ಕೆಜಿಎಫ್ ಅಭಿಮಾನಿಗಳಿಗಾಗಿ ಕೆಜಿಎಫ್ ವರ್ಸ್.ಏ.7ರಂದು ಕೆಜಿಎಫ್ ವರ್ಸ್ ಅನಾವರಣಗೊಳ್ಳಲಿದೆ.
ವಿಜಯ್ ಕಿರಗಂದೂರು ನೇತೃತ್ವದ ಹೊಂಬಾಳೆ ಫಿಲ್ಮಸ್ ತಂಡ ಡಿಜಿಟಲ್ ಕ್ರಾಂತಿಗೆ ಮುಂದಾಗಿದೆ. ನಟ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಕೆಜಿಎಫ್ ಚಿತ್ರಕ್ಕಾಗಿ ‘ಕೆಜಿಎಫ್ ವರ್ಸ್’ ಎನ್ನುವ ವರ್ಚುವಲ್ ರಿಯಾಲಿಟಿ ಜಗತ್ತನ್ನು ಸೃಷ್ಟಿಸುತ್ತಿದೆ. ಏ.7ರಂದು ಕೆಜಿಎಫ್ ವರ್ಸ್ ಅನಾವರಣಗೊಳ್ಳಲಿದೆ. ಸಿನಿಮಾಗಾಗಿ ಮೆಟಾವರ್ಸ್ ಜಗತ್ತು ಸೃಷ್ಟಿಸಿದ್ದು ಕನ್ನಡದಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲೇ ಇದು ಮೊದಲು.
ಮೆಟಾವರ್ಸ್ ಅನ್ನುವುದು ವರ್ಚುವಲ್ ಜಗತ್ತು. ಸಾಮಾನ್ಯ ಜಗತ್ತಿನಲ್ಲಿ ಇದ್ದಂತೆ ಮೆಟಾವರ್ಸ್‌ನಲ್ಲಿಯೂ ಬೇರೆ ಬೇರೆ ಮಂದಿ ಜೊತೆ, ಸಂವಹನ ನಡೆಸಬಹುದು, ಓಡಾಡಬಹುದು, ಗೇಮ್ ಆಡಬಹುದು. ಕೆಜಿಎಫ್ ತಂಡ ಸಿದ್ಧಪಡಿಸಿರುವ ಕೆಜಿಎಫ್ ವರ್ಸ್ ಕೂಡ ವರ್ಚುವಲ್ ಜಗತ್ತು. ಡಿಜಿಟಲ್ ವೇದಿಕೆ. ಇಲ್ಲಿ ಹೊಸ ಗೇಮ್‌ಗಳನ್ನು ಸೃಷ್ಟಿಸಬಹುದು, ಕೆಜಿಎಫ್ ಜಗತ್ತಲ್ಲಿ ಅಡ್ಡಾಡಬಹುದು. ಅಭಿಮಾನಿಗಳು ಕೆಜಿಎಫ್ ವರ್ಸ್‌ನ ಸದಸ್ಯರಾಗಲು ಟೋಕನ್‌ಗಳನ್ನು ಪಡೆದುಕೊಳ್ಳಬೇಕು. ಆ ಟೋಕನ್ ಪಡೆದುಕೊಳ್ಳುವುದು ಹೇಗೆ ಎಂಬುದನ್ನು http://movis.hysto.io/ ಈ ವೆಬ್‌ಸೈಟ್‌ಗೆ ಭೇಟಿ ಕೊಟ್ಟರೆ ತಿಳಿಯುತ್ತದೆ.
ಇಲ್ಲಿ ಚಿತ್ರದ ರಿಯಲ್ ಪಾತ್ರಗಳು ಡಿಜಿಟಲ್ ರೂಪದಲ್ಲಿ ನಿಮ್ಮನ್ನು ಎದುರಾಗಲಿವೆ. ಇಲ್ಲಿ ನೀವು ಕೂಡ ಒಂದು ಪಾತ್ರವಾಗಿ ಈ ಡಿಜಿಟಲ್ ಪಾತ್ರಗಳ ಜತೆ ಮಾತನಾಡಬಹುದು. ಮುಂದೆ ಕೆಜಿಎಫ್ ವರ್ಸ್ ಸದಸ್ಯರು ಗೇಮ್‌ಗಳನ್ನು ಸೃಷ್ಟಿಸಲೂ ಬಹುದು. ಹೊಸ ಜಗತ್ತಿನ ಟೆಕ್ ಫ್ರೆಂಡ್ಲಿ ಜನರೇಷನ್‌ಗೆ ಈ ಕೆಜಿಎಫ್ ವರ್ಸ್ ಬಹಳ ಕುತೂಹಲ ಹುಟ್ಟಿಸುವ ನಿರೀಕ್ಷೆ ಇದೆ.
ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ಮಂದಿ ನೋಡಿದ ಟ್ರೇಲರ್ (Trailer) 'ಕೆಜಿಎಫ್ 2' (KGF 2) ಚಿತ್ರದ್ದು. ಬಿಡುಗಡೆಯಾದ 24 ಗಂಟೆಗಳಲ್ಲಿ 109 ಮಿಲಿಯನ್ ವೀಕ್ಷಣೆ ಕಂಡ ಈ ಟ್ರೇಲರ್ ನಂತರವೂ ಟ್ರೆಂಡಿಂಗ್ ಆಗುತ್ತಲೇ ಇದೆ. ಈ ಸುದ್ದಿ ಅಚ್ಚಿಗೆ ಹೋಗುವ ಕ್ಷಣದಲ್ಲಿ ಕೆಜಿಎಫ್2 ಟ್ರೇಲರ್ ನೋಡಿದವರ ಸಂಖ್ಯೆ 13 ಕೋಟಿ ಮೀರಿದೆ. ಕನ್ನಡ, ತಮಿಳು, ಮಲಯಾಳಂ, ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಯಾದ ಟ್ರೇಲರ್‌ಗಳ ಪೈಕಿ ಹಿಂದಿ ಟ್ರೇಲರ್ ಅತ್ಯಂತ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅವರ ಸಂಖ್ಯೆ ಆರು ಕೋಟಿ ದಾಟಿದೆ.
KGF 2 ಗೆ ಯಶ್ ಪಡೆದ ಸಂಭಾವನೆ ಇಷ್ಟೊಂದಾ..?
ತೆಲುಗಿನಲ್ಲಿ 2.6 ಕೋಟಿ, ಕನ್ನಡದಲ್ಲಿ 2.1 ಕೋಟಿ ತಮಿಳಿನಲ್ಲಿ 1.5 ಕೋಟಿ ಹಾಗೂ ಮಲಯಾಳಂನಲ್ಲಿ ಒಂದು ಕೋಟಿ ಮಂದಿ ವೀಕ್ಷಿಸಿರುವ ಈ ಟ್ರೇಲರ್ ಅನೇಕ ಕಾರಣಗಳಿಗೆ ಚರ್ಚೆಯಾಗುತ್ತಿದೆ. ಬಹುಭಾಷೆಗಳಲ್ಲಿ ಕನ್ನಡ ಸಿನಿಮಾ ಈ ಮಟ್ಟಿನ ಸೌಂಡ್ ಮಾಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಯಶ್ (Yash), ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮತ್ತಿತರರ ತಾರಾಗಣವಿದೆ. ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಚಿತ್ರವನ್ನು ವಿಜಯ್ ಕಿರಗಂದೂರು (Vijay Kiragandur) ನಿರ್ಮಿಸಿದ್ದಾರೆ. ಚಿತ್ರ ಏಪ್ರಿಲ್ 14ಕ್ಕೆ ತೆರೆಗೆ ಅಪ್ಪಳಿಸಲಿದೆ.
ಯಶ್ ಮಾತುಗಳು
- ನಾನು ಯವತ್ತೂ ಯಾವುದರ ಬಗ್ಗೆಯೂ ನರ್ವಸ್ ಆಗುವವನಲ್ಲ. ಇವತ್ತು ಒಂಥರಾ ಅನ್ನಿಸುತ್ತಿದೆ. ಈ ಕ್ಷಣ ನಾನು ಪುನೀತ್ ಸರ್‌ನ ತುಂಬಾ ಮಿಸ್ ಮಾಡಿ ಕೊಳ್ಳುತ್ತಿದ್ದೇನೆ. ಅವರು ಯಾವತ್ತೂ ನಮ್ಮ ಮಧ್ಯೆ ಇರುತ್ತಾರೆ.
- ಕನ್ನಡ ಜನತೆ, ಕನ್ನಡ ಇಂಡಸ್ಟ್ರಿ, ಕನ್ನಡ ಮಾಧ್ಯಮದಿಂದ ನಾನು ಇಲ್ಲಿ ನಿಂತಿದ್ದೇನೆ. ಈ ಪಯಣದಲ್ಲಿ ನನಗೆ ಸಿಗಬೇಕಾದ ಶ್ರೇಯ ತುಂಬಾ ಕಡಿಮೆ.
ಇತಿಹಾಸ ಬರೆದ KGF 2 ಟ್ರೈಲರ್, ಒಂದೇ ದಿನದಲ್ಲಿ ಹಳೆಯ ದಾಖಲೆಗಳೆಲ್ಲ ಉಡೀಸ್!
- ವಿಜಯ್ ಕಿರಗಂದೂರ್, ಹೊಂಬಾಳೆ ಈ ಹೆಸರು ನೆನಪಿಟ್ಟುಕೊಳ್ಳಿ. ಈ ಕನಸು ಹಂಚಿಕೊಂಡಾಗ ಬಹುತೇಕರು ನಮಗೆ ಹುಚ್ಚು ಅಂದಿದ್ದರು. ಆದರೆ ಈ ವ್ಯಕ್ತಿ ವಿಷನ್ ಅರ್ಥ ಮಾಡಿಕೊಂಡು ಬೆನ್ನೆಲುಬಾಗಿ ನಿಂತರು.
- ಈ ಕನಸು ನನಸಾಗಲು ದೊಡ್ಡ ಕಾರಣ ಪ್ರಶಾಂತ್ ನೀಲ್. ಅವರ ಶ್ರದ್ಧೆ ಅಪರಿಮಿತ.
- ನಮ್ಮ ತಂತ್ರಜ್ಞರು, ನಮ್ಮ ತಂಡದಂತ ತಂಡ ಬೇರೆ ಎಲ್ಲೂ ಸಿಗಲ್ಲ. ಎಲ್ಲರಿಗೂ ಧನ್ಯವಾದ.
- ನನ್ನ ಅಭಿಮಾನಿಗಳು, ನನ್ನ ಅಣ್ತಮ್ಮಂದಿರಿಗೆ ಪ್ರೀತಿ. ನೀವು ಮೆಚ್ಚುವಂತಹ ಸಿನೆಮಾ ಮಾಡಿದ್ದೇವೆ.
