MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Puneeth Rajkumar Memory: ಸುರಿಯುವ ಹಿಮದಲ್ಲೂ ಅಪ್ಪು ನೆನೆಯುತ್ತಿರುವ ಕೊಪ್ಪಳದ ಯೋಧರು..!

Puneeth Rajkumar Memory: ಸುರಿಯುವ ಹಿಮದಲ್ಲೂ ಅಪ್ಪು ನೆನೆಯುತ್ತಿರುವ ಕೊಪ್ಪಳದ ಯೋಧರು..!

ಸೋಮರಡ್ಡಿ ಅಳವಂಡಿಕೊಪ್ಪಳ(ಜ.09): ಚಿತ್ರ ನಟ ಪುನೀತ್‌ ರಾಜಕುಮಾರ್‌(Puneeth Rajkumar) ನಮ್ಮನ್ನು ಅಗಲಿ ಎರಡು ತಿಂಗಳು ಗತಿಸಿದರೂ ಅವರ ನೆನಪು ಮಾತ್ರ ಮಾಸಿಲ್ಲ. ಪುಲ್ವಾಮಾದಲ್ಲಿ(Pulwama) ಯೋಧರು(Soldiers) ಕೊರೆಯುವ ಚಳಿಯ ನಡುವೆ ಅಪ್ಪು ಫೋಟೋದೊಂದಿಗೆ ಕರ್ತವ್ಯ ನಿರ್ವಹಿಸುವ ಮೂಲಕ ಅಪ್ಪು ಅಮರ ಎಂದು ಹೇಳುತ್ತಿದ್ದಾರೆ. 

1 Min read
Author : Kannadaprabha News | Asianet News
Published : Jan 09 2022, 09:00 AM IST
Share this Photo Gallery
  • FB
  • TW
  • Linkdin
  • Whatsapp
15

ಪುಲ್ವಾಮಾ ಜಿಲ್ಲೆಯ ಯೂಸು ಮಾರ್ಗದಲ್ಲಿ ರಾಷ್ಟ್ರೀಯ ರೈಫಲ್‌ ಪಡೆಯ ಬಟಾಲಿಯನ್‌(National Rifle Force Battalion) ಇದೆ. ಇದರಲ್ಲಿ ಬಹುತೇಕರು ಕನ್ನಡಿಗರಿದ್ದಾರೆ. ಅದರಲ್ಲೂ ಅಪ್ಪು ಅಭಿಮಾನಿಗಳೇ ಹೆಚ್ಚು.

25

ಇದರಲ್ಲಿ ಕೊಪ್ಪಳ(Koppal) ತಾಲೂಕಿನ ಡಂಬರಳ್ಳಿಯ ವಾಸನಗೌಡ ರಾಮನಗೌಡ ಸಹ ಇದ್ದು ಅಪ್ಪು ಅಭಿಮಾನಿಯಾಗಿದ್ದಾರೆ(Appu Fan). ಇಲ್ಲಿರುವ ಬಹುತೇಕರು ಕರ್ತವ್ಯದ ಮಧ್ಯೆಯೂ ಹಿಮದ(Snow) ರಾಶಿಯಲ್ಲಿ ಅಪ್ಪುವಿನ ಫೋಟೋ ಇಟ್ಟುಕೊಂಡು ನಿತ್ಯವೂ ನೆನೆಯುತ್ತಿದ್ದಾರೆ.

35

ಪುಲ್ವಾಮಾದಲ್ಲಿ ತಾಪಮಾನ ಮೈನಸ್‌ 10 ಇದೆ. ಇನ್ನು ಕಡಿಮೆಯಾಗುವ ಸಾಧ್ಯತೆ ಇದೆ. ಹೀಗೆ ರಸ್ತೆಯಲ್ಲಿ ಸಾಗುತ್ತಿದ್ದರೆ ರಸ್ತೆಯೇ ಕಾಣದಂತೆ ನಾಲ್ಕಾರು ಅಡಿ ಹಿಮ ಬಿದ್ದಿದೆ. ಕ್ಯಾಂಪಿನ ಪೆಂಡಾಲ್‌ ಹಾಗೂ ಕಾಳಿನಾಥ ದೇವಸ್ಥಾನದ ಮೇಲೆಯೂ ಹಿಮರಾಶಿ ಬಿದ್ದಿದೆ. ಬಿದ್ದಿರುವ ಹಿಮದಲ್ಲಿಯೆ ದಾರಿಮಾಡಿಕೊಂಡು ಮುನ್ನುಗ್ಗಬೇಕು. ಇದೆಲ್ಲವನ್ನು ವೀಡಿಯೋ ಮಾಡಿರುವ ಯೋಧರು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿರುವುದು ವೈರಲ್‌ ಆಗಿದೆ.

45

ಮಳೆ(Rain) ಬರುವಂತೆ ಹಿಮವೇ ಬೀಳುತ್ತಿರುವಾಗ ಅದರ ಮಧ್ಯೆಯೇ ಯೋಧರು ಸಂಚರಿಸುತ್ತಾ ವಿಡಿಯೋ ಮಾಡಿದ್ದಾರೆ. ತಾಪಮಾನ 10-12ಕ್ಕೆ ಬಂದರೆ ಕೊರೆಯುವ ಚಳಿ ಎಂದು ಮನೆಯಿಂದ ಆಚೆಯೇ ಬರುವುದಿಲ್ಲ. ಆದರೆ, ಮೈನಸ್‌ 10 ತಾಪಮಾನದಲ್ಲಿಯೂ ಕುಗ್ಗದೆ ನಡೆಯುತ್ತಿರುವ ಯೋಧರ ಸಾಮರ್ಥ್ಯವನ್ನು ಮೆಚ್ಚಲೇಬೇಕು. ಕೇವಲ ಹಿಮದ ರಾಶಿಯಲ್ಲಿ ಜೀವಿಸುವುದಲ್ಲ, ದೇಶದ್ರೋಹಿಗಳ ಹುಟ್ಟಡಗಿಸಲು ಶ್ರಮಿಸುವ ಅವರ ಕಾರ್ಯಕ್ಕೆ ಸಲಾಂ.

55

ಪುಲ್ವಾಮದ ಯೂಸು ಮಾರ್ಗದಲ್ಲಿ ನಾವು ಈಗ ಇದ್ದೇವೆ. ಇಲ್ಲಿರುವ ಬಟಾಲಿಯನ್‌ನಲ್ಲಿ ಕನ್ನಡಿಗರೇ(Kannadigas) ಅಧಿಕವಾಗಿದ್ದೇವೆ. ಹಿಮದ ಮಧ್ಯೆಯೇ ಕರ್ತವ್ಯ ನಿರ್ವಹಿಸುತ್ತಿದ್ದೇ. ಅಪ್ಪು ಅಭಿಮಾನಿಗಳೇ ಹೆಚ್ಚಿರುವುದರಿಂದ ಅವರ ಫೋಟೋ ಇಟ್ಟುಕೊಂಡಿದ್ದೇವೆ ಅಂತ ಯೋಧ ವಾಸನಗೌಡ ರಾಮನಗೌಡ್ರ ತಿಳಿಸಿದ್ದಾರೆ. 

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಪುನೀತ್ ರಾಜ್‌ಕುಮಾರ್
ಕೊಪ್ಪಳ

Latest Videos
Recommended Stories
Recommended image1
ಸಂಕೇತ್ ಹತ್ಯೆ ಬೆನ್ನಲ್ಲೇ ಎಚ್ಚೆತ್ತ ಸೂಳೆಬೈಲು, ಗಾಂಜಾ-ಅಕ್ರಮ ಮದ್ಯದ ವಿರುದ್ಧ ಬೀದಿಗಿಳಿದ ಹಿಂದೂ-ಮುಸ್ಲಿಂ
Recommended image2
2 KM ಪ್ರಯಾಣಕ್ಕೆ 6 ರೂಪಾಯಿ, 2.5KM ಪ್ರಯಾಣಕ್ಕೆ 12 ರೂಪಾಯಿ: BMTC ಟಿಕೆಟ್ ದರ ವ್ಯವಸ್ಥೆ ವಿರುದ್ಧ ಪ್ರಯಾಣಿಕರ ಆಕ್ರೋಶ!
Recommended image3
ಬೆಂಗಳೂರಲ್ಲಿ ಕಲರ್ಸ್ ಮೊಬೈಲ್ ಅಂಗಡಿ ಮಾಲೀಕನಿಗೆ ಕಲರ್ ಕಲರ್ ಕಾಗೆ ಹಾರಿಸಿದ ಖತರ್ನಾಕ್ ಖದೀಮ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved