ಬೆಂಗಳೂರು, (ಜ.30): ಟೀಸರ್ ಮೂಲಕವೇ ವಿಶ್ವದಾಖಲೆ ನಿರ್ಮಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರದ ರಿಲೀಸ್ ದಿನಾಂಕ ಕೊನೆಗೂ ಘೋಷಣೆಯಾಗಿದ್ದು, ಜುಲೈ 16ರಂದು ಚಿತ್ರ ತೆರೆಕಾಣಲಿದೆ.

ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೆ ಡೇಟ್‌ ಫಿಕ್ಸ್ ಆಗಿದ್ದೇ ತಡ ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಕಿಭಾಯ್ ಚಿತ್ರ ನೋಡಲು  ಜುಲೈ 16ರಂದು ಮೀಸಲಿಡುವ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ.

ಜುಲೈ 16ಕ್ಕೆ ಕೆಜಿಎಫ್‌ 2 ರಿಲೀಸ್‌;ಯಶ್‌ಗೆ ಯಾರೂ ಸ್ಪರ್ಧಿಗಳೇ ಇಲ್ಲ!

ಸಾಲದಕ್ಕೆ ರಾಕಿಭಾಯ್ ಸಿನಿಮಾ ಥಿಯೇಟರ್ ನಲ್ಲಿ ನೋಡಲು ರಜೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಹೌದು ಅಚ್ಚರಿ ಅನ್ನಿಸಿದರೂ ಸತ್ಯ.

 ಜುಲೈ 16ರಂದು ನ್ಯಾಷನಲ್ ಹಾಲಿಡೇ ಘೋಷಣೆ ಮಾಡುವಂತೆ ಅಭಿಮಾನಿಗಳು ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.