ಕೋಮಲ್‌ ಮದುವೆಯಾದ 20 ದಿನದಲ್ಲಿ ತಾಯಿ ಕಳೆದುಕೊಂಡ ಜಗ್ಗೇಶ್‌; ನೋವಿನ ಕಥೆ!

ಅಮ್ಮಂದಿರ ದಿನದಂದು ಜಗ್ಗೇಶ್‌ ಬರೆದುಕೊಂಡ ಭಾವುಕ ಕಥೆ. ಕೋಮಲ್‌ ಮದುವೆಯಾದ 20 ದಿನದಲ್ಲಿ ನಡೆದಿತ್ತು ಆ ಕಹಿ ಘಟನೆ....

Kannada actor jaggesh reveals heart touching photo on mother day

ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್‌ ತನ್ನ ವಿಭಿನ್ನ ಹಾಸ್ಯದ  ಮೂಲಕ ಸಿನಿ ರಸಿಕರನ್ನು ಮನರಂಜಿಸುತಲ್ಲೇ ಬಂದಿದ್ದಾರೆ. ಅಭಿನಯಿಸಿದ ಸಿನಿಮಾಗಳು ಒಂದಕ್ಕಿಂತ ಒಂದು ಸೂಪರ್ ಹಿಟ್‌, ಬೇಡಿಕೆಯ ಹಾಸ್ಯ ನಟನಾಗಿ ಆನಂತರ ನಾಯಕ ನಟನಾಗಿ ನಮ್ಮೆಲ್ಲರ ಮನಸ್ಸಿನಲ್ಲಿ ಮನೆ ಮಾಡಿರುವ ಜಗ್ಗಣ್ಣ ಜೀವನದಲ್ಲಿ ಅನುಭವಿಸಿದ ನೋವು ಒಂದೆರಡಲ್ಲಾ. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ಹೊತ್ತ ಜಗ್ಗೇಶ್‌ ಜೀವನದ ಕಹಿ ಘಟನೆ ಇದು.....

ಮದರ್ಸ್‌ ಡೇ:  

ವಿಶ್ವವೇ ಅಮ್ಮಂದಿನ ದಿನಾಚರಣೆಯನ್ನು ಮಾಡುತ್ತಿದ್ದರೆ ಜಗ್ಗಣ್ಣ ತಾಯಿಯನ್ನು ನೆನೆಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ತಮ್ಮ ಟ್ಟಿಟರ್‌ ಖಾತೆಯಲ್ಲಿ ತಮ್ಮ ತಾಯಿಗಿದ್ದ  ಕೊನೆ ಆಸೆಯನ್ನು ಹೇಳುತ್ತಾ ಆ ಕಹಿಯಾದ  ಭಾವುಕ ಘಟನೆಯನ್ನು ಹೇಳಿಕೊಂಡಿದ್ದು ಹೀಗೆ ...

ಬಿಗ್‌ 3 ಬೆಳಕಿಗೆ ತಂದ ಪ್ರತಿಭೆಗಳಿಗೆ ಜಗ್ಗೇಶ್‌ರಿಂದ ಸಿಕ್ತು ಸೂರು ಭಾಗ್ಯ!

20 ವರ್ಷಕ್ಕೆ ಕೋಮಲ್‌ ಮದುವೆ:

ಸ್ಯಾಂಡಲ್‌ವುಡ್‌ ಮತ್ತೊಬ್ಬ ಹೆಸರಾಂತ ಹಾಸ್ಯ ನಟ ಕೋಮಲ್‌ ಮದುವೆಯನ್ನು ನೋಡಬೇಕೆಂದು ಜಗ್ಗೇಶ್‌ ತಾಯಿ ಕೋರಿಕೊಂಡಿದ್ದಾರೆ. ಒಂದು ವಾರದಲ್ಲಿಯೇ ಸ್ನೇಹಿತನ ತಂಗಿಯನ್ನು ಒಪ್ಪಿಸಿ ಮದುವೆ ಮಾಡಿದ್ದಾರೆ. ಆಗ ಕೋಮಲ್ ಕೇವಲ 20  ವರ್ಷದ ಹುಡುಗ. ಮದುವೆ ನಡೆದ  20 ದಿನದಲ್ಲಿ ಜಗ್ಗೇಶ್‌ ತಾಯಿ ಕೊನೆ ಉಸಿರೆಳೆದಿದ್ದಾರೆ.

ಜಗ್ಗೇಶ್‌ ತಾಯಿ ಮುಖದಲ್ಲಿ ಮಂದಹಾಸ:

'ಅಮ್ಮ ನನಗೆ ಬೇಗ ಕೋಮಲ್ ಮದುವೆ ಮಾಡು ಈಶ ಯಾಕೋ ಶಿವ ಕರೆದಂತೆ ಆಗುತ್ತಿದೆ ಎಂದು ಹಿಂಸೆ ಕೊಟ್ಟಳು! ವಾರದಲ್ಲೇ ಸ್ನೇಹಿತನ ತಂಗಿಯನ್ನು ಒಪ್ಪಿಸಿ 20 ವರ್ಷ ಕೋಮಲ್‌ಗೆ ಮದುವೆ ಮಾಡಿಸಿಬಿಟ್ಟೆ!  ಕೂತು ಚಪ್ಪಾಳೆ ತಟ್ಟಿ ಆನಂದಿಸಿ ಅವನು ಮದುವೆಯಾದ 20  ದಿನಕ್ಕೆ ದೇಹತ್ಯಾಗ ಮಾಡಿಬಿಟ್ಟಳು ಅಮ್ಮ! ಆಕಸ್ಮಿಕ ಇಂದು ಸಿಕ್ಕ ಅಮ್ಮನ ಫೋಟೋ ಭಾವುಕನಾಗಿಸಿತು ನನ್ನ..!' ಎಂದು ಜಗ್ಗೇಶ್‌ ಟ್ಟಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

 

ಜಗ್ಗೇಶ್‌ ಚಿನ್ನದ ಉಂಗುರದ ಕಥೆ: 

ನಟನಾಗಿ ಬೆಳ್ಳಿ ತೆರೆಯಲ್ಲಿ ಮಿಂಚುತ್ತಿದ್ದರೂ ಜಗ್ಗಣ್ಣ ಕಿರುತೆರೆ ಕಾರ್ಯಕ್ರಮದಗಳಲ್ಲಿ ಭಾಗಿಯಾಗುತ್ತಾ ಮನೆ-ಮನಗಳ ಮಾತಾಗಿದ್ದಾರೆ. ರಿಯಾಲಿಟಿ ಶೋ ತೀರ್ಪುಗಾರರಾಗಿ ಪ್ರತಿ ವೀಕೆಂಡ್‌ ಬರುವ ಜಗ್ಗೇಶ್‌ ಕೈಯಲ್ಲಿ 6-8 ಚಿನ್ನದ ಉಂಗುರಗಳು ಹಾಗೂ ಕತ್ತಲ್ಲಿ ತಾಳಿ ನೋಡಬಹುದು. ಏಕೆ ಜಗಣ್ಣ ಈ ತೀರಿ ಧರಿಸುವುದು ಎಂದು ಅನೇಕರು ಪ್ರಸ್ನಿಸಿದ್ದಾರೆ ಇದಕ್ಕೆ ಕೊಟ್ಟ ಉತ್ತರ ಹೀಗಿದೆ.

ಜಗ್ಗೇಶ್ ಕೈತುಂಬಾ ಧರಿಸೋ ಉಂಗುರದ ಹಿಂದಿದೆ ಈ ರಹಸ್ಯ!

 ಜಗ್ಗೇಶ್‌ಗೆ ತಾಯಿ ನಂಜಮ್ಮಗೆ ಚಿನ್ನ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ. ಹಾಗಾಗಿ ಅವರು ಹೆಚ್ಚಾಗಿ ಆಭರಣ ಧರಿಸುತ್ತಿದ್ದರು. ತಾಯಿ ನೋಡಿ ಜಗ್ಗೇಶ್‌ ಕೂಡ ಉಂಗುರ ಧರಿಸಲು ಶುರು ಮಾಡಿದರು. 

ಜಗ್ಗೇಶ್‌ ಸಹಾಯ ಹಸ್ತ:

ನಟನಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಜಗ್ಗೇಶ್‌ ಸಮಾಜಸೇವೆಯಲ್ಲೂ ಎತ್ತಿದ ಕೈ. ಕಷ್ಟ ಎಂದು ತಿಳಿದ ತಕ್ಷಣವೇ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ಸುವರ್ಣ ನ್ಯೂಸ್‌ ಬೆಳಕಿಗೆ ತಂದ ಅಂದ ಗಾಯಕಿಯರು ಈಗ ಜೀ ಕನ್ನಡ ವಾಹಿನಿಯಲ್ಲಿ  ಸರಿಗಮಪ ರಿಯಾಲಿಟಿ ಶೋನ ಸ್ಪರ್ಧಿಗಳು. ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದ ಕಾರಣ ಜಗ್ಗೇಶ್‌ ಮನೆಯೊಂದನ್ನು ಕಟ್ಟಿಸಿಕೊಟ್ಟಿದ್ದಾರೆ.

8 ವರ್ಷ ಹಿಂದೆ ಭೇಟಿಯಾದ ದೇವರ ಮಗನಿಗೆ ವೀಲ್‌ಚೇರ್‌ ನೀಡಿದ 'ನಾಯಕ'!

57ನೇ ಹುಟ್ಟುಹಬ್ಬವನ್ನು ಮಂತ್ರಾಲಯದಲ್ಲಿ ಆಚರಿಸಿಕೊಂಡ ಜಗ್ಗೇಶ್‌ ವಿಶೇಷ ವ್ಯಕ್ತಿಗೆ ಸಹಾಯ ಮಾಡಿದ್ದಾರೆ. 10 ವರ್ಷಗಳ ಹಿಂದೆ ಮಂತ್ರಾಲಯದಲ್ಲಿ ಭೇಟಿಯಾದ ದೇವರ ಮಗನಿಗೆ ವೀಲ್ ಚೇರ್‌ ಖರೀದಿಸಲು 10 ಸಾವಿರ ಹಾಗೂ ದೇವಾಲಯದ ಪಕ್ಕದಲ್ಲೇ  ಅಂಗಡಿ ತೆರದು ಕೊಡುವುದಾಗಿಯೂ ಹೇಳಿದ್ದಾರೆ.

Latest Videos
Follow Us:
Download App:
  • android
  • ios