April 1st : ಏಪ್ರಿಲ್ ಫೂಲ್ ಎಂದು ಕೂಗುವ ಮೊದಲು ಇತಿಹಾಸ ತಿಳ್ಕೊಳ್ಳಿ
ಯಾರೋ ಬಂದಿದಾರೆ ಬಾಗಿಲು ತೆಗಿ ಎಂಬ ಸಣ್ಣ ವಿಷ್ಯದಿಂದ ಹಿಡಿದು ಯಾರಿಗೋ ಹುಷಾರಿಲ್ಲ ಆಸ್ಪತ್ರೆಗೆ ಹೋಗ್ಬೇಕು ಎನ್ನುವ ಗಂಭೀರ ವಿಷ್ಯವೂ ಮೂರ್ಖರ ದಿನ (Fool Day)ದಂದು ತಮಾಷೆಯ ಸಂಗತಿಯಾಗಿರುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಫೂಲ್ (Fool) ಮಾಡಲು ತಯಾರಿ ನಡೆಸಿದ್ದಾರೆ. ಆದ್ರೆ ಅದನ್ನು ಎಲ್ಲಿ ಮೊದಲು ಆಚರಿಸಲಾಯ್ತು ಎಂಬುದು ನಿಮಗೆ ಗೊತ್ತಾ? ಇಂದು ನಾವದನ್ನು ಹೇಳ್ತೇವೆ.
ನಗು (Laugh) ಎಲ್ಲ ದುಃಖವನ್ನು ಮರೆಸುವ ಶಕ್ತಿ ಹೊಂದಿದೆ. ನಗುವಿನಿಂದ ರೋಗ ಗುಣವಾಗುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ನಗುವಿಗೂ ಸಮಯವಿಲ್ಲ ಎನ್ನುವಂತಾಗಿದೆ. ಹಾಗಾಗಿ ಅನೇಕರು ಲಾಫಿಂಗ್ ಕ್ಲಬ್ ಗೆ ಸೇರಿಕೊಂಡು ಸ್ವಲ್ಪ ಹೊತ್ತು ನಕ್ಕು ಬರ್ತಾರೆ. ಎಲ್ಲರೂ ನಗ್ತಿದ್ದರೆ ನಮಗೆ ಅವರನ್ನು ನೋಡಿಯೇ ನಗು ಬಂದಿರುತ್ತದೆ. ಆದ್ರೆ ಕೃತಕ ನಗುವಿನಿಂದ ಪ್ರಯೋಜನವಿಲ್ಲ. ನಗು ಮನಸ್ಸಿನಿಂದ ಬರ್ಬೇಕು. ವರ್ಷದಲ್ಲಿ ಒಮ್ಮೆ ನಮಗೆ ಮನಸ್ಸು ಬಿಚ್ಚಿ ನಗುವ ಅವಕಾಶ ಸಿಗುತ್ತದೆ. ಅದೇ ಮೂರ್ಖರ ದಿನ. ಎಲ್ಲರಿಗೂ ಗೊತ್ತಿರುವಂತೆ ಏಪ್ರಿಲ್ (April) ಒಂದರಂದು ಮೂರ್ಖರ ದಿನವನ್ನು ಆಚರಿಸಲಾಗುತ್ತದೆ.
ಸ್ಕೂಲು, ಕಾಲೇಜು, ಕಚೇರಿ, ಮನೆ ಸೇರಿದಂತೆ ಎಲ್ಲ ಕಡೆ ಏಪ್ರಿಲ್ ಒಂದರಂದು ಜನರು ತಮ್ಮವರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನ ನಡೆಸ್ತಾರೆ. ನಂತ್ರ ಏಪ್ರಿಲ್ ಫೂಲ್ ಎಂದು ಛೇಡಿಸ್ತಾರೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಮೂರ್ಖರ ದಿನದಲ್ಲಿ ಖುಷಿಯಿಂದ ಪಾಲ್ಗೊಳ್ಳುತ್ತಾರೆ. ಮೂರ್ಖರ ದಿನದಂದು ಜನರನ್ನು ಹೇಗೆ ಫೂಲ್ ಮಾಡ್ದೆ ಎಂದು ಮಾತನಾಡ್ತಾ, ಅದನ್ನು ನೆನಪು ಮಾಡ್ತಾ ಆ ದಿನವನ್ನು ಎಂಜಾಯ್ ಮಾಡ್ತಾರೆ.
ಆದರೆ ಮೂರ್ಖರ ಈ ದಿನವನ್ನು ಏಕೆ ಆಚರಿಸಲಾಗುತ್ತದೆ ಮತ್ತು ಯಾವಾಗ ಮತ್ತು ಏಕೆ ಮೊದಲ ಬಾರಿಗೆ ಆಚರಿಸಲಾಯಿತು ಎಂಬುದು ಅನೇಕರಿಗೆ ತಿಳಿದಿಲ್ಲ. ಏಪ್ರಿಲ್ ಒಂದರ, ಮೂರ್ಖರ ದಿನದ ಇತಿಹಾಸ ಮತ್ತು ಅದಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಕಥೆಯನ್ನು ನಾವಿಂದು ಹೇಳ್ತೇವೆ.
ಮೂರ್ಖರ ದಿನದ ಆರಂಭ : ಏಪ್ರಿಲ್ ಒಂದನೇ ತಾರೀಕಿನಂದು ಮೂರ್ಖರ ದಿನವನ್ನು ಆಚರಿಲಾಗುತ್ತದೆ. ಆದ್ರೆ ಇದು ಯಾವಾಗ ಬಂತು ಎಂಬುದನ್ನು ನೋಡಲು ಹೋದ್ರೆ 1381ರಲ್ಲಿ ಎಂಬುದು ಗೊತ್ತಾಗುತ್ತದೆ, 1381ರಲ್ಲಿ ಮೊದಲ ಬಾರಿಗೆ ಏಪ್ರಿಲ್ 1ರಂದು ಮೂರ್ಖರ ದಿನವನ್ನು ಆಚರಿಸಲಾಯಿತು ಎಂದು ನಂಬಲಾಗಿದೆ. ಇದರ ಹಿಂದೆ ಒಂದು ತಮಾಷೆಯ ಕಥೆಯಿದೆ. ಇಂಗ್ಲೆಂಡ್‌ನ ರಾಜ ರಿಚರ್ಡ್ II (Richard II) ಮತ್ತು ಬೊಹೆಮಿಯಾದ ರಾಣಿ ಅನ್ನಿ (Anne, Queen Of Bohemia) ಅವರು ನಿಶ್ಚಿತಾರ್ಥ ಮಾಡಿಕೊಳ್ಳುವ ಘೋಷಣೆ ಮಾಡಿದ್ರು.
ಮಾರ್ಚ್ 32, 1381 ರಂದು ನಿಶ್ಚಿತಾರ್ಥ ನಡೆಯಲಿದೆ ಎಂದು ಅವರು ಹೇಳಿದ್ದರು. ಈ ಘೋಷಣೆಯಿಂದ ಸಾರ್ವಜನಿಕರು ತುಂಬಾ ಸಂತೋಷಗೊಂಡರು. ಈ ಖುಷಿಯನ್ನು ಸಂಭ್ರಮಿಸಲು ಶುರು ಮಾಡಿದ್ದರು. ಆದ್ರೆ ನಂತರ ಅವರಿಗೆ ಅರಿವಾಯ್ತು ಮಾರ್ಚ್ ನಲ್ಲಿ 32ನೇ ತಾರೀಕು ಇರುವುದಿಲ್ಲವೆಂದು. ಮಾರ್ಚ್ 31ನ್ನು ನಂಬಿ ನಾವು ಮೂರ್ಖರಾಗಿದ್ದೇವೆ ಎಂಬುದು ಅವರ ಅರಿವಿಗೆ ಬಂತು. ಅಂದಿನಿಂದ ಜನರು ಪ್ರತಿ ವರ್ಷ ಏಪ್ರಿಲ್ 1 ಅನ್ನು ಮೂರ್ಖರ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿದರು ಎಂದು ನಂಬಲಾಗಿದೆ.
Fertility Clinic: ಯಾರದೋ ವೀರ್ಯ, ಯಾರದೋ ಅಂಡ, ಮಗು ಯಾರದು?
ಇನ್ನೊಂದು ನಂಬಿಕೆ : ಮೂರ್ಖರ ದಿನಕ್ಕೆ ಸಂಬಂಧಿಸಿದಂತೆ ಇನ್ನೊಂದು ನಂಬಿಕೆಯಿದೆ. ಫ್ರಾನ್ಸ್ ನಲ್ಲಿ ಇದನ್ನು ಮೊದಲ ಬಾರಿ ಆಚರಿಸಲಾಯ್ತು ಎನ್ನಲಾಗುತ್ತದೆ. 1582 ರಲ್ಲಿ, ಚಾರ್ಲ್ಸ್ ಪೋಪ್ (Charles Pope) ಹಳೆಯ ಕ್ಯಾಲೆಂಡರ್ ಅನ್ನು ಬದಲಾಯಿಸಿದರು ಮತ್ತು ಅದರ ಜಾಗದಲ್ಲಿ ಹೊಸ ರೋಮನ್ ಕ್ಯಾಲೆಂಡರ್ (Roman calendar) ಅನ್ನು ಜಾರಿಗೆ ತಂದರು ಎಂದು ಹೇಳಲಾಗುತ್ತದೆ. ಇದರ ಹೊರತಾಗಿಯೂ, ಅನೇಕ ಜನರು ಹಳೆಯ ಕ್ಯಾಲೆಂಡರ್ ಅನ್ನು ಅನುಸರಿಸುವುದನ್ನು ಮುಂದುವರೆಸಿದರು.
ಅಂದರೆ ಹಳೆಯ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷವನ್ನು (New Year) ಆಚರಿಸಲು ಮುಂದುವರೆಸಿದರು. ಅಂದಿನಿಂದ ಏಪ್ರಿಲ್ ಒಂದನ್ನು ಮೂರ್ಖರ ದಿನವನ್ನಾಗಿ ಆಚರಿಸಲು ಪ್ರಾರಂಭಿಸಲಾಯಿತು ಎನ್ನಲಾಗುತ್ತದೆ.
ಒಂದು ಪೆಗ್ ಹಾಕಿದ್ರೆ ತಪ್ಪೇನಿಲ್ಲ..! ಅಲ್ಕೋಹಾಲ್ ಆರೋಗ್ಯ ಚೆನ್ನಾಗಿಡುತ್ತೆ ಎನ್ನುತ್ತೆ ಅಧ್ಯಯನ
ಭಾರತದಲ್ಲಿ ಮೂರ್ಖರ ದಿನದ ಆರಂಭ : ಭಾರತದಲ್ಲಿ 19ನೇ ಶತಮಾನದಿಂದ ಮೂರ್ಖರ ದಿನದ ಆಚರಣೆ ಶುರುವಾಯ್ತು ಎನ್ನಲಾಗುತ್ತದೆ. ಅಲ್ಲಿಂದ ಪ್ರತಿ ವರ್ಷ ಭಾರತದಲ್ಲೂ ಮೂರ್ಖರ ದಿನವನ್ನು ಆಚರಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗ್ತಿದ್ದಂತೆ ಮೂರ್ಖರ ದಿನದ ಕ್ರೇಜ್ ಜಾಸ್ತಿಯಾಗಿದೆ.