ಕಿರಿಕ್ ಹುಡುಗಿ, ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್ ನಿಂದ ಫೇಮಸ್ ಆದರೂ ಕೂಡಾ ಗುರುತಿಸಿಕೊಂಡಿದ್ದು ಮಾತ್ರ ಟಾಲಿವುಡ್ ನಲ್ಲಿ. ವಿಜಯ್ ದೆವರಕೊಂಡ ಜೊತೆ ಡಿಯರ್ ಕಾಮ್ರೆಡ್, ಗೀತಾ ಗೋವಿಂದಂ ಚಿತ್ರದಲ್ಲಿ ನಟಿಸಿ ಮೋಸ್ಟ್ ಡಿಮ್ಯಾಂಡಬಲ್ ನಟಿ ಎನಿಸಿಕೊಂಡಿದ್ದಾರೆ. 

ಸಿನಿಮಾದಲ್ಲಿ ಇವರು ಮೇಲಕ್ಕೆ ಹೋದಂತೆಲ್ಲಾ ಇವರ ಬಗ್ಗೆ ಟ್ರೋಲ್ ಗಳು ಹೆಚ್ಚಾಗುತ್ತಿವೆ. ಕನ್ನಡದ ಬಗೆಗಿನ ಅಸಡ್ಡೆ, ಕನ್ನಡ ಕಷ್ಟ ಎಂದಿದ್ದು, ದೇವರಕೊಂಡ ಜೊತೆ ಹೆಚ್ಚು ಕಾಣಿಸಿಕೊಂಡಿದ್ದು ಇವೆಲ್ಲಾ ಟ್ರೋಲ್ ಗೆ ಆಹಾರವಾಗಿದೆ.  ಟಾಲಿವುಡ್ ನಲ್ಲಿ ಭೀಷ್ಮ ಸಿನಿಮಾದಲ್ಲಿ ಬ್ಯಸಿಯಾಗಿದ್ದು, ಮೊದಲ ತುಣುಕೊಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಇದರ ಲಿಂಕನ್ನು ಟ್ವಿಟರ್ ನಲ್ಲಿ ಶೇರ್ ಮಾಡಿ 'ಭೀಷ್ಮ ಇದಕ್ಕೆ ನೀನಿನ್ನು ಸಿಂಗಲ್ ಆಗಿದೀಯಾ' ಎಂದು ಕಿಚಾಯಿಸಿದ್ದಾರೆ. 

 

ಭೀಷ್ಮ ದಲ್ಲಿ ರಶ್ಮಿಕಾಗೆ ನಾಯಕನಾಗಿ ನಿತಿನ್ ನಟಿಸಿದ್ದಾರೆ. ವಿಡಿಯೋದಲ್ಲಿ ಅವರು ರಶ್ಮಿಕಾ ಹಿಂದೆ ಮುಂದೆ ಸುತ್ತುತ್ತಾರೆ.  ಇದನ್ನೇ ಇಟ್ಟುಕೊಂಡು ರಶ್ಮಿಕಾ ಕಾಲೆಳೆದಿದ್ದಾರೆ. 

ಸಿತಾರಾ ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ. ವೆಂಕಿ ಕುಡುಮಲ ಆfಯಕ್ಷನ್ ಕಟ್ ಹೇಳಿದ್ದಾರೆ. ಮುಂದಿನ ವರ್ಷ ಅಂದರೆ 2020 ಫೆ. 21 ಕ್ಕೆ ತೆರೆಗೆ ಬರಲಿದೆ.