Asianet Suvarna News Asianet Suvarna News

Mugilpete Song Release: ದೂರ ಹೋಗೋ ಮುನ್ನ ದೂರಲಾರೆ ಎಂದ ಮನುರಂಜನ್

ಮುಗಿಲ್​ಪೇಟೆ ಚಿತ್ರದ ದೂರ ಹೋಗೋ ಮುನ್ನ ಎಂಬ ಹಾಡು ಲಹರಿ ಮ್ಯೂಸಿಕ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾಸುಕಿ ವೈಭವ್ ಈ ಹಾಡಿಗೆ ದನಿಯಾಗಿದ್ದು, ಶ್ರೀಧರ್.ವಿ.ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ.

Kannada Movie Mugilpete Doora Hogo Munna song out Starrer Manuranjan Ravichandran gvd
Author
Bangalore, First Published Nov 12, 2021, 5:20 PM IST
  • Facebook
  • Twitter
  • Whatsapp

ಕ್ರೇಜಿಸ್ಟಾರ್ ವಿ.ರವಿಚಂದ್ರನ್ (V.Ravichandran) ಅವರ ಪುತ್ರ ಮನುರಂಜನ್ ರವಿಚಂದ್ರನ್ (Manuranjan Ravichandran) ಅಭಿನಯದ 'ಮುಗಿಲ್​ಪೇಟೆ' (Mugilpete) ಚಿತ್ರವು ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರದ ಪ್ರಚಾರ (Promotion) ಕಾರ್ಯವು ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ ಚಿತ್ರತಂಡ ಚಿತ್ರದ ಒಂದೊಂದೆ ಹಾಡನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಚಿತ್ರದ ಮತ್ತೊಂದು ಹಾಡು  ಬಿಡುಗಡೆಯಾಗಿದೆ. 'ದೂರ ಹೋಗೋ ಮುನ್ನ' (Doora Hogo Munna) ಎಂಬ ಲಿರಿಕಲ್ ಹಾಡು ಲಹರಿ ಮ್ಯೂಸಿಕ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

ಈ ಹಾಡಿನ ಪ್ರಾರಂಭದಲ್ಲಿ ಚಿತ್ರತಂಡ, 'ಬೊಂಬೆ ಉರುಳಿರಬಹುದು. ಪರಮಾತ್ಮ ಮರುಳಿರಬಹುದು. ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ನೀನೇ ರಾಜಕುಮಾರ' ಎಂಬ ಬರಹದೊಂದಿಗೆ ಇತ್ತೀಚೆಗೆ ನಿಧನರಾದ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರನ್ನು ನೆನೆದಿದ್ದಾರೆ.  'ದೂರ ಹೋಗೋ ಮುನ್ನ ದೂರಲಾರೆ ನಿನ್ನ ಮೌನದಲ್ಲೇ ಇನ್ನು ಗಾಯಾಳು ನಾ' ಹಾಡಿಗೆ ಸಂಗೀತ ಪ್ರಿಯರು ಬೊಂಬಾಟ್ ರೆಸ್ಪಾನ್ಸ್ ವ್ಯಕ್ತಪಡಿಸಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯವಿರುವ ಈ ಹಾಡಿಗೆ ಶ್ರೀಧರ್.ವಿ.ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ವಾಸುಕಿ ವೈಭವ್ (Vasuki Vaibhav) ಕಂಠಸಿರಿಯಲ್ಲಿ ದೂರ ಹೋಗೋ ಹಾಡು ಮೂಡಿ ಬಂದಿದೆ.

'ಮುಗಿಲ್‌ಪೇಟೆ' ಹುಡುಗಿ ಜೀನ್ಸ್ ಅಲ್ಲಿ ಮಾಸ್ ಆಗಾವ್ಲೆ ಸಾಂಗ್ ರಿಲೀಸ್!

'ಮುಗಿಲ್‌ಪೇಟೆ' ಚಿತ್ರಕ್ಕೆ ಭರತ್ ಎಸ್. ನಾವುಂದ (Bharath S Navunda) ಆಕ್ಷನ್ ಕಟ್ ಹೇಳಿದ್ದು, ಶ್ರೀಧರ್ ಸಂಭ್ರಮ್ ಅವರ ಸಂಗೀತ ಸಂಯೋಜನೆ ಇದೆ. ಮನುರಂಜನ್‌ಗೆ ನಾಯಕಿಯಾಗಿ ಕಯಾದು ಲೋಹರ್ (Kayadu Lohar) ಅಭಿನಯಿದ್ದಾರೆ. ಚಿತ್ರದ ಫಸ್ಟ್‌ಲುಕ್ ಹಾಗೂ ಟೀಸರ್ (Teaser) ಈಗಾಗಲೇ ಬಿಡುಗಡೆಯಾಗಿ ಸಿನಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಅಲ್ಲದೇ ಇತ್ತಿಚೆಗಷ್ಟೇ ಚಿತ್ರದ 'ಜೀನ್ಸ್ ಅಲ್ಲಿ ಮಾಸ್ ಆಗಾವ್ಲೆ' ಎಂಬ ರೊಮ್ಯಾಂಟಿಕ್ ಸಾಂಗ್ ಬಿಡುಗಡೆಯಾಗಿತ್ತು. ಹಾಡಿನಲ್ಲಿ ಮನುರಂಜನ್ ಹಾಗೂ ಚಿತ್ರದ ನಾಯಕಿ ಕಯಾದು ಲೋಹರ್ ಕೆಮಿಸ್ಟ್ರಿ ಸಖತ್ತಾಗಿ ಮೂಡಿಬಂದಿತ್ತು.

ನನಗೆ ಇದು ಮೊದಲ ಕನ್ನಡ ಸಿನಿಮಾ. ಕನ್ನಡ ಭಾಷೆ ನನಗಿಷ್ಟ. ಆದರೆ, ಸರಿಯಾಗಿ ಮಾತನಾಡಲು ಬರುವುದಿಲ್ಲ. ಆದರೆ, ಮಾತನಾಡುವ ಭಾಷೆ ನನಗೆ ಅರ್ಥವಾಗುತ್ತೆ. ಇದೇ ಮೊದಲ ಸಲ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಈ ಚಿತ್ರದಲ್ಲಿ ನನಗೆ ಬಬ್ಲಿ ಪಾತ್ರ ಸಿಕ್ಕಿದೆ. ತುಂಬಾ ಸ್ವತಂತ್ರವಾಗಿ ಓಡಾಡಿಕೊಂಡಿರುವ ಹುಡುಗಿಯಾಗಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ಸದಾ ನಾಯಕನ ಜೊತೆ ಜಗಳವಾಡುವಂತಹ ಪಾತ್ರ ನನ್ನದು. ಒಂದು ರೀತಿ ಚಾಲೆಂಜಿಂಗ್‌ ಪಾತ್ರ ನನ್ನ ಪಾಲಿಗೆ ದಕ್ಕಿದೆ. ಎಂದು ಚಿತ್ರದ ನಾಯಕಿ ಕಯಾದು ಲೋಹರ್ ಹೇಳಿದ್ದಾರೆ.

'ಮುಗಿಲ್​ಪೇಟೆ' ಬಿಡುಗಡೆಗೂ ಮುನ್ನ ಆ ತಾಯಿಯ ದರ್ಶನ ಮಾಡು: ಕ್ರೇಜಿಸ್ಟಾರ್ ರವಿಚಂದ್ರನ್

'ಮುಗಿಲ್‌ಪೇಟೆ' ಚಿತ್ರವು ಇದೇ ತಿಂಗಳು ತೆರೆಗೆ ಬರಲು ಸಜ್ಜಾಗಿದ್ದು,  ಚಿತ್ರದ ಪ್ರಚಾರ (Promotion) ಕಾರ್ಯಕ್ರಮಗಳಿಗೆ ಮನುರಂಜನ್ ಸೇರಿದಂತೆ ಚಿತ್ರತಂಡ, ಮೈಸೂರಿನ ಹಲವಾರು ಕಾಲೇಜುಗಳಿಗೆ ಭೇಟಿಕೊಟ್ಟು  ಪ್ರಚಾರವನ್ನು ಮಾಡುತ್ತಿದೆ. ವಿಶೇಷವಾಗಿ ವಿ.ರವಿಚಂದ್ರನ್ ತಮ್ಮ ಪುತ್ರನಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟು, ಚಾಮುಂಡೇಶ್ವರಿ ತಾಯಿಯ ದರ್ಶನ ಮಾಡಿ ಅನಂತರ ಚಿತ್ರದ ಪ್ರಚಾರ ಮಾಡಿ ಎಂದಿದ್ದರು. ಮೋತಿ ಮೂವಿ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಅವಿನಾಶ್, ತಾರಾ ಅನುರಾಧಾ, ಸಾಧುಕೋಕಿಲ, ರಂಗಾಯಣ ರಘು ಹೀಗೆ ಹೆಸರಾಂತ ಕಲಾವಿದರು ನಟಿಸಿದ್ದಾರೆ. ರವಿವರ್ಮ (ಗಂಗು) ಛಾಯಾಗ್ರಹಣ, ಡಾ.ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಅರ್ಜುನ್ ಕಿಟ್ಟು ಸಂಕಲನ, ಹರ್ಷ, ಮುರಳಿ , ಮೋಹನ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಸತೀಶ್ ಅವರ ಕಲಾ ನಿರ್ದೇಶನವಿದೆ. ಇದೇ ತಿಂಗಳ 19ರಂದು 'ಮುಗಿಲ್‌ಪೇಟೆ'  ಚಿತ್ರ  ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
 

Follow Us:
Download App:
  • android
  • ios