ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಯಶ್- ದುಲ್ಖರ್‌ ಫೋಟೋ. ಹಾಸನ ಬಾಯ್ ಮಾತನಾಡಿದ್ದು ಊಟದ ಬಗ್ಗೆ. ಇದು ದಕ್ಷಿಣ ಭಾರತದ ಸಂಸ್ಕೃತಿ ಅಲ್ಲವೇ? 

ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್ ಯಶ್‌ ಹಾಗೂ ಮಾಲಿವುಡ್‌ ಯೂತ್‌ ಐಕಾನ್‌ ದುಲ್ಖರ್‌ ಸಲ್ಮಾನ್ ಇತ್ತೀಚಿಗೆ ಒಟ್ಟಾಗಿ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇವರಿಬ್ಬರು ಒಟ್ಟಾಗಿ ನಟಿಸುತ್ತಿದ್ದಾರಾ? ಇದು ಕೆಜಿಎಫ್‌ ಚಿತ್ರದ ಚಿತ್ರೀಕರಣವೇ? ಎಂದು ತುತೂಹಲದಲ್ಲಿರುವ ಅಭಿಮಾನಿಗಳಿಗೆ ವಿಷಯವೇನೆಂದು ನಾವು ಹೇಳ್ತೀವಿ ಕೇಳಿ...

ಇನ್ಫೋಸಿಸ್‌ನಲ್ಲಿ ರಾಕಿಭಾಯ್ ಹವಾ; ವೈರಲ್ ಆಯ್ತು ಕೆಜಿಎಫ್ 2 ಫೋಟೋ!

ಕೆಲವು ದಿನಗಳಿಂದ ಮೈಸೂರಿನ ಇನ್ಫೋಸಿಸ್‌ ಕಂಪನಿಯಲ್ಲಿ ಕೆಜಿಎಫ್‌-2 ಚಿತ್ರೀಕರಣ ನಡೆಯುತ್ತಿದ್ದು, ರಾಕಿ ಬಾಯ್‌ ಯಶ್‌ ಪಾಲ್ಗೊಂಡಿದ್ದಾರೆ. ಇದೇ ವೇಳೆ ಮಲಯಾಳಂ ಖ್ಯಾತ ನಟ ಮುಮ್ಮಟಿ ಮಗ ದುಲ್ಖರ್‌ ಸಲ್ಮಾನ್ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣಕ್ಕಾಗಿ ಮೈಸೂರಿಗೆ ಆಗಮಿಸಿದ್ದರು. ತಮ್ಮ ತವರೂರಿಗೆ ಆಗಮಿಸಿರುವ ದುಲ್ಖರ್‌ನನ್ನು ಯಶ್‌ ಭೇಟಿ ಮಾಡಿ ಮಾತನಾಡಿಸಿದ್ದಾರೆ. ಇದರ ಬಗ್ಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಶೇರ್ ಮಾಡಿದ್ದಾರೆ.

ಐರಾ ಉಗುರು ಕತ್ತರಿಸಿದ ರಾಧಿಕಾ ಪಂಡಿತ್, ಮುದ್ದಾದ ವಿಡಿಯೋ ನೋಡಿ

'ಪ್ರತಿಭಾನ್ವಿತ ನಟ ಹಾಗೂ ಒಳ್ಳೆ ವ್ಯಕ್ತಿ ದುಲ್ಖರ್‌ ಅವರನ್ನು ನನ್ನ ತವರೂರಿನಲ್ಲಿ ಭೇಟಿ ಮಾಡಿದ್ದು ಸಂತೋಷವಾಯಿತು. ಅವರು ಆಯ್ಕೆ ಮಾಡಿಕೊಳ್ಳುವ ಚಿತ್ರಗಳು ನನಗೆ ತುಂಬಾ ಇಷ್ಟ. ನಮ್ಮ ಜನರೇಷನ್‌ನ ಉತ್ತಮ ನಟ. ಮುಂದಿನ ಸಲ ನೀವು ನಮ್ಮ ತವರೂರಿಗೆ ಬಂದಾಗ, ನಿಮಗೆ ಅದ್ಧೂರಿಯಾಗಿ Native cuisine ಕಾದಿರುತ್ತದೆ,' ಎಂದು ಯಶ್‌ ಸೋಷಿಯಲ್ ಮೀಡಿಯಾ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ.

View post on Instagram

ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ