Asianet Suvarna News Asianet Suvarna News

Puneeth Rajkumar: ತಮಿಳುನಾಡು ವಿಧಾನಸಭೆಯಲ್ಲಿ ಪವರ್‌ ಸ್ಟಾರ್‌ಗೆ ಗೌರವ ಸಲ್ಲಿಕೆ

ಕಳೆದ ವರ್ಷದ ಅ.29ರಂದು ಅಗಲಿದ ಸ್ಯಾಂಡಲ್‌ವುಡ್‌ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ತಮಿಳುನಾಡು ವಿಧಾನಸಭೆಯಲ್ಲಿ ಗೌರವ ಸಲ್ಲಿಸಲಾಗಿದೆ. ಗುರುವಾರದಿಂದ ರಾಜ್ಯ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ರಾಜ್ಯಪಾಲರ ಭಾಷಣಕ್ಕೂ ಮುನ್ನವೇ ಅಧಿವೇಶನದಲ್ಲಿ ಭಾಗಿಯಾಗಿದ್ದ ಎಲ್ಲಾ ಪಕ್ಷಗಳ ಸದಸ್ಯರು ಪುನೀತ್‌ ಸೇರಿದಂತೆ ಅಗಲಿದ ಇತರ ಗಣ್ಯರಿಗೆ ಗೌರವ ನಮನ ಸಲ್ಲಿಸಿದರು. 

Tribute to Puneeth Rajkumar in Tamil Nadu Legislative Assembly gvd
Author
Bangalore, First Published Jan 7, 2022, 10:02 AM IST

ಚೆನ್ನೈ (ಜ.07): ಕಳೆದ ವರ್ಷದ ಅ.29ರಂದು ಅಗಲಿದ ಸ್ಯಾಂಡಲ್‌ವುಡ್‌ ನಟ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರಿಗೆ ತಮಿಳುನಾಡು ವಿಧಾನಸಭೆಯಲ್ಲಿ ಗೌರವ (Tribute) ಸಲ್ಲಿಸಲಾಗಿದೆ. ಗುರುವಾರದಿಂದ ರಾಜ್ಯ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ರಾಜ್ಯಪಾಲರ ಭಾಷಣಕ್ಕೂ ಮುನ್ನವೇ ಅಧಿವೇಶನದಲ್ಲಿ ಭಾಗಿಯಾಗಿದ್ದ ಎಲ್ಲಾ ಪಕ್ಷಗಳ ಸದಸ್ಯರು ಪುನೀತ್‌ ಸೇರಿದಂತೆ ಅಗಲಿದ ಇತರ ಗಣ್ಯರಿಗೆ ಗೌರವ ನಮನ ಸಲ್ಲಿಸಿದರು. 

ಕನ್ನಡ ನಟರೊಬ್ಬರ ಅಗಲಿಕೆಗೆ ನೆರೆ ರಾಜ್ಯದ ವಿಧಾನಸಭೆಯಲ್ಲಿ ಅಧಿಕೃತ ಗೌರವ ಸಂದಾಯವಾದಂತಾಗಿದೆ. ಅಧಿವೇಶನದ ಮೊದಲ ದಿನವೇ ಪುನೀತ್​ ಬಗ್ಗೆ ಮಾತನಾಡಲಾಗಿದ್ದು, ಆ ವಿಡಿಯೋ ಕೂಡ ವೈರಲ್​ ಆಗುತ್ತಿದೆ. ಪುನೀತ್‌ ಕೊನೆಯುಸಿರೆಳೆದ ದಿನವೂ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ (M.K.Stalin) ಅವರು ಪುನೀತ್‌ರ ಭಾವಚಿತ್ರವನ್ನು ಟ್ವೀಟಿಸಿ ಸಂತಾಪ ಸೂಚಿಸಿದ್ದರು.

Puneeth Rajkumar: ಜೇಮ್ಸ್‌ ಚಿತ್ರಕ್ಕೆ ಅಪ್ಪು ಧ್ವನಿಯಲ್ಲೇ ಡಬ್ಬಿಂಗ್‌

ಕನ್ನಡದ ನಟ ದಿವಂಗತ ಡಾ. ರಾಜ್‌ಕುಮಾರ್ ಅವರ ಪುತ್ರರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದ ಬಗ್ಗೆ ಕೇಳಿ ತೀವ್ರ ಆಘಾತ ಮತ್ತು ದಿಗ್ಭ್ರಮೆಯಾಗಿದೆ. ನಮ್ಮ ಎರಡೂ ಕುಟುಂಬಗಳು ಹಲವು ದಶಕಗಳಿಂದ ಸೌಹಾರ್ದಯುತ ಬಾಂಧವ್ಯವನ್ನು ಹಂಚಿಕೊಂಡಿವೆ. ಹೀಗಾಗಿ ವೈಯಕ್ತಿಕವಾಗಿ ನನಗೆ ನಷ್ಟವಾಗಿದೆ ಎಂದು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ (MK Stalin) ಟ್ವೀಟ್ (Tweet) ಮೂಲಕ ಸಂತಾಪ ವ್ಯಕ್ತಪಡಿಸಿದ್ದರು.


ಇನ್ನು ಕೆಲ ತಿಂಗಳ ಹಿಂದೆ ತಮಿಳುನಾಡಿನ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ಹಬ್ಬದ ಆಚರಣೆಯ ನಡುವೆ ಜನರು ಪುನೀತ್‌ಗೆ ಶ್ರದ್ದಾಂಜಲಿ ಸಲ್ಲಿಸಿದ್ದರು. ಬಹುತೇಕ ಕನ್ನಡಿಗರೇ ಇರುವ ನೆರೆಯ ತಾಳವಾಡಿ ಪ್ರದೇಶದಲ್ಲಿ ಗೋರೆ ಹಬ್ಬದ ಆಚರಣೆಯಲ್ಲಿ ಪುನೀತ್​ ಫೋಟೋಗೆ ಹೂವಿನ ಹಾರ ಹಾಕಿ ನಮನ ಸಲ್ಲಿಸಲಾಗಿತ್ತು. ವಿಶಿಷ್ಟ ಆಚರಣೆಯ ಈ ಹಬ್ಬದಲ್ಲಿ ಅಪ್ಪು ಫೋಟೋ ಹಿಡಿದು ಜೈಕಾರ ಕೂಗಿ ತಮಿಳುನಾಡಿನ ಕನ್ನಡಿಗರು  ಅಗಲಿದ ನಟನಿಗೆ ವಿಶಿಷ್ಟವಾಗಿ ಗೌರವ ಸಲ್ಲಿಸಿದ್ದರು.

'ಲಕ್ಕಿ ಮ್ಯಾನ್' ಚಿತ್ರೀಕರಣ ಕಂಪ್ಲೀಟ್: ವಿಶೇಷ ಪಾತ್ರದಲ್ಲಿ Puneeth Rajkumar

ಏನಿದು ಗೋರೆ ಹಬ್ಬ?: ಸಗಣಿಯನ್ನು ರಾಶಿ ಹಾಕಿ ಅದನ್ನು ದೊಡ್ಡ ದೊಡ್ಡ ಉಂಡೆ ಮಾಡಿ ಯುವಕರು, ವಯಸ್ಕರು ಎಂಬ ವಯಸ್ಸಿನ ಬೇಧವಿಲ್ಲದೆ ಪರಸ್ಪರರ ಮೇಲೆ ಎರಚಿಕೊಂಡು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವಿಶಿಷ್ಟ ಆಚರಣೆಗೆ ಗೋರೆ ಹಬ್ಬ ಎಂದು ಕರೆಯಲಾಗುತ್ತದೆ. ದೀಪಾವಳಿಯ ಮಾರನೇ ದಿನ ಈ ಹಬ್ಬವನ್ನು ಆಚರಿಸಲಾಗುವುದು. ಇದು ಸಾಮಾಜಿಕ ಸಾಮರಸ್ಯ ಸಾರುವ ಹಬ್ಬವೆಂದು ಖ್ಯಾತಿ ಗಳಿಸಿದೆ.

ವರನಟ ರಾಜ್‌ಕುಮಾರ್ ಅವರ ಪುತ್ರ ಪುನೀತ್ ಅವರು ಅ.29ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಸುಸ್ತು ಕಾಣಿಸಿಕೊಂಡು ಹಿನ್ನೆಲೆ ಹತ್ತಿರದ ಕ್ಲಿನಿಕ್‌ಗೆ ಭೇಟಿಕೊಟ್ಟ ನಟ ವಿಕ್ರಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಸುಮಾರು 11.30ರ ವೇಳೆಗೆ ನಟನ ಸಾವನ್ನು ಅಧಿಕೃತವಾಗಿ ತಿಳಿಸಲಾಗಿತ್ತು. ಬಹಳಷ್ಟು ಅಭಿಮಾನಿಗಳು ನಟನ ಅಂತಿಮ ದರ್ಶನ ಪಡೆದಿದ್ದರು.

Follow Us:
Download App:
  • android
  • ios