ನಟಿಯರೇ ತಡವಾಗಿ ಚಿತ್ರೀಕರಣಕ್ಕೆ ಬರುವುದು? ನಿರೂಪಕನ ಆರೋಪಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ನಟಿ ಆಶಿಕಾ ರಂಗನಾಥ್.

ಕನ್ನಡ ಚಿತ್ರರಂಗದ (Sandalwood) ಮುದ್ದು ಮುಖದ ಚೆಲುವೆ, ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ (Ashika Ranganath) ಮತ್ತು ಶರಣ್ (Sharan) ಜೋಡಿಯಾಗಿ ನಟಿಸಿರುವ ಅವತಾರ ಪುರುಷ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ನಿರ್ದೇಶಕ ಸಿಂಪಲ್ ಸುನಿ (Simple Suni) ಸಿಂಪಲ್ ಆಗಿರುವ ಕಾನ್ಸೆಪ್ಟ್‌ನ ಎಷ್ಟು ಡಿಫರೆಂಟ್ ಆಗಿ ತೋರಿಸಿದ್ದಾರೆ ಎಂದು ಚಿತ್ರಮಂದಿರದಿಂದ ಹೊರ ಬಂದ ಪ್ರತಿಯೊಬ್ಬರು ಹೇಳುತ್ತಿದ್ದಾರೆ. ಅಲ್ಲದೆ ಸಿನಿಮಾ ಎರಡು ಭಾಗದಲ್ಲಿ ಬರಲಿದೆ ಎಂದು ಗೊತ್ತಾಗಿದ್ದು ಸಿನಿಮಾ ರಿಲೀಸ್ ಆದ ಮೇಲೆನೇ. 

ಎರಡು ವರ್ಷಗಳ ಶಮ್ರವನ್ನು ಜನರು ಮೆಚ್ಚುತ್ತಿದ್ದಾರೆ. ಡಿಫರೆಂಟ್ ಆಗಿ ಚಿತ್ರತಂಡ ಪ್ರಚಾರ ಮಾಡಿದ್ದಾರೆ. ಈ ವೇಳೆ ಶೋವೊಂದರಲ್ಲಿ ಸಂದರ್ಶನಕ್ಕೆ ನಟಿ ತಡವಾಗಿ ಬಂದಿದಕ್ಕೆ ನಿರೂಪಕ ತರಾಟೆಗೆ ತೆಗೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು. ಆಶಿಕಾ ಪಾಪ ಮಗು ಆಕೆಗೆ ನೋವು ಕೊಡಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 

ಏನಿದು ಪ್ಲ್ಯಾನ್:

ಸಿನಿಮಾ ಚಿತ್ರೀಕರಣ ಇರಲಿ ಅಥವಾ ಪ್ರಚಾರ ಇರಲಿ ಆಶಿಕಾ ಸರಿಯಾದ ಸಮಯದಲ್ಲಿ ಸ್ಪಾಟ್‌ನಲ್ಲಿ ಇರುತ್ತಾರೆ. ಆದರೆ ಶೋವೊಂದರಲ್ಲಿ ಅವತಾರ ಪುರುಷ (Avtara Purusha) ಸಿನಿಮಾ ಪ್ರಚಾರ ಮಾಡುವ ದಿನ ಅರ್ಥ ಗಂಟೆ ತಡವಾಗಿ ಬಂದಿದ್ದಾರೆ. 9.30ಗೆ ಶುರುವಾಗಬೇಕಿತ್ತು ಆದರೆ 10 ಗಂಟೆಗೆ ನಟಿ ಬಂದಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ, ನಟ ಶರಣ್ ಮತ್ತು ನಿರೂಪಕ ಕಾದು ಕಾದು ಚಿತ್ರೀಕರಣ ಕ್ಯಾನ್ಸಲ್ ಮಾಡುವ ಪ್ಲ್ಯಾನ್ ಮಾಡಿಕೊಂಡರು. 

Film Review: ಅವತಾರ ಪುರುಷ

'ಏನ್ ಸರ್ ನಾನೇ ಯಾವಾಗಲೂ ಲೇಟ್ ಆಗಿ ಬರುವ ರೀತಿ ಹೇಳುತ್ತಿದ್ದೀರಾ? ನಿರ್ದೇಶಕ ಸುನಿ ಸರ್ ಕೂಡ ಲೇಟ್ ಆಗಿ ಬಂದಿದ್ದಾರೆ. ನಾನು ಯಾವತ್ತೂ ಲೇಟ್ ಆಗಿ ಬಂದಿಲ್ಲ. ಮದಗಜ ಸಿನಿಮಾಗೂ ಕೂಡ ನಾನು ಲೇಟ್ ಆಗಿ ಬಂದಿಲ್ಲ. ನೀವು ಬೇಕಿದ್ದರೆ ಚೇತನ್ ಅಥವಾ ನಟ ಶ್ರೀಮುರಳಿ ಅವರಿಗೆ ಕರೆ ಮಾಡಿ. ನೀವೆಲ್ಲಾ ಬರುವ ರೀತಿಯಲ್ಲಿ ನಾವು ಬರುವುದಕ್ಕೆ ಆಗೋಲ್ಲ. ನಾವೆಲ್ಲಾ ನೇಟ್ ಆಗಿ ಮೇಕಪ್ ಮತ್ತು ಹೇರ್ ಮಾಡ್ಕೊಂಡು ಬರಬೇಕು. ನಿನ್ನೆ ನನಗೆ ಒಂದು ಅವಾರ್ಡ್ (Award) ಕಾರ್ಯಕ್ರಮ ಇತ್ತು ಅದಿಕ್ಕೆ ಇವತ್ತು ಲೇಟ್ ಆಗಿ ಬರ್ತಿನಿ ಅಂತ ಹೇಳಿದ್ದೀನಿ. ಈಗ ನಾನು ಬಂದಿದ್ದೀನಿ ವಾದ ಮಾಡುವ ಬದಲು ಸಂದರ್ಶನ ಶುರು ಮಾಡೋಣ. ನನ್ನಿಂದ ಸಮಸ್ಯೆ ಆಗಿದೆ ಅಂದ್ರೆ ಇಲ್ಲಿಗೆ ಬಿಡಿ ನಾನು ಸಂದರ್ಶನದಲ್ಲಿ ಇರುವುದಿಲ್ಲ ನೀವೇ ಮಾಡಿಕೊಳ್ಳಿ. ನೀವೆಲ್ಲಾ ಯಾಕೆ ಹೀರೋಯಿನ್ ಲೇಟ್ ಅಂತ potray ಮಾಡ್ತಿದ್ದೀರಾ? ನನಗೆ ಅರ್ಥ ಆಗುತ್ತಿಲ್ಲ. ನನ್ನ ಮನೆಯಿಂದ ಇಲ್ಲಿಗೆ ಬರೋಕೆ 20 ಕಿಲೋ. ನಾನು ಬರಲು 45 ಸಿನಿಮ ಬೇಕಿತ್ತು. ಎಲ್ಲರ ಟೈಮ್ ವೇಸ್ಟ್‌ ಮಾಡುವುದು ಬೇಡ ಸಂದರ್ಶನ ಮಾಡೋಣ' ಎಂದು ಆಶಿಕಾ ಮಾತನಾಡುತ್ತಾರೆ. 

Avatara Purusha: ಹೊಸ ಅವತಾರದಲ್ಲಿ ಬಂದ ಅಧ್ಯಕ್ಷ ಶರಣ್!

ನಿರ್ದೇಶಕ ಸಿಂಪಲ್ ಸುನಿ, ನಟ ಶರಣ್ ಮತ್ತು ನಿರೂಪಕ ಸೇರಿಕೊಂಡು ಬ್ಯಾಕ್ ಟು ಬ್ಯಾಕ್ ಪ್ರಶ್ನೆ ಕೇಳಿ ಆಶಿಕಾ ಕಣ್ಣೀರು ಇಡುವ ರೀತಿ ಮಾಡುತ್ತಾರೆ. ಬೇಸರದಲ್ಲಿ ಆಶಿಕಾ ಎದ್ದು ಹೋಗಲು ಮುಂದಾಗುತ್ತಾರೆ. ಆಗ ನಿರೂಪಕ ಓಡೋಡಿ ಆಶಿಕಾ ಕೈ ಹಿಡಿದುಕೊಂಡು ನಾವು ಮಾಡಿದ್ದು Prank ಇದೆಲ್ಲಾ ತಮಾಷೆ. ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ ಎಂದು ಹೇಳುತ್ತಾರೆ.