Asianet Suvarna News Asianet Suvarna News

Puneeth Rajukumar: ಅಪ್ಪು ಅಭಿಮಾನಿ ಕಷ್ಟ ಪರಿಹರಿಸಿದ ಕಿಚ್ಚ ಸುದೀಪ್ ಟ್ರಸ್ಟ್

ಕಿಚ್ಚ ಸುದೀಪ್ ತಮ್ಮ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಬೆನಕ ಅಪ್ಪು ಎಂಬ ಪುನೀತ್ ರಾಜ್‌ಕುಮಾರ್ ಅಭಿಮಾನಿಗೆ ಸಹಾಯ ಮಾಡಿದ್ದು, ಸ್ನೇಹಿತನ ಅಭಿಮಾನಿ ಕಷ್ಟವನ್ನು ಪರಿಹರಿಸಿದ್ದಾರೆ.
 

kiccha sudeep trust helps to puneeth rajkumar fan family health treatment gvd
Author
Bangalore, First Published Nov 27, 2021, 7:35 PM IST

ಬೆಂಗಳೂರು (ನ.27): ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ತಮ್ಮ ಸುದೀಪ್ ಚಾರಿಟೇಬಲ್ ಟ್ರಸ್ಟ್ (Sudeep Charitable Trust) ಮೂಲಕ ಅಗತ್ಯವಿರುವವರಿಗೆ ಬೇಕಾದ ನೆರವನ್ನು ತಲುಪಿಸುವ ವ್ಯವಸ್ಥೆ ಕೈಗೊಂಡಿದ್ದಾರೆ. ಟ್ರಸ್ಟ್‌ ಮಾತ್ರವಲ್ಲದೇ ರಾಜ್ಯಾದ್ಯಂತ ಇರುವ ಸುದೀಪ್ ಅಭಿಮಾನಿಗಳ ಸಂಘಗಳು ಕೂಡ ಜನರ ನೆರವಿಗೆ ಧಾವಿಸುತ್ತಾರೆ. ಇದೀಗ ಈ ಟ್ರಸ್ಟ್ ಮೂಲಕ ಪುನೀತ್ ಅಭಿಮಾನಿ ಕಷ್ಟವನ್ನು ಸುದೀಪ್ ಪರಿಹರಿಸಿದ್ದಾರೆ. ಹೌದು! ಬೆನಕ ಅಪ್ಪು ಎಂಬ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿಮಾನಿಗೆ ಸುದೀಪ್ ಸಹಾಯ ಮಾಡಿದ್ದು, ಈ ಮೂಲಕ ಸ್ನೇಹಿತನ ಅಭಿಮಾನಿ ಕಷ್ಟವನ್ನು ಕಿಚ್ಚ ಸುದೀಪ್ ಪರಿಹರಿಸಿದ್ದಾರೆ.

ಘಟನೆಯ ವಿವರ: ಕಳೆದ ಶುಕ್ರವಾರ ನನ್ನ ತಾಯಿ ಹಾಗೂ ನನ್ನ ತಮ್ಮನಿಗೆ ನೆಲಮಂಗಲದ ಬಳಿ ರಸ್ತೆ ಅಪಘಾತದಲ್ಲಿ ತುಂಬಾ ಗಾಯಗೊಂಡು ಶ್ರೇಯಸ್ ಆಸ್ಪತ್ರೆಗೆ ದಾಖಲಾಗಿದರು. ನನ್ನ ತಾಯಿಗೆ ಈ ಅಪಘಾತದಲ್ಲಿ ತಲೆಗೆ ತುಂಬಾ ಪೆಟ್ಟು ಬಿದ್ದಿದ್ದ ಕಾರಣ ಸರ್ಜರಿ ಮಾಡಬೇಕೆಂದು ವೈದ್ಯರು ತಿಳಿಸಿದರು, ಅದಕ್ಕೆ ತುಂಬಾ ಹಣ ಬೇಕಾಗಿರುತ್ತದೆ. ನಾನು ಅಪ್ಪು ಅವರ ದೊಡ್ಡ ಅಭಿಮಾನಿ ಅಪ್ಪು ಅವರು ನನ್ನ ಕುಟುಂಬಕ್ಕೆ ತುಂಬಾ ಸಹಾಯ ಮಾಡುತಿದ್ದರು, ಅವರನ್ನು ಕಳೆದುಕೊಂಡು ನೋವಿನಲ್ಲಿದ್ದ ನನಗೆ ತಾಯಿಯನ್ನು ಉಳಿಸಿಕೊಳ್ಳುವುದು ಕಠಿಣಕರವಾಗಿತ್ತು. 

Kiccha Sudeep trust: ರೈತನ ಮಗನ ವಿದ್ಯಾಭ್ಯಾಸಕ್ಕೆ ನೆರವಾದ ಕನ್ನಡಿಗರ ಮಾಣಿಕ್ಯ!

ಈ ಸಂದರ್ಭದಲ್ಲಿ ನನ್ನ ಸ್ನೇಹಿತ ಅಪ್ಪು ಅವರ ಆತ್ಮೀಯ ಗೆಳೆಯರಾದ ಸುದೀಪ್ ಸರ್ ಬಳಿ ಸಹಾಯ ಕೇಳು ಎಂದು ಸುದೀಪ್ ಚಾರಿಟೇಬಲ್ ಸೊಸೈಟಿ ಅಧ್ಯಕ್ಷರಾದ ರಮೇಶ್ ಕಿಟ್ಟಿ ಅವರ ದೂರವಾಣಿ ಸಂಖ್ಯೆಯನ್ನು ನೀಡಿದ ಕೂಡಲೇ ನಾನು ರಮೇಶ್ ಕಿಟ್ಟಿ ಸರ್ ಅವರನ್ನು ಸಂಪರ್ಕಿಸಿದೆ. ಅವರು ನನ್ನ ತಾಯಿ ಹಾಗೂ ತಮ್ಮನ ಆರೋಗ್ಯದ ಮಾಹಿತಿ ಪಡೆದು ಕೂಡಲೇ ಸ್ಪಂದಿಸಿ ಆಸ್ಪತ್ರೆಯ ಬಳಿ ಬಂದು ನನ್ನ ತಾಯಿ ಹಾಗೂ ತಮ್ಮನನ್ನು ಮಾತನಾಡಿಸಿ ನನಗೆ ಧೈರ್ಯವನ್ನು ತುಂಬಿ, ತಾಯಿಯ ಆರೋಗ್ಯದ ಸ್ಥಿತಿ ತಿಳಿದುಕೊಂಡು ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಸುದೀಪ್ ಸರ್ ಹಾಗೂ ಅವರ ಚಾರಿಟೇಬಲ್ ಸೊಸೈಟಿ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಎಂದು ಪುನೀತ್ ಅಭಿಮಾನಿ ಬೆನಕ ಅಪ್ಪು ಫೇಸ್‌ಬುಕ್‌ನಲ್ಲಿ (Facebook) ಪೋಸ್ಟ್‌ ಹಂಚಿಕೊಂಡಿದ್ದಾರೆ.

ಇನ್ನು ಇತ್ತೀಚೆಗೆ, ಗಿರೀಶ್ ಕುಮಾರ್ ಮತ್ತು ಅವರ ಕುಟುಂಬ ಮಳೆಯಿಂದ ರಾಗಿ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದರು. ಪರೀಕ್ಷಾ ಶುಲ್ಕ ಕಟ್ಟಲಾಗದೆ ಹಾಸನದ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘವನ್ನು ಗಿರೀಶ್ ಸಂಪರ್ಕ ಮಾಡಿದ್ದರು. ಬಿಎಸ್​​ಸಿ ನರ್ಸಿಂಗ್ ಓದುತ್ತಿರುವ ಗಿರೀಶ್ ಕುಮಾರ್​ಗೆ ಕಾಲೇಜು ಶುಲ್ಕಕ್ಕೆ 21 ಸಾವಿರ ರೂ.ಗಳ ಅಗತ್ಯವಿತ್ತು. ಕುಟುಂಬದ ಕಷ್ಟವನ್ನು ಆಲಿಸಿದ ಸುದೀಪ್ ಟ್ರಸ್ಟ್, ನೆರವಿಗೆ ಮುಂದಾಯಿತು. ಶುಲ್ಕ ಕಟ್ಟದೇ ಪರೀಕ್ಷೆ ಬರೆಯಲಾಗದ ಆತಂಕದಲ್ಲಿದ್ದ ವಿದ್ಯಾರ್ಥಿಯ ಆತಂಕ ದೂರ ಮಾಡಿ, ಚೆಕ್ ಮೂಲಕ ಹಣವನ್ನು ನೀಡಲಾಯಿತು. ಈ ಮೂಲಕ ಕಷ್ಟದಲ್ಲಿದ್ದ ವಿದ್ಯಾರ್ಥಿ ಹಾಗೂ ಕುಟುಂಬಕ್ಕೆ ಸುದೀಪ್ ತಮ್ಮ ಟ್ರಸ್ಟ್ ಮೂಲಕ ಸಹಾಯ ಮಾಡಿದ್ದು, ವಿದ್ಯಾರ್ಥಿಯ ಬದುಕಿಗೆ ಬೆಳಕಾಗಿದ್ದಾರೆ. 

ಮಾನಸಿಕ ಅಸ್ವಸ್ಥನಿಗೆ ಜೀವನ ರೂಪಿಸಿಕೊಟ್ಟ ಸುದೀಪ್ ಕಿಚ್ಚ ಸುದೀಪ್ ಸಂಘ!

ಕೆಲವು ದಿನಗಳ ಹಿಂದೆ ಪ್ರೇಮಿಗಳು ಮದುವೆ ಆಗಬೇಕು ಎಂದು ಮುಂದಾದಾಗ ಆರ್ಥಿಕವಾಗಿ ಸುದೀಪ್ ಸಹಾಯ ಮಾಡಿದ್ದರು. ಮದುಮಗಳಿಗೆ ತಾಳಿ, ಸೀರೆ ನೀಡಿದ್ದರು. ಹುಡುಗನಿಗೆ ಪಂಚೆ ಮತ್ತು ಪೂಜೆ ಸಾಮಾಗ್ರಿ ನೀಡಿ ಸಹಾಯ ಮಾಡಿದ್ದರು. ಕೊರೋನಾದಿಂದ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಕಷ್ಟವಾಗುತ್ತಿದೆ ಎಂದು ತಮ್ಮ ಚಾರಿಟೆಬಲ್‌ನಿಂದ ಡಾರ್ಕ್‌ ಬೋರ್ಡ್‌ ತಯಾರಿಸಿದ್ದರು. ಶಿಕ್ಷಕರು ಶಾಲೆಯಲ್ಲಿ ಬೋರ್ಡ್‌ ಮೇಲೆ ಬರೆದಂತೆ ಈ ಆ್ಯಪ್‌ ಬಳಸಿ ಬರೆಯಬಹುದು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚಿಗೆ ಉಪಯೋಗವಾಗುವ ಕಾರಣ ಅನೇಕರು ಕಿಚ್ಚನ ಈ ಕಾರ್ಯಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
 

Follow Us:
Download App:
  • android
  • ios