ನಮ್ಮ ಜೀವನದ ಪ್ರತಿ ಘಳಿಗೆಯಲ್ಲೂ ಮಕ್ಕಳು ಅತ್ಯಮೂಲ್ಯ: ನಟ ಶರಣ್
ನಮ್ಮ ಜೀವನದ ಪ್ರತಿ ಘಳಿಗೆಯಲ್ಲೂ ಮಕ್ಕಳು ಅತ್ಯಮೂಲ್ಯ.. ಏಕೆಂದರೆ ಅವರೇ ನಮ್ಮ ಭವಿಷ್ಯ! ಪ್ರಪಂಚದಾದ್ಯಂತ ಮಕ್ಕಳಿಗೆ ಅತ್ಯಂತ ಆನಂದದಾಯಕ ದಿನವಾಗಲಿ ಎಂದು ನಟ ಶರಣ್ ಹಾರೈಸಿದ್ದಾರೆ.
ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ (Sharan) ಅಭಿನಯದ 'ಅವತಾರ ಪುರುಷ' (Avatar Purusha) ಚಿತ್ರ ಡಿಸೆಂಬರ್ 10ರಂದು ತೆರೆಗೆ ಬರುತ್ತಿದ್ದು, ಚಿತ್ರಕ್ಕೆ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ (Pushkar Mallikarjunaiah) ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಿತ್ರದ ಪ್ರಚಾರ ಕಾರ್ಯಗಳು ಭರ್ಜರಿಯಾಗಿ ನಡೆಯುತ್ತಿವೆ. ಈ ನಡುವೆ ಶರಣ್ ತಮ್ಮ ಸೋಷಿಯಲ್ ಖಾತೆಯಲ್ಲಿ ವಿಶೇಷವಾದ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಹೌದು! ಶರಣ್ ಮಕ್ಕಳ ದಿನಾಚರಣೆ ಪ್ರಯುಕ್ತ ಸ್ಪೆಷಲ್ ಆಗಿ ಶುಭಾಶಯ ಕೋರಿದ್ದಾರೆ.
ಇಂದು ಭಾರತದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರು 132ನೇ ಜನ್ಮ ದಿನದ ಅಂಗವಾಗಿ ದೇಶಾದ್ಯಂತ ಮಕ್ಕಳ ದಿನಾಚರಣೆ (Childrens Day) ಸಂಭ್ರಮವಾಗಿ ಆಚರಿಸಲಾಗುತ್ತಿದೆ. ಹಾಗಾಗಿ ನಟ ಶರಣ್ ಇನ್‌ಸ್ಟಾಗ್ರಾಮ್‌ನಲ್ಲಿ (Instagram), ನಮ್ಮ ಜೀವನದ ಪ್ರತಿ ಘಳಿಗೆಯಲ್ಲೂ ಮಕ್ಕಳು ಅತ್ಯಮೂಲ್ಯ.. ಏಕೆಂದರೆ ಅವರೇ ನಮ್ಮ ಭವಿಷ್ಯ! ಪ್ರಪಂಚದಾದ್ಯಂತ ಮಕ್ಕಳಿಗೆ ಅತ್ಯಂತ ಆನಂದದಾಯಕ ದಿನವಾಗಲಿ ಎಂದು ಹಾರೈಸುತ್ತೇನೆ. ಮಕ್ಕಳ ದಿನಾಚರಣೆಯ ಶುಭಾಶಯಗಳು ಎಂದು ಕ್ಯಾಪ್ಷನ್ ಬರೆದು ಮಕ್ಕಳ ಜೊತೆ ಹೋಳಿ ಬಣ್ಣ ಹಚ್ಚಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಯೂಟ್ಯೂಬ್ ಚಾನೆಲ್ ಎಂಟ್ರಿಗೆ ಸಜ್ಜಾದ ಅವತಾರ ಪುರುಷ
ಈ ಹಿಂದೆ ಶರಣ್ ತಮ್ಮದೇ ಆದಂತಹ ಯೂಟ್ಯೂಬ್ ಚಾನೆಲ್ (YouTube Channel) ಶುರು ಮಾಡುವ ವಿಷಯದ ಕುರಿತು ಈ ಹಿಂದೆ ಮಾಹಿತಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ, 'ನಿಮ್ಮೆಲ್ಲರಿಗೆ ಮತ್ತಷ್ಟು ಹತ್ತಿರವಾಗಲು ನನ್ನದೊಂದು ಪುಟ್ಟ ಪ್ರಯತ್ನ. Actor Sharaan Official ಯೂಟ್ಯೂಬ್ ಚಾನೆಲ್. ನಾಳೆ ಬೆಳಗ್ಗೆ 11ಕ್ಕೆ ಭೇಟಿ ಆಗೋಣ'. ಎಂದು ಪೋಸ್ಟ್ ಮಾಡುವ ಜೊತೆಗೆ ಆನ್ ಸ್ಕ್ರೀನ್ ಶರಣ್ ಮತ್ತು ಆಫ್ ಸ್ಕ್ರೀನ್ ಶರಣ್ ಹೇಗೆ ಇರುತ್ತಾರೆ ಎನ್ನುವ ವಿಷಯದ ಜೊತೆಗೆ ನನ್ನನ್ನು ಇನ್ನಷ್ಟು ಪರಿಚಯ ಮಾಡಿಕೊಡುವುದರ ಮೂಲಕ ನಿಮ್ಮ ಹತ್ತಿರ ಆಗುವಂತ ಚಿಕ್ಕ ಪ್ರಯತ್ನ ಎಂಬ ವಿಡಿಯೋವನ್ನು ಶೇರ್ ಮಾಡಿದ್ದರು.
'ಅವತಾರ ಪುರುಷ' ಚಿತ್ರದ ಟೀಸರ್ ಹಾಗೂ ಟ್ರೇಲರ್‌ನಿಂದ ಈಗಾಗಲೇ ಸಾಕಷ್ಟು ಗಮನ ಸೆಳೆದಿದೆ. ಸಸ್ಪೆನ್ಸ್ ಥ್ರಿಲ್ಲಿಂಗ್ ಇರುವ ಚಿತ್ರದಲ್ಲಿ ಶರಣ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಮತ್ತು ಹೊಸ ಅವತಾರದಲ್ಲಿ ಕಾಣಬಹುದಾಗಿದೆ. ಮುಖ್ಯವಾಗಿ ಸಿಕ್ಕಾಪಟ್ಟೆ ಶಾಕ್‌ನೊಂದಿಗೆ ಭಯಮೂಡಿಸುವಂತಹ ಬ್ಲ್ಯಾಕ್ ಮ್ಯಾಜಿಕ್ (Black Maagic) ಚಿತ್ರಕಥೆ ಈ ಚಿತ್ರದಲ್ಲಿದೆ. ಶರಣ್ ನಟನೆಯ 'ಅವತಾರಪುರುಷ' ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. 'ಅವತಾರ ಪುರುಷ 1' ಮತ್ತು 'ಅವತಾರ ಪುರುಷ 2' ಹೆಸರಿನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಆದರೆ, ಚಿತ್ರದ ಟ್ಯಾಗ್‌ಲೈನ್ ಮಾತ್ರ ಬೇರೆ ಬೇರೆ ಇಡಲಾಗುತ್ತಿದೆ. ಮೊದಲ ಭಾಗಕ್ಕೆ ಅಷ್ಟದಿಗ್ಬಂಧನ ಮಂಡಲಕ ಹಾಗೂ ಎರಡನೇ ಪಾರ್ಟ್‌ಗೆ ತ್ರಿಶಂಕು ಎನ್ನುವ ಟ್ಯಾಗ್‌ಲೈನ್ ಇಡಲಾಗಿದೆ.
ಬ್ಲ್ಯಾಕ್ ಮ್ಯಾಜಿಕ್ ಕಥೆ ಹೇಳಲು ಬಂದ 'ಅವತಾರ ಪುರುಷ'
ಚಿತ್ರದಲ್ಲಿ ಶರಣ್‌ಗೆ ಜೋಡಿಯಾಗಿ ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ (Ashika Ranganath) ನಟಿಸಿದ್ದು, ಸಾಯಿಕುಮಾರ್, ರಾಮಾಜೋಯಿಸರಾಗಿ ಅಭಿನಯಿಸಿದ್ದಾರೆ. ಮಂತ್ರವಾದಿ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಸೇರಿದಂತೆ ಸುಧಾರಾಣಿ, ಸಾಧುಕೋಕಿಲ, ಭವ್ಯ, ಅಯ್ಯಪ್ಪ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೊರ್ ಅವರು ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಲಿಯಮ್ ಡೇವಿಡ್ ಛಾಯಾಗ್ರಹಣದಲ್ಲಿ 'ಅವತಾರ ಪುರುಷ' ಚಿತ್ರ ಮೂಡಿ ಬಂದಿದೆ.