ಶಿರಸಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಭೀಮಣ್ಣ ನಾಯ್ಕ್ ಪರ ನಟ ಶಿವಣ್ಣ ದಂಪತಿ ಪ್ರಚಾರ!
ಉತ್ತರಕನ್ನಡ ಜಿಲ್ಲೆಯ ಶಿರಸಿ ವಿಧಾನಸಭಾ ಕ್ಷೇತ್ರದ ಸಿದ್ಧಾಪುರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಪರ ಪ್ರಚಾರ ನಡೆಸಿದ್ದಾರೆ.
ಶಿರಸಿ (ಮೇ.5): ಉತ್ತರಕನ್ನಡ ಜಿಲ್ಲೆಯ ಶಿರಸಿ ವಿಧಾನಸಭಾ ಕ್ಷೇತ್ರದ ಸಿದ್ಧಾಪುರಕ್ಕೆ ಇಂದು ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಪರ ಪ್ರಚಾರ ನಡೆಸಿದ್ದಾರೆ. ಪತ್ನಿ ಗೀತಾ ಜತೆ ಆಗಮಿಸಿದ ನಟ ಶಿವರಾಜ ಕುಮಾರ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು, ಶಿವಣ್ಣನನ್ನು ನೋಡುತ್ತಿದ್ದಂತೇ ಕೇಕೆ ಹಾಕಿ, ಶಿಳ್ಳೆ, ಚಪ್ಪಾಳೆ ಹೊಡೆದು ಅಭಿಮಾನಿಗಳು ಕುಣಿದಾಡಿದ್ದಾರೆ. ಶಿರಸಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಅವರು ನಟ ಶಿವರಾಜ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಸೋದರ ಮಾವ ಆಗಿರೋದ್ರಿಂದ, ಪತ್ನಿ ಜತೆ ಶಿವಣ್ಣ ಸಿದ್ಧಾಪುರದ ಕಾನಗೋಡು, ಕೊಂಡ್ಲಿ, ಹಾಳದಕಟ್ಟಾ ಮುಂತಾದೆಡೆ ಹಾಗೂ ಶಿರಸಿ ಭಾಗದಲ್ಲಿ ಭೀಮಣ್ಣ ನಾಯ್ಕ್‌ರನ್ನು ಗೆಲ್ಲಿಸಲು ಮತಯಾಚನೆ ನಡೆಸಿದ್ದಾರೆ.
Modi Bengaluru Roadshow: ಮೋದಿ ರೋಡ್ ಶೋ ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಪ್ರಚಾರದ ವೇಳೆ ಜೋಗಿ ಸಿನೆಮಾದ ಹಾಡು ಹಾಡು, "ಬೇಡುವೆನು ವರವನ್ನು, ಕೊಡುತಾಯೆ ಜನುಮವನು, ಕೊನೆತನಕ ಮರೆಯಲ್ಲ ಜೋಗಿ...ಕೊನೆ ತನಕ ಮರೆಯಲ್ಲ ಜೋಗಿ" ಎಂದು ಹಾಡಿ ಶಿವಣ್ಣ ಜನರನ್ನು ರಂಜಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್ ದಂಪತಿ, ಕೃಷಿಕ, ಉದ್ಯಮಿ ಆಗಿರುವ ಭೀಮಣ್ಣ ನಾಯ್ಕ್ ಜನಸ್ಪಂದನೆ ನೀಡುವಂತಹ ಉತ್ತಮ ರಾಜಕಾರಣಿ. ಜನಸೇವೆಗೆ ತತ್ಪರರಾಗಿರುವ ಇಂತಹ ನಾಯಕರಿಗೆ ಜನರು ಒಂದು ಅವಕಾಶ ನೀಡಿ ಗೆಲ್ಲಿಸಬೇಕು. ಭೀಮಣ್ಣ ನಾಯ್ಕ್ ಗೆಲುವಿಂದ ಶಿರಸಿ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಪ್ರಧಾನಿ ಮೋದಿ ರೋಡ್ ಶೋ ರಥದ ವೇಗದಲ್ಲಿ ಬದಲಾವಣೆ! ಯಾವೆಲ್ಲ ರಸ್ತೆಗಳು ಬಂದ್?
ಇದೇ ವೇಳೆ ಶಿವರಾಜ್ ಕುಮಾರ್ ದಂಪತಿಗೆ ಧನ್ಯವಾದ ಅರ್ಪಿಸಿದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್, ಬಿಜೆಪಿ ಅಭ್ಯರ್ಥಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಷ್ಟು ವರ್ಷ ತನ್ನ ಅಧಿಕಾರವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಿಲ್ಲ. ಕ್ಷೇತ್ರದ ಜನರು ತನಗೆ ಅಧಿಕಾರ ನೀಡಿದಲ್ಲಿ ಸರ್ವಾಂಗೀಣ ಅಭಿವೃದ್ಧಿ ನಡೆಸುವುದಾಗಿ ತಿಳಿಸಿದರು.
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.