Asianet Suvarna News Asianet Suvarna News

'ಮುಗಿಲ್‌ಪೇಟೆ' ಹುಡುಗಿ ಜೀನ್ಸ್ ಅಲ್ಲಿ ಮಾಸ್ ಆಗಾವ್ಲೆ ಸಾಂಗ್ ರಿಲೀಸ್!

ಜೀನ್ಸ್ ಅಲ್ಲಿ ಮಾಸ್ ಆಗಾವ್ಲೆ ಎಂಬ ರೊಮ್ಯಾಂಟಿಕ್ ಸಾಂಗ್ ಲಹರಿ ಮ್ಯೂಸಿಕ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಡಿನಲ್ಲಿ ಮನುರಂಜನ್ ಹಾಗೂ ಚಿತ್ರದ ನಾಯಕಿ ಕಯಾದು ಲೋಹರ್ ಕೆಮಿಸ್ಟ್ರಿ ಸಖತ್ತಾಗಿ ಮೂಡಿಬಂದಿದೆ. 
 

Kannada Movie Mugilpete song out Starrer Manuranjan Ravichandran gvd
Author
Bangalore, First Published Nov 8, 2021, 7:23 PM IST

ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅವರ ಪುತ್ರ ಮನುರಂಜನ್ (Manuranjan) ನಾಯಕನಾಗಿ ನಟಿಸಿರುವ 'ಮುಗಿಲ್‌ಪೇಟೆ' (Mugilpete) ಚಿತ್ರದ ಮತ್ತೊಂದು ಹಾಡು  ಬಿಡುಗಡೆಯಾಗಿದೆ. 'ಜೀನ್ಸ್ ಅಲ್ಲಿ ಮಾಸ್ ಆಗಾವ್ಲೆ' ಎಂಬ ರೊಮ್ಯಾಂಟಿಕ್ ಸಾಂಗ್ ಲಹರಿ ಮ್ಯೂಸಿಕ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಡಿನಲ್ಲಿ ಮನುರಂಜನ್ ಹಾಗೂ ಚಿತ್ರದ ನಾಯಕಿ ಕಯಾದು ಲೋಹರ್ (Kayadu Lohar) ಕೆಮಿಸ್ಟ್ರಿ ಸಖತ್ತಾಗಿ ಮೂಡಿಬಂದಿದೆ. ಈ ಹಾಡಿಗೆ ಭರ್ಜರಿ ಚೇತನ್ ಸಾಹಿತ್ಯವಿದೆ. ಟಿಪ್ಪು ನಾರಾಯಣ್ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದ್ದು, ಶ್ರೀಧರ್.ವಿ.ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ.

'ಮುಗಿಲ್‌ಪೇಟೆ' ಚಿತ್ರದ ಫಸ್ಟ್‌ಲುಕ್ ಹಾಗೂ ಟೀಸರ್ (Teaser) ಈಗಾಗಲೇ ಬಿಡುಗಡೆಯಾಗಿ ಸಿನಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಅಲ್ಲದೇ ದಸರಾ ಹಬ್ಬದ ಪ್ರಯುಕ್ತ ಚಿತ್ರದ ಮೊದಲ ಹಾಡು 'ತಾರಿಫು ಮಾಡಲು' ವಿಡಿಯೊ ಸಾಂಗ್‌ ಬಿಡುಗಡೆಯಾಗಿ ಸಿನಿರಸಿಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಅಲ್ಲದೇ ಚಿತ್ರವು ಇದೇ ತಿಂಗಳು ತೆರೆಗೆ ಬರಲು ಸಜ್ಜಾಗಿದ್ದು,  ಚಿತ್ರದ ಪ್ರಚಾರ (Promotion) ಕಾರ್ಯಕ್ರಮಗಳಿಗೆ ಮನುರಂಜನ್ ಸೇರಿದಂತೆ ಚಿತ್ರತಂಡ ತಯಾರಿಯನ್ನು ನಡೆಸಿದೆ. ವಿಶೇಷವಾಗಿ ವಿ.ರವಿಚಂದ್ರನ್ ತಮ್ಮ ಪುತ್ರನಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟು, ಚಾಮುಂಡೇಶ್ವರಿ ತಾಯಿಯ ದರ್ಶನ ಮಾಡಿ ಅನಂತರ ಚಿತ್ರದ ಪ್ರಚಾರ ಮಾಡಿ ಎಂದಿದ್ದರು.

'ಮುಗಿಲ್​ಪೇಟೆ' ಬಿಡುಗಡೆಗೂ ಮುನ್ನ ಆ ತಾಯಿಯ ದರ್ಶನ ಮಾಡು: ಕ್ರೇಜಿಸ್ಟಾರ್ ರವಿಚಂದ್ರನ್

'ಮುಗಿಲ್‌ಪೇಟೆ' ಚಿತ್ರಕ್ಕೆ ಭರತ್ ಎಸ್. ನಾವುಂದ (Bharath S Navunda) ಆಕ್ಷನ್ ಕಟ್ ಹೇಳಿದ್ದು, ಶ್ರೀಧರ್ ಸಂಭ್ರಮ್ ಅವರ ಸಂಗೀತ ಸಂಯೋಜನೆ ಇದೆ. ಮನುರಂಜನ್‌ಗೆ ನಾಯಕಿಯಾಗಿ ಕಯಾದು ಲೋಹರ್ ಅಭಿನಯಿದ್ದಾರೆ. ಮೋತಿ ಮೂವಿ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಅವಿನಾಶ್, ತಾರಾ ಅನುರಾಧಾ, ಸಾಧುಕೋಕಿಲ, ರಂಗಾಯಣ ರಘು ಹೀಗೆ ಹೆಸರಾಂತ ಕಲಾವಿದರು ನಟಿಸಿದ್ದಾರೆ. ರವಿವರ್ಮ (ಗಂಗು) ಛಾಯಾಗ್ರಹಣ, ಡಾ.ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಅರ್ಜುನ್ ಕಿಟ್ಟು ಸಂಕಲನ, ಹರ್ಷ, ಮುರಳಿ , ಮೋಹನ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಸತೀಶ್ ಅವರ ಕಲಾ ನಿರ್ದೇಶನವಿದೆ. 

ಇನ್ನು, 'ಮುಗಿಲ್‌ಪೇಟೆ' ಚಿತ್ರದ ಹೆಸರು ನೋಡಿದರೆ ಸಾಫ್ಟ್‌ ಅನಿಸಬಹುದು. ಆದರೆ, ಈ ಚಿತ್ರದಲ್ಲಿ ನನ್ನ ಪಾತ್ರದ ಲುಕ್‌ ಮಾತ್ರ ತುಂಬಾ ಮಾಸ್‌ ಮತ್ತು ರಗಡ್‌ ಆಗಿದೆ. ಈಗಾಗಲೇ ನೀವು ಚಿತ್ರದ ಫಸ್ಟ್‌ ಲುಕ್‌ ನೋಡಿದ್ದರೆ ನನ್ನ ಈ ಮಾತನ್ನು ಒಪ್ಪುತ್ತೀರಿ. ಸಿನಿಮಾ ಆರಂಭಿಸಿದಾಗ ನಮಗೆ ಇದ್ದ ಅಂದಾಜಿಗಿಂತಲೂ ಹೆಚ್ಚಾಗಿಯೇ ಈ ಸಿನಿಮಾ ಮೂಡಿ ಬಂದಿದೆ. ನನಗೆ ಒಂದು ಪಾಸಿಟಿವ್‌ ಭಾವನೆ ಮೂಡಿಸುತ್ತಿರುವ ಕತೆ ಇದು. ಒಂದು ಕಮರ್ಷಿಯಲ್‌ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳು ಚಿತ್ರಗಳಲ್ಲಿವೆ. ಹೀಗಾಗಿ ಇದೊಂದು ಪ್ರೇಮ ಕಾವ್ಯ ಚಿತ್ರ ಎಂದು ಮನುರಂಜನ್ ಈ ಹಿಂದೆ ತಿಳಿಸಿದ್ದರು. 

'ಮುಗಿಲ್‌ಪೇಟೆ'ಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮುತ್ತಿನ ಮಾತುಗಳು!

ನನಗೆ ಇದು ಮೊದಲ ಕನ್ನಡ ಸಿನಿಮಾ. ಕನ್ನಡ ಭಾಷೆ ನನಗಿಷ್ಟ. ಆದರೆ, ಸರಿಯಾಗಿ ಮಾತನಾಡಲು ಬರುವುದಿಲ್ಲ. ಆದರೆ, ಮಾತನಾಡುವ ಭಾಷೆ ನನಗೆ ಅರ್ಥವಾಗುತ್ತೆ. ಇದೇ ಮೊದಲ ಸಲ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಈ ಚಿತ್ರದಲ್ಲಿ ನನಗೆ ಬಬ್ಲಿ ಪಾತ್ರ ಸಿಕ್ಕಿದೆ. ತುಂಬಾ ಸ್ವತಂತ್ರವಾಗಿ ಓಡಾಡಿಕೊಂಡಿರುವ ಹುಡುಗಿಯಾಗಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ಸದಾ ನಾಯಕನ ಜೊತೆ ಜಗಳವಾಡುವಂತಹ ಪಾತ್ರ ನನ್ನದು. ಒಂದು ರೀತಿ ಚಾಲೆಂಜಿಂಗ್‌ ಪಾತ್ರ ನನ್ನ ಪಾಲಿಗೆ ದಕ್ಕಿದೆ. ಎಂದು ಚಿತ್ರದ ನಾಯಕಿ ಕಯಾದು ಲೋಹರ್ ಹೇಳಿದ್ದಾರೆ. ಇದೇ ತಿಂಗಳ 19ರಂದು 'ಮುಗಿಲ್‌ಪೇಟೆ'  ಚಿತ್ರ  ತೆರೆಮೇಲೆ ಬರಲು ಸಜ್ಜಾಗಿದೆ.
 

Follow Us:
Download App:
  • android
  • ios