ಹೀರೋ ಅಂದ್ಮೇಲೆ ನೋಡೋಕೆ ಫೇರ್ ಇರ್ಬೇಕು ಇಲ್ಲಾ ಹೈಟ್‌ ಇರ್ಬೇಕು ಇವೆರಡೂ ಇಲ್ಲ ಅಂದ್ರೆ ಹಣ ಇರ್ಬೇಕು. ಇದೆಲ್ಲಾ ಏನೂ ಬೇಡ ಸಾಧನೆಯೇ ಮುಖ್ಯ ಎಂದು ನಂಬಿ ನಿರ್ದೇಶಕ ರಾಜ್‌ಕುಮಾರ್ ಕೈಗಳಿಲ್ಲದ ಈಜುಪಟು ರಿಯಲ್‌ ಲೈಫ್‌ ಕಥೆಗೆ ಇನ್ಸ್‌ಪೈರ್ ಆಗಿ ಅದನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

ಟೈರ್‌ ಪಂಕ್ಚರ್‌ ಆದ ಬೈಕಲ್ಲಿ ರೇಸ್‌ ಗೆದ್ದ ವೀರ!

 

ಪ್ಯಾರಾ ಸ್ವಿಮ್ಮಿಂಗ್‌ನಲ್ಲಿ ಅಂತಾರಾಷ್ಟೀಯ ಮಟ್ಟದಲ್ಲಿ ಹೆಸರು ಮಾಡಿರುವ ವಿಶ್ವಾಸ್ ಈ ಹಿಂದೆ ಡ್ಯಾನ್ಸ್‌ ಕಲಿತು ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದರು. ಕೆನಡಾ ಹಾಗೂ ಜರ್ಮನಿಯಲ್ಲಿ ನಡೆದ ಪ್ಯಾರಾ ಈಜು ಸ್ಪರ್ಧೆಯಲ್ಲಿ ಚಿನ್ನ ಹಾಗೂ ಕಂಚು ಗೆದ್ದು ಭಾರತಕ್ಕೆ ಕೀರ್ತಿ ತಂದು ಕೊಟ್ಟವರು. ಹತ್ತನೇ ವಯಸ್ಸಲ್ಲಿ ಮನೆಯಿಂದ ಹೈಟೆನ್ಷನ್‌ ವೈರ್‌ ಮೇಲೆ ಬಿದ್ದೂ ಎರಡು ತಿಂಗಳುಗಳ ಕಾಲ ಕೋಮಾದಲ್ಲಿದ್ದರು. ವಿದ್ಯುತ್‌ ಸ್ಪರ್ಶಕ್ಕೆ ತನ್ನ ಎರಡು ಕೈಗಳನ್ನು ಕಳೆದುಕೊಂಡರು. ವಿಶ್ವಾಸ್‌ರನ್ನು ರಕ್ಷಿಸಲು ಮುಂದಾದ ತಂದೆ ವಿದ್ಯುತ್‌ ಶಾಕ್‌ನಿಂದ ತೀರಿಹೋದರು ಹಾಗೂ ವಿಶ್ವಾಸ್‌ ಅವರಿಗೆ ಜೀವನದಲ್ಲಿ ಮತ್ತೆನಾದರೂ ಸಾಧನೆ ಮಾಡಬಹುದು ಎಂದು ಸ್ಪೂರ್ತಿ ತುಂಬಿದ ತಾಯಿಯನ್ನು 2009 ರಲ್ಲಿ ಕಳೆದುಕೊಂಡರು.

ವೈವಾಹಿಕ ಜೀವನಕ್ಕೆ ಕಾಲಿಟ್ಟ 'ರಾಧಾ ಕಲ್ಯಾಣ' ನಟ ಪೃಥ್ವಿ ಅಂಬಾರ್!

ಸುಮಾರು 15 ಚಿತ್ರಗಳಿಗೆ Action Cut ಕಟ್‌ ಹೇಳಿರುವ ರಾಜ್‌ಕುಮಾರ್ ಈ ಚಿತ್ರಕ್ಕೆ 'ಅರಬ್ಬಿ' ಎಂದು ನಾಮಕರಣ ಮಾಡಿದ್ದಾರೆ ಹಾಗೂ ವಿಶ್ವಾಸ್‌ಗೆ ನಾಯಕಿಯಾಗಿ 'ಜೋಡಿಹಕ್ಕಿ' ಧಾರಾವಾಹಿಯ ನಟಿ ಚೈತ್ರಾ ರಾವ್‌ ಸಾಥ್ ನೀಡಲಿದ್ದಾರೆ.