ತಾಯಿಯಾದ ಬಳಿಕ ಸಾನಿಯಾ ಮಿರ್ಜಾ ಹೊಸ ಲುಕ್‌ನೊಂದಿಗೆ ಕಾಣಿಸಿಕೊಂಡಿದ್ದು, ಈಗ ಕಳೆದ 4 ತಿಂಗ​ಳ​ಲ್ಲಿ 26 ಕೆ.ಜಿ ತೂಕ ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಹೈದ​ರಾ​ಬಾದ್‌[ಸೆ.26]: ಭಾರ​ತದ ಟೆನಿಸ್‌ ತಾರೆ ಸಾನಿಯಾ ಮಿಜಾ ವೃತ್ತಿ​ಪರ ಟೆನಿಸ್‌ಗೆ ಮರ​ಳ​ಲು ಸಿದ್ಧತೆ ನಡೆ​ಸು​ತ್ತಿದ್ದು, ಕಳೆದ 4 ತಿಂಗ​ಳಲ್ಲಿ 26 ಕೆ.ಜಿ ತೂಕ ಇಳಿ​ಸಿ​ಕೊಂಡಿ​ರು​ವು​ದಾಗಿ ತಿಳಿ​ಸಿ​ದ್ದಾರೆ. 

"ನೀವೂ ಕೂಡ ತಾಯಿಯ ಗರ್ಭದಿಂದ ಹೊರಬಂದಿದ್ದೀರಿ"-ಸಾನಿಯಾ ತಿರುಗೇಟು!

View post on Instagram
View post on Instagram
View post on Instagram
View post on Instagram

ಇನ್‌ಸ್ಟಾಗ್ರಾಂನಲ್ಲಿ ತಾವು ಜಿಮ್‌ನಲ್ಲಿ ಕಸ​ರ​ತ್ತು ಮಾಡು​ತ್ತಿ​ರುವ ವಿಡಿ​ಯೋ​ವನ್ನು ಹಾಕಿ​ರುವ ಸಾನಿಯಾ, ‘ನಾನು ಗರ್ಭಿ​ಣಿ​ಯಾ​ಗಿದ್ದ ವೇಳೆ ನನ್ನ ದೇಹ ತೂಕ 23 ಕೆ.ಜಿ ಹೆಚ್ಚಾ​ಗಿತ್ತು. ಈಗ ಕಳೆದ 4 ತಿಂಗ​ಳ​ಲ್ಲಿ 26 ಕೆ.ಜಿ ಇಳಿ​ಸಿ​ಕೊಂಡಿ​ದ್ದೇನೆ. ಕಠಿಣ ಪರಿ​ಶ್ರಮ, ಶ್ರದ್ಧೆ, ಶಿಸ್ತಿ​ನಿಂದ ಏನು ಬೇಕಿ​ದ್ದರೂ ಸಾಧ್ಯ’ ಎಂದು ಅವರು ಬರೆ​ದಿ​ದ್ದಾರೆ.

ಸಾನಿಯಾ ತಂಗಿ ಜೊತೆ ಅಜರ್ ಮಗನ ಮದುವೆ: ಪ್ಯಾರಿಸ್‌ನಲ್ಲಿ ಬ್ಯಾಚ್ಯುಲರ್ ಪಾರ್ಟಿ!

ಸಾನಿಯಾ ಮಿರ್ಜಾ ಏಪ್ರಿಲ್ 12, 2010ರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ಮದುವೆಯಾಗಿದ್ದರು. ಎಂಟು ವರ್ಷಗಳ ಬಳಿಕ ಕಳೆದ ಅಕ್ಟೋಬರ್ ನಲ್ಲಿ ಸಾನಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಇಜಾನ್ ಎಂದು ಹೆಸರಿಡಲಾಗಿದೆ. ಇದೀಗ ಸಾನಿಯಾ ವೃತ್ತಿಜೀವನಕ್ಕೆ ಮರಳಲು ಸಾಕಷ್ಟು ಬೆವರು ಹರಿಸುತ್ತಿದ್ದು, ಮುಂಬರುವ ಜನವರಿ ವೇಳೆಗೆ ಟೆನಿಸ್ ಕೋರ್ಟ್’ಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.