ಯಶ್ ನನ್ನ ಯಾವಾಗ್ಲೂ ಹೇ ಚಿನ್ನಾ ಬಾ ಅಂತಲೇ ಕರೀತಿದ್ದದ್ದು ಅಂತಾನೆ ಈ ಪೋರ
ಇಂದು ವಿಶ್ವದೆಲ್ಲೆಡೆ ತೆರೆ ಕಾಣುತ್ತಿರುವ ‘ಕೆಜಿಎಫ್ 2’ ಚಿತ್ರದ ಒಂದು ಸೀಕ್ವೆನ್ಸ್‌ನಲ್ಲಿ ನಾಯಕ ಯಶ್ ಅವರ ಬಾಲ್ಯವನ್ನು ಪ್ರತಿನಿಧಿಸಿದ್ದು ಬಾಲ ನಟ ಸಮೃದ್‌್ಧ ಶೆಟ್ಟಿ. ಬೆಂಗಳೂರಿನ ಬಾಲ್ಡ್‌ವಿನ್ ಸ್ಕೂಲ್‌ನಲ್ಲಿ ಆರನೇ ಕ್ಲಾಸ್‌ನಲ್ಲಿ ಓದುತ್ತಿರುವ ಈ ಪುಟಾಣಿ, ಕೆಜಿಎಫ್ 2 ಶೂಟಿಂಗ್ ಸಮಯದಲ್ಲಿ 3ನೇ ಕ್ಲಾಸಿನಲ್ಲಿದ್ದ. ಸುಮಾರು 35 ದಿನಗಳ ಕಾಲ ಕೋಲಾರದ ಕೆಜಿಎಫ್, ಹೈದರಾಬಾದ್, ಮೈಸೂರು, ಬೆಂಗಳೂರು ಮೊದಲಾದೆಡೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದ. ಈಗಾಗಲೇ ಬಿಡುಗಡೆಯಾಗಿರುವ ‘ಕೆಜಿಎಫ್ 2’ ಟ್ರೇಲರ್‌ನಲ್ಲಿ, ‘ತೂಫಾನ್’ ಹಾಡಿನಲ್ಲಿ ಈ ಹುಡುಗ ಯಶ್ ಜೊತೆಗೆ ಕಾಣಿಸಿಕೊಂಡಿದ್ದಾನೆ.
‘ಕೆಜಿಎಫ್ 2’ ಚಿತ್ರದಲ್ಲಿ ಮೊದಲ ಚಾಪ್ಟರ್‌ನಲ್ಲಿ ಇದ್ದ ಹಾಗೆ ಚಾಪ್ಟರ್ 2ನಲ್ಲೂ ರಾಕಿ ಭಾಯ್ ಜೊತೆಗೆ ಮಕ್ಕಳ ತಂಡ ಇರುತ್ತೆ. ಆ ತಂಡದ ಸಕ್ರಿಯ ಸದಸ್ಯ ಈ ಪೋರ. ಈ ಮಕ್ಕಳ ಟೀಮ್ ನಾಯಕಿಯ ಮುಂದೆ ರಾಕಿ ಭಾಯ್ ಬಾಲ್ಯವನ್ನು ಅಭಿನಯಿಸುವ ದೃಶ್ಯವಿದೆ. ಅದರಲ್ಲಿ ಈ ಹುಡುಗ ರಾಕಿಯ ಬಾಲ್ಯದ ಪಾತ್ರ ಮಾಡಿದ್ದಾನೆ. ಸಿನಿಮಾದುದ್ದಕ್ಕೂ ಯಶ್ ಜೊತೆಗೆ ನಟಿಸಿದ್ದಾನೆ. ಆ್ಯಕ್ಟಿಂಗ್ ಜೊತೆಗೆ, ಶೂಟಿಂಗ್ ವಾತಾವರಣವನ್ನೂ ಎನ್‌ಜಾಯ್ ಮಾಡಿದ್ದಾನೆ.
KGF 2 ಮುಂದೆ ಯಾವ ಬಾಹುಬಲೀನೂ ಇಲ್ಲ, ಕೊನೆಯ ಟ್ವಿಸ್ಟ್ ನೋಡಿದ್ರೆ KGF 3 ಪಕ್ಕಾ! ಸಿನಿಮಾ ಹೈಲೈಟ್ಸ್ ಏನು?
‘ಯಶ್ ಅವರು ನನ್ನ ಹೇ, ಚಿನ್ನ.. ಬಾ ಅಂತಲೇ ಕರೀತಿದ್ದಿದ್ದು. ಶೂಟಿಂಗ್ ನಡುವೆ ಫ್ರೀ ಇದ್ದಾಗ ನಾವು ಮಕ್ಕಳು ಹಾಗೂ ಟೀಮ್‌ನವರು ಕ್ರಿಕೆಟ್ ಆಡ್ತಿದ್ವಿ. ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಅವರೂ ನಮ್ ಜೊತೆ ಆಡ್ತಿದ್ರು. ಚೆನ್ನಾಗಿ ಕ್ರಿಕೆಟ್ ಆಡ್ತೀಯ ಅಂತ ನಮ್ ಡೈರೆಕ್ಟರ್ ಅವರ ಕ್ರಿಕೆಟ್ ಬ್ಯಾಟ್‌ಅನ್ನು ನನಗೆ ಗಿಫ್‌್ಟಮಾಡಿದ್ದಾರೆ. ಆ ಬ್ಯಾಟಲ್ಲಿ ನಾನು ಕ್ರಿಕೆಟ್ ಆಡಲ್ಲ, ಅದು ನನಗೆ ಒಳ್ಳೆಯ ಮೆಮೊರಿ’ ಅಂತಾನೆ ಸಮೃದ್‌್ಧ.
‘ಕೆಜಿಎಫ್ 2’ ಚಿತ್ರದ ಜೊತೆಗೆ ‘ಬಂದೂಕು’, ‘ಗುರುತತ್ವ’ ಮೊದಲಾದ ಚಿತ್ರಗಳಲ್ಲಿ ನಟಿಸುತ್ತಿದ್ದಾನೆ. ‘ನಂಗೆ ಯಶ್ ಅವರ ಸ್ಟೈಲ್, ಆ್ಯಟಿಟ್ಯೂಡ್ ಭಾಳ ಇಷ್ಟ. ದೊಡ್ಡೋನಾದ್ಮೇಲೆ ಅವರಂಗಾಗ್ತೀನಿ’ ಅನ್ನೋ ಪುಟಾಣಿಗೆ ಆಲ್ ದಿ ಬೆಸ್ಟ್.
ಮುಂಬೈನಲ್ಲಿ ಯಶ್ 100 ಫೀಟ್ ಕಟೌಟ್
‘ಲಾರ್ಜರ್ ದೆನ್ ಲೈಫ್’ ಅನ್ನೋ ಕಾಂಸೆಪ್‌್ಟನಲ್ಲಿ ರಾಕಿ ಭಾಯ್ ಯಶ್ ಅವರ 100 ಅಡಿಗಳ ಕಟೌಟ್ ಮುಂಬಯಿಯ ಥಿಯೇಟರ್‌ನಲ್ಲಿ ರಾರಾಜಿಸುತ್ತಿದೆ. ಮುಂಬೈಯ ಕಾರ್ನಿವಾಲ್ ಸಿನಿಮಾಸ್ ಅನ್ನೋ ಥಿಯೇಟರ್‌ನಲ್ಲಿ ಇದೇ ಮೊದಲ ಬಾರಿಗೆ ಯಶ್ ಅವರ ಬೃಹತ್ ಕಟೌಟ್ ಹಾಕಲಾಗಿದೆ. ಬೆಂಗಳೂರಿನ ಹೆಚ್ಚಿನೆಲ್ಲ ಥಿಯೇಟರ್‌ಗಳಲ್ಲಿ ಯಶ್ ಕಟೌಟ್, ಪೋಸ್ಟರ್‌ಗಳು ಗಮನಸೆಳೆಯುತ್ತಿವೆ. ಊರ್ವಶಿ ಥಿಯೇಟರ್ ಮುಂಭಾಗ ರಾಕಿ ಭಾಯ್ ಬೃಹತ್ ಕಟೌಟ್ ಇದೆ. ತ್ರಿವೇಣಿ, ನವರಂಗ್, ವೀರೇಶ್ ಸೇರಿದಂತೆ ಬೆಂಗಳೂರಿನ ಹೆಚ್ಚಿನೆಲ್ಲ ಥಿಯೇಟರ್ ಮುಂಭಾಗ ಯಶ್ ಕಟೌಟ್ ಹಾಗೂ ಪೋಸ್ಟರ್‌ಗಳು ಗಮನ ಸೆಳೆಯುತ್ತಿವೆ.
ವಿಶ್ವಾದ್ಯಂತ 12 ಸಾವಿರ ಸ್ಕ್ರೀನ್‌ಗಳಲ್ಲಿ KGF 2 ರಿಲೀಸ್: ಜೋರಾಗಿದೆ ಸಿನಿಮಾ ಹವಾ
ಕೆಜಿಎಫ್ 2: ಸುಲ್ತಾನ್ ಹಾಡು 4 ಮಿಲಿಯನ್‌ಗೂ ಅಧಿಕ ವೀಕ್ಷಣೆ
ಯಶ್ ನಟನೆಯ ಕೆಜಿಎಫ್ 2 ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ 3 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಿಡುಗಡೆಯಾದ 6 ಗಂಟೆಗಳಲ್ಲಿ ಕನ್ನಡದಲ್ಲಿ 14 ಲಕ್ಷ, ಹಿಂದಿಯಲ್ಲಿ 20 ಲಕ್ಷ, ತೆಲುಗಿನಲ್ಲಿ 5.4 ಲಕ್ಷ, ತೆಲುಗಿನಲ್ಲಿ 1,80,000 ಹಾಗೂ ಮಲಯಾಳಂನಲ್ಲಿ 74 ಸಾವಿರ ವೀಕ್ಷಣೆ ಸಿಕ್ಕಿದೆ. ಈ ಹಾಡಿನಲ್ಲಿ ಯಶ್ ಅವರ ಜೊತೆಗೆ ನಾಯಕಿ ಶ್ರೀನಿಧಿ ಶೆಟ್ಟಿಲುಕ್ ಗಮನ ಸೆಳೆದಿದೆ.
"
