ಸಂಗೀತಾ ಶೃಂಗೇರಿ, ದಿಗಂತ್ ನಟನೆಯ 'ಮಾರಿಗೋಲ್ಡ್' ರಿಲೀಸ್‌ಗೆ ಸಿದ್ಧತೆ!
ಬಿಡುಗಡೆಗೆ ರೆಡಿಯಾಗುತ್ತಿದೆ 'ಮಾರಿಗೋಲ್ಡ್' ಸಿನಿಮಾ. ಡಬ್ಬಿಂಗ್ ಮುಗಿಸಿದ ಚಿತ್ರತಂಡ.
ಸ್ಯಾಂಡಲ್‌ವುಡ್ ದೂದ್ ಪೆಡಾ ದಿಂಗಂತ್, ಸಂಗೀತಾ ಶೃಂಗೇರಿ ಅಭಿನಯಿಸಿರುವ ಕ್ರೈಮ್ ಥ್ರಿಲ್ಲರ್ ‘ಮಾರಿಗೋಲ್ಡ್’ ಸಿನಿಮಾದ ಡಬ್ಬಿಂಗ್ ಪೂರ್ಣಗೊಂಡಿದೆ. ರೀರೆಕಾರ್ಡಿಂಗ್ ಕೆಲಸ ಕೊನೆಯ ಹಂತದಲ್ಲಿದ್ದು, ಸೆನ್ಸಾರ್‌ಗೆ ರೆಡಿಯಾಗುತ್ತಿದೆ.
ರಾಘವೇಂದ್ರ ಎಂ ನಾಯಕ್ ಈ ಚಿತ್ರಕ್ಕೆ ಕತೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಬದ್ರಿ, ಗುಣವಂತ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ರಘುವರ್ಧನ್ ಈ ಚಿತ್ರದ ನಿರ್ಮಾಪಕರು. ವೀರ್ ಸಮರ್ಥ್ ಅವರ ಸಂಗೀತ, ಕೆ.ಎಸ್.ಚಂದ್ರಶೇಖರ್ ಸಿನಿಮಾಟೋಗ್ರಫಿ, ಅರ್ಜುನ್ ರಾಜ್ ಸಾಹಸ ಚಿತ್ರಕ್ಕಿದೆ. ಸಂಪತ್ ಕುಮಾರ್, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ನಟಿಸಿದ್ದಾರೆ.
ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿರುವ ತಂಡ ಓಟಿಟಿಯನ್ನು ಆಯ್ಕೆಯಾಗಿ ಇಟ್ಟುಕೊಂಡಿದೆ. 'ವಿವಿಧ ಸ್ಟ್ರೀಮಿಂಗ್ ಫ್ಲಾಟ್‌ಫಾರ್ಮ್ ಜೊತೆಗೆ ಮಾತುಕತೆ ನಡೆಯುತ್ತಿದೆ. ಮತ್ತೆ ಕೋವಿಡ್ ಪರಿಸ್ಥಿತಿ ಉತ್ತುಂಗಕ್ಕೆ ಬಂದರೆ ನಾವು ಡಿಜಿಟಲ್ ಬಿಡುಗಡೆ ಮಾಡಬಹುದು,' ಎಂದು ಚಿತ್ರತಂಡ ಹೇಳಿದೆ.
ಅಧ್ಯಾತ್ಮ ಸಾಧನೆಯ ಲಕ್ಕಿಮ್ಯಾನ್ ಹುಡುಗಿ ಸಂಗೀತಾ ಶೃಂಗೇರಿಈ ಹಿಂದೆ ಚಿತ್ರದ ಟೈಟಲ್ ಅನೌನ್ಸ್ ಮಾಡುವಾಗ ನಟ ದಿಗಂತ್ ಫಸ್ಟ್ ಲುಕ್ ರಿವೀಲ್ ಮಾಡಲಾಗಿತ್ತು. ಪೋಸ್ಟರ್‌ನಲ್ಲಿ ದಿಗಂತ್ ಡಿಫರೆಂಟ್ ಆಗಿ ಕಾಣಿಸುತ್ತಿದ್ದಾರೆ. ಈವರೆಗೂ ದಿಗಂತ್ ಆಯ್ಕೆ ಮಾಡಿಕೊಳ್ಳದ ಪಾತ್ರವಿದು ಎನ್ನಲಾಗಿದೆ. ಅಲ್ಲದೆ ದಿಗಂತ್ ಮತ್ತೊಂದು ಸಿನಿಮಾ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರೀಕರಣ ಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ.