ತಾಳ್ಮೆಯ ಮಹತ್ವ ಸಾರುವ ತ್ರಿಕೋನ!
ತ್ರಿಕೋನ ಪೆರೋಲ್ ನಿರ್ದೇಶಕ ರಾಜಶೇಖರ್ ನಿರ್ಮಾಣದ ಚಿತ್ರ ಲಕ್ಷ್ಮೀ, ಅಚ್ಯುತ್ ಕುಮಾರ್, ಸುಧಾರಾಣಿ, ಸಾಧು ಕೋಕಿಲಾ, ಮಾರುತೇಶ್, ರಾಜ್‌ವೀರ್ ನಟಿಸಿದ್ದಾರೆ.
‘ಮನಸ್ಸನ್ನು ಕ್ರೀಡಾ ಮೈದಾನ ಅಂದುಕೊಂಡರೆ ಅದರಲ್ಲಿ ಮುಖ್ಯ ಓಟಗಾರರು ಅಹಂ, ಶಕ್ತಿ ಮತ್ತು ತಾಳ್ಮೆ. ಜೀವನ ಓಟದ ಸ್ಪರ್ಧೆಗೆ ಬಿದ್ದಾಗ ಇವುಗಳಲ್ಲಿ ಯಾವುದು ಗೆಲ್ಲುತ್ತೆ ಅನ್ನೋದೇ ತ್ರಿಕೋನ ಚಿತ್ರದ ಮುಖ್ಯ ವಸ್ತು.
ಇದರಲ್ಲಿ ತಾಳ್ಮೆಯ ಮಹತ್ವವನ್ನು ಹೇಳಿದ್ದೇವೆ’ ಎಂದು ತ್ರಿಕೋನ ಚಿತ್ರದ ನಿರ್ದೇಶಕ ಚಂದ್ರಕಾಂತ್ ಹೇಳಿದ್ದಾರೆ. ಏ.1ರಂದು ಸಿನಿಮಾ ಬಿಡುಗಡೆಯಾಗಲಿದೆ.
ಈ ಕುರಿತ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುಖ್ಯಪಾತ್ರದಲ್ಲಿ ನಟಿಸಿರುವ ನಟ ಸುರೇಶ್ ಹೆಬ್ಳೀಕರ್, ‘ಈ ಚಿತ್ರದಲ್ಲಿ ಮಂಗಳೂರಿಂದ ಬಂದು ಇಲ್ಲಿ ಹೊಟೇಲ್ ನಡೆಸುತ್ತಿರುವ ಹೊಟೇಲ್ ಮಾಲೀಕನ ಪಾತ್ರ ನನ್ನದು.
ಎಂಥಾ ಆತಂಕದಲ್ಲೂ ತಾಳ್ಮೆಯಿಂದಿರುವ ವ್ಯಕ್ತಿಯಾಗಿ ನಟಿಸಿದ್ದೇನೆ’ ಎಂದರು. ಸುಚೇಂದ್ರ ಪ್ರಸಾದ್ ಚಿತ್ರದ ಪ್ರಚಾರ ರಾಯಭಾರಿಯಾಗಿದ್ದಾರೆ.
ಮುಖ್ಯಪಾತ್ರಗಳಲ್ಲಿ ನಟಿಸಿರುವ ರಾಜ್ವೀರ್, ಮಾರುತೇಶ್, ಕತೆ ಬರೆದು ಸಿನಿಮಾ ನಿರ್ಮಿಸಿರುವ ರಾಜಶೇಖರ್, ವಿತರಕ ಭಾಷಾ ಸುದ್ದಿಗೋಷ್ಠಿಯಲ್ಲಿದ್ದರು.
ಚಿತ್ರಕ್ಕೆ ಬಹುಭಾಷಾ ತಾರೆ ಲಕ್ಷ್ಮೇ, ನಟ ಅಚ್ಯುತ, ಸುಧಾರಾಣಿ ಮೊದಲಾದವರ ತಾರಾಗಣವಿದೆ.ಪೋಷಕ ಪಾತ್ರಧಾರಿಗಳೇ ಚಿತ್ರದ ಮುಖ್ಯ ಕಲಾವಿದರು. ಸಾಮಾನ್ಯವಾಗಿ ಇಂಥ ಚಿತ್ರಗಳನ್ನು ತೋರಿಕೆಗೆ ಬಿಡುಗಡೆ ಮಾಡುತ್ತಾರೆ. ಆದರೆ, ನಾನು ಒಬ್ಬ ಸ್ಟಾರ್ ನಟನ ಚಿತ್ರದಷ್ಟೆ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದ್ದೇನೆ. ಏ.1ರಂದು 200 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ’ ಎನ್ನುತ್ತಾರೆ ನಿರ್ಮಾಪಕ ರಾಜಶೇಖರ್