Asianet Suvarna News Asianet Suvarna News

ನಿಮ್ಮ ಸಲ್ತನತ್, ಬಾಸ್; KGF ಸ್ಟೈಲ್‌ನಲ್ಲೇ ರಾಕಿಭಾಯ್‌ಗೆ ಉರ್ದುನಲ್ಲಿ ಪ್ರಶಾಂತ್ ನೀಲ್ ಬರ್ತಡೇ ವಿಶ್

ರಾಕಿಂಗ್ ಯಶ್ ಹುಟ್ಟುಹಬ್ಬಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ವಿಶೇಷವಾಗಿ ಶುಭಕೋರಿದ್ದಾರೆ.

KGF Director prashanth Neel Birthday wish to Yash in Hindi sgk
Author
First Published Jan 9, 2023, 11:13 AM IST

ರಾಕಿಂಗ್ ಸ್ಟಾರ್ ಯಶ್, ಇಂದು ಇಡೀ ಭಾರತೀಯ ಸಿನಿ ಅಭಿಮಾನಿಗಳು ಈ ಹೆಸರನ್ನು ಸಂಭ್ರಮಿಸುತ್ತಿದೆ, ಆರಾಧಿಸುತ್ತಿದೆ ಹೆಮ್ಮೆ ಪಡುತ್ತಿದೆ. ಕೆಜಿಎಫ್ ಸಿನಿಮಾ ಮೂಲಕ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಯಶ್ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡರು. ಅಂದಹಾಗೆ ಈ ಬಾರಿ ಯಶ್ ವಿದೇಶದಲ್ಲಿ ಬರ್ತಡೇ ಸಂಭ್ರಮಿಸಿದ್ದಾರೆ. ಪ್ರತಿ ವರ್ಷ ರಾಕಿಂಗ್ ಸ್ಟಾರ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸುತ್ತಿದ್ದರು. ಆದರೆ ಕೊರೊನಾ ಬಳಿಕ ಯಶ್ ಅಭಿಮಾನಿಗಳಿಗೆ ಸಿಕ್ಕಿಲ್ಲ. ಈ ಬಾರಿ ಯಶ್ ಭೇಟಿಯಾಗುವ ನಿರೀಕ್ಷೆಯಲ್ಲಿ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆದರೂ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ವಿಶೇಷ ವಿಶ್ ತಿಳಿಸುತ್ತಿದ್ದಾರೆ. ರಾಕಿ ಭಾಯ್ ಫೋಟೋ, ವಿಡಿಯೋ ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಬೇರೆ ಬೇರೆ ಭಾಷೆಯ ಅಭಿಮಾನಿಗಳು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. 

ಅಂದಹಾಗೆ ಯಶ್ ಈ ಬಾರಿ ದುಬೈನಲ್ಲಿದ್ದಾರೆ. ಕುಟುಂಬದ ಜೊತೆ ದುಬೈ ಪ್ರವಾಸಕ್ಕೆ ತೆರಳಿರುವ ಯಶ್ ಅಲ್ಲೇ ಹುಟ್ಟುಹಬ್ಬ ಆಚರಿಸಿದ್ದಾರೆ. ರಾಕಿಭಾಯ್‌ಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ವಿಶೇಷ ಬರ್ತಡೇ ವಿಶ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಶುಭಕೋರಿರುವ ಪ್ರಶಾಂತ್ ನೀಲ್, ಕೆಜಿಎಫ್ ಸಿನಿಮಾದಲ್ಲಿ ನಟಿ ಈಶ್ವರಿ ರಾವ್ ಹೇಳಿರುವ ಸಾಲನ್ನು ಬರೆದು ಶುಭಕೋರಿದ್ದಾರೆ. 'ಫಲಕ್‌ ಕಾ ದಸ್ತೂರ್..ಖುದಾ ಕಾ ಹುಕುಮ್..ಔರ್‌ ಏಕ್ ಭಾಯಿ ಕೀ ದುವಾ ಹೈ..ಕೀ ಹಾತೋಂ ಕೀ.. ಲಕೀರೋ ಕೋ ಭೀ ರುಕ್ಸತ್‌ ಕರ್..ರೋಕ್ನೇಸೆ ಭೀ ನಹೀ ರುಕೇಗಿ..ತುಮ್ಹಾರಿ ಯೇ ಸಲ್ತನತ್....' ಸಾಲನ್ನು ಶೇರ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಜೊತೆಗೆ 'ಹುಟ್ಟುಹಬ್ಬದ ಶುಭಾಶಯಗಳು ಬಾಸ್' ಎಂದು ಹೇಳಿದ್ದಾರೆ. ಯಶ್ ಜೊತೆಗಿರುವ ಫೋಟೋವನ್ನೂ ಶೇರ್ ಮಾಡಿದ್ದಾರೆ. 

ಪ್ರಶಾಂತ್ ನೀಲ್ ವಿಶ್‌ಗೆ ನೆಟ್ಟಿಗರು ವಿವಧ ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಅರ್ಥ ಆಗಿಲ್ಲ ಎಂದು ಹೇಳಿದ್ರೆ ಇನ್ನು ಕೆಲವರು ಸಂಪೂರ್ಣ ಕನ್ನಡ ಬಳಸಿದ್ದಕ್ಕೆ ಧನ್ಯವಾದಗಳು ಎಂದು ವ್ಯಂಗ್ಯವಾಡುತ್ತಿದ್ದಾರೆ. ಇನ್ನು ಕೆಲವರು ಇಬ್ಬರೂ ಹೀಗೆ ಒಟ್ಟಿಗೆ ನೋಡೊಕೆ ತುಂಬಾ ಖುಷಿಯಾಗುತ್ತದೆ ಎಂದು ಹೇಳಿದ್ದಾರೆ. ಇನ್ನೂ ಅನೇಕ ಮಂದಿ ಸಲಾರ್ ಸಿನಿಮಾದ ಬಗ್ಗೆ ಅಪ್ ಡೇಟ್ ಕೇಳುತ್ತಿದ್ದಾರೆ.

Raichur: ರಾಕಿಂಗ್‌ ಸ್ಟಾರ್‌ ಯಶ್‌ ಅಭಿಮಾನಿಗಳಿಂದ ಬೈಕ್‌ ರ್ಯಾಲಿ, ರಕ್ತದಾನ

ಪ್ರಶಾಂತ್ ನೀಲ್ ಸದ್ಯ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದ ಚಿತ್ರೀಕರಣ 60ರಷ್ಟು ಮುಕ್ತಾಯವಾಗಿದೆ. ಕೆಜಿಎಫ್ ಬಳಿಕ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ಇದಾಗಿದೆ. ಸಲಾರ್ ಅಪ್ ಡೇಟ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

Yash Birthday; ಪುನೀತ್ ಟ್ವೀಟ್ ವೈರಲ್; ಇದ್ದಿದ್ರೆ ಈ ವರ್ಷವೂ ಶುಭಕೋರುತ್ತಿದ್ರು ಎಂದು ಅಭಿಮಾನಿಗಳು ಭಾವುಕ

ಅಂದಹಾಗೆ ಯಶ್ ಮುಂದಿನ ಸಿನಿಮಾ ಯುವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಸದ್ಯ ವೈರಲ್ ಆಗಿರುವ ಪ್ರಕಾರ ರಾಕಿಂಗ್ ಸ್ಟಾರ್ ಸ್ಯಾಂಡಲ್ ವುಡ್ ನ ಪ್ರಸಿದ್ಧ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕೆವಿಎನ್ ಪ್ರೊಡಕ್ಷನ್ ನಲ್ಲಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಕೆವಿಎನ್ ಮತ್ತು ಯಶ್ ಫೋಟೋ ಕೂಡ ವೈರಲ್ ಆಗಿದೆ. ದುಬೈನಿಂದ ವಾಪಾಸ್ ಆದ್ಮೇಲೆ ಯಶ್ ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರೆ ಎನ್ನಲಾಗಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.    

Follow Us:
Download App:
  • android
  • ios