ಸ್ಯಾಂಡಲ್‌ವುಡ್‌ ಕ್ರಿಯೇಟಿವ್ ನಿರ್ದೇಶಕ ಪವನ್ ಕುಮಾರ್ ಕೆಲವು ದಿನಗಳ ಹಿಂದೆ ಪುತ್ರಿ ಜೊತೆ ತುಂಟಾಟ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. 'ಲಾಕ್‌ಡೌನ್‌ ಸಮಯದಲ್ಲಿ ನಮ್ಮ ಮಕ್ಕಳ ಜೊತೆ  ಕಿತ್ತಾಟ ತುಂಟಾಟ ಮಾಡಲು ಒಂದು ಉಪಾಯ' ಎಂದು ಬರೆದುಕೊಂಡಿದ್ದಾರೆ.

ಮ್ಯಾಗ್ನೆಟ್ ಬ್ಲಾಕ್‌ಗಳಲ್ಲಿ ಮನೆ ಕಟ್ಟುವುದು ಹೇಗೆ ಎಂದು ಪವನ್ ಪುತ್ರಿ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿರುತ್ತಾಳೆ. ಈ ವೇಳೆ ಹಿಂದೆಯಿಂದ ಪವನ್ ಡ್ಯಾನ್ಸ್ ಮಾಡಿಕೊಂಡು ಕ್ಯಾಮೆರಾದಲ್ಲಿ ಕಾಣಿಸಿಕೊಳ್ಳುತ್ತಾರೆ, ಆನಂತರ ಪತ್ನಿ ಸೌಮ್ಯಾ ಕೂಡ ಭರತನಾಟ್ಯ ಮಾಡುತ್ತಾ ಕ್ಯಾಮೆರಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ನನ್ನ ಪೋಷಕರು ನನ್ನ ಹಾಗೆ ಸ್ವಲ್ಪ ಕ್ರೇಜಿ ತಲೆ ಕೆಡಿಸಿಕೊಳ್ಳಬೇಡಿ ಎಂದು ಪುತ್ರಿ ಒಮ್ಮೆ ರೆಕಾರ್ಡ್ ಆಗುತ್ತಿರುವ ವಿಡಿಯೋದಲ್ಲಿ ಹೇಳುತ್ತಾಳೆ. ಆದರೂ ಇಬ್ಬರು ಒಟ್ಟಿಗೆ ಪದೇ ಪದೇ ಕಾಣಿಸಿಕೊಂಡ ಕಾರಣ ಸಿಟ್ಟು ಮಾಡಿಕೊಂಡು ಕೂಗಾಡುತ್ತಾಳೆ. 

ಹೊಂಬಾಳೆಯೊಂದಿಗೆ ಜತೆಯಾದ ಪುನೀತ್ ಮತ್ತು ಪವನ್.. ಹೊಸ ನಿರೀಕ್ಷೆ!

ಈ ವಿಡಿಯೋ ನೋಡಲು ತುಂಬಾನೇ ಫನ್ನಿಯಾಗಿದ್ದರೂ ಪೋಷಕರು ಮತ್ತು ಮಕ್ಕಳ ನಡುವೆ ಇಂತಹ ಸ್ವಾರಸ್ಯಕರ ಸಂಗತಿಗಳು ಆಗಾಗ ಇರಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.  ಪವನ್ ಪತ್ನಿ ಸೌಮ್ಯಾ ನೃತ್ಯಗಾತಿ. ಲಾಕ್‌ಡೌನ್‌ ಸಮಯದಲ್ಲಿ ಮಗಳಿಗೆ ಭರತನಾಟ್ಯ ಕಲಿಸುತ್ತಿರುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಒಟ್ಟಿನಲ್ಲಿ ಕ್ರಿಯೇಟಿವ್ ಡೈರೆಕ್ಟರ್‌ ಮನೆಯಲ್ಲಿ ತುಂಟಾಟ ಜೋರಾಗಿದೆ..