Asianet Suvarna News Asianet Suvarna News

Raichur: ರಾಕಿಂಗ್‌ ಸ್ಟಾರ್‌ ಯಶ್‌ ಅಭಿಮಾನಿಗಳಿಂದ ಬೈಕ್‌ ರ್ಯಾಲಿ, ರಕ್ತದಾನ

ಯಶ್ ಅಭಿಮಾನಿಗಳಿಂದ ಸಿಂಧನೂರು ಪಟ್ಟಣದಲ್ಲಿ ಬೈಕ್ ರ್ಯಾಲಿ
ಯಶ್ 37ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ರಕ್ತದಾನ
ಸಿಂಧನೂರಿನಲ್ಲಿ ಯಶ್ ಅಭಿಮಾನಿ ಸಂಘದ ನಾಮಫಲಕ ಉದ್ಘಾಟನೆ

Raichur Bike rally and blood donation by rocking star Yash fans sat
Author
First Published Jan 8, 2023, 10:03 PM IST

ರಾಯಚೂರು (ಜ.08):  ರಾಕಿಂಗ್ ಸ್ಟಾರ್ ಯಶ್ ಅವರ 37ನೇ ಹುಟ್ಟು ಹಬ್ಬವನ್ನು ಸಿಂಧನೂರಿನಲ್ಲಿ ಅಭಿಮಾನಿಗಳು ಸಂಭ್ರಮದಿಂದ ಆಚರಿಸಲಾಯ್ತು.‌ ಯಶ್ ಹುಟ್ಟು ಹಬ್ಬದ ಪ್ರಯುಕ್ತ ನೂರಾರು ಅಭಿಮಾನಿಗಳು ಸಿಂಧನೂರು ಪಟ್ಟಣದಲ್ಲಿ ಬೈಕ್ ರ್ಯಾಲಿ ಮಾಡಿದರು. ಆ ಬಳಿಕ‌ ನಗರದಲ್ಲಿ ಯಶ್ ಅಭಿಮಾನಿ ಕೆಜಿಎಫ್ ಶಿವು ನೇತೃತ್ವದಲ್ಲಿ 'ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘದ ತಾಲೂಕು ಘಟಕ'ದ ‌ನಾಮಫಲಕ ಉದ್ಘಾಟನೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಯಶ್ ಅಭಿಮಾನಿಗಳು. ಯಶ್ ಕಠಿಣ ಪರಿಶ್ರಮದಿಂದ ಇಡೀ ರಾಜ್ಯ ಅಲ್ಲದೇ ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಅಗಿ ಗುರುತಿಸಿಕೊಂಡಿದ್ದಾರೆ. ತಮ್ಮ ನಟನೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಯಶ್ ಇಂದು ಭಾರತಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಅಭಿನಯದ ಸಿನಿಮಾಗಳು ‌ಮತ್ತಷ್ಟು ಹೆಸರು ಮಾಡಿ ಎಂದು ಅಭಿಮಾನಿಗಳು ಹಾರೈಸಿದರು. 37ನೇ ಹುಟ್ಟು ಹಬ್ಬದ ಪ್ರಯುಕ್ತ ‌ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಪೇನ್‌ ವಿತರಣೆ ಮಾಡಿದರು. ಜೊತೆಗೆ ಹಾಸ್ಟೆಲ್ ನ ವಿದ್ಯಾರ್ಥಿಗಳಿಗೆ ಸಿಹಿ ಊಟದ ವ್ಯವಸ್ಥೆ ‌ಮಾಡಿದರು.

ವಿಶ್ವಕರ್ಮ ಎಸ್ಟಿಗೆ ಸೇರ್ಪಡೆಗಾಗಿ ಪಾದಯಾತ್ರೆ: ಕೆ.ಪಿ.ನಂಜುಂಡಿ

37 ಯಶ್ ಅಭಿಮಾನಿಗಳಿಂದ ರಕ್ತದಾನ:  ಕನ್ನಡದ ರಾಕಿಂಗ್ ಸ್ಟಾರ್ ಯಶ್ ಇಡೀ ರಾಜ್ಯದ ತುಂಬಾ ಸಿನಿಮಾದ ಜೊತೆಗೆ ಹತ್ತಾರು ಸಮಾಜಮುಖಿ ಕೆಲಸಗಳು ಮಾಡಿದ್ದಾರೆ. ಇಂತಹ ನಟನ ಹುಟ್ಟು ಹಬ್ಬದ ಪ್ರಯುಕ್ತ ಸಿಂಧನೂರಿನಲ್ಲಿ ‌ಯಶ್ ಅಭಿಮಾನಿಗಳು ತಮ್ಮ ಬಾಸ್‌ ನ ಹುಟ್ಟುದ ನಿಮಿತ್ಯ 37 ಯುವಕರು ರಕ್ತದಾನ ಮಾಡಿದ್ರು. ಅಷ್ಟೇ ಅಲ್ಲದೇ ಯಾವುದೇ ಸಂದರ್ಭದಲ್ಲಿ ರಕ್ತದ ಸಮಸ್ಯೆ ಇದ್ದರೆ ಯಶ್ ಅಭಿಮಾನಿಗಳಿಗೆ ತಿಳಿಸಿದಲ್ಲಿ ರಕ್ತದಾನ ಮಾಡುವುದಾಗಿ ಸಂದೇಶ ರವಾನಿಸಿದರು. ಒಟ್ಟಿನಲ್ಲಿ ಬಿಸಿಲುನಾಡು ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ನಟ ಯಶ್ ಅವರ ಹುಟ್ಟು ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

Follow Us:
Download App:
  • android
  • ios