ದೂದ್​ ಪೇಡ ದಿಗಂತ್ ಹಾಗೂ ಕವಿತಾ ಗೌಡ ಜೊತೆಯಾಗಿ ನಟಿಸಿರುವ 'ಹುಟ್ಟು ಹಬ್ಬದ ಶುಭಾಶಯಗಳು' ಚಿತ್ರದ ಪಾರ್ಟಿ ಸಾಂಗ್‌ವೊಂದು ಬಿಡುಗಡೆಯಾಗಿದೆ. ಯೋಗರಾಜ್‌ ಭಟ್‌ ಸಾಹಿತ್ಯವಿರುವ ಈ ಹಾಡಿಗೆ ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ.

ದೂದ್​ ಪೇಡ ದಿಗಂತ್ (Diganth) ಹಾಗೂ ಕವಿತಾ ಗೌಡ (Kavitha Gowda) ಜೊತೆಯಾಗಿ ನಟಿಸಿರುವ 'ಹುಟ್ಟು ಹಬ್ಬದ ಶುಭಾಶಯಗಳು' (Huttu Habbada Shubhashayagalu) ಚಿತ್ರ ಡಿಸೆಂಬರ್ 31ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಟೀಸರ್‌ ಮೂಲಕ ಕುತೂಹಲ ಹುಟ್ಟಿಸಿರುವ ಈ ಚಿತ್ರದ ಪಾರ್ಟಿ ಸಾಂಗ್‌ವೊಂದು ಬಿಡುಗಡೆಯಾಗಿದೆ. 'ಎಣ್ಣೆ ಹೊಡೆದರೆ ಅಪರಾಧ.. ಹೋದ ಹುಡುಗಿಯೂ ಬರಬಹುದು' ಎಂಬ ಸಾಲಿನ ಹಾಡು ಕ್ರಿಸ್ಟಲ್ ಮ್ಯೂಸಿಕ್ (Crystal Music) ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಈ ಹಾಡು ದೊಡ್ಡ ಮಟ್ಟದಲ್ಲಿ ಹಿಟ್‌ ಆಗುತ್ತದೆ ಎಂಬ ನಂಬಿಕೆ ಚಿತ್ರತಂಡಕ್ಕಿದೆ. ಯೋಗರಾಜ್‌ ಭಟ್‌ (Yograj Bhat) ಸಾಹಿತ್ಯವಿರುವ ಈ ಹಾಡಿಗೆ ಶ್ರೀಧರ್ ವಿ ಸಂಭ್ರಮ್ (Sridhar V. Sambram) ಸಂಗೀತ ಸಂಯೋಜಿಸಿದ್ದಾರೆ.

ಶಶಾಂಕ್ ಶೇಷಗಿರಿ, ಇಂಪನಾ ಜಯರಾಜ್ ಹಾಗೂ ಐಶ್ವರ್ಯಾ ಮಹೇಶ್ ಈ ಹಾಡಿಗೆ ದನಿಯಾಗಿದ್ದು, ನ್ಯೂ ಇಯರ್‌ ಪಾರ್ಟಿ ಮಾಡುವವರಿಗೆ ಈ ಹಾಡು ಸಖತ್‌ ಕಿಕ್‌ ನೀಡಲಿದೆ. ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ನಾಗರಾಜ್​ ಬೇತೂರ್ (Nagaraj Bethur) ಆಕ್ಷನ್ ಕಟ್ ಹೇಳಿದ್ದಾರೆ. ವಿಶೇಷವಾಗಿ 'ಚಿತ್ರಕ್ಕೆ ಬೇಕಾದ ಪಾರ್ಟಿ ಸಾಂಗ್‌ವೊಂದನ್ನು ಯಾರಿಂದ ಬರೆಸುವುದು ಎಂದು ನಾವು ಯೋಚಿಸುತ್ತಿದ್ದಾಗ ನಮಗೆ ತಲೆಗೆ ಬಂದಿದ್ದು ಯೋಗರಾಜ್‌ ಭಟ್‌ ಹೆಸರು. ಆದರೆ, ಅವರು ಆಗ 'ಗಾಳಿಪಟ 2' (Galipata 2) ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಕೊನೆಗೆ ನಟ ದಿಗಂತ್‌ ಅವರೇ ಭಟ್ಟರಿಗೆ ಹೇಳಿ, ಸಾಹಿತ್ಯವನ್ನು ಬರೆಸಿದ್ದಾರೆ. ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ನಿರ್ದೇಶಕ ನಾಗರಾಜ್​ ಬೇತೂರ್ ಹೇಳಿದ್ದಾರೆ.

Diganth: ಸಿನಿಮಾ ಮೂಲಕ 'ಹುಟ್ಟು ಹಬ್ಬದ ಶುಭಾಶಯ'ವನ್ನು ತಿಳಿಸಿದ ದೂದ್​ ಪೇಡ ದಿಗಂತ್

ಮೊದಲ ಬಾರಿಗೆ ದಿಗಂತ್​ ಮಾಸ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿರುವ 'ಹುಟ್ಟು ಹಬ್ಬದ ಶುಭಾಶಯಗಳು' ಚಿತ್ರದ ಟೀಸರ್ ಈಗಾಗಲೇ ರಿವೀಲ್ ಆಗಿದ್ದು, ದಿಗಂತ್ ಪಾತ್ರ ಕುತೂಹಲ ಮೂಡಿಸಿದೆ. ಅಲ್ಲದೇ ಟೀಸರ್​ಗೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಒಂದು ಬರ್ತಡೇ ಪಾರ್ಟಿಯಲ್ಲಿ ನಡೆಯುವ ಕೊಲೆಯನ್ನು ದಿಗಂತ್ ಯಾವ ರೀತಿ ಚೇಸ್ ಮಾಡ್ತಾರೆ. ಚಿತ್ರದಲ್ಲಿ ದಿಗಂತ್ ಪೊಲೀಸ್ ಪಾತ್ರ ಮಾಡಿದ್ದಾರಾ ಅನ್ನೋದೆ ಈ ಚಿತ್ರದ ಸಸ್ಪೆನ್ಸ್ ಆಗಿದೆ. ಈ ಹಿಂದೆ ಚಿತ್ರದ ಫಸ್ಟ್‌ಲುಕ್ (First Look) ಪೋಸ್ಟರ್‌ನಲ್ಲಿ ದಿಗಂತ್​ ಮಾಸ್​ ಆ್ಯಂಡ್​ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಮಾತ್ರವಲ್ಲದೆ ಕೈಯಲ್ಲಿ ರಕ್ತದ ಕಲೆ ಕೂಡಾ ಅಂಟಿಕೊಂಡಿತ್ತು. ಜೊತೆಗೆ ಕುರ್ಚಿಯ ಮೇಲೆ ಕುಳಿತು ಗುಲಾಬಿ ಹೂವನ್ನು ಕಾಲಲ್ಲಿ ಒಸಕಿ ಹಾಕಿದ್ದರು. 

ಸಂಗೀತಾ ಶೃಂಗೇರಿ, ದಿಗಂತ್ ನಟನೆಯ 'ಮಾರಿಗೋಲ್ಡ್‌' ರಿಲೀಸ್‌ಗೆ ಸಿದ್ಧತೆ!

ಇದೇ ಮೊದಲ ಬಾರಿಗೆ ದಿಗಂತ್​ ಮಾಸ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದು,​ ಅವರ ಹೊಸ ಲುಕ್​ ಪಕ್ಕಾ ರಗಡ್​​​ ಆಗಿದೆ. ಕಾಮಿಡಿ ಜೊತೆಗೆ ಲವ್​ ಹಾಗೂ ಮಾಸ್​ ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎನ್ನಲಾಗಿದೆ. ಚಿತ್ರಕ್ಕೆ ಪ್ರಸನ್ನ ಕಥೆಯನ್ನು ಬರೆದಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ರೀಕಾಂತ್ ಶ್ರಾಫ್ ಸಂಕಲನ, ಅಭಿಲಾಶ್ ಕಲತಿ ಕ್ಯಾಮೆರಾ ಕೈಚಳಕ 'ಹುಟ್ಟು ಹಬ್ಬದ ಶುಭಾಶಯಗಳು' ಚಿತ್ರಕ್ಕಿದೆ. ಚೇತನ್ ಗಂಧರ್ವ, ಮಡೇನೂರು ಮನು, ಸೂರಜ್, ಸೂರ್ಯ, ವಾಣಿಶ್ರೀ, ರೋಹಿತ್ ರಂಗಸ್ವಾಮಿ, ಶನಯ ಕಾಟ್ವೆ, ಶರಣ್ಯ ಶೆಟ್ಟಿ, ಶ್ರೀದತ್ತ, ಶ್ರೀಹರಿ, ಸುಜಯ್ ಶಾಸ್ತ್ರಿ, ರತನ್ ರಾಮ್, ಅಮೋಘವರ್ಷ, ಅಜಯ್ ಗಜ ಸೇರಿದಂತೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಕ್ರಿಸ್ಟಲ್ ಪಾರ್ಕ್ ಬ್ಯಾನರ್​ನಡಿ ಟಿ. ಆರ್​ ಚಂದ್ರಶೇಖರ್ (TR Chandrashekar)​ ನಿರ್ಮಾಣ ಮಾಡಿದ್ದಾರೆ.

YouTube video player