Hassan: ಮಾನಸಿಕ ಅಸ್ವಸ್ಥನಿಗೆ ಜೀವನ ರೂಪಿಸಿಕೊಟ್ಟ ಸುದೀಪ್ ಕಿಚ್ಚ ಸುದೀಪ್ ಸಂಘ!
ಮತ್ತೊಮ್ಮೆ ಮಾನವೀಯತೆ ಮೆರೆದ ಕಿಚ್ಚ ಸುದೀಪ್ ಸಂಘ. ಜೀವನ ರೂಪಿಸಿಕೊಂಡು ಬದುಕುವುದಕ್ಕೆ ಕಿಚ್ಚ ಕಾರಣ.....
ಕನ್ನಡ ಚಿತ್ರರಂಗದ (Sandalwood) ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ತಮ್ಮ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಟ್ರಸ್ಟ್ ಮಾತ್ರವಲ್ಲದೇ ರಾಜ್ಯಾದ್ಯಂತ ಇರುವ ಸುದೀಪ್ ಅಭಿಮಾನಿಗಳ ಸಂಘಗಳು ಕೂಡ ಜನರ ನೆರವಿಗೆ ಧಾವಿಸುತ್ತಾರೆ. ಇದೀಗ ಹಾಸನ (Hassan) ಜಿಲ್ಲೆಯಲ್ಲಿರುವ ಯುವಕನಿಗೂ ಸಹಾಯ ಮಾಡಿದ್ದಾರೆ, ತಮ್ಮ ಸಾಮಾಜಿಕ ಕಳಕಳಿಯುಳ್ಳ ಕೆಲಸಗಳನ್ನು ಮುಂದುವರಿಸಿದ್ದಾರೆ.
ಲೋಕ ಮೆಚ್ಚುವಂತೆ ನಡೆದುಕೊಂಡ ಕಿಚ್ಚನಿಗೆ ಹಿರಿಯ ಕಲಾವಿದರ ಆಶೀರ್ವಾದ!ಮಾನಸಿಕ ಅಸ್ವಸ್ಥ ಯುವಕನೊಬ್ಬ ಹಾಸನದಲ್ಲಿ ರಸ್ತೆಯಲ್ಲಿಯೇ ಜೀವನ ನಡೆಸುತ್ತಿದ್ದ. ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದ. ಅದೇ ರಸ್ತೆಯಲ್ಲಿ ವಾಸಿಸುತ್ತಿದ್ದ ಹುಡುಗ ಕಿಚ್ಚ ಸುದೀಪ್ ಸಂಘಕ್ಕೆ ಫೋನ್ ಮಾಡಿ, ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಭೇಟಿ ಕೊಟ್ಟ ಸುದೀಪ್ ಬಳಗದವರು ಆ ಯುವಕನಿಗೆ ಅಲ್ಲೇ ಸ್ನಾನ ಮಾಡಿಸಿ, ಬಟ್ಟೆ ಬದಲಾಯಿಸಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈಗಲೂ ಸಹ ಅವರ ಸ್ವಂತ ಸಹೋದರನಂತೆ ಅಕ್ಕನ ಮನೆಯಲ್ಲಿ ಇರಿಸಿಕೊಂಡು, ಬೇಕರಿಯ ಸಂಪೂರ್ಣ ಕೆಲಸ ಕಲಿಸಿ, ಈಗ ಎಲ್ಲಾ ಜೀವನ ನಡೆಸುವಂತೆ ಮಾಡಿಕೊಟ್ಟಿದ್ದಾರೆ. ಕುಟುಂಬದಲ್ಲೊಬ್ಬ ಸದಸ್ಯನಂತೆ ಕಾಣುತ್ತಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಸುದೀಪ್ ಅವರು ಹೇಳುವ ಮಾತು ಗೆದ್ದೇ ಗೆಲ್ಲುವೆ, ಮತ್ತೊಂದು ಮಾತು ಗೆಲ್ಲಲೇ ಬೇಕು ಒಳ್ಳೆಯತನ ಅನ್ನೋ ಸಾಲುಗಳನ್ನು ಸ್ಫೂರ್ತಿಯಾಗಿ ಸ್ವೀಕರಿಸಿ ಜೀವನ ನಡೆಸುತ್ತಿದ್ದಾರೆ. ಯುವಕ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ದ್ವಿತಿಯ ಪಿಯುಸಿಯಲ್ಲಿ 94 ಅಂಕ ಪಡೆದ ಹುಡುಗಿಗೆ ಕಿಚ್ಚ ನೆರವು!ಕೆಲವು ದಿನಗಳ ಹಿಂದೆ ಪ್ರೇಮಿಗಳು ಮದುವೆ ಆಗಬೇಕು, ಎಂದು ಮುಂದಾದಾಗ ಆರ್ಥಿಕವಾಗಿ ಸುದೀಪ್ ಸಹಾಯ ಮಾಡಿದ್ದರು. ಮದುಮಗಳಿಗೆ ತಾಳಿ, ಸೀರೆ ನೀಡಿದ್ದರು. ಹುಡುಗನಿಗೆ ಪಂಚೆ ಮತ್ತು ಪೂಜೆ ಸಾಮಾಗ್ರಿ ನೀಡಿ ಸಹಾಯ ಮಾಡಿದ್ದಾರೆ.
ಕೊರೋನಾದಿಂದ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಕಷ್ಟವಾಗುತ್ತಿದೆ, ಎಂದು ತಮ್ಮ ಚಾರಿಟೆಬಲ್‌ನಿಂದ ಡಾರ್ಕ್ ಬೋರ್ಡ್ ತಯಾರಿಸಿದ್ದಾರೆ. ಶಿಕ್ಷಕರು ಶಾಲೆಯಲ್ಲಿ ಬೋರ್ಡ್ ಮೇಲೆ ಬರೆದಂತೆ ಈ ಆ್ಯಪ್ ಬಳಸಿ ಬರೆಯಬಹುದು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚಿಗೆ ಉಪಯೋಗವಾಗುವ ಕಾರಣ ಏನೇಕರು ಕಿಚ್ಚನ ಈ ಕಾರ್ಯಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.