ದಿನೇ ದಿನೇ ಟ್ರೋಲಿಗರಿಗೆ ಆಹಾರವಾಗಿರುವ ರಶ್ಮಿಕಾ ಮಂದಣ್ಣ ಬಾಲ್ಯದ ಫೋಟೋಗೆ ಬಂದ ಕೆಟ್ಟ ಕಾಮೆಂಟ್‌ಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಸಿನಿ ಜರ್ನಿ ಶುರುಮಾಡಿದ ರಶ್ಮಿಕಾ ಮಂದಣ್ಣ ಒಂದು ಕಾಲದಲ್ಲಿ ಸ್ಟೇಟ್‌ ಕ್ರಶ್ ಎಂದು ಬಿರುದು ಪಡೆದುಕೊಂಡವರು. ಸಾನ್ವಿ ಪಾತ್ರದ ಮೂಲಕ ಹುಡುಗರ ಮನ ಗೆದ್ದ ರಶ್ಮಿಕಾ ಕಾಲ್‌ ಶೀಟ್‌ ಇಲ್ಲದಷ್ಟು ಬ್ಯುಸಿಯಾದರು.

'ಅದಕ್ಕೆ ನೀನಿನ್ನು ಸಿಂಗಲ್ ಆಗಿದ್ದೀಯಾ'? ಎಂದು ರಶ್ಮಿಕಾ ವಾರ್ನ್!

ಇನ್ನ ವೈಯಕ್ತಿಕ ಜೀವನದಲ್ಲಿ ಆದ ಬಿರುಕು ಆ ನಂತರ ಪರ ಭಾಷೆಗೆಳಿಂದ ಬಂದ ಆಫರ್‌ ಎಲ್ಲವೂ ಟ್ರೋಲ್‌ ಪೇಜ್‌ಗೆ ಆಹಾರವಾಗಿತ್ತು. ರಶ್ಮಿಕಾ ಮಾಡುವ ಪ್ರತಿಯೊಂದು ಕೆಲಸದ ಬಗ್ಗೆ ಕೀಳಾಗಿ ಮಾತನಾಡುತ್ತಾ ಕೀಳಾಗಿ ಟ್ರೋಲ್ ಮಾಡುತ್ತಾರೆ. ಆಕೆಯ ಕನ್ನಡದ ಬಗ್ಗೆ, ವಿಜಯ್ ದೇವರಕೊಂಡ ಜೊತೆಗೆ ಓಡಾಡುವುದರ ಬಗ್ಗೆ ಆಗಾಗಾ ಟ್ರೋಲ್ ಆಗ್ತಾ ಇರ್ತಾರೆ.

ಕೆಲ ದಿನಗಳ ಹಿಂದೆ ರಶ್ಮಿಕಾ ಬಾಲ್ಯದ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಟ್ರೋಲ್‌ ಪೇಜ್‌ವೊಂದು 'International Dagar in the Future' ಎಂದು ಬರೆದಿದ್ದಾರೆ. ಇದು ರಶ್ಮಿಕಾ ಗಮನಕ್ಕೆ ಬಂದಿದ್ದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಟ್ರೋಲ್‌ ಮಾಡುವವರಿಗೆ ಖಡಕ್‌ ಉತ್ತರ ನೀಡಿದ್ದಾರೆ.

'ಅರಬ್ಬಿ' ಈಜುಪಟುವಿನ ಕೈ ಹಿಡಿದ 'ಜೋಡಿಹಕ್ಕಿ' ನಟಿ!

'ನಟ-ನಟಿಯರನ್ನು ಟ್ರೋಲ್‌ ಮಾಡುವುದರಿಂದ ನಿಮಗೇನು ಸಿಗುತ್ತದೆ ಎಂದು ನನಗೆ ಗೊತ್ತಿಲ್ಲ. ನಾನು ಸುಮ್ಮನಿರುವುದೇ ಇದಕ್ಕೆಲ್ಲಾ ಕಾರಣಾನಾ? ಪಬ್ಲಿಕ್‌ ಫಿಗರ್‌ಗಳನ್ನು ನೀವು ಹೇಗೆ ಬೇಕಾದರೂ ಹಾಗೆ ನಡೆಸಿಕೊಳ್ಳಬಾರದು. ನೀವೇ ಹೇಳಿದ ಹಾಗೆ ಕೆಟ್ಟ ಕಾಮೆಂಟ್ ಹಾಗೂ ಟ್ರೋಲ್‌ನ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುತ್ತಿಲ್ಲ. ನಮ್ಮ ಕೆಲಸದ ಬಗ್ಗೆ ನಿಮಗೆ ಮಾತನಾಡುವ ಅರ್ಹತೆ ಇದೆ ಆದರೆ ನಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಯಾರಿಗೂ ಅರ್ಹತೆ ಇಲ್ಲ. ಯಾವ ನಟ-ನಟಿಗೂ ಇಂತಹದ್ದಕ್ಕೆ ಸಿಲುಕಿಕೊಳ್ಳುವ ಅರ್ಹತೆ ಇಲ್ಲ. ಒಬ್ಬ ನಟಿನಾಗಿ ವೃತ್ತಿ ಆರಂಭಿಸುವುದು ಸುಲಭದ ಕೆಲಸವಲ್ಲ. ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಗೌರವ ಇದೆ. ಸಮಯ ಮಾಡಿಕೊಂಡು ನನ್ನ ನೋಯಿಸಿದ್ದಕ್ಕೆ ಥ್ಯಾಂಕ್ಸ್‌ ' ಎಂದು ಉತ್ತರಿಸಿದ್ದಾರೆ.

ನವೆಂಬರ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

"