ಬೆಂಗಳೂರು(ಫೆ.08): ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಯುಜುವೇಂದ್ರ ಚಹಲ್‌ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ರಾಕಿ ಬಾಯ್ ಖ್ಯಾತಿಯ ಯಶ್‌ ಹಾಗೂ ರಾಧಿಕಾ ಪಂಡಿತ್‌ ಭೇಟಿಯಾಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ರಾಕಿಂಗ್‌ ಸ್ಟಾರ್ ಖ್ಯಾತಿಯ ಯಶ್‌ ಹಾಗೂ ರಾಧಿಕಾ ಪಂಡಿತ್ ಜತೆಗೆ ಚಹಲ್ ಪತ್ನಿ ಧನಶ್ರೀ ವರ್ಮಾ ಸಿನಿ ಸ್ಟಾರ್ ದಂಪತಿಗಳ ಜತೆ ಫೋಟೋಗೆ ಫೋಸ್ ನೀಡಿದ್ದಾರೆ. ರಾಕಿಂಗ್‌ ಸ್ಟಾರ್ ಭೇಟಿಯ ಖುಷಿ ಆರ್‌ಸಿಬಿ ಬೌಲರ್‌ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.  

ಫೋಟೋಗಳು -ಮಹೇಂದ್ರ ಸಿಂಗ್ ಧೋನಿ ಪುತ್ರಿ ಜೀವಾಗೆ 6 ವರ್ಷ!

ಯುಜುವೇಂದ್ರ ಚಹಲ್ ಇತ್ತೀಚೆಗಷ್ಟೇ ಅಂದರೆ 2020ರ ಡಿಸೆಂಬರ್ 22ರಂದು ಧನಶ್ರೀ ವರ್ಮಾ ಅವರನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಇದಾದ ಬಳಿಕ ದುಬೈನಲ್ಲಿ ಹನಿಮೂನ್‌ ಆಚರಿಸಲು ತೆರಳಿದ್ದರು. ದುಬೈನ ಸುಂದರ ಕ್ಷಣಗಳನ್ನು ಚಹಲ್‌ ದಂಪತಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು.

ಇನ್ನು ಪ್ರಖ್ಯಾತ ನಟ ಯಶ್‌ ಕೆಜಿಎಫ್‌: ಚಾಪ್ಟರ್ 2 ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಕೆಜಿಎಫ್‌ ಮೂಲಕ ಇಡೀ ಚಿತ್ರಜಗತ್ತೇ ಕನ್ನಡ ಸಿನೆಮಾದತ್ತ ತಿರುಗಿ ನೋಡುವಂತೆ ಯಶ್‌ ಹಾಗೂ ಮತ್ತವರ ತಂಡ ಇದೀಗ ಕೆಜಿಎಫ್‌ 2ನಲ್ಲೂ ಖದರ್ ತೋರಿಸಲು ಸಿದ್ದವಾಗಿದೆ. ಚಿತ್ರತಂಡ ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ಕೆಜಿಎಫ್‌ ಚಾಪ್ಟರ್ 2 ಸಿನೆಮಾ ರಿಲೀಸ್‌ ದಿನಾಂಕ ಪ್ರಕಟಿಸಿದ್ದು, ಮುಂಬರುವ ಜುಲೈ 16 ರಂದು ಕೆಜಿಎಫ್‌ 2 ತೆರೆಗೆ ಅಪ್ಪಳಿಸಲಿದೆ.