ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್‌ ಯಶ್ ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ರಾಖಿ ಬಾಯ್ ಆಗಿಯೇ ಗುರುತಿಸಿಕೊಳ್ಳುತ್ತಿದ್ದಾರೆ. ಯಶ್ ಅಭಿಮಾನಿಗಳು ಒಬ್ರಾ, ಇಬ್ರಾ? ಇದೀಗ ತಮಿಳುನಾಡು ಅಭಿಮಾನಿಗಳ ಸಂಘ ನಟನ ಹುಟ್ಟುಹಬ್ಬವನ್ನು ಸ್ಪೆಷಲ್ ಮಾಡಲು ಮಾಡಿರುವ ಪ್ಲಾನ್ ಇದು.

ರಾಕಿ ಬಾಯ್‌ ಯಶ್‌ ಜತೆ ಕಾಣಿಸಿಕೊಂಡ ಚಹಲ್‌ ದಂಪತಿ..! 

ಜನವರಿ 8ರಂದು ಸರಳ ಹುಟ್ಟುಹಬ್ಬಕ್ಕೆ ಸೈ ಎಂದಿದ್ದ ಯಶ್‌ಗೆ ಅಭಿಮಾನಿಗಳು ಅದ್ಧೂರಿ ಆಚರಣೆ ಮಾಡುವ ಮೂಲಕ ಬಿಗ್ ಸರ್ಪ್ರೈಸ್‌ ಕೊಟ್ಟರು. ಹುಟ್ಟುಹಬ್ಬದ ದಿನ ಅನೇಕ ಊರುಗಳಲ್ಲಿ ರಕ್ತದಾನ, ಅನ್ನದಾನ ಹಾಗೂ ನೇತ್ರದಾನಕ್ಕೆ ನೋಂದಣಿ ಮಾಡಲಾಗಿತ್ತು. ಆದರೀಗ ತಮಿಳುನಾಡಿನ ಅಭಿಮಾನಿಗಳು ವರ್ಷವಿಡೀ ಸ್ಟಾರ್ ಹುಟ್ಟುಹಬ್ಬ ಮಾಡಬೇಕೆಂದು ಪ್ರತಿ ತಿಂಗಳ 8ರಂದು ಅನ್ನದಾನ ಮಾಡಲಿದ್ದಾರೆ. 

ತಮಿಳುನಾಡು ಧರ್ಮಪುರಿ ಜಿಲ್ಲೆಯಲ್ಲಿ ಫೆಬ್ರವರಿ 8ರಂದು ಅನ್ನದಾನ ಮಾಡಿರುವ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಮಾನವೀಯ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುವುದಾಗಿ ಬರೆದುಕೊಂಡಿದ್ದಾರೆ ಫ್ಯಾನ್‌ಗಳು. 

KGF-2 ಹವಾ: ರಿಲೀಸ್ ದಿನ ನ್ಯಾಷನಲ್ ಹಾಲಿಡೇ ಘೋಷಣೆ ಮಾಡುವಂತೆ ಮೋದಿಗೆ ಮನವಿ 

ಜುಲೈ 16ರಂದು ಬಿಡುಗಡೆಗೆ ಸಜ್ಜಾಗಿರುವ ಕೆಜಿಎಫ್‌ ಚಿತ್ರ ಪೋಸ್ಟರ್ ಹಾಗೂ ಟೀಸರ್‌ ಮೂಲಕ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಇಡೀ ಭಾರತೀಯ ಸಿನಿ ಪ್ರೇಮಿಗಳು ತುದಿಗಾಲಿನಲ್ಲಿ ನಿಂತು ಈ ಚಿತ್ರ ರಿಲೀಸ್ ಆಗಲು ಕಾಯುತ್ತಿದ್ದಾರೆ. ಸಂಜಯ್ ದತ್, ರವೀನಾ ಟೆಂಡನ್, ಪ್ರಕಾಶ್ ರಾಜ್‌ ಸೇರಿದಂತೆ ಹೆಸರಾಂತ ಸಿನಿಮಾ ತಾರೆಯ ಬಳಗವೇ ಈ ಚಿತ್ರದಲ್ಲಿದೆ.