ಒಂದು ಕಾಲದಲ್ಲಿ ಏಪ್ರಿಲ್ ಫೋಲ್‌ ಎಂದು ಹೇಳಿಕೊಂಡು ಸ್ನೇಹಿತರು, ಬಂಧುಗಳನ್ನು ಫೂಲ್ ಮಾಡಿಕೊಂಡು ತಿರುಗುವುದು ದೊಡ್ಡ ಸಂಭ್ರಮವಾಗಿತ್ತು. ಈಗ ಆ ಖುಷಿ ನಿಧಾನಕ್ಕೆ ಮರೆಯಾಗುತ್ತಿದೆ. ಇಂಟರ್‌ನೆಟ್‌ ಕಾಲದಲ್ಲಿ ಎಲ್ಲರೂ ಯಾವ್ಯಾವುದೋ ಕಾರಣಗಳಿಂದ ಪ್ರತೀನಿತ್ಯ ಫೂಲ್ ಆಗುವ ಸಾಧತೆಗಳೇ ಹೆಚ್ಚಿಗೆ ಇರುವುದರಿಂದ ಮತ್ತೆ ಹೊಸತಾಗಿ ಫೂಲ್ ಮಾಡಲು ಏನೂ ಇಲ್ಲ ಅನ್ನುವುದು ಇದರ ತಾತ್ಪರ್ಯವಾಗಿರಬಹುದು. ಸಂದರ್ಭ ಹೀಗಿರುವಾಗ 10 ಮಂದಿ ಸೆಲೆಬ್ರಿಟಿಳು ತಾವು ಫೂಲ್ ಆದ ಅಥವಾ ಫೂಲ್ ಮಾಡಿದ ಕತೆಗಳನ್ನು ಹಂಚಿಕೊಂಡಿದ್ದಾರೆ. ಈ ಕತೆಗಳನ್ನು ಓದಿ ನೀವು ಯಾರನ್ನಾದರೂ ಫೂಲ್ ಮಾಡಿ ಅಥವಾ ಫೂಲ್ ಮಾಡಿದ ಹಳೆ ಕಥೆ ನೆನಪಿಸಿಕೊಳ್ಳಿ.

ಕ್ಲಾಸ್‌ಮೇಟ್‌ಗಳನ್ನು ಯಾಮಾರಿಸಿದ ಪ್ರಸಂಗ

- ಗೋಲ್ಡನ್‌ಸ್ಟಾರ್‌ ಗಣೇಶ್‌

ನಾನು ಫäಲ್‌ ಮಾಡಿದ್ದು ಅಥವಾ ಫäಲ್‌ ಆಗಿದ್ದು ಕಡಿಮೆ. ಆದರೂ ಏಪ್ರಿಲ್‌ 1 ಎಂದಾಗ ಈಗಲೂ ನೆನಪಾಗುವುದು ನಮ್ಮ ಕಾಲೇಜಿನಲ್ಲಿ ನಡೆದ ಆ ಘಟನೆ. ಎಲ್ಲರು ಫäಲ್‌ ಆದ ಮೇಲೆ ಇವತ್ತು ಏಪ್ರಿಲ್‌ 1 ಅಂತ ಹೇಳುತ್ತಾರೆ. ನಾನು ಏಪ್ರಿಲ್‌ 1 ಅಂತ ಹೇಳಿಯೇ ಫäಲ್‌ ಮಾಡಿದ್ದೆ.

ಒಂದು ದಿನ ಇನ್ನೇನು ತರಗತಿಗಳು ಶುರುವಾಗಬೇಕು. ಆಗ ನಮ್ಮ ಕ್ಲಾಸ್‌ಗೆ ಹೋಗಿ ಇವತ್ತು ಮೇಸ್ಟು್ರ ಬಂದಿಲ್ಲ. ಯಾಕೆಂದರೆ ಅವರ ಮನೆಯಲ್ಲಿ ಏಪ್ರಿಲ್‌ 1ರಂದು ವಿಶೇಷ ಪೂಜೆ ಇದೆಯಂತೆ. ಹೀಗಾಗಿ ಇವತ್ತಿನ ಕ್ಲಾಸ್‌ ಇಲ್ಲ ಅಂತ ಹೇಳಿದ್ದೆ. ಎಲ್ಲರೂ ಕ್ಲಾಸ್‌ನಿಂದ ಹೊರಗೆ ಬಂದು ಮನೆಗಳಿಗೆ ತೆರಳಬೇಕು. ಆಗ ಕ್ಲಾಸ್‌ ಮೇಸ್ಟು್ರ ಎದುರಿಗೆ ಬಂದರು. ಏಪ್ರಿಲ್‌ ಫäಲ್‌ ಆದ ಸತ್ಯ ಆಗಲೇ ಎಲ್ಲರಿಗೂ ಗೊತ್ತಾಗಿದ್ದು. ಅವತ್ತು ಮೇಸ್ಟು್ರ ಸ್ವಲ್ಪ ತಡವಾಗಿ ಬಂದಿದ್ದರೂ ಕ್ಲಾಸ್‌ ಪೂರ್ತಿ ಖಾಲಿ ಆಗಿರೋದು. ಆದರೂ ಏಪ್ರಿಲ್‌ 1ನೇ ತಾರೀಕು ಅಂತ ಹೇಳಿಯೇ ಇಡೀ ತರಗತಿಯನ್ನೇ ಫäಲ್‌ ಮಾಡಿದ್ದು ನನಗೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ.

ಆ ಪ್ರಮೋದ್‌ ಬೇರೆ, ಈ ಪ್ರಮೋದ್‌ ಬೇರೆ!

- ಪ್ರಮೋದ್‌

ಚಿತ್ರರಂಗಕ್ಕೆ ಬರುವ ಆರಂಭದ ದಿನಗಳಲ್ಲೇ ಪೆದ್ದನಾಗಿದ್ದ ಘಟನೆಯೊಂದು ಈಗಲೂ ನೆನಪಿನಲ್ಲಿದೆ. ಆಗ ಮ್ಯೂಸಿಕ್‌ ಚಾನಲ್‌ಗಳ ಹವಾ. ಯಾವುದಾದರೂ ಮ್ಯೂಸಿಕ್‌ ಚಾನಲ್‌ನಲ್ಲಿ ಆ್ಯಂಕರ್‌ ಆದರೆ ಹೀರೋ ಆಗಬಹುದು ಎನ್ನುವ ನಂಬಿಕೆ. ಇದಕ್ಕೆ ಕಾರಣ ಆಗಷ್ಟೆಹೀರೋ ಆಗಿ ಮಿಂಚುತ್ತಿದ್ದ ಗೋಲ್ಡನ್‌ಸ್ಟಾರ್‌ ಗಣೇಶ್‌. ಆ್ಯಂಕರ್‌ ಆಗಿ ಹೀರೋ ಆದವರು. ಹೀಗಾಗಿ ಅವರನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಆಡಿಷನ್‌ ಕೊಡುವುದಕ್ಕೆ ಹೋಗಿದ್ದೆ. ಒಮ್ಮೆ ಮ್ಯೂಸಿಕ್‌ ಚಾನಲ್‌ಗೆ ಹೋಗಿ ಆಡಿಷನ್‌ ಕೊಟ್ಟು ಬಂದಿದ್ದೆ. ಕೆಲ ದಿನಗಳ ನಂತರ ಅವರೇ ಫೋನ್‌ ಮಾಡಿ ಕರೆದರು. ಆಯ್ಕೆ ಮಾಡಿಕೊಳ್ಳುವಾಗಲೂ ಒಂದು ಆ್ಯಂಕರ್‌ ಬೀಟ್‌ ಹೇಳಬೇಕು ಅಂದಿದ್ದರು. ನಾನು ವೀರಪ್ಪನ್‌ ಬಗ್ಗೆ ಬರೆದುಕೊಂಡು ಹೋಗಿದ್ದೆ. ಆಡಿಷನ್‌ ಜಾಗಕ್ಕೆ ಹೋದಾಗ ಪ್ರಮೋದ್‌ ಎಲ್ಲಿ ಎಂದು ಕೂಗುತ್ತಿದ್ದಾಗ ನಾನು ಎದ್ದು ನಿಂತೆ. ‘ನೀವಾ..! ಪ್ರಮೋದ್‌ ನೀವಲ್ಲಾರಿ. ಬೇರೆ ಪ್ರಮೋದ್‌’ ಅಂದುಬಿಟ್ಟರು. ನಾನು ಪೆಚ್ಚು ಮೋರೆ ಹಾಕಿದೆ. ಅಲ್ಲಿದ್ದವರು ಒಬ್ಬರು, ‘ಅಯ್ಯೋ ನಾವು ಬೇರೆ ಪ್ರಮೋದ್‌ಗೆ ಕಾಲ್‌ ಮಾಡಕ್ಕೆ ಹೋಗಿ ನಿಮಗೆ ಮಾಡಿದ್ದೇವೆ’ ಎಂದರು . ಛೇ ಏನಿದು ಎಂದುಕೊಂಡು ಅಲ್ಲಿಂದ ವಾಪಸ್ಸು ಬಂದು ನನ್ನ ಸ್ನೇಹಿತರಿಗೆ ಹೇಳಿದೆ. ಅವರು ‘ಲೋ, ಇವತ್ತು ಏಪ್ರಿಲ್‌ 1 ಕಣೋ’ ಅಂದರು. ಹಾಗೆ ನಾನು ಕಾಕತಾಳೀಯವಾಗಿ ಫäಲ್‌ ಆಗಿದ್ದೆ.

April 1st : ಏಪ್ರಿಲ್ ಫೂಲ್ ಎಂದು ಕೂಗುವ ಮೊದಲು ಇತಿಹಾಸ ತಿಳ್ಕೊಳ್ಳಿ

ಒಪ್ಪಿದ್ರೆ ವ್ಯಾಲೆಂಟೈನ್ಸ್‌ ಡೇ, ಇಲ್ಲಾಂದ್ರೆ Fool ಡೇ

- ಶ್ರೀನಿ

ನಾನು ಏಪ್ರಿಲ್‌ ಫäಲ್‌ ಮಾಡಿದ್ದು ಅಥವಾ ನಾನೇ ಫäಲ್‌ ಆಗಿದ್ದಕ್ಕಿಂತ ಹೆಚ್ಚಾಗಿ ಏಪ್ರಿಲ್‌ 1ನೇ ತಾರೀಖನ್ನು ಪ್ರೇಮಿಗಳ ದಿನವನ್ನಾಗಿ ಬದಲಾಯಿಸುತ್ತಿದ್ದೆವು. ಇದು ಕಾಲೇಜು ದಿನಗಳಲ್ಲಿ ಮಾಡುತ್ತಿದ್ದ ತರಲೆ. ಹುಡುಗಿಯರಿಗೆ ಪ್ರಪೋಸ್‌ ಮಾಡಿದಾಗ ರಿಜೆಕ್ಟ್ ಮಾಡುತ್ತಾರೆ. ಹೀಗೆ ರಿಜೆಕ್ಟ್ ಆದರೂ ನಾವು ಬಕರಾ ಆಗಿಲ್ಲ ಅಂತ ತೋರಿಸಿಕೊಳ್ಳುವುದಕ್ಕೆ ನಾವು ಏಪ್ರಿಲ್‌ 1ನೇ ದಿನಾಂಕದಂದು ಹುಡುಗಿಯರಿಗೆ ಪ್ರಪೋಸ್‌ ಮಾಡುತ್ತಿದ್ದೆವು. ಒಂದು ವೇಳೆ ಹುಡುಗಿ ಒಪ್ಪಿದರೆ ಹ್ಯಾಪಿ ವಾಲೆಂಟೈನ್ಸ್‌ ಡೇ. ಒಪ್ಪಿಲ್ಲ ಅಂದರೆ, ‘ಅಯ್ಯೋ ಇದು ಏಪ್ರಿಲ್‌ 1. ಫäಲ್‌ ಮಾಡಕ್ಕೆ ಪ್ರಪೋಸ್‌ ಮಾಡಿದ್ವಿ’ ಎಂದು ಹೇಳಿ ಬಚಾವ್‌ ಆಗುತ್ತಿದ್ದೆವು. ಫೆಬ್ರವರಿ 14ರಂದು ತಾವು ಇಷ್ಟಪಟ್ಟಹುಡುಗಿಯರಿಗೆ ಯಾರೆಲ್ಲ ಪ್ರಪೋಸ್‌ ಮಾಡಲು ಆಗುತ್ತಿರಲಿಲ್ಲವೋ ಅವರೆಲ್ಲ ಏಪ್ರಿಲ್‌ 1ರವರೆಗೂ ಕಾದು ಇಂಥ ಪ್ರಪೋಸಲ್‌ ಬೆಟ್ಟಿಂಗ್‌ ಆಡುತ್ತಿದ್ದೆವು. ನಾನೇ ಈ ಐಡಿಯಾ ಕೊಟ್ಟಿದ್ದರಿಂದ ನಾನು ಯಾರ ಮೇಲೂ ಪ್ರಯೋಗ ಮಾಡಿಲ್ಲ ಎಂಬುದು ಜೋಕ್‌ ಅಲ್ಲ.

ನನ್ನ ಅಕ್ಕನೇ ನನಗೆ ಟಾರ್ಗೆಟ್‌

- ರಿಷಿ

ಕಾಲೇಜಿಗೆ ಹೋಗುವ ಹೊತ್ತಿಗೆ ಏಪ್ರಿಲ್‌ ಫäಲ್‌ ಬಗ್ಗೆ ಇದ್ದ ಕ್ರೇಜ್‌ ಕಡಿಮೆ ಆಗಿತ್ತು. ಜೋಕ್‌, ಫäಲ್‌ ಅಥವಾ ರಾರ‍ಯಗಿಂಗ್‌ ಮಾಡಿದರೆ ಯಾರಿಗಾದರೂ ಬೇಸರ ಆಗುತ್ತದೆ ಎಂದು ಮೆಚ್ಯೂರ್ಡ್‌ ಆಗಿ ಯೋಚಿಸುತ್ತಿದ್ದೆ. ಆದರೆ, ಶಾಲಾ ದಿನಗಳಲ್ಲಿ ಫäಲ್‌ ಮಾಡಿದ್ದೇನೆ. ಬಕರಾ ಮಾಡಿದ್ದಾನೆ. ಅದು ನನ್ನ ಅಕ್ಕನನ್ನು. ಏಪ್ರಿಲ್‌ 1ರ ಫäಲ್‌ ಡೇಗೆ ಹೆಚ್ಚಾಗಿ ಗುರಿಯಾಗುತ್ತಿದ್ದದು ನನ್ನ ಅಕ್ಕ. ಶಾಲೆಯಲ್ಲಿ ಇದ್ದಾಗ ನಾನು ಆಕೆಯನ್ನು ಹೆಚ್ಚು ಬಕರಾ ಮಾಡಿದ್ದೇನೆ. ತೀರಾ ಚಿಕ್ಕಂದಿನಲ್ಲಿ ಹೀಗೆ ಫäಲ್‌ ಮಾಡುತ್ತಿದ್ದರಿಂದ ನಿರ್ದಿಷ್ಟವಾದ ಘಟನೆಗಳು ನೆನಪಿಲ್ಲ. ಶಾಲೆಗೆ ಹೋಗುವಾಗ ಆಕೆ ಜಾಮೆಟ್ರಿ ಬಾಕ್ಸ್‌ನಲ್ಲಿ ಎಲ್ಲಾ ಪೆನ್ಸಿಲ್‌ಗಳನ್ನು ಕದ್ದು ಖಾಲಿ ಬಾಕ್ಸ್‌ ಇಟ್ಟು, ಪೆನ್ಸಿಲ್‌ಗಳು ಮಾಯ ಆಗಿವೆ ಎಂದು ಆಟ ಆಡಿಸುತ್ತಿದ್ದೆ. ಒಮ್ಮೊಮ್ಮೆ ಅವಳಿಗಿಂತ ಮುಂಚೆಯೇ ಶಾಲೆಗೆ ಹೋದವನಂತೆ ಹೋಗಿ, ಇವತ್ತು ಶಾಲೆ ಇಲ್ಲ ಎಂದು ಮನೆಗೆ ವಾಪಸ್ಸು ಬಂದು ಹೇಳುತ್ತಿದ್ದೆ. ಇಂಥ ಫäಲ್‌ ಆಟಗಳು ಶಾಲೆಗಳಲ್ಲಿ ಮಾತ್ರ ಇತ್ತು. ಆಮೇಲೆ ಕಡಿಮೆ ಆಯಿತು.

ಕಳ್ಳೆತ್ತಾ? ಜೋಡೆತ್ತಾ? ಉಸಾಬರಿಯೇ ಬೇಡ; ನಕ್ಕು ಹಗುರಾಗಿ!

Fool ಆದ ಶ್ರೀಲೀಲಾ

- ಧನ್ವೀರ್‌

ಕಾಲೇಜು ದಿನಗಳಲ್ಲಿ ನಾನು ಬೇರೆಯವರನ್ನು ಹೆಚ್ಚು ಫäಲ್‌ ಮಾಡಿ ಮಜಾ ತೆಗೆದುಕೊಳ್ಳುತ್ತಿದ್ದೆ. ಆದರೆ, ಚಿತ್ರರಂಗಕ್ಕೆ ಬಂದಾಗ ನನ್ನ ಫäಲ್‌ ಮಾಡಿದವರೇ ಹೆಚ್ಚು. ಆದರೆ ಒಮ್ಮೆ ನಾನೇ ಒಬ್ಬರನ್ನು ಫäಲ್‌ ಮಾಡಿ ಮಜಾ ತೆಗೆದುಕೊಂಡಿದ್ದೇನೆ. ಅದು ‘ಬೈಟು ಲವ್‌’ ಚಿತ್ರದ ಬಿಡುಗಡೆಯ ಹೊತ್ತಿನಲ್ಲಿ. ನಾನು ಹುಡುಗಿ ವಾಯ್‌್ಸನಲ್ಲಿ ತುಂಬಾ ಚೆನ್ನಾಗಿ ಮಾತನಾಡುತ್ತೇನೆ. ಚಿತ್ರದ ಪ್ರಚಾರದ ಭಾಗವಾಗಿ ನಟಿ ಶ್ರೀಲೀಲಾ ಅವರು ವಾಹಿನಿಯೊಂದರಲ್ಲಿ ಸಂದರ್ಶನ ಕೊಡುತ್ತಿದ್ದರು. ಆಗ ವಾಹಿನಿ ಕಡೆಯಿಂದ ನನಗೆ ಫೋನ್‌ ಮಾಡಿದರು. ನಾನು ಹುಡುಗಿ ವಾಯ್‌್ಸನಲ್ಲಿ ಶ್ರೀಲೀಲಾ ಜತೆ ಮಾತನಾಡುತ್ತಾ, ‘ನಾನು ನಿಮ್ಮ ಅಭಿಮಾನಿ. ನೀವು ನೋಡಕ್ಕೆ ಸೂಪರ್‌, ನಿಮ್ಮ ಸಿನಿಮಾಗಾಗಿ ಕಾಯುತ್ತಿದ್ದೇನೆ’ ಎಂದೆಲ್ಲ ಹೊಗಳಿ ಬಿಲ್ಡಪ್‌ ಕೊಡುತ್ತಿದ್ದರೆ ಶ್ರೀಲೀಲಾ ಅವರು ಓ ಹೌದಾ, ಥ್ಯಾಂಕ್ಯೂ ಎನ್ನುತ್ತಿದ್ದರು. ನನ್ನ ಮಾತುಗಳು ಮತ್ತಷ್ಟುಮುಂದುವರಿದಾಗ ಇದು ಪ್ರಾಂಕ್‌ ಕಾಲ್‌, ಆ ಕಾಲ್‌ ಮಾಡುತ್ತಿರುವುದು ನಾನೇ ಅಂತ ಗೊತ್ತಾಯಿತು.

ಗಂಭೀರವಾಗಿರುವವರಿಗೆ ಪ್ರಾಂಕ್‌ ಮಾಡೋದೇ ಮಜಾ

- ಆರೋಹಿ ನಾರಾಯಣ್‌

ಈಗೆಲ್ಲ ಏಪ್ರಿಲ್‌ 1ಕ್ಕೆ ಫäಲ್‌ ಮಾಡೋದು ನನ್ನ ಗಮನಕ್ಕೆ ಬಂದಿಲ್ಲ. ನಾವೆಲ್ಲ ಸ್ಕೂಲು, ಕಾಲೇಜಿನಲ್ಲಿದ್ದ ದಿನಗಳಲ್ಲಿ ಇದೆಲ್ಲ ಕಾಮನ್‌ ಆಗಿತ್ತು. ಎಷ್ಟೋ ಸಲ ಟೀಚರ್ಸ್‌ ಕೈಯಲ್ಲೇ ನಾವು ಫäಲ್‌ ಆಗಿದ್ದೀವಿ. ಏಪ್ರಿಲ್‌ 1ಕ್ಕೆ ಇಂಟರ್‌ನಲ್‌ ಎಕ್ಸಾಂ ಇರುತ್ತೆ ಅಂತ ಬಹಳ ಸೀರಿಯಸ್‌ ದನಿಯಲ್ಲಿ ಲೆಕ್ಚರ​ರ್‍ಸ್ ಹೇಳುತ್ತಿದ್ದರು. ನಾವೆಲ್ಲ ದಡಬಡಾಯಿಸಿ ಕಷ್ಟಪಟ್ಟು ಓದಿ ಕ್ಲಾಸ್‌ಗೆ ಹೋಗ್ತಿದ್ವಿ. ಅಲ್‌ ಹೋಗಿ ನೋಡಿದರೆ ಮಾಮೂಲಿ ಕ್ಲಾಸ್‌. ನಾವು ಒಳ್ಳೆ ಮಕ್ಕಳಂತೆ ಇವತ್ತು ಎಕ್ಸಾಂ ಇತ್ತಲ್ವಾ ಅಂದರೆ ಅವರು ನಗುತ್ತಾ ಏಪ್ರಿಲ್‌ ಫäಲ್‌ ಅಂತಿದ್ರು. ಏನು ಹೇಳಿದರೂ ನಂಬುವವರಿಗೆ ಫäಲ್‌ ಮಾಡೋದು ಸುಲಭ. ಆದರೆ ಮಜಾ ಬರೋದು ಭಾಳ ಸೀರಿಯಸ್‌ ಆಗಿದ್ದವರನ್ನು ಫäಲ್‌ ಮಾಡಿ ಅವರ ಗಂಭೀರ ವದನದಲ್ಲಿ ನಗು ಚಿಮ್ಮಿಸಿದಾಗ. ನಾನು ಏನು ಹೇಳಿದರೂ ನಂಬುವ ಜಾತಿ. ಕೆಲವೊಮ್ಮೆ ಜೋಕ್‌ ಹೇಳಿದರೂ ‘ಹೌದಾ?’ ಅಂತ ಕಣ್ಣರಳಿಸಿ ಕೇಳಿ, ಅವರು ಮುಸಿ ಮುಸಿ ನಗೋದು ಕಂಡು ಪೆಚ್ಚಾಗಿದ್ದೀನಿ. ಕೆಲವೊಮ್ಮೆ ನಾನೇ ಬೇರೆಯವ್ರಿಗೆ ಪ್ರಾಂಕ್‌ ಮಾಡೋ ಐಡಿಯಾ ಹೇಳಿರ್ತೀನಿ. ಅವರದನ್ನು ನನಗೇ ಪ್ರಾಂಕ್‌ ಮಾಡಿರ್ತಾರೆ.

ಅಪ್ಪು ಹೆಸರಲ್ಲಿ ಪ್ರಾಂಕ್‌ ಮಾಡಿದ ನೆನಪು

- ಸೋನು ಗೌಡ

ಅದು 2018ನೇ ಇಸವಿ. ನಮ್ಮ ‘ಗುಳ್ಟು’ ಸಿನಿಮಾ ರಿಲೀಸ್‌ ಆಗಿತ್ತು. ಒಂದಿನ ನಮ್ಮ ಸಿನಿಮಾದ ಹೀರೋ ನವೀನ್‌ ಶಂಕರ್‌ ಅವರಿಂದ ಕಾಲ್‌ ಬಂತು. ನಮ್ಮ ಸಿನಿಮಾವನ್ನು ಅಪ್ಪು ಅವರು ನೋಡಿದ್ದಾರೆ. ಅವರ ಮುಂದಿನ ಸಿನಿಮಾಕ್ಕೆ ನಿಮ್ಮನ್ನ ಹಾಕಿಕೊಳ್ಳೋ ಬಗ್ಗೆ ನಿಮ್‌ ಜೊತೆಗೆ ಮಾತಾಡ್ಬೇಕಂತೆ ಅಂದರು. ನಾನು ಸಖತ್‌ ಖುಷಿಯಲ್ಲಿ ಅಪ್ಪು ಅವರೇ ಅಂದ್ಕೊಂಡು ಮಾತಾಡಿದ್ದೇ ಮಾತಾಡಿದ್ದು. ಕೊನೆಯಲ್ಲೇ ಗೊತ್ತಾಯ್ತು ನನಗೆ ಪ್ರಾಂಕ್‌ ಮಾಡ್ತಿದ್ದಾರೆ ಅಂತ. ಆ ಕ್ಲಿಪ್ಪಿಂಗ್ಸ್‌ ಈಗಲೂ ನನ್ನ ಹತ್ರ ಇದೆ.

ನಾನು ನಮ್ಮ ಅಣ್ಣಂಗೆ ಆಗಾಗ ಪ್ರಾಂಕ್‌ ಮಾಡ್ತಾ ಇರ್ತೀನಿ. ಯಾವುದೋ ಹುಡುಗಿ ಹೆಸರಲ್ಲಿ ಕಾಲ್‌ ಮಾಡಿ, ಸಿಗ್ತೀರಾ, ಮೀಟ್‌ ಮಾಡಾಣ ಅಂತೆಲ್ಲ ಕಾಲೆಳೀತೀನಿ. ಒಮ್ಮೆ ಆಂಟಿಗೆ ಕಾಲ್‌ ಮಾಡಿ, ನಿಮ್ಮ ಮಗ ನನಗೆ ಮೋಸ ಮಾಡಿದ, ನಾವಿಬ್ರೂ ಲವ್‌ ಮಾಡ್ತಾ ಇದ್ವಿ. ಅವ್ನು ಈಗ ನನ್ನ ಫೋನೇ ರಿಸೀವ್‌ ಮಾಡ್ತಿಲ್ಲ ಅಂತೆಲ್ಲ ಮಾತಾಡಿದ್ದೆ. ಅವರು ಪಾಪ ಇದನ್ನು ಸೀರಿಯಸ್‌ ಆಗಿ ತಗೊಂಡಿದ್ರು. ನಾನು ಮೊದಲ ಸಲ ಏಪ್ರಿಲ್‌ ಫäಲ್‌ ಆಗಿದ್ದು ಅಪ್ಪನ ಹತ್ರ. ಬೆಳಗ್ಗೆ ಆರೂವರೆ- ಏಳು ಗಂಟೆ ಹೊತ್ತು. ಪಾರ್ಕ್ಗೆ ಬೆಂಕಿ ಹತ್ಕೊಂಡಿದೆ. ಎಲ್ಲರೂ ಓಡಿ ಬನ್ನಿ ಅಂತ ಅಪ್ಪ ಕೂಗಿದ್ರು. ನಾನು ಎದ್ನೋ ಬಿದ್ನೋ ಅಂತ ಪಾರ್ಕ್ಗೆ ಹೋಗಿ ನೋಡಿದ್ರೆ ಅಲ್ಲಿ ಯಾವ ಬೆಂಕಿನೂ ಇಲ್ಲ, ಏನೂ ಇಲ್ಲ!

ಅಗ್ನಿಸಾಕ್ಷಿ ಸೆಟ್‌ನಲ್ಲಿ ಉಪ್ಪು ತಿಂದ ಕತೆ

- ವೈಷ್ಣವಿ

ನನಗೆ ಪ್ರಾಂಕ್‌ ಮಾಡೋದು ಬಹಳ ಇಷ್ಟ. ತುಂಬ ಸಲ ಪ್ರಾಂಕ್‌ ಮಾಡೋಕೂ ಟ್ರೈ ಮಾಡಿದ್ದೀನಿ. ಆದರೆ ನನ್‌ ದುರಾದೃಷ್ಟ, ಯಾರೂ ಫäಲ್‌ ಆಗೋದಿಲ್ಲ. ಮನೆಯಲ್ಲೇ ಎಷ್ಟೊಂದು ಸಲ ಅಮ್ಮಂಗೆ ಅಮ್ಮಂಗೆ ‘ಅಲ್ನೋಡಿ ಕಾಕ್ರೋಚ್‌...’ ಅಂತ ಫäಲ್‌ ಮಾಡೋಕೆ ಹೋಗ್ತೀನಿ. ‘ಮತ್ತೆ ಶುರು ಮಾಡಿದ್ಯಾ?’ ಅಂತಾರೆ ಹೊರತು ನಂಬಿ ರಿಯಾಕ್ಟ್ ಮಾಡಲ್ಲ. ನಾನೂ ಸ್ಮಾರ್ಟೇ ಇರುವ ಕಾರಣ ನಾನೂ ಅಷ್ಟುಬೇಗ ಪ್ರಾಂಕ್‌ಗೆ ಬಲಿಯಾಗಲ್ಲ. ಆದರೆ ಕಾಲೇಜ್‌ ದಿನಗಳಲ್ಲಿ ರಾರ‍ಯಂಗಿಂಗ್‌ ಹೆಸರಲ್ಲಿ ಪ್ರಾಂಕ್‌ ಮಾಡ್ತಾ ಇದ್ರು. ಅವರ ಮಾತನ್ನು ಮುಗ್ಧೆ ಥರ ನಂಬಿ ಎಷ್ಟೋ ಸಲ ಬಸ್ಕಿ ಹೊಡೆದಿದ್ದೀನಿ. ಅವರು ಹೇಳಿದ್ದೆಲ್ಲ ಮಾಡಿ ಆಮೇಲೆ ಅವರ ಕೀಟಲೆ ಕಂಡು ಅಯ್ಯೋ ಅನಿಸಿಕೊಂಡಿದ್ದೀನಿ.

ನಮ್‌ ‘ಅಗ್ನಿಸಾಕ್ಷಿ’ ಸೀರಿಯಲ್‌ನಲ್ಲಂತೂ ನನಗೆ ಬಡಿಸೋ, ಜ್ಯೂಸ್‌, ತಿಂಡಿ ಹಂಚೋ ಕೆಲಸ. ನಾನು ಕೂತು ತಿಂದಿದ್ದಿಲ್ಲ. ಅವರೆಲ್ಲ ಚೆನ್ನಾಗಿ ತಿನ್ನೋದು ನೋಡಿ ನಾನೂ ಅವರೆಲ್ಲರ ಪ್ಲೇಟಿಂದ ಚೂರು ಚೂರು ತಿಂಡಿ ಎತ್ಕೊಂಡು ತಿನ್ತಿದ್ದೆ. ಆದರೆ ಅವ್ರು ನಂಗೆ ಗೊತ್ತಾಗದಂತೆ ಉಪ್ಪು ಸುರಿದು ಬಿಡ್ತಿದ್ರು. ಅದನ್ನು ತಿಂದು ಅರ್ಧ ದಿನ ಬಾಯಿಯೆಲ್ಲ ಉಪ್ಪುಪ್ಪು!

ಹಳೆಯ ದಿನಗಳ ತಮಾಷೆ ಈಗ ಇಲ್ಲ

- ಗಾನವಿ ಲಕ್ಷ್ಮಣ್‌

ಈಗ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದೀನಿ. ಯಾವಾಗ ನೋಡಿದರೂ ಸುತ್ತಾಟ, ಸುತ್ತಾಟ.. ಈಗ ವೈಜಾಗ್‌ನಲ್ಲಿರುವೆ. ಈ ಓಡಾಟದ ನಡುವೆ ಏಪ್ರಿಲ್‌ 1 ಬಗ್ಗೆನೂ ನೆನಪಿಲ್ಲ. ಹಿಂದೆ ಯಾರಿಂದಲೋ ಫäಲ್‌ ಆಗಿದ್ದೋ, ನಾನು ಯಾರನ್ನೋ ಫäಲ್‌ ಮಾಡಿದ್ದೋ.. ಆ ಥರದ ಘಟನೆಗಳೂ ನೆನಪಾಗ್ತಿಲ್ಲ. ಆದರೂ ಸ್ವಲ್ಪ ಹಿಂದೆ ನಾನು ಪ್ರಾಂಕ್‌ ಮಾಡುತ್ತಿದ್ದದ್ದು ನಮ್ಮ ಅತ್ತೆ ಮನೆಯಲ್ಲೊಬ್ಬ ಹುಡುಗನಿಗೆ. ಅಲ್ಲಿ ಕೆಲಸ ಮಾಡುತ್ತಿದ್ದವರ ಮಗ ಅವನು. ಚಿಕ್ಕ ಹುಡುಗ. ಹೆಸರು ಕೊಟ್ರೇಶಿ ಅಂತ. ಅವನಿಗೆ ತರಲೆ ಮಾಡ್ಬೇಕು ಅಂತನಿಸಿದಾಗ, ‘ಕೊಟ್ರೇಶೀ.. ಫ್ರಿಜ್‌ ಸರಿಯಾಗಿ ಓಡ್ತಿದೆಯಾ ನೋಡಿ ಹೇಳು..’ ಅನ್ನೋದು. ಅವನು ನೋಡಿ ಬಂದು, ‘ಹುಂ ಅಕ್ಕ. ಓಡ್ತಿದೆ’ ಅಂತಿದ್ದ. ‘ಹೌದೇನೋ, ಫ್ರಿಡ್ಜ್‌ ಓಡುತ್ತೇನೋ.. ನೀನೂ ಓಡು ಅದರ ಹಿಂದೆ, ಓಡೋಗಿ ಬಿಟ್ರೆ ಕಷ್ಟಅದು..’ ಅಂತ ತಮಾಷೆ ಮಾಡ್ತಿದ್ದೆ. ಕæಲವæäಮ್ಮೆ ಫೋನ್‌ ಮಾಡಿ ‘ನಾವು ಕಾರ್ಪೊರೇಶನ್ನಿಂದ. ನಲ್ಲೀಲಿ ನೀರು ಬರ್ತಿದೆಯೇನ್ರೀ?’ ಅನ್ನೋದು. ಅವನು ಪಾಪ ಚೆಕ್‌ ಮಾಡಿ, ‘ಹೂಂ ಬರ್ತಿದೆ’ ಅನ್ನೋದು. ‘ನಲ್ಲೀಲಿ ನೀರು ಬರದೇ ರಸ್ನಾ ಬರುತ್ತೇನ್ರೀ. ಇಡ್ರಿ ಫೋನು’ ಅಂತ ಡ್ರಾಮಾ ಮಾಡೋದು. ಆಗ ಇದೆಲ್ಲ ಮಾಡ್ತಿದ್ವಿ. ಈಗ ಲೈಫ್‌ ಸೀರಿಯಸ್‌ ಟ್ರ್ಯಾಕ್‌ನಲ್ಲಿ ಸಾಗ್ತಾ ಇದೆ.

ಮಾವನ ಹೆಸರು ಹೇಳಿ ಮಂಗ ಮಾಡಿದ ಅಮ್ಮ

- ಭೂಮಿ ಶೆಟ್ಟಿ

ನಾವು ಚಿಕ್ಕವರಾಗಿದ್ದಾಗ ಏಪ್ರಿಲ್‌ 1 ಬಂತು ಅಂದ್ರೆ ಹಬ್ಬದ ಹಾಗೆ. ಎಲ್ಲರೂ ಎಲ್ಲರನ್ನೂ ಫäಲ್‌ ಮಾಡೋದೇ. ಮನೆಯಲ್ಲಿ ದೊಡ್ಡವರು ಅಂದರೆ ಅವರೆಲ್ಲ ಸೀರಿಯಸ್‌ ಆಗಿರೋರು, ಹೀಗೆಲ್ಲ ಏಪ್ರಿಲ್‌ ಫäಲ್‌ ಮಾಡಲ್ಲ ಅಂತ ನಾವು ಮಕ್ಕಳ ಲೆಕ್ಕಾಚಾರ. ಆದರೆ ಏಪ್ರಿಲ್‌ ಫäಲ್‌ ವಿಚಾರಕ್ಕೆ ಬಂದರೆ ಅವರು ಮಕ್ಕಳನ್ನು ಮೀರಿಸಿಬಿಡುತ್ತಿದ್ದರು.

ನನಗಿವತ್ತಿಗೂ ನೆನಪಿದೆ, ನಾವು ಚಿಕ್ಕವರಿದ್ದಾಗ ಮಾವಂದ್ರು ಅಂದರೆ ನಮಗೆ ಭಯ. ದೊಡ್ಡ ಮಾವ ಅಂದರೆ ಇನ್ನೂ ಜಾಸ್ತಿ. ಅವತ್ತೊಮ್ಮೆ ಅಮ್ಮ ನನ್ನ ಕರೆದು, ‘ದೊಡ್ಡ ಮಾವ ಆಗಲೇ ನಿನ್ನ ಕರೀತಿದ್ರು ನೋಡು, ಏನೋ ಕೇಳ್ಬೇಕಂತೆ’ ಅಂದರು. ಮಾವ ಹೊರಗೆಲ್ಲೋ ಹೋಗಿದ್ರು. ಅವರು ಬರುವಾಗ ಮಧ್ಯಾಹ್ನ ಆಗಿತ್ತು. ಅಲ್ಲೀವರೆಗೆ ಕಾಯ್ತಿದ್ದೆ. ಬಂದಮೇಲೆ ಅಮ್ಮ ಹೇಳಿದ ಬಗ್ಗೆ ವಿಚಾರಿಸಿದೆ. ‘ಇಲ್ವಲ್ಲ, ನಾನು ನಿನ್ನ ಕರೀಲೇ ಇಲ್ಲ’ ಅಂದ್ರು. ಅಷ್ಟರಲ್ಲಿ ಅಮ್ಮ ಏಪ್ರಿಲ್‌ ಫäಲ್‌ ಅಂತ ನಗತೊಡಗಿದರು.

ಚಿಕ್ಕ ವಯಸ್ಸಲ್ಲಿ ಸಿಕ್ಕಾಪಟ್ಟೆಏಪ್ರಿಲ್‌ ಫäಲ್‌ ಮಾಡ್ತಿದ್ದೆವು. ದಿನಕ್ಕೊಂದು 50 ಸಲ ಸಣ್ಣ ಪುಟ್ಟದ್ದಕ್ಕೂ ಏಪ್ರಿಲ್‌ ಫäಲ್‌ ಅಂದು ನಗುವಾಗ ಏನ್‌ ಖುಷಿ! ಆದರೆ ಒಂದು ಹಂತದ ಬಳಿಕ ಇದೆಲ್ಲ ನಮ್ಮ ಲೈಫಿಂದ ಮರೆಯಾಯ್ತು. ಈಗ ಏಪ್ರಿಲ್‌ ಫäಲ್‌ಗೆ ಪರ್ಯಾಯ ಅನ್ನೋ ಹಾಗೆ ಮೀಮ್ಸ್‌, ಪ್ರಾಂಕ್‌ ಅಂತ ಏನೇನೆಲ್ಲ ಇದೆ. ಆದರೆ ಏಪ್ರಿಲ್‌ ಫäಲ್‌ ನಮ್ಮ ಲೈಫಿಂದ ನಿಧಾನಕ್ಕೆ ದೂರ ಆಗ್ತಿದೆ.