Asianet Suvarna News Asianet Suvarna News

ಡಿಸೆಂಬರ್ 10ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾನೆ 'ಅವತಾರ ಪುರುಷ'

ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ ಅಭಿನಯದ 'ಅವತಾರ ಪುರುಷ' ಚಿತ್ರ ಡಿಸೆಂಬರ್‌ 10ರಂದು ತೆರೆಗೆ ಬರುತ್ತಿದೆ. ಚಿತ್ರದ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆ ಮಾಡಿದ್ದಾರೆ. 

Kannada Movie Avatar Purusha hit theatres on December 10th
Author
Bangalore, First Published Nov 4, 2021, 5:21 PM IST
  • Facebook
  • Twitter
  • Whatsapp

ಸಿಂಪಲ್ ಸುನಿ (Simple Suni) ನಿರ್ದೇಶನದ ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ (Sharan) ಅಭಿನಯದ 'ಅವತಾರ ಪುರುಷ' (Avatar Purusha) ಚಿತ್ರ ಡಿಸೆಂಬರ್‌ 10ರಂದು ತೆರೆಗೆ ಬರುತ್ತಿದೆ. ಚಿತ್ರದ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ (Pushkar Mallikarjunaiah) ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆ ಮಾಡಿದ್ದಾರೆ. ಚಿತ್ರದ ಟೀಸರ್‌ ಹಾಗೂ ಟ್ರೇಲರ್‌ನಿಂದ ಈಗಾಗಲೇ ಸಾಕಷ್ಟುಗಮನ ಸೆಳೆದಿರುವ ಚಿತ್ರ ಇದಾಗಿದೆ. ಸಸ್ಪೆನ್ಸ್ ಥ್ರಿಲ್ಲಿಂಗ್ ಇರುವ ಚಿತ್ರದಲ್ಲಿ ಶರಣ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಮತ್ತು ಹೊಸ ಅವತಾರದಲ್ಲಿ ಕಾಣಬಹುದಾಗಿದೆ. 

ಮುಖ್ಯವಾಗಿ ಸಿಕ್ಕಾಪಟ್ಟೆ ಶಾಕ್‌ನೊಂದಿಗೆ ಭಯಮೂಡಿಸುವಂತಹ ಬ್ಲ್ಯಾಕ್ ಮ್ಯಾಜಿಕ್ (Black Maagic) ಚಿತ್ರಕಥೆ ಈ ಚಿತ್ರದಲ್ಲಿದೆ. ಶರಣ್‌ ನಟನೆಯ 'ಅವತಾರಪುರುಷ' ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. 'ಅವತಾರ ಪುರುಷ 1' ಮತ್ತು 'ಅವತಾರ ಪುರುಷ 2' ಹೆಸರಿನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಆದರೆ, ಚಿತ್ರದ ಟ್ಯಾಗ್‌ಲೈನ್  ಮಾತ್ರ ಬೇರೆ ಬೇರೆ ಇಡಲಾಗುತ್ತಿದೆ. ಮೊದಲ ಭಾಗಕ್ಕೆ ಅಷ್ಟದಿಗ್ಬಂಧನ ಮಂಡಲಕ ಹಾಗೂ ಎರಡನೇ ಪಾರ್ಟ್‌ಗೆ  ತ್ರಿಶಂಕು ಎನ್ನುವ ಟ್ಯಾಗ್‌ಲೈನ್ ಇಡಲಾಗಿದೆ. ಇನ್ನು ಈ ಚಿತ್ರವು ಪುಷ್ಕರ್ ಫಿಲಂಸ್ ಬ್ಯಾನರ್‌ನಡಿ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸಿದ್ದಾರೆ. 
 


ಇದೊಂದು ಬ್ಲಾಕ್‌ ಮ್ಯಾಜಿಕ್‌ ಕತೆ. ಕಾಮಿಡಿ, ಬ್ಲಾಕ್‌ ಮ್ಯಾಜಿಕ್‌ ಅಂಶಗಳ ಸುತ್ತ ಈ ಸಿನಿಮಾ ಸಾಗುತ್ತದೆ. ಇದು ವೆಬ್‌ ಸರಣಿಗೆ ಮಾಡಿಕೊಂಡಿದ್ದ ಕತೆಯಾಗಿದ್ದರಿಂದ ಅದನ್ನು ಸಿನಿಮಾ ಮಾಡಲು ಹೊರಟಾಗ ಒಂದೇ ಕಂತಿನಲ್ಲಿ ಹೇಳುವುದು ಕಷ್ಟಎನಿಸಿತು. ಹೀಗಾಗಿ ಆರಂಭದಲ್ಲೇ ಎರಡು ಪಾರ್ಟ್‌ಗಳಲ್ಲಿ ಸಿನಿಮಾ ಮಾಡುವ ಪ್ಲಾನ್‌ ಮಾಡಿಕೊಂಡು ಚಿತ್ರ ಆರಂಭಿಸಲಾಯಿತು ಎಂದು ಹೇಳಿದರು ಚಿತ್ರದ ನಿರ್ದೇಶಕ ಸಿಂಪಲ್ ಸುನಿ.

ರಾಮಾಜೋಯಿಸರಾಗಿ ಸಾಯಿಕುಮಾರ್‌!

ಚಿತ್ರದಲ್ಲಿ ಶರಣ್‌ಗ ಜೋಡಿಯಾಗಿ ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ (Ashika Ranganath) ನಟಿಸಿದ್ದು, 'ರಂಗಿತರಂಗ' ಚಿತ್ರದ ನಂತರ ಮತ್ತೊಂದು ಆಸಕ್ತಿಕರ ಪಾತ್ರದಲ್ಲಿ ಸಾಯಿಕುಮಾರ್‌, ರಾಮಾಜೋಯಿಸರಾಗಿ ಅಭಿನಯಿಸಿದ್ದಾರೆ. ಮಂತ್ರವಾದಿ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಸೇರಿದಂತೆ ಸುಧಾರಾಣಿ, ಸಾಧುಕೋಕಿಲ, ಭವ್ಯ, ಅಯ್ಯಪ್ಪ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೊರ್ ಅವರು ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಲಿಯಮ್ ಡೇವಿಡ್ ಛಾಯಾಗ್ರಹಣದಲ್ಲಿ 'ಅವತಾರ ಪುರುಷ'  ಚಿತ್ರ ಮೂಡಿ ಬಂದಿದೆ. ಎರಡು ಭಾಗಗಳಲ್ಲಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ.

ಯೂಟ್ಯೂಬ್ ಚಾನೆಲ್‌ ಎಂಟ್ರಿಗೆ ಸಜ್ಜಾದ ಅವತಾರ ಪುರುಷ

ಇನ್ನು, ಶರಣ್ ತಮ್ಮದೇ ಆದಂತಹ ಯೂಟ್ಯೂಬ್‌ ಚಾನೆಲ್ (YouTube Channel) ಶುರು ಮಾಡುವ ವಿಷಯದ ಕುರಿತು ಈ ಹಿಂದೆ ಮಾಹಿತಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ, 'ನಿಮ್ಮೆಲ್ಲರಿಗೆ ಮತ್ತಷ್ಟು ಹತ್ತಿರವಾಗಲು ನನ್ನದೊಂದು ಪುಟ್ಟ ಪ್ರಯತ್ನ. Actor Sharaan Official ಯೂಟ್ಯೂಬ್ ಚಾನೆಲ್. ನಾಳೆ ಬೆಳಗ್ಗೆ 11ಕ್ಕೆ ಭೇಟಿ ಆಗೋಣ'. ಎಂದು ಪೋಸ್ಟ್ ಮಾಡುವ ಜೊತೆಗೆ ಆನ್ ಸ್ಕ್ರೀನ್ ಶರಣ್ ಮತ್ತು ಆಫ್ ಸ್ಕ್ರೀನ್ ಶರಣ್ ಹೇಗೆ ಇರುತ್ತಾರೆ ಎನ್ನುವ ವಿಷಯದ ಜೊತೆಗೆ ನನ್ನನ್ನು ಇನ್ನಷ್ಟು ಪರಿಚಯ ಮಾಡಿಕೊಡುವುದರ ಮೂಲಕ ನಿಮ್ಮ ಹತ್ತಿರ ಆಗುವಂತ ಚಿಕ್ಕ ಪ್ರಯತ್ನ ಎಂಬ ವಿಡಿಯೋವನ್ನು ಶೇರ್ ಮಾಡಿದ್ದರು.

Follow Us:
Download App:
  • android
  • ios