Asianet Suvarna News Asianet Suvarna News

Yash Birthday; ಪುನೀತ್ ಟ್ವೀಟ್ ವೈರಲ್; ಇದ್ದಿದ್ರೆ ಈ ವರ್ಷವೂ ಶುಭಕೋರುತ್ತಿದ್ರು ಎಂದು ಅಭಿಮಾನಿಗಳು ಭಾವುಕ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ರಾಕಿಂಗ್ ಸ್ಟಾರ್ ಯಶ್‌ಗೆ ವಿಶ್ ಮಾಡಿದ್ದ ಹಳೆಯ ವಿಡಿಯೋ ವೈರಲ್ ಆಗಿದೆ.

Puneeth Rajkumar birthday wish to Yash, old tweet viral on Social media sgk
Author
First Published Jan 8, 2023, 12:16 PM IST

ರಾಕಿಂಗ್ ಸ್ಟಾರ್ ಯಶ್ ಇಂದು (ಜನವರಿ 08) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಯಶ್ ಈ ಬಾರಿಯ ಹುಟ್ಟುಹಬ್ಬವನ್ನು ದುಬೈನಲ್ಲಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಕುಟುಂಬದ ಜೊತೆ ದುಬೈಗೆ ಹಾರಿರುವ ಯಶ್ ಅಲ್ಲೇ ಅದ್ದೂರಿಯಾಗಿ ಬರ್ತಡೇ ಸಂಭ್ರಮಿಸಿದ್ದಾರೆ. ಅಂದಹಾಗೆ ಯಶ್ ಹುಟ್ಟುಹಬ್ಬಕ್ಕೆ  ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಯಶ್ ಫೋಟೋ, ಕೆಜಿಎಫ್ ವಿಡಿಯೋಗಳೇ ರಾರಾಜಿಸುತ್ತಿವೆ. ಯಶ್ ಫೋಟೋ ಮತ್ತು ವಿಡಿಯೋ ಶೇರ್ ಅಭಿಮಾನಿಗಳು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. ಅಂದಹಾಗೆ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. 

ಅಂದಹಾಗೆ ಯಶ್ ಹುಟ್ಟುಹಬ್ಬಕ್ಕೆ ಪುನೀತ್ ರಾಜ್ ಕುಮಾರ್ ವಿಶ್ ಮಾಡಿದ್ದ ಟ್ವೀಟ್ ಈಗ ವೈರಲ್ ಆಗಿದೆ. ಯಶ್ ಮತ್ತು ಪುನೀತ್ ನಡುವೆ ಉತ್ತಮ ಸ್ನೇಹ ಬಾಂಧವ್ಯವಿತ್ತು. ಇಬ್ಬರೂ ತುಂಬಾ ಆತ್ಮೀಯರು. ಪುನೀತ್ ನಿಧನಹೊಂದುವ ಕೆಲವೇ ದಿನಗಳ ಮುಂಚೆ ಯಶ್ ಅವರನ್ನು ಭೇಟಿಯಾಗಿದ್ದರು. ಯಶ್ ಮತ್ತು ಅಪ್ಪು ಅಬ್ಬರೂ ವೇದಿಕೆ ಮೇಲೆ ಡಾನ್ಸ್ ಮಾಡಿದ್ದರು. ಕುಣಿದು ಸಂಭ್ರಮಸಿದ್ದರು. ಅಭಿಮಾನಿಗಳ ಸಂತಸ ಹೆಚ್ಚಿಸಿದ್ದರು. ಇದೀಗ ಯಶ್ ಹುಟ್ಟುಹಬ್ಬದ ದಿನ  ಅಪ್ಪು ಮಾಡಿರುವ ಟ್ವೀಟ್ ವೈರಲ್ ಆಗಿದೆ. ಅಂದಹಾಗೆ ಇದು 2020ರಲ್ಲಿ ಅಪ್ಪು  ಮಾಡಿದ ಟ್ವೀಟ್ ಆಗಿದೆ. 'ಹುಟ್ಟುಹಬ್ಬದ ಶುಭಾಶಯಗಳು ಯಶ್' ಎಂದು ಹೇಳಿದ್ದರು. ಅದಕ್ಕೆ ಪ್ರತಿಕ್ರಿಯೆ ಯಶ್ ಧನ್ಯವಾದಗಳು ಅಪ್ಪು ಸರ್ ಎಂದು ಹೇಳಿದ್ದರು. 

Yash Birthday; ರಾಕಿಭಾಯ್ ಸಿನಿಮಾಗೆ KVN ಪ್ರೊಡಕ್ಷನ್ ಬಂಡವಾಳ; ಭರ್ಜರಿ ಸುದ್ದಿ ಕೊಟ್ಟ ರಾಕಿಂಗ್ ಸ್ಟಾರ್

ಈ ಟ್ವೀಟ್ ಅನ್ನು ಶೇರ್ ಮಾಡಿ ಅಭಿಮಾನಿಗಳು ಅಪ್ಪು ಇದ್ದಿದ್ರೆ ಈ ವರ್ಷವೂ ವಿಶ್ ಮಾಡುತ್ತಿದ್ದರೂ ಎಂದು ಬಾವುಕರಾಗುತ್ತಿದ್ದಾರೆ. ಟ್ವೀಟ್ ಶೇರ್ ಮಾಡಿ ಮಿಸ್ ಯು ಎನ್ನುತ್ತಿದ್ದಾರೆ. ಅಪ್ಪು ಅಭಿಮಾನಿಗಳು ರಾಕಿಂಗ್ ಸ್ಟಾರ್‌ಗೆ ಶುಭಕೋರುತ್ತಿದ್ದಾರೆ. ಅಪ್ಪು ಮತ್ತು ಯಶ್ ಇಬ್ಬರ ಫೋಟೋಗಳನ್ನು ಶೇರ್ ಮಾಡಿ ಹಳೆಯ ನೆನಪನ್ನು ಮೆಲುಕು ಹಾಕುತ್ತಿದ್ದಾರೆ. 

Happy Birthday Yash; ದುಬೈನಲ್ಲಿ ರಾಕಿಂಗ್ ಸ್ಟಾರ್ ಹುಟ್ಟುಹಬ್ಬ ಆಚರಣೆ; ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ಯಶ್ ಈ ಬಾರಿಯ ಹುಟ್ಟುಹಬ್ಬವನ್ನು ದುಬೈನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಕುಟುಂಬದ ಜೊತೆ ರಾಕಿಂಗ್ ಸ್ಟಾರ್ ದುಬೈ ಹಾರಿದ್ದಾರೆ. ದುಬೈನಲ್ಲಿ ಕುಟುಂಬ ಮತ್ತು ಸ್ನೇಹಿತರ ಜೊತೆ ಡಿನ್ನರ್ ಮಾಡಿರುವ ಫೋಟೋ ವೈರಲ್ ಆಗಿದೆ. ಅಲ್ಲೇ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಅಂದಹಾಗೆ ಯಶ್ ಮುಂದಿನ ಸಿನಿಮಾ ಯುವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಸದ್ಯ ವೈರಲ್ ಆಗಿರುವ ಪ್ರಕಾರ ರಾಕಿಂಗ್ ಸ್ಟಾರ್ ಸ್ಯಾಂಡಲ್ ವುಡ್ ನ ಪ್ರಸಿದ್ಧ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕೆವಿಎನ್ ಪ್ರೊಡಕ್ಷನ್ ನಲ್ಲಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಕೆವಿಎನ್ ಮತ್ತು ಯಶ್ ಫೋಟೋ ಕೂಡ ವೈರಲ್ ಆಗಿದೆ. ದುಬೈನಿಂದ ವಾಪಾಸ್ ಆದ್ಮೇಲೆ ಯಶ್ ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರೆ ಎನ್ನಲಾಗಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.    

Follow Us:
Download App:
  • android
  • ios