ಸ್ಯಾಂಡಲ್​ವುಡ್​ನಲ್ಲಿ ಮತ್ತೊಮ್ಮೆ ಸ್ಟಾರ್ ವಾರ್.. ಫ್ಯಾನ್ಸ್ ವಾರ್​​.. ಪರ್ವ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ಮಾರ್ಕ್ ಸಿನಿಮಾ ರಿಲೀಸ್ ಇವೆಂಟ್ ನಲ್ಲಿ ಸುದೀಪ್ ಯುದ್ಧಕ್ಕೆ ಸಿದ್ದ ಮಾತಿಗೆ ಬದ್ಧ ಅಂತ ಹೇಳಿದ್ರು. ಅದಕ್ಕೆ ಟಾಂಗ್ ಕೊಡುವಂತೆ ವಿಜಯಲಕ್ಷ್ಮೀ ಮಾತನಾಡಿದ್ರು.

ಸ್ಯಾಂಡಲ್​ವುಡ್​ನಲ್ಲಿ ಮತ್ತೊಮ್ಮೆ ಸ್ಟಾರ್ ವಾರ್.. ಫ್ಯಾನ್ಸ್ ವಾರ್​​.. ಪರ್ವ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ಮಾರ್ಕ್ ಸಿನಿಮಾ ರಿಲೀಸ್ ಇವೆಂಟ್ ನಲ್ಲಿ ಸುದೀಪ್ ಯುದ್ಧಕ್ಕೆ ಸಿದ್ದ ಮಾತಿಗೆ ಬದ್ಧ ಅಂತ ಹೇಳಿದ್ರು. ಅದಕ್ಕೆ ಟಾಂಗ್ ಕೊಡುವಂತೆ ವಿಜಯಲಕ್ಷ್ಮೀ ದರ್ಶನ್ ಮಾತನಾಡಿದ್ರು. ಈ ಇಬ್ಬರ ಮಾತುಗಳನ್ನಿಟ್ಟುಕೊಂಡು ಕಿಚ್ಚ-ದಾಸನ ಫ್ಯಾನ್ಸ್ ಅಖಾಡಕ್ಕೆ ಇಳಿದು ಯುದ್ಧ ಮಾಡ್ತಾ ಇದ್ದಾರೆ. ಕಿಚ್ಚ Vs ದಾಸ ಯುದ್ಧದ ಅಸಲಿ ರಹಸ್ಯ ಏನು..? ಸ್ಯಾಂಡಲ್​ವುಡ್​​ನಲ್ಲಿ ವರ್ಷಾಂತ್ಯದಲ್ಲೊಂದು ಯುದ್ಧಕಾಂಡ ಶುರುವಾಗಿದೆ. ಕಿಚ್ಚ ಸುದೀಪ್ ಮತ್ತು ದಾಸ ದರ್ಶನ್ ಅಭಿಮಾನಿಗಳು ಒಬ್ಬರ ಮೇಲೊಬ್ರು ಕಿಡಿ ಕಾರ್ತಾ ಇದ್ದಾರೆ.

ಅಷ್ಟಕ್ಕೂ ಈ ಫ್ಯಾನ್ಸ್ ವಾರ್​ಗೆ ಕಾರಣ ಆಗಿದ್ದು ಬೇರ್ರಾರೂ ಅಲ್ಲ ಖುದ್ದು ಕಿಚ್ಚ ಸುದೀಪ್ & ದರ್ಶನ್ ಪತ್ನಿ ವಿಜಯಲಕ್ಷ್ಮೀ ಆಡಿದ ಈ ಮಾತುಗಳು. ಯೆಸ್ ಈ ಇಬ್ಬರ ಮಾತುಗಳು ಈಗ ಕಿಚ್ಚು ಹಚ್ಚಿವೆ. ಈ ಮಾತುಗಳನ್ನೇ ಇಟ್ಟುಕೊಂಡು ಈಗ ಫ್ಯಾನ್ಸ್ ವಾರ್ ದೊಡ್ಡದಾಗಿ ಶುರುವಾಗಿದೆ. ಅಷ್ಟಕ್ಕೂ ಈ ಫ್ಯಾನ್ಸ್ ವಾರ್ .. ಸ್ಟಾರ್ ವಾರ್ ಹಿಂದೆ ದೊಡ್ಡ ಕಥೆನೇ ಇದೆ. ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ಗುರುವಾರ ಪ್ಯಾನ್ ಇಂಡಿಯಾ ರಿಲೀಸ್ ಆಗ್ತಾ ಇದೆ. ಕಳೆದ ಶನಿವಾರ ಹುಬ್ಬಳ್ಳಿಯಲ್ಲಿ ಮಾರ್ಕ್ ಪ್ರೀ ಲಾಂಚ್ ಇವೆಂಟ್ ನಡೆದಿದ್ದು ಸುದೀಪ್ ತಮ್ಮ ಸ್ನೇಹಬಳಗದ ಸಮೇತ ಭಾಗಿ ಆಗಿದ್ರು.

ಹುಬ್ಬಳ್ಳಿಯ ಗಂಡುಮೆಟ್ಟಿದ ನೆಲದಲ್ಲಿ ನಿಂತು ಮಾತನಾಡಿದ್ರೆ ಇಡೀ ಕರುನಾಡಿಗೆ ಕೇಳಿಸುತ್ತೆ ಅಂತ ಮಾತು ಶುರು ಮಾಡಿದ ಕಿಚ್ಚ, ಆಮೇಲೆ ಆಡಿದ್ದೆಲ್ಲಾ ಕಿಡಿನುಡಿಗಳೇ. ನನ್ನ ಸ್ನೇಹಿತರು ನೀವೆಲ್ಲ ಚೆನ್ನಾಗಿರಬೇಕು ಎಂಬ ಒಂದೇ ಕಾರಣಕ್ಕೋಸ್ಕರ, ನಾನು ಬಾಯಿ ಮುಚ್ಚಿಕೊಂಡು ಇದ್ದೆ ಹೊರತು ಬಾಯಿ ಇಲ್ಲ ಅಂತಲ್ಲ’ . ಈಗ ನಾನು ಯುದ್ಧಕ್ಕೆ ಸಿದ್ದ ಅಂದುಬಿಟ್ಟಿದ್ರು ಕಿಚ್ಚ. ಹೌದು ಕಿಚ್ಚ ಸುದೀಪ್ ಯುದ್ಧದ ಮಾತನಾಡಿದ್ದು ಪೈರಸಿ ಬಗ್ಗೆ. ಪೈರಸಿ ಅನ್ನೋದು ದೊಡ್ಡ ಪಿಡುಗಾಗಿ ಬಿಟ್ಟಿದೆ. ಅದನ್ನ ಮಟ್ಟ ಹಾಕಲಿಕ್ಕೆ ಸುದೀಪ್ ಯುದ್ಧ ಅನ್ನೋ ಪದ ಬಳಸಿದ್ರು ಅನ್ನೋದು ಸುದೀಪ್ ಸಮಜಾಯಿಷಿ.

ಡಿಸೆಂಬರ್ 11ನೇ ತಾರೀಖು ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ತೆರೆಗೆ ಬಂದಿತ್ತು. ಮೊದಲ ದಿನ 10 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಸಿನಿಮಾ ಆ ಬಳಿಕ ಬಾಕ್ಸಾಫೀಸ್​​ನಲ್ಲಿ ಡಲ್ ಆಗಿತ್ತು. ಹೀಗೆ ಸಿನಿಮಾದ ಕಲೆಕ್ಷನ್ ಡ್ರಾಪ್ ಆಗೋದಕ್ಕೆ ಪೈರಸಿನೇ ಕಾರಣ ಅನ್ನೋದು ಡೆವಿಲ್ ತಂಡದ ಆರೋಪ. ಖುದ್ದು ಡೆವಿಲ್ ಸಿನಿಮಾ ತಂಡ ಈ ಬಗ್ಗೆ ಪೋಸ್ಟರ್ ವೊಂದನ್ನ ಹಂಚಿಕೊಂಡಿದ್ದು , 10, 500ಕ್ಕೂ ಅಧಿಕ ಪೈರಸಿ ಲಿಂಕ್ ಡಿಲೀಟ್ ಮಾಡಿದ್ದೀವಿ. ದಯವಿಟ್ಟು ಪೈರಸಿ ಹಂಚಬೇಡಿ ಥಿಯೇಟರ್​​ನಲ್ಲಿ ಸಿನಿಮಾ ನೋಡಿ ಅಂತ ಮನವಿ ಮಾಡಿಕೊಂಡಿದೆ. ದರ್ಶನ್ ಅಭಿಮಾನಿಗಳ ಪೇಜ್​ನಲ್ಲೂ ಈ ಪೋಸ್ಟ್ ಶೇರ್ ಮಾಡಲಾಗಿದೆ.

ಆದ್ರೆ ಈ ಪೋಸ್ಟ್​​ಗೆ ಕೆಲ ಪುಂಡ ಅಭಿಮಾನಿಗಳು, ನಾವು ಕೂಡ ಮುಂದೆ ಬರಲಿರುವ ಸಿನಿಮಾದ ಪೈರಸಿ ಮಾಡಿ ಹಂಚೋಣ ಅಂತ ಕಮೆಂಟ್ ಮಾಡಿದ್ರು. ಗುರುವಾರ ಬರಲಿರೋ ಮಾರ್ಕ್ ಅವರ ಹಿಟ್ ಲಿಸ್ಟ್ ನಲ್ಲಿ ಇತ್ತು ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದೇ ಕಾರಣಕ್ಕೆ ಸುದೀಪ್ ಹುಬ್ಬಳ್ಳಿ ಇವೆಂಟ್ ನಲ್ಲಿ ಆ ಮಾತು ಹೇಳಿದ್ರು. ಕೆಲವರು ಕಾಯ್ತಾ ಇದ್ದಾರೆ ನಮ್ಮ ಸಿನಿಮಾದ ಪೈರಸಿ ಮಾಡೋದಕ್ಕೆ.. ಆದ್ರೆ ಅವರ ವಿರುದ್ದ ನಾವು ಯುದ್ಧಕ್ಕೆ ಸಿದ್ದ ಅಂತ.ಆದ್ರೆ ಇದಕ್ಕೆ ಟಾಂಗ್ ಅನ್ನುವಂತೆ ಡಾವಣಗೆರೆಯ ಡೆವಿಲ್ ವಿಜಯಯಾತ್ರೆಯಲ್ಲಿ ವಿಜಯಲಕ್ಷ್ಮೀ ದರ್ಶನ್ ಮಾತನಾಡಿದ್ದಾರೆ.

ದರ್ಶನ್-ಸುದೀಪ್ ಫ್ಯಾನ್ಸ್​ ನಡುವೆ ಯುದ್ಧ

ದರ್ಶನ್ ಹೊರಗಿದ್ದಾಗ, ಇವರು ಬೆಂಗಳೂರಿನಲ್ಲಿ ಇದ್ದಾರೋ ಇಲ್ಲವೋ ಅನ್ನೋದೇ ಗೊತ್ತಿರಲ್ಲ. ಈಗ ದಾಸ ಒಳಗಿದ್ದಾಗ ಈ ರೀತಿ ಮಾತನಾಡ್ತಾರೆ.. ತಲೆ ಕೆಡಿಸಿಕೊಳ್ಳಬೇಡಿ ಅಂದಿದ್ದಾರೆ. ಹೌದು ಸುದೀಪ್ ಮಾತಿಗೆ ಪ್ರತಿಯಾಗಿ ಯಾವಾಗ ವಿಜಯಲಕ್ಷ್ಮೀ ಹೇಳಿಕೆ ನೀಡಿದ್ರೋ,. ಒಂದು ರೀತಿ ದರ್ಶನ್-ಸುದೀಪ್ ಫ್ಯಾನ್ಸ್​ ನಡುವೆ ಯುದ್ಧಕ್ಕೆ ಪ್ರೇರಣೆ ಕೊಟ್ಟಂತೆ ಆಗಿಬಿಟ್ಟಿದೆ. ವಿಜಯಲಕ್ಷ್ಮೀ ಹಾಗೆ ಮಾತನಾಡೋ ಅಗತ್ಯ ಇರಲಿಲ್ಲ ಅಂತಿದೆ ಕಿಚ್ಚನ ಬಳಗ. ಈ ಹಿಂದೆ ದರ್ಶನ್​ ಮೊದಲ ಬಾರಿ ಜೈಲಿನಲ್ಲಿ ಇದ್ದಾಗ ಸುದೀಪ್ ಸಪೋರ್ಟ್ ಮಾಡಿದ್ರು. ಅವರ ನಡುವೆ ಸ್ನೇಹ ಮುರಿದು ಬಿದ್ದರೂ ಕಿಚ್ಚ , ಅನೇಕ ಬಾರಿ ದರ್ಶನ್​ಗೆ ಕಿಚ್ಚ ಸಪೋರ್ಟ್ ಮಾಡಿದ್ದಾರೆ.

ಆದ್ರೆ ವಿಜಯ ಲಕ್ಷ್ಮೀ ಹೀಗೆ ಮಾತನಾಡಬಾರದಿತ್ತು ಅಂತಾರೆ ಸುದೀಪ್ ಆಪ್ತರು. ಒಟ್ಟಾರೆ ಈ ಇಬ್ಬರ ಮಾತುಗಳು ಈಗ ಅಭಿಮಾನಿಗಳನ್ನ ಕೆರಳಿಸಿವೆ. ಇದೇ ನೆಪದಲ್ಲಿ ಫ್ಯಾನ್ಸ್ ಅಖಾಡಕ್ಕೆ ಇಳಿದು ಯುದ್ಧ ಮಾಡ್ತಿನಿ ಅಂತ ನಿಂತುಬಿಟ್ಟಿದ್ದಾರೆ. ಈ ಯುದ್ಧಕಾಂಡ ಸದ್ಯ ಸ್ಯಾಂಡಲ್​ವುಡ್ ತುಂಬಾ ಸದ್ದು ಸುದ್ದಿ ಮಾಡ್ತಾ ಇದೆ. ಈ ಯುದ್ಧ ಅದೆಲ್ಲಿಗೆ ಹೋಗಿ ತಲುಪುತ್ತೋ ಕಾದುನೋಡಬೇಕು. ಬೃಂದಾವನ ಸಿನಿಮಾ ಟೈಂನಲ್ಲಿ ದರ್ಶನ್​ಗೆ ಏಟಾದಾಗ, ವಿಜಯ ಲಕ್ಷ್ಮೀ ಜೊತೆ ಕುಳಿತು ಮಾಧ್ಯಮಗೋಷ್ಟಿ ಮಾಡಿದ್ರು. ವಿಜಯಲಕ್ಷ್ಮೀಗೆ ಧೈರ್ಯ ತುಂಬಿದ್ರು. ಆ ಫೋಟೋ ಹಂಚಿಕೊಂಡು ಕಿಚ್ಚನ ಫ್ಯಾನ್ಸ್ ಟಾಂಗ್ ಕೊಡ್ತಾ ಇದ್ದಾರೆ.