'ಮುಗಿಲ್‌ಪೇಟೆ'ಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮುತ್ತಿನ ಮಾತುಗಳು!
'ಮುಗಿಲ್‌ಪೇಟೆ' ಚಿತ್ರದ ಹೆಸರು ನೋಡಿದರೆ ಸಾಫ್ಟ್ ಅನಿಸಬಹುದು. ಆದರೆ, ಈ ಚಿತ್ರದಲ್ಲಿ ನನ್ನ ಪಾತ್ರದ ಲುಕ್ ಮಾತ್ರ ತುಂಬಾ ಮಾಸ್ ಮತ್ತು ರಗಡ್ ಆಗಿದೆ ಎಂದು ಮನುರಂಜನ್ ಹೇಳಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅವರ ಪುತ್ರ ಮನುರಂಜನ್ (Manuranjan) ನಾಯಕನಾಗಿ ನಟಿಸಿರುವ 'ಮುಗಿಲ್‌ಪೇಟೆ' (Mugilpete) ಚಿತ್ರದ ಟೀಸರ್ (Teaser) ಈಗಾಗಲೇ ಬಿಡುಗಡೆಯಾಗಿದ್ದು, ಸಿನಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಹಾಗೂ ದಸರಾ ಹಬ್ಬದ ಪ್ರಯುಕ್ತ ಚಿತ್ರದ 'ತಾರಿಫು ಮಾಡಲು' ವಿಡಿಯೊ ಸಾಂಗ್ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ (Youtube) ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಇದೀಗ ಚಿತ್ರದ ನಾಯಕ ಮನುರಂಜನ್ ಚಿತ್ರದ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ,
ಮುಗಿಲ್‌ಪೇಟೆ ನನಗಿಷ್ಟ; ಮನುರಂಜನ್ ರವಿಚಂದ್ರನ್ ಸಂದರ್ಶನ!
ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ (Instagram), 'ಅಂದು ಪ್ರೇಮಲೋಕ (Premaloka), ಇಂದು ಮುಗಿಲ್‌ಪೇಟೆ. ನಾಳೆ ಮಧ್ಯಾಹ್ನ 12 ಗಂಟೆಗೆ ಅಚ್ಚರಿಯ ಅನಾವರಣ ಎಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇನ್ನು ಶೇರ್ ಮಾಡಿರುವ ವಿಡಿಯೋದಲ್ಲಿ '1987 ರಲ್ಲಿ ಪ್ರೇಮಲೋಕ. ಮುತ್ತನ್ನ ಹುಡಿಗಿರ್ಗೆ ಹೇಗ್ ಕೇಳ್ಬೇಕು. ಮುದ್ದಾಗಿ ಹೇಗ್ ಕೋಡ್ಬೇಕು ಅಂತ ಹೇಳ್ಕೊಟ್ಟೋರು ಕ್ರೇಜಿಸ್ಟಾರ್ ರವಿಚಂದ್ರನ್. 2021 ಇವತ್ತಿಗೂ ಫಾಲೋ ಮಾಡ್ತಿರೋ ಹುಡುಗರಿಗೆ ಮುತ್ತನ್ನ ಹೀಗೂ ಕೇಳಬಹುದು ಹಾಗೂ ಕೊಡಬಹುದು ಅಂತ ಹೇಳ್ತಿರೋದು ಅದೇ ಕ್ರೇಜಿಸ್ಟಾರ್ ಎಂಬ ಡೈಲಾಗ್‌ಗಳು ಹಾಸ್ಯ ನಟ ರಂಗಾಯಣ ರಘು (Rangayana Raghu) ಹಿನ್ನಲೆ ಧ್ವನಿಯಿಂದ ಕೇಳಿ ಬರುತ್ತದೆ. ನಂತರ ಚಿತ್ರದ ನಾಯಕ ಮನು, ಇವತ್ತಲ್ಲ ನಾಳೆ ನೋಡಿ ಎಂದು ಹೇಳುತ್ತಾರೆ. ಒಟ್ಟಿನಲ್ಲಿ 'ಮುಗಿಲ್‌ಪೇಟೆ' ಚಿತ್ರದ ಬಗ್ಗೆ ಯಾವ ಮಾಹಿತಿ ಬರಬಹುದು ಎಂದು ನಾಳೆ ಮಧ್ಯಾಹ್ನ 12 ಗಂಟೆಗೆ ತಿಳಿಯುತ್ತದೆ.
'ಮುಗಿಲ್‌ಪೇಟೆ' ಚಿತ್ರಕ್ಕೆ ಭರತ್ ಎಸ್. ನಾವುಂದ (Bharath S Navunda) ಆಕ್ಷನ್ ಕಟ್ ಹೇಳಿದ್ದು, ಶ್ರೀಧರ್ ಸಂಭ್ರಮ್ ಅವರ ಸಂಗೀತ ಸಂಯೋಜನೆ ಇದೆ. ಮನುರಂಜನ್‌ಗೆ ನಾಯಕಿಯಾಗಿ ಕಯಾದು ಲೋಹರ್ (Kayadu Lohar) ಅಭಿನಯಿದ್ದಾರೆ. ಮೋತಿ ಮೂವಿ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಅವಿನಾಶ್, ತಾರಾ ಅನುರಾಧಾ, ಸಾಧುಕೋಕಿಲ, ರಂಗಾಯಣ ರಘು ಹೀಗೆ ಹೆಸರಾಂತ ಕಲಾವಿದರು ನಟಿಸಿದ್ದಾರೆ. ರವಿವರ್ಮ (ಗಂಗು) ಛಾಯಾಗ್ರಹಣ, ಡಾ.ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಅರ್ಜುನ್ ಕಿಟ್ಟು ಸಂಕಲನ, ಹರ್ಷ, ಮುರಳಿ , ಮೋಹನ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಸತೀಶ್ ಅವರ ಕಲಾ ನಿರ್ದೇಶನವಿದೆ. ಬೆಳಕಿನ ಹಬ್ಬ ದೀಪಾವಳಿಗೆ 'ಮುಗಿಲ್‌ಪೇಟೆ' ಚಿತ್ರ ತೆರೆಗೆ ಬರಲಿದೆ.
ಹಿಂದಿನ ಚಿತ್ರಗಳಿಂದ ಪಾಠ ಕಲಿತಿರುವೆ: ಮನೋರಂಜನ್ ರವಿಚಂದ್ರನ್
ಇನ್ನು 'ಮುಗಿಲ್‌ಪೇಟೆ' ಚಿತ್ರದ ಹೆಸರು ನೋಡಿದರೆ ಸಾಫ್ಟ್ ಅನಿಸಬಹುದು. ಆದರೆ, ಈ ಚಿತ್ರದಲ್ಲಿ ನನ್ನ ಪಾತ್ರದ ಲುಕ್ ಮಾತ್ರ ತುಂಬಾ ಮಾಸ್ ಮತ್ತು ರಗಡ್ ಆಗಿದೆ. ಈಗಾಗಲೇ ನೀವು ಚಿತ್ರದ ಫಸ್ಟ್ ಲುಕ್ ನೋಡಿದ್ದರೆ ನನ್ನ ಈ ಮಾತನ್ನು ಒಪ್ಪುತ್ತೀರಿ. ಸಿನಿಮಾ ಆರಂಭಿಸಿದಾಗ ನಮಗೆ ಇದ್ದ ಅಂದಾಜಿಗಿಂತಲೂ ಹೆಚ್ಚಾಗಿಯೇ ಈ ಸಿನಿಮಾ ಮೂಡಿ ಬಂದಿದೆ. ನನಗೆ ಒಂದು ಪಾಸಿಟಿವ್ ಭಾವನೆ ಮೂಡಿಸುತ್ತಿರುವ ಕತೆ ಇದು. ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳು ಚಿತ್ರಗಳಲ್ಲಿವೆ. ಹೀಗಾಗಿ ಇದೊಂದು ಪ್ರೇಮ ಕಾವ್ಯ ಚಿತ್ರ ಎಂದು ಮನುರಂಜನ್ ಈ ಹಿಂದೆ ತಿಳಿಸಿದ್ದರು.