Record breaking Kannada films: ಕನ್ನಡದಲ್ಲಿ ಕೆಲ ಸಿನಿಮಾಗಳು, ಒಂದರಿಂದ 2 ವರ್ಷಗಳ ಕಾಲ ಥಿಯೇಟರ್‌ನಲ್ಲಿ ಪ್ರದರ್ಶನಗೊಂಡಿದ್ದ ಕಾಲ ಕೂಡ ಇತ್ತು. ಆಗ ಸಿನಿಮಾಗಳು 100, 200 ದಿನಗಳವರೆಗೆ ಸಹಜವಾಗಿ ಓಡುತ್ತಿತ್ತು.
ಥಿಯೇಟರ್‌ನಲ್ಲಿ ವರ್ಷಗಳಿಗೂ ಹೆಚ್ಚು ಕಾಲ ಪ್ರದರ್ಶನಗೊಂಡ ಸಿನಿಮಾಗಳಿವು! ( Record breaking Kannada films )
ಬಂಗಾರದ ಮನುಷ್ಯ – 2 ವರ್ಷಗಳು
ಡಾ. ರಾಜಕುಮಾರ್ ಅವರ ಬಂಗಾರದ ಮನುಷ್ಯ (1972) ಕನ್ನಡ ಚಿತ್ರರಂಗದ ಒಂದು ಐತಿಹಾಸಿಕ ಚಿತ್ರವಾಗಿದೆ. ಈ ಚಿತ್ರವು ಕರ್ನಾಟಕದಾದ್ಯಂತ 2 ವರ್ಷಗಳಿಗೂ ಅಧಿಕ ಕಾಲ ಥಿಯೇಟರ್‌ನಲ್ಲಿ ಓಡಿತ್ತು. ಈ ಸಿನಿಮಾವು ಗ್ರಾಮೀಣ ಜೀವನದ ಸಮಸ್ಯೆಗಳನ್ನು, ಸಾಮಾಜಿಕ ನ್ಯಾಯವನ್ನು ಕೇಂದ್ರೀಕರಿಸಿದ ಸಿನಿಮಾವಾಗಿದೆ. ಡಾ. ರಾಜಕುಮಾರ್ ಭಾವನಾತ್ಮಕ ನಟನೆಯಿಂದ ಜನರ ಮನಸ್ಸನ್ನು ಗೆದ್ದಿತು. ಈ ಸಿನಿಮಾವು ಕನ್ನಡ ಚಿತ್ರರಂಗದ ದೀರ್ಘಕಾಲಿಕ ಸಿನಿಮಾವಾಗಿ ದಾಖಲೆಯನ್ನು ಬರೆದಿದೆ.
ಶಂಕರ್ ಗುರು – 1.5 ವರ್ಷಗಳು
1978ರಲ್ಲಿ ಬಿಡುಗಡೆಯಾದ ಶಂಕರ್ ಗುರು ಕೂಡ ಡಾ. ರಾಜಕುಮಾರ್ ನಟನೆಯ ಮತ್ತೊಂದು ಶ್ರೇಷ್ಠ ಸಿನಿಮಾವಾಗಿದೆ. ಈ ಚಿತ್ರವು ಒಂದೂವರೆ ವರ್ಷಕ್ಕಿಂತಲೂ ಹೆಚ್ಚು ಕಾಲ ಥಿಯೇಟರ್‌ನಲ್ಲಿ ಓಡಿತ್ತು. ಈ ಸಿನಿಮಾವು ಕ್ರೈಮ್ ಥ್ರಿಲ್ಲರ್ ಶೈಲಿಯ ಕಥಾನಕವನ್ನು ಹೊಂದಿದ್ದು, ರಾಜಕುಮಾರ್ ಅವರ ದ್ವಿಪಾತ್ರಾಭಿನಯವು ಪ್ರೇಕ್ಷಕರ ಮನಸ್ಸು ಮುಟ್ಟಿತು ಈ ಸಿನಿಮಾದ ಸಂಗೀತ, ಕಥೆ ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಜೀವಂತವಾಗಿದೆ.
ನಂಜುಂಡಿ ಕಲ್ಯಾಣ – 1 ವರ್ಷ
1989ರಲ್ಲಿ ಬಿಡುಗಡೆಯಾದ ನಂಜುಂಡಿ ಕಲ್ಯಾಣ ಒಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ. ರಾಘವೇಂದ್ರ ರಾಜಕುಮಾರ್ ಹಾಗೂ ಮಾಲಾಶ್ರೀ ಕಾಂಬಿನೇಶನ್‌ನ ಸೂಪರ್ ಹಿಟ್ ಸಿನಿಮಾವಾಗಿದೆ. ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಥಿಯೇಟರ್‌ನಲ್ಲಿ ಯಶಸ್ವಿಯಾಗಿ ಓಡಿತು. ಈ ಚಿತ್ರದ ಕಾಮಿಡಿ, ರೊಮ್ಯಾನ್ಸ್, ಹಾಡು ಎಲ್ಲ ವಯಸ್ಸಿನವರನ್ನೂ ಸೆಳೆಯಿತು.
ಪ್ರೇಮಲೋಕ – 1 ವರ್ಷ
1987ರಲ್ಲಿ ಬಿಡುಗಡೆಯಾದ ಪ್ರೇಮಲೋಕ ಕನ್ನಡ ಚಿತ್ರರಂಗದ ಸೂಪರ್ ಹಿಟ್ ಸಿನಿಮಾವಾಗಿದೆ. ನಟ ವಿ ರವಿಚಂದ್ರನ್, ಜೂಹಿ ಚಾವ್ಲಾ ಜೋಡಿಯ ಈ ಸಿನಿಮಾವು ಕರ್ನಾಟಕದಾದ್ಯಂತ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಥಿಯೇಟರ್‌ನಲ್ಲಿ ಪ್ರದರ್ಶನಗೊಂಡಿತು. ಈ ಸಿನಿಮಾದ ಹಾಡುಗಳು ಇಂದಿಗೂ ಕರ್ನಾಟಕದ ರಸ್ತೆಗಳಲ್ಲಿ ಕೇಳಿಬರುತ್ತವೆ. ಹಾಡುಗಳ ಜೊತೆಗೆ, ಚಿತ್ರದ ರೊಮ್ಯಾಂಟಿಕ್ ಕಥೆ, ಆಕ್ಷನ್, ಕಥೆ ನಿರೂಪಣೆ ಕೂಡ ಯುವಕರ ಮನಸ್ಸನ್ನು ಗೆದ್ದಿತು.
ಜನುಮದ ಜೋಡಿ – 1 ವರ್ಷ
1996ರಲ್ಲಿ ಬಿಡುಗಡೆಯಾದ ಜನುಮದ ಜೋಡಿ ಶಿವ ರಾಜಕುಮಾರ್, ಶಿಲ್ಪಾ ನಟನೆಯ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಿನಿಮಾವು ಕರ್ನಾಟಕದಾದ್ಯಂತ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಥಿಯೇಟರ್‌ನಲ್ಲಿ ಯಶಸ್ವಿಯಾಗಿ ಓಡಿತು. ಈ ಸಿನಿಮಾದ ಭಾವನಾತ್ಮಕ ಕಥೆ, ಹಾಡುಗಳ ಬಗ್ಗೆ ಜನರು ಇಂದು ಕೂಡ ಮಾತನಾಡುತ್ತಾರೆ.
ಮುಂಗಾರು ಮಳೆ – 865 ದಿನಗಳು
2006ರಲ್ಲಿ ಬಿಡುಗಡೆಯಾದ ಮುಂಗಾರು ಮಳೆ ಸಿನಿಮಾವು ಕನ್ನಡ ಚಿತ್ರರಂಗದ ಗೋಲ್ಡನ್ ಸಿನಿಮಾ. ಭಾರತದ ಮಲ್ಟಿಪ್ಲೆಕ್ಸ್‌ನಲ್ಲಿ ದೀರ್ಘಕಾಲ ಓಡಿದ ಸಿನಿಮಾವಾಗಿ ದಾಖಲೆಯನ್ನು ಬರೆದಿದೆ. ಈ ಸಿನಿಮಾವು PVR ಥಿಯೇಟರ್‌ನಲ್ಲಿ 865 ದಿನಗಳ ಕಾಲ ಓಡಿತು. ಇದು ಭಾರತೀಯ ಚಿತ್ರರಂಗದ ಒಂದು ಅಪರೂಪದ ಸಾಧನೆಯಾಗಿದೆ. ಗಣೇಶ್, ಪೂಜಾ ಗಾಂಧಿ ಅವರ ಜೋಡಿಯ ಈ ರೊಮ್ಯಾಂಟಿಕ್ ಸಿನಿಮಾವು ತನ್ನ ಸುಂದರವಾದ ಸಂಗೀತ, ಕಥಾನಕದಿಂದ ಎಲ್ಲರನ್ನೂ ಆಕರ್ಷಿಸಿತು.
ಯಜಮಾನ – 1 ವರ್ಷ
2000ರಲ್ಲಿ ಬಿಡುಗಡೆಯಾದ ಯಜಮಾನ ಡಾ. ವಿಷ್ಣುವರ್ಧನ್ ಅವರ ಒಂದು ಇಂಡಸ್ಟ್ರಿ ಹಿಟ್ ಸಿನಿಮಾವಾಗಿದೆ. ಈ ಸಿನಿಮಾವು ಕರ್ನಾಟಕದಾದ್ಯಂತ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಥಿಯೇಟರ್‌ನಲ್ಲಿ ಯಶಸ್ವಿಯಾಗಿ ಓಡಿತು. ಈ ಸಿನಿಮಾದ ಕುಟುಂಬ ಕಥಾನಕ, ಡಾ ವಿಷ್ಣುವರ್ಧನ್ ನಟನೆ ಎಲ್ಲರ ಮನಸ್ಸು ಗೆದ್ದಿತು.
ಆಪ್ತಮಿತ್ರ – 1 ವರ್ಷ
2004ರಲ್ಲಿ ಬಿಡುಗಡೆಯಾದ ಆಪ್ತಮಿತ್ರ ಸಿನಿಮಾ ಡಾ. ವಿಷ್ಣುವರ್ಧನ್ ಮತ್ತು ಸೌಂದರ್ಯ, ಪ್ರೇಮಾ, ರಮೇಶ್ ಅರವಿಂದ್ ಕಾಂಬಿನೇಶನ್‌ನಲ್ಲಿ ಮೂಡಿಬಂದ ಭಯಾನಕ ರೊಮ್ಯಾಂಟಿಕ್ ಸಿನಿಮಾವಾಗಿದೆ. ಈ ಸಿನಿಮಾವು ಕರ್ನಾಟಕದಾದ್ಯಂತ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಥಿಯೇಟರ್‌ನಲ್ಲಿ ಓಡಿತ್ತು. ಈ ಸಿನಿಮಾವು ಮಲಯಾಳಂ ಚಿತ್ರ ಮಣಿಚಿತ್ರತಾಳುದ ರೀಮೇಕ್ ಆಗಿದ್ದು, ಕನ್ನಡದಲ್ಲಿ ಮಾತ್ರ ದೊಡ್ಡ ಯಶಸ್ಸನ್ನು ಕಂಡಿತು.
ಮಿಲನ – 1 ವರ್ಷ
2007ರಲ್ಲಿ ಬಿಡುಗಡೆಯಾದ ಮಿಲನ ಸಿನಿಮಾವು ಪುನೀತ್ ರಾಜಕುಮಾರ್ ನಟನೆಯ ಸೂಪರ್ ಹಿಟ್ ಸಿನಿಮಾ. ಈ ಚಿತ್ರವು ಕರ್ನಾಟಕದಾದ್ಯಂತ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಥಿಯೇಟರ್‌ನಲ್ಲಿ ಓಡಿತ್ತು. ಈ ಚಿತ್ರದ ರೊಮ್ಯಾಂಟಿಕ್ ಕತೆ, ಹಾಡುಗಳು ಯುವಕರ ಮನಸ್ಸನ್ನು ಗೆದ್ದಿತು.
ಓಂ – 500ಕ್ಕಿಂತಲೂ ಹೆಚ್ಚು ಬಾರಿ ಮರು-ಬಿಡುಗಡೆ
1995ರಲ್ಲಿ ಬಿಡುಗಡೆಯಾದ ಓಂ ಸಿನಿಮಾವು ಶಿವ ರಾಜಕುಮಾರ್, ಪ್ರೇಮಾ ಕಾಂಬಿನೇಶನ್‌ನ ಸೂಪರ್ ಹಿಟ್ ಸಿನಿಮಾವಾಗಿದೆ. ಈ ಸಿನಿಮಾವು 500ಕ್ಕಿಂತಲೂ ಹೆಚ್ಚು ಬಾರಿ ರೀ ರಿಲೀಸ್ ಆಗಿದೆ. 100 ದಿನಗಳಿಗಿಂತಲೂ ಹೆಚ್ಚು ಕಾಲ ಈ ಸಿನಿಮಾವು ಥಿಯೇಟರ್‌ನಲ್ಲಿ ಓಡಿದೆ. ಈ ಚಿತ್ರದ ಕಥೆ, ಹಾಡು, ಕಲಾವಿದರ ನಟನೆ ಬಗ್ಗೆ ಜನರು ಇಂದಿಗೂ ಮಾತನಾಡುತ್ತಾರೆ.
