ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಟ್ರೋಲ್‌ಗೆ ಗುರಿಯಾಗಿದ್ದಾರೆ. ಶಿವ ರಾಜ್‌ಕುಮಾರ್ ಸ್ಕ್ರಿಪ್ಟ್ ನೋಡದೆ ಸಿನಿಮಾ ಒಪ್ಪಿಕೊಳ್ಳುತ್ತಾರಾ ಎಂದು ಮಾರ್ಮಿಕವಾಗಿ ಟ್ರೋಲ್ ಮಾಡಲಾಗುತ್ತಿದೆ. ಈ ಟ್ರೋಲ್‌ಗೆ ಉತ್ತರಿಸಿದ ಶಿವರಾಜ್ ಕುಮಾರ್, ಎಷ್ಟು ದಿನ ಮಾಡ್ತೀರಾ ಎಂದು ತಿರುಗೇಟು ನೀಡುತ್ತಾರೆ.
ಹುಬ್ಬಳ್ಳಿ(ಮೇ.06): ಕರ್ನಾಟಕ ವಿಧಾನಸಭಾ ಚುನಾವಣಯಲ್ಲಿ ಸಿನಿಮಾ ನಟ ನಟಿಯರು ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಪಕ್ಷದ ಪರ ಪ್ರಚಾರಕ್ಕಿಳಿದಿರುವ ನಟ ನಟಿಯರು ಟ್ರೋಲ್ ಆಗುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ನ್ನು ಹಲವರು ಕಾಲೆಳೆದಿದ್ದಾರೆ. ಕಾಂಗ್ರೆಸ್ ನಾಯಕರ ಪರ ಪ್ರಚಾರಕ್ಕಿಳಿದಿರುವ ಶಿವರಾಜ್ ಕುಮಾರ್, ಸ್ಕಿಪ್ಟ್ ನೋಡದೇ ಸಿನಿಮಾ ಒಪ್ಪಿಕೊಳ್ಳುತ್ತಾರಾ? ಎಂದು ಟ್ರೋಲ್ ಮಾಡಲಾಗುತ್ತಿದೆ. ಬಿಗ್‌ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ಸೇರಿ ಹಲವರು ಶಿವರಾಜ್ ಕುಮಾರ್ ಕಾಲೆಳೆದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿವರಾಜ್ ಕುಮಾರ್, ಎಷ್ಟು ದಿನ ಟ್ರೋಲ್ ಮಾಡುತ್ತೀರಾ? ಈ ರೀತಿ ಟ್ರೋಲ್ ಮಾಡುವುದು ಎಷ್ಟು ಸರಿ ಎಂದು ಶಿವರಾಜ್ ಕುಮಾರ್ ಪ್ರಶ್ನಿಸಿದ್ದಾರೆ.
ಶಿವರಾಜ್ ಕುಮಾರ್ ಕಾಂಗ್ರೆಸ್ ಹಿನ್ನಲೆ, ಸಿದ್ದಾಂತ, ಅವರ ನಡೆ ತಿಳಿಯದೇ ಪ್ರಚಾರ ಮಾಡುತ್ತಿದ್ದಾರಾ ಅನ್ನೋದನ್ನು ಮಾರ್ಮಿಕವಾಗಿ ಸಿನಿಮಾ ಸ್ಕ್ರಿಪ್ಟ್ ವಿಚಾರ ಮುಂದಿಟ್ಟು ಟ್ರೋಲ್ ಮಾಡುತ್ತಿದ್ದಾರೆ. ಈಗಾಗಲೇ ಟ್ರೋಲ್ ಹಾಗೂ ಆರೋಪಗಳಿಗೆ ಖಡಕ್ ಉತ್ತರ ನೀಡಿರುವ ಶಿವರಾಜ್ ಕುಮಾರ್ ಇದೀಗ ಟ್ರೋಲ್ ವಿಚಾರವಾಗಿಯೂ ತಿರುಗೇಟು ನೀಡಿದ್ದಾರೆ.
ಶಿರಸಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಭೀಮಣ್ಣ ನಾಯ್ಕ್ ಪರ ನಟ ಶಿವಣ್ಣ ದಂಪತಿ ಪ್ರಚಾರ!
ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್ ನಾಯಕರ ಪರ ಶಿವರಾಜ್ ಕುಮಾರ್ ಪ್ರಚಾರ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಕುರಿತು ಆರೋಪ ಮಾಡಿದವರಿಗೆ ತಿರುಗೇಟು ನೀಡಿದ್ದರು. ನಟ ಸುದೀಪ್ ಕೂಡ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ನಾವಿಬ್ಬರೂ ಸ್ನೇಹಿತರು, ಅವರು ಪ್ರಚಾರ ಮಾಡುತ್ತಾರೆ ಎಂದು ಅವರೊಡನೆ ನಾನು ಮಾತನಾಡದೆ ಇರಲು ಸಾಧ್ಯನಾ. ಸೋಮಣ್ಣ, ಪ್ರತಾಪ್ ಸಿಂಹ ಬಗ್ಗೆಯಾಗಲಿ ನಾನು ಮಾತನಾಡಿಲ್ಲ, ಕಾಂಗ್ರೆಸ್ ಬಗ್ಗೆಯೂ ಮಾತನಾಡಿಲ್ಲ. ವರುಣದಲ್ಲಿ ನಾನು ಪ್ರಚಾರ ನಡೆಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸುವುದೇನಿದೆ. ಚುನಾವಣೆ ಎಂದರೆ ಯುದ್ಧವಲ್ಲ; ಸ್ಪರ್ಧೆ ಎಂದು ಶಿವರಾಜ್‌ಕುಮಾರ್ ಹೇಳಿದ್ದರು.
ಕಾಂಗ್ರೆಸ್ ಪಕ್ಷದವರು ಬಿಟ್ಟು ಬೇರೆ ಯಾವ ಪಕ್ಷದವರು ಪ್ರಚಾರಕ್ಕೆ ನನನ್ನು ಕರೆದಿಲ್ಲ. ಕರೆದಿದ್ದರೆ ನಾನು ಹೋಗುತ್ತಿದ್ದೆ ಎಂದು ನಟ ಶಿವರಾಜ್ ಕುಮಾರ್ ಹೇಳಿದರು. ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಸಂಸದ ಪ್ರತಾಪ್ ಸಿಂಹ ಬೇಸರ ವ್ಯಕ್ತಪಡಿಸಿದ ವಿಚಾರಕ್ಕೆ ಸಂಬಂಧಿಸಿ, ಶುಕ್ರವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸೋಮಣ್ಣ ವರುಣ ಕ್ಷೇತ್ರದಲ್ಲಿ ಸ್ಪರ್ಧಿಸಿರುವುದೇ ನನಗೆ ಗೊತ್ತಿರಲಿಲ್ಲ. ಸೋಮಣ್ಣ ಹಾಗೂ ಪ್ರತಾಪ್ ಸಿಂಹ ಅವರು ನನಗೆ ಆಪ್ತರಾಗಿದ್ದಾರೆ. ಅವರ ಬಗ್ಗೆ ನನಗೆ ಗೌರವವಿದೆ. ಬಿಜೆಪಿಯವರು ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ಕರೆದರೆ ನಾನೂ ಹೋಗುತ್ತಿದ್ದೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಸಂಸದ ಪ್ರತಾಪ್ ಸಿಂಹ ಅಸಮಾಧಾನಕ್ಕೆ ನಟ ಶಿವರಾಜ್‌ಕುಮಾರ್ ತಿರುಗೇಟು...
ವರುಣಾದಲ್ಲಿ ಸಿದ್ದರಾಮಯ್ಯ ಪ್ರಚಾರದ ವೇಳೆ ಶಿವರಾಜ್ ಕುಮಾರ್, ಅಪ್ಪಾಜಿ ಜೊತೆಗಿನ ಸಂಬಂಧವನ್ನು ನೆನೆದಿದ್ದರು. ಅಪ್ಪಾಜಿ ಹಾಗೂ ನಮ್ಮ ಜೊತೆಗೆ ಸಿದ್ದರಾಮಯ್ಯ ಮಾಮನ ಒಡನಾಟ ಮರೆಯುವುದಿಲ್ಲ, ಈಗಲೂ ನಮ್ಮ ಕುಟುಂಬದಲ್ಲಿ ‘ಅವರು ನಮ್ಮವರು’ ಎಂಬ ಪ್ರೀತಿ, ವಿಶ್ವಾಸ, ಭಾವನೆಗಳಿವೆ, ಮೈಸೂರಿನಲ್ಲಿ ಅಬಲೆಯರಿಗಾಗಿ ಶಕ್ತಿಧಾಮ ಆರಂಭಿಸಿದಾಗ ಅವರು ನೀಡಿದ ಪ್ರೋತ್ಸಾಹ ಮರೆಯಲು ಸಾಧ್ಯವಿಲ್ಲ. ಅವರು ಜನರಿಗೆ ಏನು ಮಾಡಿದ್ದಾರೆ ಎಂದು ನಾವು ಹೇಳಬೇಕಾಗಿಲ್ಲ, ಕಣ್ಣೇದುರಿಗೆ ಸತ್ಯ ಕಾಣುತ್ತಿದೆ, ಸಿದ್ದರಾಮಯ್ಯ ಇನ್ನೊಂದು ಟಗರು, ಅವರಿಗೆ ನಿಮ್ಮೆಲ್ಲರ ಆಶೀರ್ವಾದ, ಬೆಂಬಲ ಬೇಕು, ಹೆಚ್ಚಿನ ಮತಗಳಿಂದ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.
