Asianet Suvarna News Asianet Suvarna News

'ಉಗ್ರಾವತಾರ' ಟೀಸರ್ ರಿಲೀಸ್: ಆ್ಯಕ್ಷನ್ ಲುಕ್‌ನಲ್ಲಿ ಪ್ರಿಯಾಂಕಾ ಉಪೇಂದ್ರ

ಉಗ್ರಾವತಾರ ಆ್ಯಕ್ಷನ್ ಚಿತ್ರವಾದ್ದರಿಂದ ಸಾಕಷ್ಟು ತಯಾರಿ ನಡೆಸಿದ್ದೆ. ಭಯವೂ ಇತ್ತು. ಜೊತೆಗೆ ಸಹಜವಾಗಿ ಮೂಡಿಬರಬೇಕೆಂಬ ಆಸೆಯೂ ಇತ್ತು ಎಂದು ಚಿತ್ರದ ನಾಯಕಿ ಪ್ರಿಯಾಂಕ ಉಪೇಂದ್ರ ತಿಳಿಸಿದ್ದಾರೆ.

Kannada Movie Ugravatara Teaser out Starrer Priyanka Upendra gvd
Author
Bangalore, First Published Nov 15, 2021, 4:29 PM IST
  • Facebook
  • Twitter
  • Whatsapp

ನಟಿ ಪ್ರಿಯಾಂಕ ಉಪೇಂದ್ರ (Priyanka Upendra) ಅಭಿನಯದ ಬಹುನಿರೀಕ್ಷಿತ ಮಹಿಳಾ ಪ್ರಧಾನ ಚಿತ್ರ 'ಉಗ್ರಾವತಾರ' (Ugravatara) ಟೀಸರ್ (Teaser) ಬಿಡುಗಡೆಯಾಗಿದೆ. ಪ್ರಿಯಾಂಕಾ ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ಟೀಸರ್ ಲಾಂಚ್ ಮಾಡಿದೆ. ಟೀಸರ್ ಬಿಡುಗಡೆಗೂ ಮೊದಲು ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅವರನ್ನು ಸ್ಮರಿಸಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದೆ. ಪ್ರಿಯಾಂಕಾ 44ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರ ಜನ್ಮದಿನದಂದೇ ಟೀಸರ್ ಲಾಂಚ್ ಆಗಿರುವುದಕ್ಕೆ ಅವರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. 'ಉಗ್ರಾವತಾರ' ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಖಾಕಿ ಬಟ್ಟೆ ತೊಟ್ಟು, ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಟೀಸರ್‌ ಕುತೂಹಲಕಾರಿಯಾಗಿದ್ದು, ಸಾಹಸ ದೃಶ್ಯದ ಚಿತ್ರೀಕರಣದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ, ಸನ್ನಿವೇಶಗಳು ನೈಜವಾಗಿ ಮೂಡಿಬರಬೇಕೆಂಬ ಕಾರಣಕ್ಕೆ ಸಾಹಸ ಸಂಯೋಜಕ ರವಿ ಅವರಿಂದ ವಿಶೇಷ ಆ್ಯಕ್ಷನ್‌ ತರಬೇತಿ ಪಡೆದುಕೊಂಡು, ಕ್ಯಾಮರಾ ಮುಂದೆ ಯಾವುದೇ ಡ್ಯೂಪ್‌ ಬಳಸದೇ ಸುಲಲಿತವಾಗಿ ಹೊಡೆದಾಡಿದ್ದಾರೆ. ಮತ್ತು ಆ್ಯಕ್ಷನ್ ಚಿತ್ರವಾದ್ದರಿಂದ ಸಾಕಷ್ಟು ತಯಾರಿ ನಡೆಸಿದ್ದೆ. ಭಯವೂ ಇತ್ತು. ಜೊತೆಗೆ ಸಹಜವಾಗಿ ಮೂಡಿಬರಬೇಕೆಂಬ ಆಸೆಯೂ ಇತ್ತು. ಒಟ್ಟಾರೆ ಚಿತ್ರ ಚೆನ್ನಾಗಿದೆ. ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ತೆರೆ ಕಾಣಲಿದೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.

ಪ್ರಿಯಾಂಕಾ ಉಪೇಂದ್ರ 'ಉಗ್ರ ಅವತಾರ' ಚಿತ್ರದ ಹೊಸ ಫೋಟೋ ರಿವೀಲ್‌!

'ಉಗ್ರಾವತಾರ' ಚಿತ್ರದಲ್ಲಿ ನನ್ನದು ದುರ್ಗಾ ಎಂಬ ಪಾತ್ರ. ಈ ಸೀಕ್ವೆನ್ಸ್‌ನಲ್ಲಿ ನನ್ನ ಮುಖದ ಮೇಲೆ ಕುಂಕುಮ, ಅರಿಶಿನ ಚೆಲ್ಲಿದೆ. ಇದೊಂದು ಫೈಟ್‌ ಸನ್ನಿವೇಶ. ತಮಟೆಯ ಹಿನ್ನೆಲೆ ಇರುತ್ತೆ. ಮುಖ್ಯ ವಿಲನ್‌ ಅಜಯ್‌ ಮತ್ತು ಟೀಮ್‌ ಜೊತೆಗೆ ನನ್ನ ಫೈಟ್‌. ಹಿನ್ನೆಲೆಯಲ್ಲಿರುವ ದೇವಿ ದುರ್ಗೆ, ನನ್ನ ಪಾತ್ರವೂ ದುರ್ಗಾ. ಇಲ್ಲಿ ನಾವಿಬ್ಬರೂ ಸ್ತ್ರೀ ಶಕ್ತಿಯಾಗಿ ವಿಜೃಂಭಿಸುತ್ತೇವೆ. ದುಷ್ಟಶಕ್ತಿಗಳ ವಿರುದ್ಧ ಹೋರಾಡಿ ಶಿಷ್ಟರನ್ನು ಪೊರೆಯುತ್ತೇವೆ. ಈ ಸೀಕ್ವೆನ್ಸ್‌ ಸಿನಿಮಾದ ಮುಖ್ಯಕಥೆಗೆ ಕನೆಕ್ಟ್ ಆಗುತ್ತೆ. ನೆಲಮಂಗಲದ ಹತ್ರ ಸೆಟ್‌ ಹಾಕಿ ಈ ಸನ್ನಿವೇಶ ಚಿತ್ರೀಕರಿಸಲಾಗಿತ್ತು. ಸಿನಿಮಾದಲ್ಲಿ ಒಟ್ಟು ಐದು ಫೈಟ್‌ ಸೀನ್‌ಗಳಿವೆ. ಎಂದು ಈ ಹಿಂದೆ ಪ್ರಿಯಾಂಕಾ ಹೇಳಿದ್ದರು.

ಇಲ್ಲಿಯವರೆಗೆ ಪ್ರಿಯಾಂಕಾ ಉಪೇಂದ್ರ ಎಲ್ಲೂ ಕಾಣಿಸಿಕೊಳ್ಳದಂತಹ, ಹೊಸ ಡಿಫ‌ರೆಂಟ್‌ ಗೆಟಪ್‌ನಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಪ್ರಿಯಾಂಕಾ ಅವರದ್ದು ರಫ್ ಆ್ಯಂಡ್‌ ಟಫ್ ಪೊಲೀಸ್‌ ಆಫೀಸರ್‌ ಪಾತ್ರ. ಮರ್ಡರ್‌ ಮಿಸ್ಟರಿ ಇರುವ ಈ ಕಥೆ ಅತ್ಯಾಚಾರವೊಂದರ ಸುತ್ತ ಸಾಗುತ್ತದೆ. ಸಿನಿಮಾದ ಕೊನೆಯಲ್ಲಿ, ರಸ್ತೆಯಲ್ಲಿ ಹುಡುಗಿಯೊಬ್ಬಳು ಹೋಗುವಾಗ ಆಕೆಯನ್ನು ಗೌರವದಿಂದ ಕಾಣಿರಿ ಎನ್ನುವ ಮೆಸೇಜ್‌ ಕೂಡ ಇದೆ ಎಂದು ಚಿತ್ರದ ನಿರ್ದೇಶಕ ಗುರುಮೂರ್ತಿ (Gurumurthy) ತಿಳಿಸಿದ್ದಾರೆ. ಎಸ್‌ಜಿ ಸತೀಶ್‌ (SG.Satish) ಚಿತ್ರಕ್ಕೆ ಬಂಡವಾಳ  ಹೂಡಿದ್ದು, ವೀಣಾ ನಂದಕುಮಾರ್‌ ಕ್ಯಾಮರಾ ಕೈಚಳಕ, ಕಿನ್ನಾಳ್‌ ರಾಜ್‌ ಸಂಭಾಷಣೆ ಈ ಚಿತ್ರಕ್ಕಿದೆ.

ಈ ವರ್ಷ ನನ್ನ 3 ಚಿತ್ರಗಳು ತೆರೆ ಕಾಣಲಿವೆ: ಪ್ರಿಯಾಂಕ ಉಪೇಂದ್ರ

ಇನ್ನು, ಬಹುಭಾಷಾ ನಟ ಸುಮನ್‌ (Suman) ಪೊಲೀಸ್‌ ಆಯುಕ್ತರಾಗಿ ನಟಿಸಿದರೆ, ಖಳನಾಗಿ ಸತ್ಯಪ್ರಕಾಶ್‌, ನಟರಾಜ್‌, ರೂಪರಾಯಪ್ಪ, ಶಂಕರಪ್ಪ, ಕಾಕ್ರೋಚ್‌ ಸುಧಿ ಸೇರಿದಂತೆ ಪವಿತ್ರಾ ಲೋಕೇಶ್, ಶೋಭಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ರಾಧಕೃಷ್ಣ ಬಸ್ರೂರು ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿಯೂ 'ಉಗ್ರಾವತಾರ' ಬಿಡುಗಡೆಯಾಗಲಿದೆ. ಪ್ರಿಯಾಂಕಾ ಉಪೇಂದ್ರ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದು, 'ಸೇಂಟ್ ಮಾರ್ಕ್ಸ್ ರೋಡ್‌', 'ಲೈಫ್ ಈಸ್ ಬ್ಯೂಟಿಫುಲ್' ಹಾಗೂ 'ಕೈಮರ' ಸಿನಿಮಾಗಳು ಬಿಡುಗಡೆಯಾಗಬೇಕಿದೆ. 
 

Follow Us:
Download App:
  • android
  • ios