ಕನ್ನಡದ ಬಹುತೇಕ ಪೋಷಕ ನಟರೇ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ತ್ರಿಕೋನ ಸಿನಿಮಾ ಏ.1ಕ್ಕೆ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ಒಂದು ವಾರ ಮುಂದಕ್ಕೆ ಹೋಗಿದೆ. ಏ.8ರಂದು ಸಿನಿಮಾ ಬಿಡುಗಡೆ ಆಗುತ್ತಿದೆ.

ಕನ್ನಡದ ಬಹುತೇಕ ಪೋಷಕ ನಟರೇ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ತ್ರಿಕೋನ (Trikona) ಸಿನಿಮಾ ಏ.1ಕ್ಕೆ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ಒಂದು ವಾರ ಮುಂದಕ್ಕೆ ಹೋಗಿದೆ. ಏ.8ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ವಿತರಕರಾಗಿದ್ದ ಬಾಷಾ ಅವರ ಆರೋಗ್ಯ ಸರಿ ಇಲ್ಲ. ಜೊತೆಗೆ ಏ.1ರಂದು 9ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆ ಆಗುತ್ತಿವೆ. ಹೀಗಾಗಿ ಬಿಡುಗಡೆ ಮುಂದೂಡುವ ನಿರ್ಧಾರ ಮಾಡಲಾಗಿದೆ. ಈಗ ಬಾಷಾ ಅವರಿಗೆ ಬದಲಾಗಿ ನಿರ್ಮಾಪಕ ಬಿ ಕೆ ಗಂಗಾಧರ್‌ (BK Gangadhar) ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.

Add Asianetnews Kannada as a Preferred SourcegooglePreferred

‘ನಾವು ಸಿನಿಮಾ ತುಂಬಾ ಚೆನ್ನಾಗಿ ಮಾಡಿದ್ದೇವೆ. ಒಳ್ಳೆಯ ಚಿತ್ರ ಎಲ್ಲರು ನೋಡಲಿ ಎನ್ನುವ ಉದ್ದೇಶ ಇದೆ. ಸಿನಿಮಾ ಒಂದು ವಾರ ಮುಂದೆ ಹೋಗಿದೆ. ಚಿತ್ರದ ಬಗ್ಗೆ ಪ್ರಚಾರ ಮಾಡಲು ಸಿಕ್ಕಿರುವ ಮತ್ತೊಂದು ಅವಕಾಶ ಇದು ಎಂದು ಭಾವಿಸುತ್ತೇನೆ. ಮೊದಲ ಹಂತದಲ್ಲಿ 80 ರಿಂದ 100 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ, ಪ್ರೇಕ್ಷಕರ ಪ್ರತಿಕ್ರಿಯೆ ಆಧರಿಸಿ ಮತ್ತಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್‌ ಇದೆ’ ಎನ್ನುತ್ತಾರೆ ರಾಜಶೇಖರ್‌. ಹಿರಿಯ ನಟ ಸುಚೇಂದ್ರ ಪ್ರಸಾದ್‌ (Suchendra Prasad) ಈ ಚಿತ್ರಕ್ಕೆ ಪ್ರಚಾರದ ರಾಯಬಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ‘ಒಳ್ಳೆಯ ಕತೆಯನ್ನು ಒಳಗೊಂಡ ಸಿನಿಮಾ ಗುಂಪಿನಲ್ಲಿ ಕಳೆದು ಹೋಗಬಾರದು ಎನ್ನುವುದು ನಮ್ಮ ಉದ್ದೇಶ’ ಎಂದರು ಸುಚೇಂದ್ರ ಪ್ರಸಾದ್‌.

ತಾಳ್ಮೆಯ ಮಹತ್ವ ಸಾರುವ ತ್ರಿಕೋನ!

‘ನಾವು ಸಿನಿಮಾ ತುಂಬಾ ಚೆನ್ನಾಗಿ ಮಾಡಿದ್ದೇವೆ. ಮೊದಲ ಹಂತದಲ್ಲಿ 80 ರಿಂದ 100 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ, ಪ್ರೇಕ್ಷಕರ ಪ್ರತಿಕ್ರಿಯೆ ಆಧರಿಸಿ ಮತ್ತಷ್ಟುಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್‌ ಇದೆ’ ಎನ್ನುತ್ತಾರೆ ನಿರ್ಮಾಪಕ ರಾಜಶೇಖರ್‌ (Rajashekhar). ಅಂದಹಾಗೆ ಈ ಹಿಂದೆ ‘143’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಕಾಂತ್ ಅವರೇ ಈ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ಸುರೇಶ್ ಹೆಬ್ಳಿಕರ್, ಲಕ್ಷ್ಮೀ, ಅಚ್ಯುತ್ ಕುಮಾರ್, ಸುಧಾರಾಣಿ, ಸಾಧು ಕೋಕಿಲಾ, ಮಾರುತೇಶ್, ರಾಜ್‌ವೀರ್, ಬೇಬಿ ಅದಿತ್ಯ, ಹಾಸಿನಿ, ಮನದೀಪ್ ರಾಯ್, ರಾಕ್‌ಲೈನ್ ಸುಧಾಕರ್... ಹೀಗೆ ದೊಡ್ಡ ತಾರಾಗಣ ಇರುವ ಚಿತ್ರವಿದು. 

ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಇಲ್ಲಿ ಕಷ್ಟ ಎನ್ನುವ ಕ್ಯಾರೆಕ್ಟರ್ ಸುತ್ತ ಸಿನಿಮಾ ಸಾಗುತ್ತದೆ. ಅಂದರೆ ಕಷ್ಟ ಕೊಡುವ ವ್ಯಕ್ತಿಗೆ ಶಕ್ತಿ ಇದೆ, ಆ ಕಷ್ಟವನ್ನು ಎದುರಿಸುವವರಿಗೆ ಶಕ್ತಿ ಇರಲ್ಲ. ಇವರ ನಡುವೆ ಇಡೀ ಸಿನಿಮಾ ಸಾಗುತ್ತದೆ. ಆದರೆ, ಕಷ್ಟ ಯಾಕೆ ಇವರನ್ನು ಹಿಂಬಾಲಿಸುತ್ತದೆ ಎಂಬುದು ಚಿತ್ರದ ಮತ್ತೊಂದು ತಿರುವಂತೆ. ಇತ್ತೀಚೆಗಷ್ಟೆ ಸಾಧು ಕೋಕಿಲಾ ನಿರ್ದೇಶನದಲ್ಲಿ ‘ಜಾಲಿಡೇಸ್’ ಚಿತ್ರಕ್ಕೆ ಚಾಲನೆ ಕೊಟ್ಟಿರುವ ರಾಜಶೇಖರ್, ‘ತ್ರಿಕೋನ’ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ‘ಪೆರೋಲ್, ಬರ್ಫಿ ಚಿತ್ರಗಳ ನಂತರ ನನ್ನ ಸಂಸ್ಥೆಯ ಮತ್ತೊಂದು ಸಿನಿಮಾ ತೆರೆ ಮೇಲೆ ಮೂಡುತ್ತಿದೆ. ನಾನೇ ನಿರ್ದೇಶಕನಾಗಿದ್ದರೂ ನಾನು ಬರೆದ ಕತೆ, ಚಿತ್ರಕತೆಯನ್ನು ಚಂದ್ರಕಾಂತ್ ಅವರಿಂದ ನಿರ್ದೇಶನ ಮಾಡಿಸುವುದಕ್ಕೆ ಕಾರಣ ಅವರ ಹಿಂದಿನ ಚಿತ್ರ ‘143’ ನೋಡಿದ್ದೆ. 

Home Minister Film Review: ಸಣ್ಣ ಕುಟುಂಬದ ಕಥೆ ವ್ಯಥೆ

ತುಂಬಾ ಚೆನ್ನಾಗಿ ಸಿನಿಮಾ ಮಾಡಿದ್ದರು. ಆದರೆ, ಆ ಚಿತ್ರದ ನಂತರ ಚಿತ್ರರಂಗವೇ ಬೇಡ ಎಂದು ಊರಿಗೆ ಹೋಗಿದ್ದ ಒಬ್ಬ ಪ್ರತಿಭಾವಂತ ನಿರ್ದೇಶಕನನ್ನು ನಾವು ಮರೆಯಬಾರದು ಎನ್ನುವ ಕಾರಣಕ್ಕೆ ‘ತ್ರಿಕೋನ’ ಚಿತ್ರವನ್ನು ನಿರ್ದೇಶನ ಮಾಡಿಸಿದ್ದೇನೆ. ನಾನು ಬರೆದ ಕತೆ ತುಂಬಾ ಚೆನ್ನಾಗಿ ತೆರೆ ಮೇಲೆ ತಂದಿದ್ದಾರೆ. ಪೋಷಕ ಪಾತ್ರಧಾರಿಗಳೇ ಚಿತ್ರದ ಮುಖ್ಯ ಕಲಾವಿದರು. ಸಾಮಾನ್ಯವಾಗಿ ಇಂಥ ಚಿತ್ರಗಳನ್ನು ತೋರಿಕೆಗೆ ಬಿಡುಗಡೆ ಮಾಡುತ್ತಾರೆ. ಆದರೆ, ನಾನು ಒಬ್ಬ ಸ್ಟಾರ್ ನಟನ ಚಿತ್ರದಷ್ಟೆ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದ್ದೇನೆ. ಏ.1ರಂದು 200 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ’ ಎನ್ನುತ್ತಾರೆ ನಿರ್ಮಾಪಕ ರಾಜಶೇಖರ್.

ಈ ಹಿಂದೆ ಬಂದ ನನ್ನ ನಿರ್ದೇಶನದ ‘143’ ಚಿತ್ರವನ್ನು ಪ್ರೇಕ್ಷಕರು ನೋಡಿ ಮೆಚ್ಚಿದ್ದರು. ಮಾಧ್ಯಮಗಳಲ್ಲೂ ಒಳ್ಳೆಯ ವಿಮರ್ಶೆಗಳು ಬಂದಿದ್ದವು. ತ್ರಿಕೋನ ಸಿನಿಮಾ ಕೂಡ ಅದೇ ರೀತಿಯಲ್ಲಿ ನೋಡಿ ಬೆಂಬಲಿಸುತ್ತಾರೆಂಬ ನಂಬಿಕೆ ಇದೆ. ನಿರ್ಮಾಪಕರೇ ಕತೆ ಬರೆದಿದ್ದಾರೆ. ಒಳ್ಳೆಯ ಕತೆ. ಎಲ್ಲರಿಗೂ ಇಷ್ಟವಾಗುತ್ತದೆ.
- ಚಂದ್ರಕಾಂತ್‌, ನಿರ್ದೇಶಕ