ಅದಕ್ಕಾಗಿಯೇ ಬೆಳಗಾವಿ, ದಾಂಡೇಲಿ, ಖಾನಾಪುರ್ ಸುತ್ತಮುತ್ತಲಿನ ಅರಣ್ಯಸುತ್ತು ಹಾಕುವುದಕ್ಕೂ ಪ್ಲಾನ್ ರೆಡಿ ಆಗಿದೆ. ಅಂದಹಾಗೆ, ಇದು ಅವರ ರಿಯಲ್ ಲೈಫ್‌ನ ಕತೆಯಲ್ಲ, ರೀಲ್ ಲೈಫ್‌ನ ಇನ್ನೊಂದು ಪಾತ್ರ. ಅವರನ್ನೀಗ ಆರ್ ಎಫ್‌ಒ ಮಾಡಿ ಕಾಡಿಗೆ ಕಳುಹಿಸುತ್ತಿರುವವರು ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ.

ರಿಷಬ್ ಶೆಟ್ಟಿ ಮೇಲೆ ರುದ್ರಪ್ರಯೋಗ ಮಾಡಿದ ಶ್ರದ್ಧಾ ಶ್ರೀನಾಥ್!

ರಿಷಬ್ ಶೆಟ್ಟಿ ನಿರ್ದೇಶನದ ಹೊಸ ಚಿತ್ರ ‘ರುದ್ರಪ್ರಯಾಗ’. ಈ ಚಿತ್ರದಲ್ಲಿ ಅನಂತನಾಗ್ ಹಾಗೂ ಶ್ರದ್ಧಾ ಶ್ರೀನಾಥ್ ಮುಖ್ಯ ಪಾತ್ರಧಾರಿಗಳು. ಈ ನಡುವೆ ಚಿತ್ರದ ಮುಖ್ಯ ಪಾತ್ರಗಳ ಪೈಕಿ ಶ್ರದ್ಧಾ
ಶ್ರೀನಾಥ್ ಅವರ ಕ್ಯಾರೆಕ್ಟರ್ ರಿವೀಲ್ ಆಗಿದೆ. ‘ಶ್ರದ್ಧಾ ಚಿತ್ರದಲ್ಲಿ ಕಾಡಿನ ಬಗ್ಗೆ ಅತೀವ ಕಾಳಜಿ ಹೊಂದಿದ ದಕ್ಷ ಮಹಿಳಾ ಅಧಿಕಾರಿ. ಕತೆಯಲ್ಲಿ ತುಂಬಾ ಪ್ರಾಮುಖ್ಯತೆ ಇರುವಂತಹ ಪಾತ್ರ ಅದು. ಶ್ರದ್ಧಾ ಅವರಿಗೆ ಇಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲ ಅನುಭವ. ಅರಣ್ಯಕ್ಕೂ ಆ ಪಾತ್ರಕ್ಕೂ ತುಂಬಾ ಕನೆಕ್ಷನ್ ಇದೆ.

ಮಕ್ಕಳೇ ಬೇಡ ಎಂದ 'ಯೂ ಟರ್ನ್’ ನಟಿ ಶ್ರದ್ಧಾ

ಅದೆಲ್ಲ ಹೇಗೆ ಎನ್ನುವುದು ಚಿತ್ರ ನೋಡಿದಾಗ ಗೊತ್ತಾಗಲಿದೆ’ ಎನ್ನುತ್ತಾರೆ ನಿರ್ದೇಶಕ ರಿಷಬ್ ಶೆಟ್ಟಿ. ಅನಂತ ನಾಗ್ ಪಾತ್ರದ ಬಗ್ಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸುತ್ತಾರೆ ರಿಷಬ್. ಅದನ್ನು ಚಿತ್ರದಲ್ಲೇ ರಿವೀಲ್ ಮಾಡುತ್ತೇನೆ. ಸದ್ಯಕ್ಕೆ ಅವರ ಪಾತ್ರದ ಬಗ್ಗೆ ನಾನು ಮಾತನಾಡುವುದಿಲ್ಲ ಎನ್ನುತ್ತಾರವರು.