ದೀಪಿಕಾ ಪಡುಕೋಣೆ, ಪ್ರಭಾಸ್ ಜೊತೆ ಸಂದೀಪ್ ವಂಗಾ ನಿರ್ದೇಶನದ 'ಸ್ಪಿರಿಟ್' ಚಿತ್ರದಲ್ಲಿ ನಟಿಸಲಿದ್ದಾರೆ. 'ಕಲ್ಕಿ 2898 AD' ನಂತರ ಇದು ಅವರ ಎರಡನೇ ಸಹಯೋಗ. ಪ್ರಮುಖ ಪಾತ್ರದಿಂದ ಆಕರ್ಷಿತರಾದ ದೀಪಿಕಾ, ಆಯ್ದ ಚಿತ್ರಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ. ಖಿನ್ನತೆಯ ಅನುಭವ ಹಂಚಿಕೊಂಡ ದೀಪಿಕಾ, ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ನಟಿ ದೀಪಿಕಾ ಪಡುಕೋಣೆ (Deepika Padukone) ಅವರೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅವರೀಗ ಹೊಚ್ಚಹೊಸ ಪ್ರಾಜೆಕ್ಟ್ ಒಂದಕ್ಕೆ ಸಹಿ ಮಾಡಿದ್ದಾರೆ. ನಟ ಶಾರುಖ್ ಖಾನ್ ಜೊತೆ ಇತ್ತೀಚೆಗೆ ಕಿಂಗ್ ಸಿನಿಮಾದಲ್ಲಿ ನಟಿಸಿದ ಬಳಿಕ, ನಟಿ ದೀಪಿಕಾ ಪಡುಕೋಣೆ ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರೊಂದಿಗೆ ನಟಿಸಲು ಸಹಿ ಮಾಡಿದ್ದಾರೆ. ಈ ಮೊದಲು, ಡಾರ್ಲಿಂಗ್ ಪ್ರಭಾಸ್ ಜೊತೆ 'ಕಲ್ಕಿ 2898AD' ಸಿನಿಮಾದಲ್ಲಿ ನಟಿಸಿದ್ದ ದೀಪಿಕಾ ಅವರು ಈಗ ಮತ್ತೆ ಅದೇ ಸಂದೀಪ್ ವಂಗಾ ಹಾಗೂ ಪ್ರಭಾಸ್ ಜೊತೆ ಸ್ಪಿರಿಟ್ (Siprit) ಸಿನಿಮಾದಲ್ಲಿ ಮತ್ತೆ ಕೆಲಸ ಮಾಡಲಿದ್ದಾರೆ. ಈ ಮೂಲಕ ನಟಿ ದೀಪಿಕಾ ಅವರು ಅದೇ ಟೀಮ್ ಜೊತೆ ಮತ್ತೆ ಕೆಲಸ ಮಾಡಲಿದ್ದಾರೆ.
ಸಂದೀಪ್ ವಂಗಾ ಅವರ ಮುಂಬರುವ ಪ್ರಾಜೆಕ್ಟ್‌ನಲ್ಲಿ ಕಥೆಯಲ್ಲಿ ನಾಯಕಿಗೆ ತುಂಬಾ ಪ್ರಾಮುಖ್ಯತೆ ಇದೆಯಂತೆ. ಚಿತ್ರಕಥೆಯನ್ನು ಕೇಳಿದ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಪಾತ್ರದ ಮಾಹಿತಿ ಹಾಗೂ ಪ್ರಾಮುಖ್ಯತೆ ನೋಡಿ ಈ ಸಿನಿಮಾ ಮಾಡಲು ತುಂಬಾ ಉತ್ಸುಕತೆ ತೋರಿಸುತ್ತಿದ್ದಾರೆ ಎನ್ನಲಾಗಿದೆ. ಯಾವಾಗ ಶುರುವಾಗುತ್ತೆ, ಆ ಸಿನಿಮಾದಲ್ಲಿ ಮಿಕ್ಕಂತೆ ಯಾರೆಲ್ಲಾ ಇದಾರೆ ಅನ್ನೋ ಮಾಹಿತಿ ಇನ್ನಷ್ಟೇ ರಿವೀಲ್ ಆಗಬೇಕಿದೆ. ಒಟ್ಟಿನಲ್ಲಿ, ಸಂದೀಪ್ ವಂಗಾ ಅವರು ಮತ್ತೆ ಆ ಪ್ರಾಜೆಕ್ಟ್‌ಗೆ ದೀಪಿಕಾ ಅವರನ್ನೇ ಸೆಲೆಕ್ಸ್ ಮಾಡಲು ಕಾರಣ ಕೂಡ ಬಹಿರಂಗವಾಗಿದೆ. ನಟಿ ದೀಪಿಕಾ ಅವರು ಆ ಪಾತ್ರಕ್ಕೆ ಸ್ಯೂಟ್ ಆಗುತ್ತಾರೆ ಎನ್ನುವುದೇ ಅದಕ್ಕೆ ಬಹುಮುಖ್ಯ ಕಾರಣ ಎನ್ನಲಾಗಿದೆ.
ಮಗಳು ಹುಟ್ಟಿದ ಮೇಲೆ ಬಾಲಿವುಡ್‌ಗೆ ದೀಪಿಕಾ ಪಡುಕೋಣೆ ರೀ ಎಂಟ್ರಿ
ನಟಿ ದೀಪಿಕಾ ಪಡುಕೋಣೆ ಕೂಡ ಈಗ ಮೊದಲಿಗಿಂತ ಹೆಚ್ಚು ಚೂಸಿ ಆಗಿದ್ದಾರೆ. ಅಳೆದು ತೂಗಿ ಪಾತ್ರ ಇಷ್ಟವಾದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಕಾರಣ, ಸಿನಿಮಾ ನಟನೆಗೆ ಬಂದ ಪ್ರಾರಂಭದಲ್ಲಿ ಆಯ್ಕೆಗೆ ಅವಕಾಶ ಇರಲಿಲ್ಲ. ಬಂದ ಸಿನಿಮಾಗಳನ್ನೆಲ್ಲಾ ಒಪ್ಪಿಕೊಂಡು ಮಾಡುವ ಅನಿವಾರ್ಯತೆ ಇರುತ್ತಿತ್ತು. ಆದರೆ ಈಗ ಹಾಗಲ್ಲ, ಇಷ್ಟವಾದರೆ ಮಾತ್ರ ಒಪ್ಪಿಕೊಂಡು ಮಾಡುವ ಹಂತಕ್ಕೆ ಬೆಳೆದಿದ್ದಾರೆ. ಸದ್ಯ ಅವರು ನಟ ಶಾರುಖ್ ಖಾನ್ ಹಾಗೂ ಪ್ರಭಾಸ್ ಜೋಡಿಯಾಗಿ ಮಾತ್ರ ಸಿನಿಮಾ ಮಾಡುವ ಹಂತಕ್ಕೆ ಬಂದಿದ್ದಾರೆ.
ಮಗಳು ಹುಟ್ಟಿದ ಮೇಲೆ ಸಿನಿಮಾ ನಟನೆಯಿಂದ ಸ್ವಲ್ಪ ಬಿಡುವು ಪಡೆದಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಇದೀಗ ಮತ್ತೆ ಶಾರೂಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ. ಈ ಕುರಿತ ಅಧಿಕೃತ ಹೇಳಿಕೆ ಇನ್ನಷ್ಟೇ ಹೊರಬೀಳಬೇಕಿದೆ. ಆದರೆ ಈ ಚಿತ್ರಕ್ಕಾಗಿ ದೀಪಿಕಾ ಮತ್ತೆ ಜಿಮ್‌ನಲ್ಲಿ ಬೆವರಿಳಿಸಿ ಫಿಟ್‌ನೆಸ್ ಕಡೆ ಗಮನ ನೀಡುತ್ತಿದ್ದಾರೆ.ಮೇ 18ರಿಂದ ಈ ಸಿನಿಮಾದ ಶೂಟಿಂಗ್ ಶುರುವಾದರೂ ನಟಿ ದೀಪಿಕಾ ಜೂನ್ ಬಳಿಕ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾ 2026ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಶುಭಮನ್ ಗಿಲ್-ಅವನೀತ್ ಕೌರ್ ಡೇಟಿಂಗ್ ಗುಸುಗುಸು; ಸಾರಾ ತೆಂಡೂಲ್ಕರ್-ಸಿದ್ಧಾಂತ್ ಚತುರ್ವೇದಿ ವಾಟ್ ನೆಕ್ಸ್ಟ್..?!
ಖಿನ್ನತೆಗೆ ತುತ್ತಾದಾಗ ಜೀವನ ಸಾಕೆನ್ನಿಸಿತ್ತು:
ಇನ್ನು, 'ಬೋರ್ಡ್ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸುವ ಸಂಭಾಷಣೆ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಮಾತನಾಡಿದ್ದಾರೆ. 2015ರಲ್ಲಿ ನಾನು ಖಿನ್ನತೆಗೆ ಒಳಗಾಗಿದ್ದಾಗ ಅದರ ಕುರಿತು ಮಾತನಾಡುವುದಕ್ಕೆ ಅವಕಾಶವಿರಲಿಲ್ಲ. ಆದರೆ ಮನಬಿಚ್ಚಿ ಮಾತನಾಡಲು ತೊಡಗಿಕೊಂಡಾಗ ನಾನು ಹಗುರಳಾಗುತ್ತಿದ್ದೆ. ಅಲ್ಲಿಂದ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ನಾನು ಶುರು ಮಾಡಿದೆ' ಎಂದು ಹೇಳಿದರು.
ಖಿನ್ನತೆಯನ್ನು ಎದುರಿಸುವ ಬಗೆಯನ್ನು ತಮ್ಮ ಅನುಭವದೊಂದಿಗೆ ವಿವರಿಸಿದ ನಟಿ ದೀಪಿಕಾ, ಪ್ರಧಾನಿ ಮೋದಿಯವರ 'ಎಕ್ಸಾಂ ವಾರಿಯರ್ಸ್' ಪುಸ್ತಕದಲ್ಲಿ ಹೇಳಿರುವಂತೆ ಭಾವನೆಗಳನ್ನು ನಿಗ್ರಹಿಸುವ ಬದಲು ವ್ಯಕ್ತಪಡಿಸಬೇಕು. 2014ರಲ್ಲಿ ನಿರಂತರವಾಗಿ ಕೆಲಸದಲ್ಲಿ ತೊಡಗಿದ್ದ ನಾನು ಇದ್ದಕ್ಕಿದ್ದಂತೆ ಒಂದು ದಿನ ಪ್ರಜ್ಞಾಹೀನಳಾದೆ.
ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯೋ ನಟಿಯರ ಪಟ್ಟಿಗೆ ಸೌತ್ ಲೇಡಿ ಸೂಪರ್‌ಸ್ಟಾರ್ ಲಗ್ಗೆ?
ಆಗ ನನ್ನ ತಾಯಿಗೆ ನನ್ನಲ್ಲಿ ಏನೋ ಸಮಸ್ಯೆ ಇರುವುದು ತಿಳಿಯಿತು. ಆ ಬಗ್ಗೆ ವಿಚಾರಿಸಿದಾಗ 'ನನಗೆ ಏನಾಗುತ್ತಿತ್ತೆಂದು ತಿಳಿಯದೆ, ಜೀವನ ಸಾಕೆನಿಸುತ್ತಿದೆ' ಎಂದೆ. ಆಗ ಅವರು ನನ್ನನ್ನು ಮನಶ್ಶಾಸ್ತ್ರಜ್ಞರ ಬಳಿ ಕರೆದೊಯ್ದರು ಎಂದರು. ನಟಿ ದೀಪಿಕಾ ಅವರು ಈಗ ಖಿನ್ನತೆ ಹಾಗೂ ಅದರಿಂದ ಹೊರಬರುವ ಬಗ್ಗೆ ಸಾಕಷ್ಟು ಜಾಗ್ರತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ದೀಪಿಕಾ ಪಡುಕೋಣೆ.


