ಖ್ಯಾತ ನಿರ್ದೇಶಕ ಎಸ್. ಮುರಳಿ ಮೋಹನ್ ಅವರು ತೀವ್ರವಾದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಕಸಿ ಶಸ್ತ್ರಚಿಕಿತ್ಸೆಗೆ ಅನುದಾನದ ಅವಶ್ಯಕತೆಯಿದೆ. ಐದಾರು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ತಿಂಗಳಿಗೆ ೩೦ ಸಾವಿರ ವೆಚ್ಚವಾಗುತ್ತಿದ್ದು, ಶಸ್ತ್ರಚಿಕಿತ್ಸೆಗೆ ೩೦-೩೫ ಲಕ್ಷ ರೂ. ಬೇಕಾಗಿದೆ. ಉಪೇಂದ್ರ ಸಹಾಯ ಹಸ್ತ ಚಾಚಿದ್ದು, ಸುದೀಪ್ ಮತ್ತು ಚಿತ್ರರಂಗದಿಂದ ಸಹಾಯ ನಿರೀಕ್ಷಿಸುತ್ತಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಸಂತ, ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಮಲ್ಲಿಕಾರ್ಜುನ, ರಿಯಲ್ ಸ್ಟಾರ್ ಉಪೇಂದ್ರ ನಟನೆಯ ನಾಗರಹಾವು ಸಿನಿಮಾಗಳು ಸಿನಿಪ್ರಿಯರಿಗೆ ಗೊತ್ತು. ಹೀಗೆ ಹಲವು ಸಿನಿಮಾಗಳನ್ನು ಕನ್ನಡ ಚಿತ್ರರಂಗ ಹಾಗೂ ಚಿತ್ರರಸಿಕರಿಗೆ ಕೊಟ್ಟಿರುವವರು ನಿರ್ದೇಶಕರಾದ ಎಸ್ ಮುರಳಿ ಮೋಹನ್ (S Murali Mohan) ಅವರು. ಸತತ 36 ವರ್ಷಗಳು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರೆ, ಸದ್ಯಕ್ಕೆ ಅವರು ತಮ್ಮ ನಿರ್ದೇಶನಮ ನಟನೆ ಹಾಗೂ ಸಂಭಾಷಣೆ ಬರೆಯುವ ವೃತ್ತಿಯಿಂದ ಕೊಂಚ ದೂರವೇ ಉಳಿದಿದ್ದಾರೆ. ಅದಕ್ಕೆ ಕಾರಣ, ಅನಾರೋಗ್ಯ!
ಹೌದು, ಎಸ್ ಮುರಳಿ ಮೋಹನ್ ಅವರು ಕನ್ನಡದ ನಿರ್ದೇಶಕರು, ನಟರು ಹಾಗೂ ಸಂಭಾಷಣೆಕಾರರು. ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿ, ನಟಿಸಿ, ಸಂಭಾಷಣೆ ಬರೆದು, ಸಿನಿಮಾವನ್ನೇ ಉಸಿರಾಗಿಸಿಕೊಂಡವರು. ಅದರೆ, ಈಗ ಅದನ್ನು ಮಾಡುವ ಸ್ಥಿತಿಯಲ್ಲಿ ಅವರಿಲ್ಲ. ಮುರಳಿ ಮೋಹನ್ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡು ನಿರ್ದೇಶನ ನಿಲ್ಲಿಸಿದ್ದಾರೆ. ಕೋವಿಡ್ ಸಮಯದಿಂದಲೇ, ಅಂದರೆ 5-6 ವರ್ಷದಿಂದ ಅವರಿಗೆ ಕಿಡ್ನಿ ಸಮಸ್ಯೆ ಇತ್ತು, ಡಯಾಲಿಸಿಸ್‌ನಲ್ಲಿ ಇದ್ದರು, ಆದರೆ ಈಗ ಅದು ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್‌ಗೆ ಬಂದಿದೆ ಎನ್ನಲಾಗಿದೆ. ಈ ಸಂಗತಿಯೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಡಾರ್ಲಿಂಗ್ ಪ್ರಭಾಸ್ 'ಸ್ಪಿರಿಟ್'ಗೆ ದೀಪಿಕಾ ಪಡುಕೋಣೆ ಸೆಲೆಕ್ಟ್ ಆಗಿರೋ ಕಾರಣ ಬಹಿರಂಗ!
ಈ ಬಗ್ಗೆ ಸಂದರ್ಶನವೊಂದರಲ್ಲಿ ಎಲ್ಲವನ್ನೂ ಹೇಳಿಕೊಂಡಿದ್ದಾರೆ ಎಸ್ ಮುರಳಿ ಮೋಹನ್. 'ನನ್ನ ಆರೋಗ್ಯ ಸರಿಯಾಗಿಲ್ಲ. ಈ ಮೊದಲು ಡಯಾಲಿಸ್ ಮಾಡಿಸಿಕೊಳ್ಳುತ್ತ ಒಂದು ಹಂತದಲ್ಲಿ ಇದ್ದೆ ನಾನು. ಆದರೆ ಈಗ ಅದು ಟ್ರಾನ್ಸ್‌ಪ್ಲಾಂಟೇಶನ್ ಹಂತಕ್ಕೆ ಬಂದಿದೆ. ಈಗ ತಿಂಗಳಿಗೆ 30 ಸಾವಿರ ಖರ್ಚಾಗುತ್ತಿದೆ. ಹೊಸ ಕಿಡ್ನಿ ಹಾಕಿಸಿಕೊಳ್ಳಲು 30-35 ಲಕ್ಷ ಬೇಕು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ನನ್ನಿಂದ ಅದು ಸಾಧ್ಯವಾಗುತ್ತಿಲ್ಲ. ಮೆಡಿಸನ್, ಡಯಾಲಿಸಿಸ್ ಖರ್ಚಿಗೇ ಒದ್ದಾಡುವ ಪರಿಸ್ಥಿತಿ ಇದೆ' ಎಂದಿದ್ದಾರೆ.
ಇನ್ನು, ಯಾರಾದ್ರೂ ಸಹಾಯ ಹಸ್ತ ಚಾಚಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತ 'ನಾವು ವ್ಯಕ್ತಿಗತವಾಗಿ ಯಾರನ್ನೂ ಕೇಳುವುದು ಸರಿಯಲ್ಲ. ಆದರೂ ಕೂಡ ನಟ ಸುದೀಪ್ ಸೇರಿದಂತೆ ಕೆಲವರನ್ನು ಸಂಪರ್ಕಿಸಿದ್ದೇನೆ. ನಟ ಉಪೇಂದ್ರ, ನಟ ಸುದೀಪ್ ಹಾಗೂ ನಾನು ಒಂದು ಕಾಲದಲ್ಲಿ ಜೊತೆಯಲ್ಲಿ ಓಡಾಡಿಕೊಂಡಿದ್ದವರು. ಉಪೇಂದ್ರ ಅವರನ್ನು ಸಂಪರ್ಕಿಸಿ ಸ್ವಲ್ಪ ಸಹಾಯ ಪಡೆದುಕೊಂಡಿದ್ದೇನೆ. ಸದ್ಯ ಸುದೀಪ್ ಸಂಪರ್ಕಿಸುವ ಕೆಲಸ ಮಾಡುತ್ತಿದ್ದೇನೆ. ಆದರೆ, ಈ ಬಗ್ಗೆ ಯಾರನ್ನೂ ದೂಷಿಸುವುದು ಸರಿಯಲ್ಲ. ಏಕೆಂದರೆ, ಇದು ನನ್ನ ಕೆಟ್ಟ ಪರಸ್ಥಿತಿ ಅಷ್ಟೇ. ಅವರು ಸಹಾಯ ಮಾಡಲಿ, ಇವರು ಸಹಾಯ ಮಾಡಲಿ ಎಂದು ಹೇಳುವದು ತಪ್ಪು' ಎಂದಿದ್ದಾರೆ.
ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯೋ ನಟಿಯರ ಪಟ್ಟಿಗೆ ಸೌತ್ ಲೇಡಿ ಸೂಪರ್‌ಸ್ಟಾರ್ ಲಗ್ಗೆ?
ಇನ್ನು, ಇದೇ ಸಮಯದಲ್ಲಿ ಮುರಳಿ ಮೋಹನ್ ಅವರು ಸಮಾನ್ಯವಾಗಿ ಕೇಳಲಾಗುವ ಒಂದು ಪ್ರಶ್ನೆಗೂ ಉತ್ತರ ನೀಡಿದ್ದಾರೆ. 'ಸಿನಿಮಾ ಉದ್ಯಮದಲ್ಲಿ ಅಷ್ಟೊಂದು ವರ್ಷ ಕೆಲಸ ಮಾಡಿಯೂ ಆರ್ಥಿಕ ಸಮಸ್ಯೆ ಮೂಡಿದ್ದು ಹೇಗೆ' ಎಂಬುದಕ್ಕೆ ಉತ್ತರ ನೀಡಿದ್ದಾರೆ. 'ಹೌದು, ಸಿನಿಮಾದಲ್ಲಿ ಉದ್ಯಮದಲ್ಲಿ ಕೆಲಸ ಮಾಡಿದ್ದರೂ, ಎಲ್ಲರೂ ಇಲ್ಲಿ ಹಣ ಮಾಡಲು ಸಾಧ್ಯವಾಗುವುದಿಲ್ಲ. ಕೆಲವೇ ಕೆಲವು ಮಂದಿ ಸಿನಿಮಾಕ್ಷೇತ್ರದಲ್ಲಿ ಹಣ ಮಾಡಲು ಸಾಧ್ಯ. ಅದೇ ಸಿನಿಮಾರಂಗದ ದೊಡ್ಡ ಸಮಸ್ಯೆ. ಜೊತೆಗೆ, ನಾವು ಆಗ ಆರೋಗ್ಯದ ಬಗ್ಗೆ ಕಾಳಜಿಯನ್ನೂ ಸಹ ವಹಿಸುವುದಿಲ್ಲ' ಎಂದಿದ್ದಾರೆ.
ಜೊತೆಗೆ, ಆರೋಗ್ಯದ ಬಗ್ಗೆ ಮಾತನ್ನಾಡುತ್ತ ನಿರ್ದೇಶಕ ಮುರಳಿ ಮೋಹನ್ ಅವರು 'ನಾವು 40-45 ವರ್ಷ ಅಗುವ ಮೊದಲು ಆರೋಗ್ಯದ ಬಗ್ಗೆ ಸ್ವಲ್ಪವೂ ಗಮನಹರಿಸದೇ ಇರೋದು ಮೊದಲ ತಪ್ಪು. ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿ ದಿನಕ್ಕೆ 2 ಗಂಟೆ ಮಾತ್ರ ನಿದ್ದೆ ಮಾಡಿದ್ದೂ ಇದೆ. ವ್ಯಾಯಾಮ, ಆಹಾರ, ಆರೋಗ್ಯ ಯಾವುದರ ಬಗೆಗೂ ಗಮನ ಕೊಡದೇ ಸಿನಿಮಾ ಬಗ್ಗೆಯೇ ಡೆಡಿಕೇಟ್ ಆಗಿ ಇದ್ದು ಬಿಡುತ್ತೇವೆ. ಆದರೆ, ವಯಸ್ಸು 40 ಅಗುತ್ತಿದ್ದಂತೆ ಹೃದಯ ನಾನಿದ್ದೇನೆ ಎನ್ನತೊಡಗುತ್ತದೆ, ಕಿಡ್ನಿ, ಲಿವರ್ ಎಲ್ಲವೂ ಮಾತನ್ನಾಡತೊಡಗುತ್ತವೆ. ನನ್ನನ್ನು ಸರಿಯಾಗಿ ನೋಡಿಕೊಂಡಿಲ್ಲ, ಈಗಲಾದರೂ ನೋಡಿಕೋ ಎನ್ನತೊಡಗುತ್ತದೆ. ಆದರೆ, ಅದು ಗೊತ್ತಾದರೂ ಆರ್ಥಿಕ ಸಮಸ್ಯೆ ಅದಕ್ಕೆ ಅಡ್ಡ ಬರುತ್ತದೆ' ಎಂದಿದ್ದಾರೆ.
ಶುಭಮನ್ ಗಿಲ್-ಅವನೀತ್ ಕೌರ್ ಡೇಟಿಂಗ್ ಗುಸುಗುಸು; ಸಾರಾ ತೆಂಡೂಲ್ಕರ್-ಸಿದ್ಧಾಂತ್ ಚತುರ್ವೇದಿ ವಾಟ್ ನೆಕ್ಸ್ಟ್..?!
ನಿರ್ದೇಶಕ ಮುರಳಿ ಮೋಹನ್ ಹೇಳಿರುವ ಮತ್ತೊಂದು ಸಂಗತಿ ಎಂದರೆ, 'ಕನ್ನಡ ಚಿತ್ರರಂಗ ಹಾಗೂ ಕನ್ನಡ ಸಿನಿಪ್ರೇಕ್ಷಕರು ತುಂಬಾ ಉದಾರಿಗಳು. ನಟ ಸುದೀಪ್ ಸೇರಿದಂತೆ, ಫಿಲಂ ಚೇಂಬರ್‌ಗೆ ಕೂಡ ನನ್ನ ಸದ್ಯದ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದೇನೆ. ಸಹಾಯ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದೇನೆ. ಕಿಡ್ನಿಯನ್ನು ಇವತ್ತೇ ಬದಲಾಯಿಸಿಕೊಂಡರೂ ಒಳ್ಳೆಯದು ಎಂದ ಸ್ಥಿತಿಯಲ್ಲಿ ಸದ್ಯ ನಾನಿದ್ದೇನೆ. ಆದರೆ, ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ ಇರೋದ್ರಿಂದ, ಅದು ಅರೇಂಜ್ ಆದ ತಕ್ಷಣ ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್‌ಗೆ ಒಳಗಾಗಲಿದ್ದೇನೆ' ಎಂದಿದ್ದಾರೆ. ಕಾಲ ಅವರಿಗೆ ಕಾಸಿನ ಸಹಾಯ ಸಿಗುವಂತೆ ಮಾಡಬಹುದೇ? 'ಹೌದು' ಎಂಬ ನಿರೀಕ್ಷೆ ಅವರಲ್ಲಿ ಮನೆ ಮಾಡಿದೆ.
ಸಹಾಯ ಮಾಡಲು ಇಚ್ಚಿಸುವವರು:
UCO Bank ..
( KR Road Branch , Bangalore , Karnataka,India )
Name : Murali S
Ac number : 1641011025178
IFSC : UCBA0001641
Swift code : UCBAINBB306


