ಸ್ಯಾಂಡಲ್‌ವುಡ್‌ ನವರಸ ನಾಯಕ ಜಗ್ಗೇಶ್‌ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಇರುವ ಮೂಲಕ ಅಭಿಮಾನಿಗಳ ಜತೆ ಮಾತನಾಡುತ್ತಾ ಅವರ ಕಷ್ಟಗಳಿಗೆ ಸ್ಪಂದಿಸುತ್ತಾ ಕೆಲವೊಮ್ಮೆ ತಮ್ಮ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಸಿನಿ ಪ್ರೇಮಿಗಳ ಜತೆ ಅನೇಕ ಅದ್ಭುತ ಸನ್ನಿವೇಶಗಳ ಬಗ್ಗೆ ಹಂಚಿಕೊಂಡು ನಕ್ಕಿದ್ದಾರೆ ಕೆಲ ಆಪ್ತರನ್ನು ಕಳೆದುಕೊಂಡು ದುಃಖ ಪಟ್ಟಿದ್ದಾರೆ. 

ಚಿರು ಸಾವಿಗೆ ಕಾರಣವೇ ಅಷ್ಟಮ ಕುಜ ದೋಷ? ಇದಕ್ಕೇನು ಪರಿಹಾರ? 

ಅದೇಕೋ ಏನೋ ಗೊತ್ತಿಲ್ಲ ನಟ ಜಗ್ಗೇಶ್‌ ಹೇಳುವ ಅನೇಕ ಮಾತುಗಳು ಹಾಗೂ ಘಟನೆಗಳಿಗೆ ಜನರು ತುಂಬಾನೇ ಕನೆಕ್ಟ್‌ ಆಗುತ್ತಾರೆ. ಅವರ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ತಮ್ಮ ಜೀವನದಲ್ಲಿ ನಡೆಯುತ್ತಿದೆ ಎಂಬಂತೆ ಭಾವಿಸುತ್ತಾರೆ. ಈ ಕಾರಣಕ್ಕೆ ನೋಡಿ ಅವರು ಹಲವರಿಗೆ ಅಚ್ಚು- ಮೆಚ್ಚು.

ತಾಯಿಯ ನೆನಪು:

ಜಗ್ಗೇಶ್‌ ಮುದ್ದಿನ ಹಾಗೂ ಪ್ರೀತಿಯ ತಾಯಿ ನಂಜಮ್ಮ 1993ರಲ್ಲಿ ನಿಧನರಾಗಿದ್ದರು.ಇಂದಿಗೆ 26 ವರ್ಷಗಳೇ ಕಳೆದಿದೆ. ಈ ಹಿನ್ನೆಲೆಯಲ್ಲಿ ಜಗ್ಗೇಶ್ ಭಾವುಕರಾಗಿ ಟ್ಟೀಟ್‌  ಮಾಡಿದ್ದಾರೆ.

'ನನಗೆ ಉಸಿರು ನೀಡಿ ಜಗತ್ತಿಗೆ ಪರಿಚಯಿಸಿ ಜಗದಲ್ಲಿ ಬದುಕುವ ವಿಧಿವಿಧಾನ ಸಂಸ್ಕಾರ ಅಧ್ಯಾತ್ಮ ಕಲಿಸಿದ ಪ್ರಥಮ ದೇವರು ಗುರು ನನ್ನ ಅಗಲಿದ ದಿನ!ಅಮ್ಮ ನನ್ನ ಬಿಟ್ಟುಹೋಗಿ ಇಂದಿಗೆ 26ವರ್ಷ! ಅವಳ ಇಂದು ಮಾತ್ರ ನೆನೆವ ಜನ್ಮವಲ್ಲಾ ನನ್ನದು!ಅವಳನ್ನ ನನ್ನ ಉಸಿರಿನ ಜೂತೆಯೇ ಬೆರೆಸಿರುವೆ!ಇದು ಅವಳ ಕೊನೆ ಉಸಿರಿನ ಕೊಠಡಿ ಚಿತ್ರ! ಮಾತೃದೇವೋಭವ...'ಎಂದು ಬರೆದುಕೊಂಡಿದ್ದಾರೆ.

 

ಜಗ್ಗೇಶ್‌ ತಾಯಿಗೆ ದ್ವಿತೀಯ ಪುತ್ರ ಕೋಮಲ್ ಮದುವೆ ನೋಡಬೇಕೆಂಬ ಆಸೆ ತುಂಬಾನೇ ಇತ್ತು. ಜಗ್ಗೇಶ್‌ ಅವರು ತಮ್ಮ ಕೊನೆ ಬಯಕೆ ಏನೆಂದು ಹೇಳಿಕೊಂಡರು. ತಾಯಿಯ ಆಸೆ ಈಡೇರಿಸಬೇಕೆಂದು ಜಗ್ಗೇಶ್‌ ಸ್ನೇಹಿತನ ತಂಗಿಯನ್ನು ಮದುವೆಗೆ ಒಪ್ಪಿಸಿ ಸರಳವಾಗಿ ಮದುವೆ ಮಾಡಿಸಿದ್ದರು.ಕೋಮಲ್  ಮದುವೆಯಾದ 20 ದಿನಕ್ಕೆ ನಂಜಮ್ಮ ಮೃತಪಟ್ಟಿದ್ದಾರೆ. 

ಕೋಮಲ್‌ ಮದುವೆಯಾದ 20 ದಿನದಲ್ಲಿ ತಾಯಿ ಕಳೆದುಕೊಂಡ ಜಗ್ಗೇಶ್‌; ನೋವಿನ ಕಥೆ! 

ಅನೇಕ ವಿಚಾರಗಳಲ್ಲಿ ಜಗ್ಗೇಶ್‌ ಅವರಿಗೆ ತಾಯಿ ನಂಜಮ್ಮನೇ ಸ್ಫೂರ್ತಿ ಅವರನ್ನು ನೆನೆಯದೆ ಒಂದು ದಿನವೂ ಕಳೆದಿಲ್ಲ. ಅಷ್ಟೇ ಏಕೆ ಜಗ್ಗಣ್ಣನ  ಕೈಯಲ್ಲಿ ಅಷ್ಟೊಂದು ಉಂಗುರ ನೋಡಿರುವ ಅಭಿಮಾನಿಗಳಿಗೆ ತಿಳಿದಿರುತ್ತದೆ ಅಲ್ವಾ?

ಹೌದು! ಜಗ್ಗೇಶ್‌ ತಾಯಿ ಕೈಗಳಿಗೆ ಹೀಗೆ ಬಂಗಾರ ಉಂಗುರಗಳನ್ನು ಧರಿಸುತ್ತಿದ್ದರಂತೆ ಈ ಕಾರಣಕ್ಕೆ ಅವರು ಹಾಗೆ ಹಾಕಿಕೊಳ್ಳುತ್ತಾರೆ ಅಷ್ಟೇ ಅಲ್ಲದೆ ತನ್ನ ತಾಯಿಯ ಒಂದು ತಾಳಿಯನ್ನು ಕತ್ತಲಿರುವ ಚೇನ್‌ಗೆ ಡಾಲರ್ ರೀತಿಯಲ್ಲಿ ಧರಿಸಿದ್ದಾರೆ.