Left: Bali, Oct 2014. My first international holiday. I was one year into my law career and had landed myself a job that many would kill for. With this job came good money and a fun lifestyle and I was suddenly spending on things that I previously NEVER spent on - food, clothes, going out, movies, you name it. I was at the peak of my obesity, I only found the motivation to exercise once a month maybe, I ate happily and mindlessly, wore clothes I wanted to despite my jiggly arms and thighs, never considered myself unattractive, never felt lesser than anyone else. I did have bouts of self doubt but I was too lazy to do anything about it and then soon enough the feeling would subside. Not long after this photo was taken, I realised I was too young to be like this and so I went to my apartment gym, got onto the treadmill, and I raaaan. First I ran for 5 minutes, then for 15 and then I could run for a whole 40 minutes without a break. Right: Darjeeling, May 2019. Five years later and 18 kilos lighter. Of course I worked my arse off. It took many 4.30 am alarms and some days of working out twice a day and many crazy diets. I'm not the fittest person but I exercise occasionally, I understand food better and I know how to play around with it. I know what calorie deficit means and what strength training is. Unfortunately, I've developed this unhealthy relationship with food and I haven't been able to develop a sustainable lifestyle for myself which balances my love for food and healthy eating and exercise, but I'm working on it. What made me do it? It was simple, I wanted to look better. But that's not the end goal I suggest you have, because there is no end to "looking good". You'll always wish your belly was flatter, that other girl will always look better in that dress. Social media will always successfully feed your insecurities and you may end up miserable. So do it for your heart that works overtime, for your knees that will bear your weight until the end, for your body that fights for you and heals itself without you having as much as a clue. For a disease free life and for a good night's sIeep. Do it for yourself, not for the gram.

A post shared by Shraddha Srinath (@shraddhasrinath) on Oct 20, 2019 at 9:39am PDT

ಫೋಟೋ 01; 2014ರಲ್ಲಿ ಬಾಲಿ

ನನ್ನ ಮೊದಲ ವಿದೇಶ ಪ್ರವಾಸದಲ್ಲಿ ತೆಗೆದ ಫೋಟೋ ಇದು. ಒಂದು ವರ್ಷ ವಕೀಲಿಕೆ ಕೆಲಸ ಮಾಡಿದೆ. ಈ ಕೆಲಸದಿಂದಾಗಿ ಒಳ್ಳೆಯ ದುಡ್ಡು ಬಂತು ಮತ್ತು ನಾನು ಇದ್ದಕ್ಕಿದ್ದಂತೆ ಆ ದುಡ್ಡನ್ನು ನನಗೆ ಬೇಕಾದಂತೆ ಖರ್ಚು ಮಾಡತೊಡಗಿದೆ. ನನ್ನ ಜೀವನಕ್ರಮ ಬದಲಾಯಿತು. ಆಹಾರ, ಬಟ್ಟೆ, ತಿರುಗಾಟ, ಸಿನಿಮಾ ಇತ್ಯಾದಿಗಳಿಗೆ ಮೊದೆಲ್ಲಾ ದುಡ್ಡು ಖರ್ಚು ಮಾಡುತ್ತಿರಲಿಲ್ಲ. ಈಗ ಅದೇ ಅಭ್ಯಾಸವಾಯಿತು. ನನ್ನ ಜೀವನದಲ್ಲಿ ಅತಿ ಹೆಚ್ಚು ತೂಕ ಹೊಂದಿದ್ದ ಸಮಯ ಅದು. ತಿಂಗಳಿಗೊಂದ್ಸಲ ಎಕ್ಸರ್‌ಸೈಸ್ ಮಾಡುತ್ತಿದ್ದೇನೋ ಏನೋ. ಖುಷಿಯಿಂದ ಮತ್ತು ಯಾವುದೇ ಚಿಂತೆಯಿಲ್ಲದೆ ಎಲ್ಲವನ್ನೂ ತಿನ್ನುತ್ತಿದೆ. ನನಗೆ ಇಷ್ಟ ಬಂದ ದಿರಿಸು ಧರಿಸುತ್ತಿದ್ದೆ. ಆದರೆ ನನ್ನನ್ನು ನಾನು ಯಾವತ್ತೂ ಚೆನ್ನಾಗಿಲ್ಲ ಅಂದುಕೊಳ್ಳಲಿಲ್ಲ. ಬೇರೆಯವರಿಗಿಂತ ಕಡಿಮೆ ಎಂದು ಭಾವಿಸಲಿಲ್ಲ.

ಫಾರೆಸ್ಟ್‌ ಆಫೀಸರ್‌ ಹಿಂದೆ ಬಿದ್ದ ಶ್ರದ್ಧಾ ಶ್ರೀನಾಥ್ ?

ವ್ಯಾಯಾಮ ಮಾಡುವುದಕ್ಕೆ ಉದಾಸೀನ ಆಗುತ್ತಿತ್ತು. ಆದರೆ ಈ ಫೋಟೋ ನೋಡಿದ ಮೇಲೆ ಎಲ್ಲವೂ ಬದಲಾಯಿತು. ಹೀಗೆ ಕಾಣುವಷ್ಟು ದೊಡ್ಡವಳೇನಲ್ಲ ನಾನು ಎಂದು ಅರಿವಾಯಿತು. ಮರುದಿನವೇ ನನ್ನ ಅಪಾರ್ಟ್‌ಮೆಂಟಿನ ಜಿಮ್‌ಗೆ ಹೋದೆ. ಟ್ರೆಡ್ ಮಿಲ್ ಹತ್ತಿದೆ. ಓಡಿದೆ ಓಡಿದೆ ಓಡಿದೆ. ಮೊದಲು ಐದು ನಿಮಿಷ ಓಡುತ್ತಿದ್ದ. ದಿನ
ಕಳೆದಂತೆ 15 ನಿಮಿಷ ಓಡತೊಡಗಿದೆ. ಅಭ್ಯಾಸವಾಗುತ್ತಿದ್ದ ಹಾಗೆ 40 ನಿಮಿಷ ನಿರಂತರವಾಗಿ ಓಡುವಷ್ಟು ಶಕ್ತಿ ಪಡೆದೆ.

ಪೋಟೋ 02ರ ಮೇಯಲ್ಲಿ ಡಾರ್ಜಿಲಿಂಗ್ 

ಐದು ವರ್ಷದ ನಂತರ ತೆಗೆದ ಫೋಟೋ. ಆ ಫೋಟೋದಲ್ಲಿನ ನನ್ನ ತೂಕಕ್ಕೂ ಈ ಫೋಟೋ ತೆಗದಾದ ಇದ್ದ ತೂಕಕ್ಕೂ 18 ಕೆಜಿ ವ್ಯತ್ಯಾಸ ಇದೆ. ಅಷ್ಟು ತೂಕ ಇಳಿಸಿಕೊಂಡಿದ್ದೇನೆ. ಅದಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದೇನೆ ಕೂಡ. ಬೆಳಿಗ್ಗೆ 4.20ಕ್ಕೆ ಎದ್ದಿದ್ದೇನೆ. ದಿನಕ್ಕೆ ಎರಡು ಬಾರಿ ಜಿಮ್‌ಗೆ ಹೋಗಿದ್ದೇನೆ. ಡಯಟ್‌ಗಳನ್ನು ಪಾಲಿಸಿದ್ದೇನೆ. ಹಾಗಂತ ನಾನು ಭಾರಿ ಫಿಟ್ ಆಗಿದ್ದೇನೆ ಅಂತಲ್ಲ.ಎಕ್ಸರ್‌ಸೈಸ್ ತಪ್ಪಿಸುವುದೂ ಇದೆ. ಆಹಾರಗಳ ಬಗ್ಗೆ ಈಗ ಹೆಚ್ಚು ತಿಳಿದುಕೊಂಡಿದ್ದೇನೆ.

4 ತಿಂಗ​ಳಲ್ಲಿ 26 ಕೆ.ಜಿ ತೂಕ ಇಳಿ​ಸಿದ ಸಾನಿ​ಯಾ!

ಕ್ಯಾಲರಿ ಕಡಿಮೆಯಾದರೆ ಏನಾಗುತ್ತದೆ, ಸ್ಟ್ರೆಂತ್ ಟ್ರೈನಿಂಗ್ ಎಂದರೇನು ಎಂಬುದೆಲ್ಲಾ ಗೊತ್ತಾಗಿದೆ. ಆದರೆ ತಿನ್ನುವ ಆಹಾರದ ಜತೆಗೆ ಅಷ್ಟೇನೂ ಒಳ್ಳೆಯದಲ್ಲದ
ಸಂಬಂಧವನ್ನು ಬೆಳೆಸಿಕೊಂಡಿದ್ದೇನೆ. ನನಗಿಷ್ಟದ ತಿಂಡಿಗಳು, ಆರೋಗ್ಯಕರ ಆಹಾರ ಮತ್ತು ಎಕ್ಸರ್‌ಸೈಸ್ ಈ ಮೂರರ ಮಧ್ಯೆ ಬ್ಯಾಲೆನ್ಸ್ ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ,
ಆದರೆ ಪ್ರಯತ್ನ ಜಾರಿಯಲ್ಲಿದೆ.

ಇದೆಲ್ಲಾ ಯಾಕೆ ಮಾಡಿದೆ ಎಂದು ಕೇಳಿಕೊಂಡರೆ ಚೆಂದ ಕಾಣಲು ಅಂತ ಸುಲಭವಾಗಿ ಹೇಳಬಹುದು. ಆದರೆ ಅದು ಜೀವನದ ಗುರಿಯಾಗಬಾರದು. ಚೆಂದ ಕಾಣಬೇಕು ಅನ್ನುವುದಕ್ಕೆ ಕೊನೆ ಅನ್ನುವುದಿಲ್ಲ. ನೀವು ಹೊಟ್ಟೆ ಕರಗಿಸಬೇಕು, ನಾನು ಧರಿಸಿದ ಡ್ರೆಸ್‌ನಲ್ಲಿ ಬೇರೆಯವರು ಬಹಳ ಚೆಂದ ಕಾಣುತ್ತಾರೆ ಅಂತ ಯೋಚಿಸುತ್ತಲೇ ಇರುತ್ತೀರಿ. ಸೋಷಲ್ ಮೀಡಿಯಾಗಳು ಉಂಟು ಮಾಡುವ ಇನ್‌ಸೆಕ್ಯುರಿಟಿಯಿಂದ ಪಾರಾಗಲು ಏನೇನೋ ಮಾಡಿ ಆಮೇಲೆ ಕಷ್ಟ ಪಡುವಂತೆಯೂ ಆಗಬಹುದು. ಆದರೆ ನಾನು ಹೇಳುವುದಿಷ್ಟೇ- ಹೃದಯ ಸರಿಯಾಗಿ ಕೆಲಸ ಮಾಡುವುದಕ್ಕೆ, ಮೊಣಕಾಲು ಕೊನೆಯವರೆಗೂ ನಿಮ್ಮ ಭಾರವನ್ನು ಹೊರುವುದಕ್ಕೆ ಏನೇನು ಮಾಡಬೇಕೋ ಅದನ್ನು ಮಾಡಿ ಸಾಕು. ಆರೋಗ್ಯಕರ ಜೀವನಕ್ಕೆ ಮತ್ತು ಒಳ್ಳೆಯ ನಿದ್ರೆ ಬರಲು ಎಷ್ಟು ಮಾಡಬೇಕೋ ಅಷ್ಟು ಮಾಡಿ. ನಿಮಗಾಗಿ ಮಾಡಿ, ಸೋಷಿಯಲ್ ಮೀಡಿಯಾಗಲ್ಲ