ಕಿಚ್ಚ ಸುದೀಪ್ ಯುದ್ಧದ ಮಾತು.. ದರ್ಶನ್-ಸುದೀಪ್ ಸ್ನೇಹಿತರಾಗಿದ್ದ ವೇಳೆ ವಿಜಯಲಕ್ಷ್ಮೀ ನಡುವೆನೂ ಒಳ್ಳೆ ಸ್ನೇಹ ಸಲುಗೆ ಇತ್ತು. ಅದ್ರಲ್ಲೂ ಒಂದೊಮ್ಮೆ ದರ್ಶನ್ ಕಷ್ಟದಲ್ಲಿದ್ದ ವೇಳೆ, ಕಿಚ್ಚ ವಿಜಯಲಕ್ಷ್ಮೀ ಜೊತೆ ನಿಂತುಕೊಂಡಿದ್ರು.
ಕಿಚ್ಚ ಸುದೀಪ್ ಯುದ್ಧದ ಮಾತು.. ಅದಕ್ಕೆ ವಿಜಯಲಕ್ಷ್ಮೀ ಟಾಂಗ್ ಕೊಟ್ಟಿದ್ದು, ಅಭಿಮಾನಿಗಳ ನಡುವೆ ಶುರುವಾಗಿರೋ ಕದನ ಇದೆಲ್ಲದರ ವಿಷ್ಯ ಗೊತ್ತೇ ಇದೆ. ಅಸಲಿಗೆ ದರ್ಶನ್-ಸುದೀಪ್ ಸ್ನೇಹಿತರಾಗಿದ್ದ ವೇಳೆ ವಿಜಯಲಕ್ಷ್ಮೀ ನಡುವೆನೂ ಒಳ್ಳೆ ಸ್ನೇಹ ಸಲುಗೆ ಇತ್ತು. ಅದ್ರಲ್ಲೂ ಒಂದೊಮ್ಮೆ ದರ್ಶನ್ ಕಷ್ಟದಲ್ಲಿದ್ದ ವೇಳೆ, ಕಿಚ್ಚ ವಿಜಯಲಕ್ಷ್ಮೀ ಜೊತೆ ನಿಂತುಕೊಂಡಿದ್ರು. ಸದ್ಯ ಕಿಚ್ಚ ಸುದೀಪ್ ಆಡಿದ ಯುದ್ಧದ ಮಾತು, ಅದಕ್ಕೆ ಪ್ರತಿಯಾಗಿ ವಿಜಯಲಕ್ಷ್ಮೀ ನೀಡಿದ ಹೇಳಿಕೆ.. ಎರಡನ್ನೂ ಇಟ್ಟುಕೊಂಡು ಫ್ಯಾನ್ಸ್ ಯುದ್ಧ ಮಾಡ್ತಾ ಇದ್ದಾರೆ. ದಾಸ-ಕಿಚ್ಚನ ಅಭಿಮಾನಿಗಳ ನಡುವೆ ಸಮರ ಶುರುವಾಗಿದೆ. ಅಸಲಿಗೆ ಒಂದು ಕಾಲದಲ್ಲಿ ದರ್ಶನ್-ಸುದೀಪ್ ಕುಚಿಕು ಕುಚಿಕು ಗೆಳೆಯರಾಗಿದ್ರು.
ಆಗ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕಿಚ್ಚನನ್ನ ಅಣ್ಣಾ ಅಂತ ಕರೀತಾ ಇದ್ರು. ಸುದೀಪ್ ಕೂಡ ಅತ್ತಿಗೆ ಅಂತ ಬಾಯ್ತುಂಬಾ ಕರೀತಾ ಇದ್ರು. ಸದ್ಯ ಈ ಅಣ್ಣ-ಅತ್ತಿಗೆ ಕದನ ನಡೀತಿರುವ ವೇಳೆ ಇವರಿಬ್ಬರೂ ಜೊತೆಗೆ ಕುಳಿತಿರುವ ಹಳೆಯ ಫೋಟೊವೊಂದು ವೈರಲ್ ಆಗಿದೆ. ಅದರ ಹಿಂದೆಯೇ ಒಂದು ರೋಚಕ ಕಥೆ ಇದೆ. ಹೌದು ಬೃಂದಾವನ ಸಿನಿಮಾದ ಶೂಟಿಂಗ್ ವೇಳೆ, ದರ್ಶನ್ ಕುದುರೆಯಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ರು. ಮೊದಲ ಬಾರಿ ದರ್ಶನ್ಗೆ ಬೆನ್ನು ನೋವು ಕಾಣಿಸಿಕೊಂಡಿದ್ರು. ಆಗ ಆಸ್ಪತ್ರೆಯಲ್ಲಿ ದರ್ಶನ್ಗೆ ಸ್ಕಾನಿಂಗ್ ಮಾಡಲಾಗಿತ್ತು. ಟ್ರೀಟ್ಮೆಂಟ್ ಒಪ್ಪದ ದರ್ಶನ್ಗೆ ಬುದ್ದಿ ಹೇಳಿ ಅಂತ ವಿಜಯಲಕ್ಷ್ಮೀ ಕಿಚ್ಚನ ಬಳಿ ಕೇಳಿದ್ರಂತೆ.
ಆಗ ದಾಸನ ಜೊತೆಗೆ ಸ್ಕಾನಿಂಗ್ ರೂಮ್ನಲ್ಲಿ ಇದ್ದು ಧೈರ್ಯ ತುಂಬಿದ್ದ ಸುದೀಪ್, ಹೊರಗೆ ಆತಂಕದಲ್ಲಿದ್ದ ವಿಜಯಲಕ್ಷ್ಮೀಗೂ ಧೈರ್ಯ ಹೇಳಿದ್ರಂತೆ. ಸದ್ಯ ವೈರಲ್ ಆಗ್ತಾ ಇರೋ ಫೋಟೋ ಅದೇ ಸಮಯದಲ್ಲಿ ಆಸ್ಪತ್ರೆಯಲ್ಲಿ ಕುಳಿತು ಮಾಧ್ಯಮಗೋಷ್ಟಿ ಮಾಡಿದ್ದ ಸಮಯದ ವಿಡಿಯೋ. ಹೌದು ಆಗ ಅಷ್ಟು ಆತ್ಮೀಯರಾಗಿದ್ದವರು, 2017ರ ನಂತರ ದೂರ ದೂರ ಆದ್ರು. ಕಿಚ್ಚ-ದಾಸ ದೂರವಾದ ಮೇಲೆ ಅವರ ಅಭಿಮಾನಿಗಳು ಕೂಡ ದೋಸ್ತಿ ಬಿಟ್ಟು ದುಷ್ಮನಿಗೆ ಇಳಿದರು. ಈಗಂತೂ ಸುದೀಪ್- ವಿಜಯಲಕ್ಷ್ಮೀ ಹೇಳಿಕೆಯಿಂದಾಗಿ ಇಬ್ಬರ ಫ್ಯಾನ್ಸ್ ನಡುವೆ ಸಮರವೇ ನಡೀತಾ ಇದೆ. ಆದ್ರೆ ಕಿಚ್ಚ ನಾನು ಯುದ್ಧ ಅಂತ ಹೇಳಿದ್ದು ಪೈರಸಿ ಬಗ್ಗೆ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.
'ಮಾರ್ಕ್' ಟ್ರೇಡ್ ಮಾರ್ಕ್ ಸೃಷ್ಟಿಸುತ್ತಾ!
ಸದ್ಯ ಫ್ಯಾನ್ಸ್ ವಾರ್ ಶುರುವಾಗಿದ್ದಕ್ಕೆ ನಾನು ಕಾರಣ ಅಲ್ಲ, ವಿಜಯಲಕ್ಷ್ಮೀ ಹಾಗೆ ಮಾತನಾಡಿದ್ದಕ್ಕೆ ವಾರ್ ಶುರುವಾಗಿರೋದು ಅಂತ ಕಿಚ್ಚ ಕೌಂಟರ್ ಕೂಡ ಕೊಟ್ಟಿದ್ದಾರೆ. ಇನ್ನೂ ಈ ಯುದ್ಧ ಈಗ ಬರೀ ಅಭಿಮಾನಿಗಳ ನಡುವೆ ಮಾತ್ರ ಅಲ್ಲ. ಸೆಲೆಬ್ರಿಟಿಗಳ ನಡುವೆನೂ ನಡೀತಾ ಇದೆ. ದರ್ಶನ್ ಕಾಡಲ್ಲಿರುವ ಏಕೈಕ ಸಿಂಹ ಅಂತ ದಾಸನ ಬಂಟ ಧನ್ವಿರ್, ಸ್ಟೇಟಸ್ ಹಾಕಿದ್ರೆ, ಸಿಂಹ ಯಾರನ್ನೋದು ಎಲ್ಲರಿಗೂ ಗೊತ್ತಿದೆ ಅಂತ ಕಿಚ್ಚನ ಬಂಟ ವಿನಯ್ ಗೌಡ ಪೋಸ್ಟ್ ಹಾಕಿದ್ದಾರೆ. ಇತ್ತ ಅಭಿಮಾನಿಗಳಂತೂ ಮತ್ತೊಂದು ಲೆವೆಲ್ಗೆ ಕಿತ್ತಾಡ್ತಾ ಇದ್ದಾರೆ. ಈ ವಾರ್ ನಡುವೆಯೇ ಮಾರ್ಕ್ ಸಿನಿಮಾ ತೆರೆಗೆ ಬರ್ತಾ ಇದೆ. ಈ ಯುದ್ಧದ ನಡುವೆ ಬರ್ತಾ ಇರೋ ಮಾರ್ಕ್ ಟ್ರೇಡ್ ಮಾರ್ಕ್ ಸೃಷ್ಟಿಸುತ್ತಾ ಕಾದುನೋಡಬೇಕಿದೆ.


