Asianet Suvarna News Asianet Suvarna News

ನಾನೊಬ್ಬನೇ ಕಾರಣ; ಪೆಟ್ರೋಮ್ಯಾಕ್ಸ್ ಸೋಲಿನ ಹೊಣೆಹೊತ್ತ ನಿರ್ದೇಶಕ ವಿಜಯ್ ಪ್ರಸಾದ್

. ಭಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ ಪೆಟ್ರೋಮ್ಯಾಕ್ಸ್ ಸಿನಿಮಾ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಹೀನಾಯ ಸೋಲುಕಂಡಿದೆ. ಈ ಬಗ್ಗೆ ಸ್ವತಃ ನಿರ್ದೇಶಕ ವಿಜಯಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸಿನಿಮಾ ಸೋಲಿನ ಸಂಪೂರ್ಣ ಹೊಣೆಯನ್ನು ನಿರ್ದೇಶಕ ವಿಜಯ್ ಪ್ರಸಾದ್ ಅವರೇ ಹೊತ್ತುಕೊಂಡಿದ್ದಾರೆ.  

kannada director vijay prasad apologises for failure of petromax movie sgk
Author
Bengaluru, First Published Aug 1, 2022, 1:00 PM IST

ಸ್ಯಾಂಡಲ್ ವುಡ್ ನಟ ಸತೀಶ್‌ ನೀನಾಸಂ ನಾಯಕರಾಗಿ ನಟಿಸಿದ್ದ  ‘ಪೆಟ್ರೋಮ್ಯಾಕ್ಸ್‌’ ಸಿನಿಮಾ ಜುಲೈ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ನೀರ್‌ ದೋಸೆ ಸಿನಿಮಾ ಖ್ಯಾತಿಯ ನಿರ್ದೇಶಕ ವಿಜಯಪ್ರಸಾದ್‌ ಬಹಳ ದಿನಗಳ ನಂತರ ಮಾಡಿರುವ ಸಿನಿಮಾ ಪೆಟ್ರೋಮ್ಯಾಕ್ಸ್‌. ವಿಜಯ್‌ ಪ್ರಸಾದ್‌ ಸಿನಿಮಾಗಳೆಂದರೆ ಅಲ್ಲೊಂದು ಚೇಷ್ಟೆ ಇರುತ್ತದೆ. ಅದು ಈ ಸಿನಿಮಾದಲ್ಲಿಯೂ ಮುಂದುವರೆದಿದ್ದು, ಅದರ ಜೊತೆಗೆ ಒಂದು ಭಾವನಾತ್ಮಕ ಕಥೆಯನ್ನು ಹೇಳಿದ್ದರು. ಈ ಸಿನಿಮಾ ಟ್ರೈಲರ್ ಮತ್ತು ಟೀಸರ್ ಮೂಲಕವೇ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿತ್ತು. 

ಸತೀಶ್‌ ನೀನಾಸಂಗೆ ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಇವರ ಜತೆಗೆ ಕಾರುಣ್ಯ ರಾಮ್‌, ಗೊಂಬೆಗಳ ಲವ್‌ ಅರುಣ್‌, ಇಕ್ಕಟ್‌, ಮೇಡ್‌ ಇನ್‌ ಚೈನಾ ಸಿನಿಮಾ ಖ್ಯಾತಿಯ ನಾಗಭೂಷಣ್‌ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಭಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ ಈ ಸಿನಿಮಾ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಹೀನಾಯ ಸೋಲುಕಂಡಿದೆ. ಈ ಬಗ್ಗೆ ಸ್ವತಃ ನಿರ್ದೇಶಕ ವಿಜಯ್ ಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸಿನಿಮಾ ಸೋಲಿನ ಸಂಪೂರ್ಣ ಹೊಣೆಯನ್ನು ನಿರ್ದೇಶಕ ವಿಜಯ್ ಪ್ರಸಾದ್ ಅವರೇ ಹೊತ್ತುಕೊಂಡಿದ್ದಾರೆ.  

'ನಮ್ಮ ಪೆಟ್ರೋಮ್ಯಾಕ್ಸ್ ಚಿತ್ರ ನಾವು ಅಂದುಕೊಂಡಂತೆ ಎಲ್ಲರನ್ನೂ ತಲುಪಲು ಆಗಲಿಲ್ಲ. ಅದಕ್ಕೆ ಕಾರಣ ಖಂಡಿತವಾಗಿಯೂ ನೀವಂತೂ ಅಲ್ಲವೇ ಅಲ್ಲ ಹಾಗೆ ನಮ್ಮ ಚಿತ್ರತಂಡದ ಯಾರೋಬ್ಬರೂ ಅಲ್ಲ. ಇದಕ್ಕೆ ಕಾರಣ ನಾನೋಬ್ಬನೇ. ಕ್ಷಮೆ ಇರಲಿ' ಎಂದು ಹೇಳಿದ್ದಾರೆ. ಸಿನಿಮಾದ ಸೋತ ಬಳಿಕ ಅದರ ಹೊಣೆ ಹೊತ್ತುಕೊಳ್ಳಲು ಯಾರು ಮುಂದಾಗಲ್ಲ. ಆದರೆ ನಿರ್ದೇಶಕ ವಿಜಯ್ ಪ್ರಸಾದ್ ತಾನೆ ಇದಕ್ಕೆ ಜವಾಬ್ದಾರ ಎಂದು ಹೇಳುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ವಿಜಯಪ್ರಸಾದ್ ಅವರ ಈ ಹೇಳಿಕೆ ಸಿನಿ ಅಭಿಮಾನಿಗಳ ಮೆಚ್ಚುಗೆ ಪಾತ್ರವಾಗಿದೆ. ಅಲ್ಲದೇ ತಾವೆಲ್ಲ ಜೊತೆ ಇದ್ದೀವಿ ಎಂದು ಧೈರ್ಯ ಹೇಳುತ್ತಿದ್ದಾರೆ. ಅಲ್ಲದೆ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

'ಪೆಟ್ರೋಮ್ಯಾಕ್ಸ್‌' ಹುಟ್ಟಿಕೊಂಡ ಕಥೆ ಹೇಳಿದ ನಿರ್ಮಾಪಕ ಸುಧೀರ್

ಇನ್ನು ಕೆಲವರು ಇಂಥ ಕೆಟ್ಟ ಸಿನಿಮಾಗಳನ್ನು ಯಾಕೆ ಮಾಡುತ್ತೀರಿ, ಹಾಸ್ಯದ ಹೆಸರಿನಲ್ಲಿ ಡಬಲ್ ಮೀನಿಂಗ್ ಇರುವ ಸಿನಿಮಾ ಮಾಡಿದರೆ ಯಾರು ನೋಡುತ್ತಾರೆ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಆದರೂ ಸೋಲು ಒಪ್ಪಿಕೊಂಡು ಕ್ಷಮೆ ಕೇಳಿರುವುದು ನಿಜಕ್ಕೂ ಗ್ರೇಟ್ ಎನ್ನುತ್ತಿದ್ದಾರೆ. 

Petromax: ಎಲ್ಲಾ ಡಬಲ್ ಮೀನಿಂಗ್, ಯಾಕ್‌ ಸರ್‌? ಪ್ರಶ್ನೆಗೆ ನಾಗಭೂಷಣ್‌ ತಿರುಗೇಟು

ವಿಜಯಪ್ರಸಾದ್ ಸಿದ್ಲಿಂಗು, ನೀರ್ ದೋಸೆ ಸಿನಿಮಾ ಮೂಲಕ ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದ ವಿಜಯ್ ಪ್ರಸಾದ್ ಪೆಟ್ರೋಮ್ಯಾಕ್ಸ್ ಮೆಚ್ಚಿಸಲು ವಿಫಲರಾಗಿದ್ದಾರೆ. ಸದ್ಯ ತೋತಾಪುರಿ ಮತ್ತು ಪರಿಮಳ ಲಾಡ್ಜ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ತೋತಾಪುರಿ ಸಿನಿಮಾದ ಚಿತ್ರೀಕರಣ ಮುಗಿಸಿದ್ದು ಎರಡು ಭಾಗಗಳಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಪರಿಮಳ ಲಾಜ್ಡ್ ಚಿತ್ರೀಕರಣ ಹಂತದಲ್ಲದೆ. ಸದ್ಯ ಈ ಎರಡು ಸಿನಿಮಾಗಳು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿವೆ. ಯಾವಾಗ ರಿಲೀಸ್ ಆಗಲಿದೆ ಸಿನಿಪ್ರಿಯರು ಕಾಯುತ್ತಿದ್ದಾರೆ.   

Follow Us:
Download App:
  • android
  • ios