ದಿಗಂತ್ ಅಭಿನಯದ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರದ ಹಾಡು ವೈರಲ್!
ಸೋಷಿಯಲ್ ಮೀಡಿಯಾದಲ್ಲಿ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರ ಲಿರಿಕಲ್ ಹಾಡು ವೈರಲ್ ಆಗುತ್ತಿದೆ.
ದೂದ್ ಪೇಡಾ ದಿಗಂತ್ ಹಾಗೂ ರಂಜನಿ ರಾಘವನ್ ಜೋಡಿಯಾಗಿ ಅಭಿನಯಿಸುತ್ತಿರುವ ‘ಕ್ಷಮಿಸಿ, ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಲಿರಿಕಲ್ ಹಾಡನ್ನು ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಈ ಹಾಡು ನೆಟ್ಟಿಗರ ಗಮನ ಸೆಳೆದಿದೆ. ಈ ಹಾಡು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ.
‘ಹನಿಯೊಂದು ಜಾರಿ ನದಿಯಾಗಿ ಬಂತು ಮಲೆನಾಡ ಮಗಳಾಗಲು..’ ಎಂಬ ಸಾಹಿತ್ಯದ ಈ ಹಾಡು ಮಲೆನಾಡಿನ ಸೊಗಸಿನ ಜೊತೆಗೆ ಅಲ್ಲಿನ ಜನ ಜೀವನವನ್ನು ತೆರೆದಿಡುತ್ತದೆ. ವಿಶ್ವಜಿತ್‌ರಾವ್ ಅವರ ಸಾಹಿತ್ಯವನ್ನು ಹರಿಚರಣ್ ಹಾಡಿದ್ದಾರೆ. ಸಂಗೀತ ಪ್ರಜ್ವಲ್ ಪೈ ಅವರದು.
ಇದೇನಪ್ಪಾ ದಿಗಂತ್ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಎಂತಿದ್ದಾರೆ?ಹಾಡು ಬಿಡುಗಡೆ ಮಾಡಿ ಮಾತನಾಡಿದ ಗಣೇಶ್, ‘ಒಂದೂವರೆ ವರ್ಷದಿಂದ ಚಿತ್ರೋದ್ಯಮದವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇದೀಗ ಸುಂದರ ಹಾಡಿನ ಹಿನ್ನೆಲೆಯಲ್ಲಿ ಎಲ್ಲರ ಭೇಟಿ ಖುಷಿ ತಂದಿದೆ. ಚಿತ್ರಮಂದಿರಗಳು ಬೇಗ ಆರಂಭವಾಗಲಿ. ಚಿತ್ರೋದ್ಯಮದ ಎಲ್ಲ ಚಟುವಟಿಕೆಗಳೂ ಹಿಂದಿನಂತಾಗಿ ಎಲ್ಲರ ಖಾತೆಗೆ ಹಣ ಬರಲಿ,’ ಎಂದು ಚಿತ್ರ ತಂಡಕ್ಕೆ ಶುಭ ಕೋರಿದರು.
ನಾಯಕಿ ರಂಜನಿ ರಾಘವನ್, ನಿರ್ದೇಶಕ ವಿನಾಯಕ ಕೋಡ್ಸರ, ನಿರ್ಮಾಪಕ ಸಿಲ್‌ಕ್ ಮಂಜು, ಲಹರಿ ವೇಲು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಟ ದಿಗಂತ್ ಹುಟ್ಟೂರಿನ ಕತೆ ಹಾಗೂ ಅಡಿಕೆ ತೋಟದ ಮಾಲೀಕರ ಜೀವನ ಹೇಗಿರಲಿದೆ ಎಂದು ಈ ಚಿತ್ರದಲ್ಲಿ ತೋರಿಸಲಾಗಿದೆ.