Asianet Suvarna News Asianet Suvarna News

Diganth: ಸಿನಿಮಾ ಮೂಲಕ 'ಹುಟ್ಟು ಹಬ್ಬದ ಶುಭಾಶಯ'ವನ್ನು ತಿಳಿಸಿದ ದೂದ್​ ಪೇಡ ದಿಗಂತ್

ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ದೂದ್​ ಪೇಡ ದಿಗಂತ್ ಹಾಗೂ ಕವಿತಾ ಗೌಡ ಜೊತೆಯಾಗಿ ನಟಿಸಿರುವ 'ಹುಟ್ಟು ಹಬ್ಬದ ಶುಭಾಶಯಗಳು' ಚಿತ್ರದ ಬಗ್ಗೆ ದಿಗಂತ್ ವಿಶೇಷ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. 

kannada movie Huttu Habbada Shubhashayagalu hit theatres on december 31 starrer Diganth gvd
Author
Bangalore, First Published Dec 4, 2021, 4:53 PM IST
  • Facebook
  • Twitter
  • Whatsapp

ಕೊರೊನಾ (Corona) ಮುಗಿದ ನಂತರ ಸ್ಯಾಂಡಲ್‌ವುಡ್‌ನಲ್ಲಿ ಹಲವಾರು ಸಿನಿಮಾಗಳು ತೆರೆಕಾಣುತ್ತಿದ್ದು, ಇದೀಗ ಆ ಸಾಲಿಗೆ 'ಹುಟ್ಟು ಹಬ್ಬದ ಶುಭಾಶಯಗಳು' (Huttu Habbada Shubhashayagalu) ಚಿತ್ರವು ಒಂದು. ಹೌದು! ದೂದ್​ ಪೇಡ ದಿಗಂತ್ (Diganth) ಹಾಗೂ ಕವಿತಾ ಗೌಡ (Kavitha Gowda) ಜೊತೆಯಾಗಿ ನಟಿಸಿರುವ 'ಹುಟ್ಟು ಹಬ್ಬದ ಶುಭಾಶಯಗಳು' ಚಿತ್ರದ ಬಗ್ಗೆ ದಿಗಂತ್ ವಿಶೇಷ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್‌ಲುಕ್ ಹಾಗೂ ಟೀಸರ್ ಬಿಡುಗಡೆಯಾಗಿ ಸಿನಿರಸಿಕರ ಗಮನ ಸೆಳೆದಿದೆ. ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ಕ್ರಿಸ್ಟಲ್ ಪಾರ್ಕ್ ಬ್ಯಾನರ್​ನಡಿ ಟಿ. ಆರ್​ ಚಂದ್ರಶೇಖರ್ (TR Chandrashekar)​ ನಿರ್ಮಾಣ ಮಾಡಿದ್ದಾರೆ.

ಮೊದಲ ಬಾರಿಗೆ ದಿಗಂತ್​ ಮಾಸ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿರುವ 'ಹುಟ್ಟು ಹಬ್ಬದ ಶುಭಾಶಯಗಳು' ಚಿತ್ರವು ಡಿಸೆಂಬರ್ 31ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬೆಳ್ಳಿಪರದೆ ಮೇಲೆ ಬಿಡುಗಡೆಯಾಗಲಿದೆ. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲ ಈ ಚಿತ್ರದ ಮೇಲಿರಲಿ ಎಂದು ದಿಗಂತ್ ತಮ್ಮ ಸಾಮಾಜಿಕ ಜಾಲತಾಣ (Social Media) ಖಾತೆಯಲ್ಲಿ ಬರೆದುಕೊಂಡು, ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಟೀಸರ್ ರಿವೀಲ್ ಆಗಿದ್ದು, ದಿಗಂತ್ ಪಾತ್ರ ಕುತೂಹಲ ಮೂಡಿಸಿದೆ. ಅಲ್ಲದೇ ಟೀಸರ್​ಗೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಒಂದು ಬರ್ತಡೇ ಪಾರ್ಟಿಯಲ್ಲಿ ನಡೆಯುವ ಕೊಲೆಯನ್ನು ದಿಗಂತ್ ಯಾವ ರೀತಿ ಚೇಸ್ ಮಾಡ್ತಾರೆ. ಚಿತ್ರದಲ್ಲಿ ದಿಗಂತ್ ಪೊಲೀಸ್ ಪಾತ್ರ ಮಾಡಿದ್ದಾರಾ ಅನ್ನೋದೆ ಈ ಚಿತ್ರದ ಸಸ್ಪೆನ್ಸ್ ಆಗಿದೆ.

ಸಂಗೀತಾ ಶೃಂಗೇರಿ, ದಿಗಂತ್ ನಟನೆಯ 'ಮಾರಿಗೋಲ್ಡ್‌' ರಿಲೀಸ್‌ಗೆ ಸಿದ್ಧತೆ!

ಈ ಹಿಂದೆ ಚಿತ್ರದ ಫಸ್ಟ್‌ಲುಕ್ (First Look) ಪೋಸ್ಟರ್‌ನಲ್ಲಿ ದಿಗಂತ್​ ಮಾಸ್​ ಆ್ಯಂಡ್​ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಮಾತ್ರವಲ್ಲದೆ ಕೈಯಲ್ಲಿ ರಕ್ತದ ಕಲೆ ಕೂಡಾ ಅಂಟಿಕೊಂಡಿತ್ತು. ಜೊತೆಗೆ ಕುರ್ಚಿಯ ಮೇಲೆ ಕುಳಿತು ಗುಲಾಬಿ ಹೂವನ್ನು ಕಾಲಲ್ಲಿ ಒಸಕಿ ಹಾಕಿದ್ದರು. ಇದೇ ಮೊದಲ ಬಾರಿಗೆ ದಿಗಂತ್​ ಮಾಸ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದು,​ ಅವರ ಹೊಸ ಲುಕ್​ ಪಕ್ಕಾ ರಗಡ್​​​ ಆಗಿದೆ. ಕಾಮಿಡಿ ಜೊತೆಗೆ ಲವ್​ ಹಾಗೂ ಮಾಸ್​ ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎನ್ನಲಾಗಿದೆ. 'ಹುಟ್ಟು ಹಬ್ಬದ ಶುಭಾಶಯಗಳು' ಚಿತ್ರಕ್ಕೆ ನಾಗರಾಜ್​ ಬೇತೂರ್ (Nagaraj Bethur) ಆಕ್ಷನ್ ಕಟ್ ಹೇಳಿದ್ದು, ಪ್ರಸನ್ನ ಕಥೆಯನ್ನು ಬರೆದಿದ್ದಾರೆ. 

ಚಿತ್ರಕ್ಕೆ ಯೋಗರಾಜ್ ಭಟ್ (Yograj Bhat) ಸಾಹಿತ್ಯ ಬರೆದಿದ್ದು, ಶ್ರೀಧರ್ ವಿ ಸಂಭ್ರಮ್ (Sridhar V. Sambram) ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ರೀಕಾಂತ್ ಶ್ರಾಫ್ ಸಂಕಲನ, ಅಭಿಲಾಶ್ ಕಲತಿ ಕ್ಯಾಮೆರಾ ಕೈಚಳಕ 'ಹುಟ್ಟು ಹಬ್ಬದ ಶುಭಾಶಯಗಳು' ಚಿತ್ರಕ್ಕಿದೆ. ಚೇತನ್ ಗಂಧರ್ವ, ಮಡೇನೂರು ಮನು, ಸೂರಜ್, ಸೂರ್ಯ, ವಾಣಿಶ್ರೀ, ರೋಹಿತ್ ರಂಗಸ್ವಾಮಿ, ಶನಯ ಕಾಟ್ವೆ, ಶರಣ್ಯ ಶೆಟ್ಟಿ, ಶ್ರೀದತ್ತ, ಶ್ರೀಹರಿ, ಸುಜಯ್ ಶಾಸ್ತ್ರಿ, ರತನ್ ರಾಮ್, ಅಮೋಘವರ್ಷ, ಅಜಯ್ ಗಜ ಸೇರಿದಂತೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಇನ್ನು ದಿಗಂತ್ ಕೈಯಲ್ಲಿ ಸಾಲು ಸಾಲು ಚಿತ್ರಗಳಿದ್ದು ಸಖತ್ ಬ್ಯುಸಿಯಾಗಿದ್ದಾರೆ.

ದಿಗಂತ್ ಅಭಿನಯದ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರದ ಹಾಡು ವೈರಲ್!

ದಿಂಗಂತ್‌ 'ಮಾರಿಗೋಲ್ಡ್‌' (Marigold) ಎಂಬ ಕ್ರೈಮ್‌ ಥ್ರಿಲ್ಲರ್‌ ಚಿತ್ರದಲ್ಲಿ ನಟಿಸುತ್ತಿದ್ದು, ರಾಘವೇಂದ್ರ ಎಂ ನಾಯಕ್‌ ಈ ಚಿತ್ರಕ್ಕೆ ಕತೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಂಗೀತಾ ಶೃಂಗೇರಿ (Sangeetha Sringeri) ದಿಗಂತ್‌ಗೆ ಜೋಡಿಯಾಗಿದ್ದು, ರಘುವರ್ಧನ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜೊತೆಗೆ ರಂಜನಿ ರಾಘವನ್ ಜೊತೆ 'ಕ್ಷಮಿಸಿ, ನಿಮ್ಮ ಖಾತೆಯಲ್ಲಿ ಹಣವಿಲ್ಲ' (Kshamisi Nimma Katheyalli Hanavilla) ಚಿತ್ರದಲ್ಲೂ ದಿಗಂತ್ ಕಾಣಿಸಿಕೊಳ್ಳುತ್ತಿದ್ದು, ವಿನಾಯಕ ಕೋಡ್ಸರ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗೂ ಯೋಗರಾಜ್ ಭಟ್ಟರ 'ಗಾಳಿಪಟ 2' (Galipata 2) ಚಿತ್ರದಲ್ಲಿ ದಿಗಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ತೆಲುಗಿನ ರಿಮೇಕ್ ಚಿತ್ರದಲ್ಲೂ ದಿಗಂತ್ ಅಭಿನಯಿಸುತ್ತಿದ್ದಾರೆ. 
 

Follow Us:
Download App:
  • android
  • ios