Asianet Suvarna News Asianet Suvarna News

Puneeth Rajkumar ನಿವಾಸಕ್ಕೆ ಭೇಟಿ ಕೊಟ್ಟ Kamal Haasan!

ಅಪ್ಪು ಕುಟುಂಬವನ್ನು ಮತ್ತೊಮ್ಮೆ ಸಂತೈಸಿದ ಕಮಲ್ ಹಾಸನ್‌ ಮತ್ತು ರಮೇಶ್ ಅರವಿಂದ್. 

Kannada Ramesh Aravind and Kamal Haasan Visits Puneeth Rajkumar family in Bengaluru vcs
Author
Bangalore, First Published Jan 13, 2022, 3:06 PM IST

ಬೆಂಗಳೂರು (ಜ.13):  ಕನ್ನಡ ಚಿತ್ರರಂಗದ (Sandalwood) ಓನ್ ಆ್ಯಂಡ್ ಓನ್ಲಿ ಯುವರತ್ನ, ಕರ್ನಾಟಕದ ರತ್ನ (Karnataka Rathna),  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಹೃದಯಾಘಾತದಿಂದ ನಮ್ಮನ್ನು ಆಗಲಿದ್ದಾರು. ಅಕ್ಟೋಬರ್ 29, 2021 ಇಡೀ ಭಾರತಕ್ಕೆ (India) ಇದು ಕರಾಳ ದಿನವಾಗಿತ್ತು. ಒಂದೊಂದು ನಿಮಿಷವೂ ಹೇಗಪ್ಪಾ ಕಳೆಯುವುದು ಎನ್ನುವ ಚಿಂತೆ ಕನ್ನಡಿಗರನ್ನು ಕಾಡಿತ್ತು. ಅಪ್ಪುಗೆ ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಾಂತ ಅಭಿಮಾನಿಗಳು ಮತ್ತು ಸ್ನೇಹಿತರಿದ್ದಾರೆ. ಈಗಲೂ ಅವರ ನಿವಾಸಕ್ಕೆ ಆಗಮಿಸಿ ಅವರ ಪತ್ನಿ ಮತ್ತು ಪುತ್ರಿ ಜೊತೆ ಮಾತನಾಡುತ್ತಿದ್ದಾರೆ. 

ಇಂದು ಸದಾಶಿವನಗರದಲ್ಲಿರುವ (Sadhashiv Nagar) ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಬಹುಭಾಷಾ ನಟ ಕಮಲ್ ಹಾಸನ್ (Kamal Haasan) ಮತ್ತು ರಮೇಶ್ ಅರವಿಂದ್ (Ramesh Aravind) ಭೇಟಿ ನೀಡಿದ್ದಾರೆ. ಅಪ್ಪು ಅಗಲಿದಾಗಲೂ ಕಮಲ್ ಹಾಸನ್ ಆಗಮಿಸಿರಲಿಲ್ಲ, ಮತ್ತೆ ಎರಡು ತಿಂಗಳ ನಂತರ ಆಗಮಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar), ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಮತ್ತು ಇಬ್ಬರು ಪುತ್ರಿಯರ ಜೊತೆ ಮಾತನಾಡಿ, ಸಾಂತ್ವನ ಹೇಳಿದ್ದಾರೆ. 

Kannada Ramesh Aravind and Kamal Haasan Visits Puneeth Rajkumar family in Bengaluru vcs

ಕಮಲ್ ಯಾವ ಕಾರಣಕ್ಕೆ ಬೆಂಗಳೂರಿಗೆ (Bengaluru) ಬಂದಿದ್ದಾರೆ? ಅಪ್ಪು ಮನೆಯಲ್ಲಿ ಎಷ್ಟು ಸಮಯ ಕಳೆದಿದ್ದಾರೆ? ಎಷ್ಟು ದಿನ ಬೆಂಗಳೂರಿನಲ್ಲಿ ಇರಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಿಲ್ಲ. ಆದರೆ ಡಾ.ರಾಜ್‌ಕುಮಾರ್ (Dr. Rajkumar) ಕುಟುಂಬಕ್ಕೆ ಭಾರತೀಯ ಚಿತ್ರರಂಗದ ಪ್ರತಿಯೊಬ್ಬ ಸ್ನೇಹಿತರು ಎಂದು ಹೇಳುವುದಕ್ಕೆ ಇದೇ ಸಾಕ್ಷಿ. ಅಪ್ಪು ನಮ್ಮನ್ನು ಅಗಲಿ ಎರಡು ತಿಂಗಳಾದರೂ ಸ್ನೇಹಿತರು ಆಗಮಿಸಿ, ಸಂತೈಸುತ್ತಿದ್ದಾರೆ.

Puneeth Rajkumar Memory: ಸುರಿಯುವ ಹಿಮದಲ್ಲೂ ಅಪ್ಪು ನೆನೆಯುತ್ತಿರುವ ಕೊಪ್ಪಳದ ಯೋಧರು..!

ಕಂಠೀರವ ಸ್ಟುಡಿಯೋದಲ್ಲಿರುವ (Kanteerava Studi) ಸಮಾಧಿಗೆ ಇಂದಿಗೂ ಸಾವಿರಾರೂ ಮಂದಿ ಆಗಮಿಸಿ ಪೂಜೆ ಅಲ್ಲಿಸುತ್ತಿದ್ದಾರೆ. ಅಪ್ಪು ಮಾಡಿದ ಸಮಾಜ ವೇಸೆ (Social Work) ನೆನಪಿಸಿಕೊಂಡು, ಋಣಿಯಾಗಿ ಅನೇಕರು ಅನ್ನ ತಿನ್ನುತ್ತಿದ್ದಾರೆ. ಸೈಕಲ್‌ ಸವಾರಿ, ಮ್ಯಾರೆಥಾನ್, ನೂರಾರು ಕಿಲೋಮೀಟರ್ ವಾಕಿಂಗ್ ಮಾಡಿಕೊಂಡು, ಪುನೀತ್‌ ಸಮಾಧಿಯ ದರ್ಶನ ಪಡೆಯುತ್ತಿದ್ದಾರೆ. ಕೆಲವೊಂದು ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ಗಾಂಧಿ ಜೀ (Mahatma Gandhi) ನಂತರ 25 ಲಕ್ಷ ಜನರು ಆಗಮಿಸಿ, ಒಬ್ಬರ ಅಂತಿಮ ದರ್ಶನ ಪಡೆದಿರುವುದು ಪುನೀತ್ ಅವರದ್ದು ಎನ್ನಲಾಗಿದೆ. 

Puneeth Rajkumar: ತಮಿಳುನಾಡು ವಿಧಾನಸಭೆಯಲ್ಲಿ ಪವರ್‌ ಸ್ಟಾರ್‌ಗೆ ಗೌರವ ಸಲ್ಲಿಕೆ

ಬೆಂಗಳೂರಿಗೆ ಆಗಮಿಸುವ ಕಲಾ ಪ್ರೇಮಿಗಳು ಮೊದಲು ಭೇಟಿ ನೀಡುವುದು ಡಾ.ರಾಜ್‌ಕುಮಾರ್ ಅವರ ನಿವಾಸಕ್ಕೆ. ಸಿನಿಮಾ ಕ್ಷೇತ್ರದಲ್ಲಿ ಕನಸು ಕಂಡವರು ಗಾಂಧಿನಗರಲ್ಲಿರುವ ವಜ್ರೇಶ್ವರಿ ಕಂಬೈನ್ಸ್‌ (Vajreshwari Combines) ಆಫೀಸ್‌ಗೆ ಭೇಟಿ ನೀಡುತ್ತಾರೆ. ಯಾವುದಾದರೂ ಒಂದು ರೀತಿಯಲ್ಲಿ ಸಹಾಯವಾಗುತ್ತದೆ ಎಂದು ಅವರ ಆಶಯಕ್ಕೆ ಕಾಯುವ ಜನರಿದ್ದಾರೆ. ಈಗಲೂ ಯಾವುದೇ ಸಿನಿಮಾ ಕಾರ್ಯಕ್ರಮಗಳು ಆರಂಭವಾಗುವ ಮುನ್ನ ಪುನೀತ್‌ ಅವರಿಗೆ ನಮನ ಸಲ್ಲಿಸಿ ಆರಂಭಿಸುತ್ತಾರೆ. ಪುನೀತ್ ಅಗಲಿದ ನಂತರವೇ ಪವರ್‌ಸ್ಟಾರ್ ಸಮಾಜಕ್ಕೆ ಮಾಡಿರುವ ಸಹಾಯಗಳು ಬೆಳಕಿಗೆ ಬಂದಿದ್ದು. ತಮ್ಮ ಸ್ವಂತ ಸಹೋದರರಿಗೆ (Brothers) ತಿಳಿಯದಂತೆ ಪುನೀತ್ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. 

ಪುನೀತ್ ನೇತ್ರದಾನ (Eye Donation) ಮಾಡಿದ ನಂತರ ಸಾವಿರಾರೂ ಮಂದಿ ನೇತ್ರದಾನ ಮಾಡಿದ್ದಾರೆ. ಪುನೀತ್ ಅವರ ಕಣ್ಣನ್ನು ನಾಲ್ಕು ಮಂದಿಗೆ ದಾನ ಮಾಡಲಾಗಿತ್ತು. ಇದೇ ಮೊದಲ ಬಾರಿ ನಾರಾಯಣ ನೇತ್ರಾಲಯ (Narayana Nethralaya) ಇಂತಹ ಒಂದು ಪ್ರಯತ್ನ ಮಾಡಿ, ಸೈ ಎನಿಸಿಕೊಂಡಿದೆ. ಇನ್ನೂ ಕೆಲವರು ತಮ್ಮ ದೇಹ (Organ Donation) ದಾನ ಮಾಡಲು ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ.

Follow Us:
Download App:
  • android
  • ios