videos with many comments
Author
First Published Aug 18, 2023, 10:35 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲ್ಲಿ ಧಾರಾವಾಹಿ ಕಳೆದ ತಿಂಗಳು ಮುಗಿದಿದ್ದರೂ ಈ ಗುಂಗಿನಿಂದ ಇಂದಿಗೂ ಹಲವರು ಹೊರಬಂದಿಲ್ಲ. ಧಾರಾವಾಹಿಯಲ್ಲಿ ಸಕತ್‌ ಮಿಂಚಿದವರ ಪೈಕಿ ನಾಯಕಿ ಅನು ಒಬ್ಬರು. ಇವರ ಮುಗ್ಧ ಅಷ್ಟೇ ಗಟ್ಟಿತನದ ಪಾತ್ರಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದರು. ಅನು ಸಿರಿಮನೆ ಎಂದೇ ಖ್ಯಾತಿ ಪಡೆದಿರುವ ನಟಿಯ ನಿಜವಾದ ಹೆಸರು ಮೇಘಾ ಶೆಟ್ಟಿ (Megha Shetty). ಅನು ಸಿರಿಮನೆ ಪಾತ್ರದ ಮೂಲಕ ಮೊದಲ ಬಾರಿಗೆ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬಂದ ಮೇಘಾ ದೊಡ್ಡ ಮಟ್ಟದ ಖ್ಯಾತಿಗಳಿಸಿದರು.  ಜೊತೆ ಜೊತೆಯಲಿ ಧಾರಾವಾಹಿ  ಮುಗಿದರೂ  ಅನು ಸಿರಿಮನೆ ಪಾತ್ರ ಅಭಿಮಾನಿಗಳಲ್ಲಿ ಮನದಲ್ಲಿ ಗಟ್ಟಿಯಾಗಿ ಬೇರೂರಿದೆ.   ಸುಸಂಪ್ರದಾಯಬದ್ಧವಾಗಿ ಪಾತ್ರದಲ್ಲಿ ನಟಿಸಿರುವ ಜೊತೆಜೊತೆಯಲಿ ಅನು, ನಿಜ ಜೀವನದಲ್ಲಿಯೂ ಅನುವಿನಂತೆಯೇ ಇರಲಿ ಎನ್ನುವುದು ಪ್ರೇಕ್ಷಕರ ಹಂಬಲ. ಆದರೆ ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿರುವ ಮೇಘಾ ಶೆಟ್ಟಿ (Megha Shetty), ವಿಭಿನ್ನ ಪೋಸ್‌ನಲ್ಲಿ ಮಿಂಚುತ್ತಿದ್ದಾರೆ. ಪ್ರತಿಯೊಬ್ಬ ಪಾತ್ರಧಾರಿಯ ನಿಜ ಜೀವನವೇ ಬೇರೆ, ಪಾತ್ರಗಳಲ್ಲಿ ಅವರ ನಟನೆಯೇ ಬೇರೆ. ಅದೇ ರೀತಿ ಅನು ನಿಜಜೀವನದಲ್ಲಿ ಮೇಘಾ ಶೆಟ್ಟಿಯಾಗಿ ವಿಭಿನ್ನ ರೂಪದಲ್ಲಿ ಫ್ಯಾನ್ಸ್‌ ಹೃದಯ ಕದಿಯುತ್ತಿದ್ದಾರೆ. 

ನಟಿ ಮೇಘಾ ಶೆಟ್ಟಿ ಸದ್ಯ ಸಿನಿಮಾದ ಕಡೆ ಗಮನ ಹರಿಸಿದ್ದಾರೆ. ಮರಾಠಿ ಚಿತ್ರರಂಗಕ್ಕೂ ಕಾಲಿರಿಸಿದ್ದಾರೆ. ಈ ವರ್ಷ ತೆರೆ ಕಾಣುತ್ತಿರುವ ಚಿತ್ರಗಳ ಪೈಕಿ ಅತೀ ಹೆಚ್ಚು ಕುತೂಹಲ ಮೂಡಿಸುತ್ತಿರುವ ಆಕ್ಷನ್ ಪ್ಯಾಕೇಜ್ ಚಿತ್ರ ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ ಮರಾಠಿ ಹಿಂದಿ ತೆಲುಗು ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವ 'ಆಪರೇಷನ್ ಲಂಡನ್ ಕೆಫೆ' (Operation London Cafe)  ಬಹುತೇಕ ಚಿತ್ರೀಕರಣ ಮುಗಿಸಿದ್ದು. ಚಿತ್ರದ ಡಬ್ಬಿಂಗ್ ಹಂತದ ಚಟುವಟಿಕೆಗಳು ಭರದಿಂದ ಸಾಗುತ್ತಿದೆ. ಇದಕ್ಕೆ ಮೇಘಾ ಶೆಟ್ಟಿಯೇ ನಾಯಕಿ.  ಕನ್ನಡದ ಸೇರಿದಂತೆ  ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಈ ಚಿತ್ರ  ತಯಾರಾಗುತ್ತಿದೆ. 

Megha Shetty: ರಾಯರ ಕುದ್ರೆ ಕತ್ತೆ ಆಗಿದೆ, ಗೌರವ ಕಳ್ಕೋಬೇಡಿ... ಜೊತೆಜೊತೆಯಲಿ 'ಅನು'ಗೆ ಫ್ಯಾನ್ಸ್​ ಕ್ಲಾಸ್​!

ಇತ್ತೀಚೆಗೆ ಮೇಘಾ ಶೆಟ್ಟಿ ವಿಭಿನ್ನ ಡ್ರೆಸ್‌ ತೊಟ್ಟು ವಿಡಿಯೋ, ಫೋಟೋಶೂಟ್‌ (photoshoot) ಮಾಡಿಸಿಕೊಳ್ಳುತ್ತಿದ್ದಾರೆ. ತಮ್ಮ ಅನು ಹೀಗೆಯೇ ಇರಬೇಕು ಎನ್ನುವವರಿಗೆ ಕೆಲವೊಮ್ಮೆ ನಟಿಯ ಬಟ್ಟೆ-ಬರೆಗಳು ಬೇಸರ ತರಿಸುವುದೂ ಇದೆ. ಹಾಗೆಂದು ಅವರು ತಮ್ಮ ತನವನ್ನು ಬಿಟ್ಟು ಕೊಡಲು ಆದೀತೆ? ಹಾಟ್‌ ಪೋಸ್‌ ಕೊಟ್ಟು ಸಕತ್‌ ಮಿಂಚುತ್ತಿದ್ದಾರೆ ಮೇಘಾ ಶೆಟ್ಟಿ, ಇದೀಗ ವಿಭಿನ್ನ ವಿಡಿಯೋಶೂಟ್‌ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಒಮ್ಮೆ ನೋಡಿದರೆ ಜೊತೆಜೊತೆಯಲಿ ಅನುಗೂ, ರಿಯಲ್‌ ಲೈಫ್‌ ಮೇಘಾ ಶೆಟ್ಟಿಗೂ ಸಕತ್‌ ವ್ಯತ್ಯಾಸ ಇರುವುದು ಕಾಣಿಸುತ್ತದೆ. ಈ ಹೊಸ ವಿಡಿಯೋ ನೋಡಿ ಫ್ಯಾನ್ಸ್‌ ನಿಜಕ್ಕೂ ನೀವು ಅದೇ ಅನುನಾ ಎಂದು ಪ್ರಶ್ನಿಸುತ್ತಿದ್ದಾರೆ. ಸೋ ಕ್ಯೂಟ್‌ ಎನ್ನುತ್ತಾ ಹಾರ್ಟ್ ಎಮೋಜಿ ಕಳಿಸುತ್ತಿದ್ದಾರೆ. 

ಕೆಲ ದಿನಗಳ ಹಿಂದೆ ಇದೇ ರೀತಿ ಫೋಟೋ ಶೂಟ್‌ ಮಾಡಿಸಿಕೊಂಡಾಗ, ಕೆಲವರು ಬೇಸರ ವ್ಯಕ್ತಪಡಿಸಿದ್ದು ಇದೆ. ಮೇಘಾ ಶೆಟ್ಟಿಯನ್ನು ಅನು ಸಿರಿಮನೆ ಪಾತ್ರದಲ್ಲಿಯೇ ಇರಬೇಕು ಎಂದು ಬಯಸುವ ಕೆಲವರು,  ಇದು ನಿಜವಾಗಿಯೂ ನಿಮಗೆ ಸೂಟ್ ಅಲ್ಲ ಎಂದಿದ್ದರೆ, ಕೆಲವರು ಯಾಕೋ ರಾಯರ ಕುದುರೆ ಕತ್ತೆ ಆಗುತ್ತಿದೆ ಎಂದಿದ್ದರು. ಇನ್ನು ಕೆಲವರು ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯಿತಂತೆ. ಇದಕ್ಕೆ ಬೆಸ್ಟ್ ಉದಾಹರಣೆ (Best Example) ನೀವೇ ಮೇಡಂ. ಹೇಗಿದ್ದೋರು ಹೇಗಾದ್ರಿ. ನಾವು ನಿಮ್ಮ ಮೇಲೆ ಇಟ್ಟಿದ್ದ ಗೌರವ ಕಳ್ಕೊಂಡ್ರಿ ಎಂದಿದ್ದರು.

Megha Shetty: ಮರಾಠಿ ಸಿನಿಮಾದಲ್ಲಿ ಜೊತೆಜೊತೆಯಲಿ 'ಅನು' ಮಿಂಚಿಂಗ್!

Follow Us:
Download App:
  • android
  • ios